
ಬೆಂಗಳೂರು: ಇತ್ತೀಚೆಗೆ ಅನ್ನಪೂರ್ಣೇಶ್ವರಿ ನಗರದಲ್ಲಿ ಫೈನಾನ್ಸಿಯರ್ ಕಾಂತರಾಜ್ ಎಂಬಾತ ತನ್ನ ಪತ್ನಿಯನ್ನು ಕೊಲೆ ಮಾಡಿದ್ದು.ಆ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೇಜರ್ ಟ್ವಿಸ್ಟ್ ಸಿಕ್ಕಿದ್ದು. ಕೊಲೆಯ ಪಕ್ಕಾ ಸಿನಿಮಾ ಸ್ಟೈಲಿನಲ್ಲಿ ನಡೆದಿದ್ದು. ಕೊಲೆಯಾದ ದುರ್ದೈವಿ ಪತ್ನಿಯ ಹೆಸರು ರೂಪ ಹಾಗಾದರೆ ಕೊಲೆ ನಡೆದಿದ್ದು ಹೇಗೆ?
ಸಿನಿಮಾ ಮಾದರಿಯಲ್ಲಿ ನಡೆದಿತ್ತು ಕೊಲೆಗೆ ಸ್ಕೆಚ್:
ಆ ಸಿನಿಮಾ ಯಾವುದು, ಆ ಸ್ಕೇಚ್ ಹೇಗಿತ್ತು ಅಂತಾ ನೋಡುವುದಾದರೆ, ‘ಬಾ ನಲ್ಲೆ ಮಧುಚಂದ್ರಕೆ’ ಎಂಬ ಕನ್ನಡದ ಸೂಪರ್ ಹಿಟ್ ಸಿನಿಮಾ . ಈ ಸಿನಿಮಾವನ್ನು ನೋಡಿ ಉದ್ಯಮಿ ಪತಿ, ಪತ್ನಿ ಹತ್ಯೆಗೆ ಸ್ಕೆಚ್ ರೆಡಿ ಮಾಡಿದ್ದ. ಹೆಂಡತಿಯ ಕೊಲೆಗೆ 15 ದಿನದ ಹಿಂದೆಯೇ ಸ್ಕೆಚ್ ರೆಡಿಯಾಗಿದ್ದು.
ಜೋಗದಲ್ಲಿ ವಿಫಲವಾಗಿತ್ತು ಕೊಲೆಯ ಸ್ಕೆಚ್:
ಪೊಲೀಸ್ ವಿಚಾರಣೆ ವೇಳೆ ಆರೋಪಿ ಕೊಲೆ ಹಿಂದಿನ ಸ್ಪೋಟಕ ರಹಸ್ಯವನ್ನು ಬಯಲು ಮಾಡಿದ್ದಾನೆ. ಆರೋಪಿ ಫೈನಾಶ್ಸಿಯರ್ ಕಾಂತರಾಜ್, ಪತ್ನಿ ಹತ್ಯೆಗಾಗಿ ಎರಡು ದಿನದ ಟ್ರಿಪ್ ಪ್ಲಾನ್ ಮಾಡಿದ್ದ. ಕರಾವಳಿ ಸುತ್ತ ಟ್ರಿಪ್ ಕರೆದೊಯ್ದು ಪತ್ನಿ ರೂಪಾಗೆ ಮುಹೂರ್ತ ಇಟ್ಟಿದ್ದ. ಟ್ರಿಪ್ ಹೋಗೋಣ ಅಂತಾ ಪತ್ನಿ ರೂಪಾಳನ್ನು ಕಾಂತರಾಜ್, ಜೋಗದ ಜಲಪಾತಕ್ಕೆ ಕರೆದೊಯ್ದಿದ್ದ. ಜಲಪಾತ ತೋರಿಸುವ ನೆಪದಲ್ಲಿ ಎತ್ತರಕ್ಕೆ ಕರೆದೊಯ್ದಿದ್ದ. ಎತ್ತರದ ಸ್ಥಳಕ್ಕೆ ಹೋಗಿ ತಳ್ಳಿ ಕೊಲೆ ಮಾಡಲು ಸ್ಕೇಚ್ ಹಾಕಿದ್ದ.
ಆದರೆ, ಪತ್ನಿ ರೂಪಾ ಎತ್ತರದ ಸ್ಥಳದಲ್ಲಿ ತಲೆ ತಿರುಗುತ್ತದೆ ಎನ್ನುವ ಮೂಲಕ ಅಲ್ಲಿಗೆ ಹೋಗಲು ನಿರಾಕರಿಸಿದ್ದಳು. ಪ್ರವಾಸ ವೇಳೆ ಕೊಲೆ ಮಾಡೋಕೆ ಸಾಕಷ್ಟು ಪ್ರಯತ್ನ ಮಾಡಿದ್ರು ಕೂಡ ಕಾಂತರಾಜ್ ಸಂಚು ಯಶಸ್ವಿ ಆಗಲಿಲ್ಲ. ಈ ಹಿನ್ನಲೆಯಲ್ಲಿ ಕಾಂತರಾಜ್ ಕೋಪದಿಂದಲೇ ಮನೆಗೆ ಹಿಂದಿರುಗಿದ್ದ. ಇದಾದ ಬಳಿಕ ಮನೆಯಲ್ಲೇ ಕೊಲೆ ಮಾಡಲು ಸಂಚು ರೂಪಿಸಿದ್ದ. ನೇಣು ಹಾಕಿಕೊಂಡಿರುವಂತೆ ಬಿಂಬಿಸಲು ಯತ್ನಿಸಿದ್ದ. ಅದು ಕೂಡ ವಿಫಲವಾಗಲಿದೆ ಎಂದು ಹೆಂಡತಿಯ ಕತ್ತು ಕೊಯ್ದು ಕೊಲೆ ಮಾಡಿದ್ದಾನೆ.
ಪೊಲೀಸರು ಮನೆಗೆ ಭೇಟಿಕೊಟ್ಟ ವೇಳೆ ಫ್ಯಾನಲ್ಲಿ ಕಟ್ಟಿದ ಸೀರೆ ನೇತಾಡುತ್ತಿತ್ತು. ಕಳೆದ ಎರಡು ದಿನಗಳ ಹಿಂದೆ ಕೊಲೆ ನಡೆದಿದೆ. ಕೊಲೆ ನಂತರ ಮನೆಯ ಬಾಗಿಲು ಹಾಕಿಕೊಂಡು ಕಾಂತರಾಜ್ ಎಸ್ಕೇಪ್ ಆಗಿದ್ದ. ಮಗ ಶಾಲೆಯಿಂದ ಮನೆಗೆ ಬಂದಾಗ ಪ್ರಕರಣ ಬೆಳಕಿಗೆ ಬಂದಿತ್ತು. ಬಳಿಕ ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಕೊಲೆಯ ಹಿಂದಿನ ರಹಸ್ಯ ಬೆಳಕಿಗೆ ಬಂದಿದೆ.
ಪತಿಯ ಖಿನ್ನತೆ ಕೊಲೆಗೆ ಕಾರಣನಾ?
ಗಂಡ ಕಾಂತರಾಜ್‌ಗೆ ಹೆಂಡತಿ ರೂಪಾ ಮೇಲೆ ಅನುಮಾನ ಇತ್ತು. ಪತ್ನಿ ಶೀಲ ಶಂಕಿಸಿ ಖಿನ್ನೆತೆಗೆ ಒಳಗಾಗಿದ್ದ ಪತಿ ಕಾಂತರಾಜ್, ಕೊನೆಗೆ ಪತ್ನಿಯನ್ನೇ ಬರ್ಬರವಾಗಿ ಕೊಲೆ ಮಾಡಿದ್ದಾನೆ.
ಈ ಸಂಬಂಧ ಅನ್ನಪೂರ್ಣೇಶ್ವರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ. ಒಟ್ಟಾರೆ ಸಿನಿಮಾಗಳು ಮನುಷ್ಯನ ಮೇಲೆ ತೀವ್ರ ರೂಪದ ಪ್ರಭಾವ ಬೀರುತ್ತದೆ ಅನ್ನೋದನ್ನು ಈ ಪ್ರಕರಣದಲ್ಲಿ ನೋಡಬಹುದು..
ಸುದ್ದಿ ಮತ್ತು ಜಾಹೀರಾತು ನೀಡಲು ಸಂಪರ್ಕಿಸಿ:9449553305/7892830899..