
ಶಿವಮೊಗ್ಗ> ಸಪ್ಟೆಂಬರ್> 20> ರಂದು ಕ್ಯಾಪ್ಟನ್ ಅಜಿತ್ ಕುಮಾರ್ ಅಬಕಾರಿ ಉಪ ಆಯುಕ್ತರು ಶಿವಮೊಗ್ಗ ಜಿಲ್ಲೆ ಶಿವಮೊಗ್ಗ ರವರ ಆದೇಶದಂತೆ ಹಾಗೂ ಸಾಗರ ಉಪ ವಿಭಾಗದ ಉಪ ಅಧೀಕ್ಷಕರು ಮಾರ್ಗದರ್ಶನ ದಲ್ಲಿ ಸಾಗರ ವಲಯ ಅಬಕಾರಿ ನಿರೀಕ್ಷಕರಾದ ಸಂದೀಪ್ ಎಲ್. ಸಿ ರವರ ನಿರ್ದೇಶನದಲ್ಲಿ ಉಪ ನಿರೀಕ್ಷಕರಾದ ಶ್ರೀ ಸಂತೋಷ್ ರಡ್ಡೆರ್ ಅಬಕಾರಿ ಪೇದೆಗಳಾದ ಮಹಾಬಲೇಶ್, ಕನಯ, ಅರುಣ್ ದೀಪಕ್ ಹಾಗೂ ಮುದಾಸಿರ್ ಜೊತೆ ಸೇರಿ ಅಬಕಾರಿ ದಾಳಿ ನಡೆಸಲಾಯಿತು.

ಸಾಗರ ತಾಲ್ಲೂಕು ವ್ಯಾಪ್ತಿಯ ಕಬ್ಬನದಕೊಪ್ಪ ಗ್ರಾಮದ ಪುಟ್ಟಪ್ಪ ಬಿನ್ ಕರಿಯಪ್ಪ ಇವರಿಗೆ ಸೇರಿದ ವಾಸದ ಮನೆಯ ಮೊದಲನೆ ಕೊಠಡಿಯಲ್ಲಿ ಅಕ್ರಮವಾಗಿ ಸುಮಾರು 330 ಗ್ರಾಂ ಹಸಿ ಗಾಂಜಾವನ್ನು ಪತ್ತೆಹಚ್ಚಿ ಸದರಿ ಕೃತ್ಯವು ಎನ್.ಡಿ .ಪಿ. ಎಸ್ ಕಾಯ್ದೆ 1985 ರ ಕಲಂ 8(ಸಿ) ರೀತ್ಯಾ ಉಲ್ಲಂಘನೆ ಹಾಗೂ ಇದೇ ಕಾಯ್ದೆಯ ಕಲಂ 20(b) 20 (ii) (A),25 ರೀತ್ಯಾ ಶಿಕ್ಷಾರ್ಹ ಅಪರಾಧವಾಗಿರುವ ಕಾರಣ ಮೊಕದ್ದಮೆಯನ್ನು ದಾಖಲಿಸಲಾಯಿತು.

ಮುದ್ದೆಮಾಲನ್ನು ನಿಯಾಮಾನುಸಾರ ಜಪ್ತು ಪಡಿಸಿಕೊಂಡು, ಆರೋಪಿಯ ವಿರುದ್ದ ಎನ್.ಡಿ.ಪಿ.ಎಸ್ ಕಾಯ್ದೆಯಡಿ ಮೊಕದ್ದಮೆ ದಾಖಲಿಸಿಕೊಳ್ಳಲಾಗಿದೆ.
ಗಾಂಜಾ ಹಾಗೂ ಅಕ್ರಮ ಮದ್ಯ ಮಾರಾಟಗಾರರಿಗೆ ಖಡಕ್ ಎಚ್ಚರಿಕೆ ನೀಡಿದ ಕ್ಯಾಪ್ಟನ್ ಅಜಿತ್ ಕುಮಾರ್:
ಪತ್ರಿಕೆ ಜೊತೆ ಮಾತನಾಡಿದ ಅಬಕಾರಿ ಉಪ ಆಯುಕ್ತರು ಕ್ಯಾಪ್ಟನ್ ಅಜಿತ್ ಕುಮಾರ್ ಶಿವಮೊಗ್ಗ ಇವರು ಶಿವಮೊಗ್ಗ ಜಿಲ್ಲೆಯಾದ್ಯಂತ ಅಕ್ರಮ ಮದ್ಯ ಮಾರಾಟವಾಗುತ್ತಿದೆ. ಎನ್ನುವುದು ನಮ್ಮ ಗಮನದಲ್ಲಿದೆ ಅಕ್ರಮ ಮದ್ಯ ಮಾರಾಟಗಾರರೇ ಎಚ್ಚರದಿಂದಿರಿ ಇದು ನಿಮಗೆ ಕೊನೆಯ ಎಚ್ಚರಿಕೆ ಈಗಾಗಲೇ ಅಕ್ರಮ ಮದ್ಯ ಮಾರಾಟ ಮಾಡುವ ಕಡೆಗೆಲ್ಲ ದಾಳಿ ಮಾಡಿ ಮದ್ಯ ವಶಪಡಿಸಿ ಕೊಳ್ಳಲಾಗುತ್ತಿದೆ. ಹಾಗೆ ಕೇಸ್ ಕೂಡ ಹಾಕಲಾಗುತ್ತಿದೆ.
ಇದನ್ನು ಇಲ್ಲಿಗೆ ನಿಲ್ಲಿಸಿದರೆ ಒಳ್ಳೆಯದು ಮುಂದಿನ ದಿನಗಳಲ್ಲಿ ಇಲಾಖೆ ಸುಮ್ಮನಿರುವುದಿಲ್ಲ ಇಂತಹ ಚಟುವಟಿಕೆಯಲ್ಲಿ ತೊಡಗುವವರ ವಿರುದ್ಧ ಸಮರ ಸಾರಿರುವ ಇಲಾಖೆ ಇಂಥವರನ್ನು ಬಂದಿಸಿ ಜೈಲಿಗೆ ಕಳುಹಿಸುವುದರಲ್ಲಿ ಯಾವುದೇ ಸಂಶಯವಿಲ್ಲ.
ಸಾರ್ವಜನಿಕರು ನೇರವಾಗಿ ಅಬಕಾರಿಇಲಾಖೆಗೆ ಮಾಹಿತಿ ನೀಡಿ:
ಸಾರ್ವಜನಿಕರಿಗೆ ಕ್ಯಾಪ್ಟನ್ ಅಜಿತ್ ಕುಮಾರ್ ಅವರು ಮನವಿ ಮಾಡಿದ್ದು ಅಬಕಾರಿ ಇಲಾಖೆ ಅಕ್ರಮ ಮದ್ಯ ಮಾರಾಟಗಾರರ ವಿರುದ್ಧ ಸಮರ ಸಾರಿದ್ದು ಅವರನ್ನು ಬಂಧಿಸಲು ಸರ್ವಸನ್ನದ್ಧವಾಗಿದೆ. ಯಾವುದೇ ಅಕ್ರಮ ಮದ್ಯ ಮಾರಾಟಗಾರರು ಸಾರ್ವಜನಿಕರ ಗಮನಕ್ಕೆ ಬಂದರೆ ನೇರವಾಗಿ ನಮ್ಮ ಅಬಕಾರಿ ಇಲಾಖೆಗೆ ಕರೆ ಮಾಡಿ ಮಾಹಿತಿ ನೀಡಿ ಎಂದು ಮನವಿ ಮಾಡಿದ್ದಾರೆ…
ವರದಿ ..ರಘುರಾಜ್ ಹೆಚ್.. ಕೆ
ಸುದ್ದಿ ಮತ್ತು ಜಾಹೀರಾತು ನೀಡಲು ಸಂಪರ್ಕಿಸಿ:9449553305/7892830899…