


ಮಾಜಿ ಮುಖ್ಯಮಂತ್ರಿ ಅಭಿವೃದ್ಧಿಯ ಹರಿಕಾರ ರಾಜಾಹುಲಿ ಬಿಎಸ್ ಯಡಿಯೂರಪ್ಪ ತಮ್ಮ ಸುದೀರ್ಘ ರಾಜಕೀಯ ಜೀವನದಲ್ಲಿ ಶಾಸಕರಾಗಿ ಕ್ಷೇತ್ರದಲ್ಲಿ ಜನರ ಸಮಸ್ಯೆಗಳ ಬಗ್ಗೆ ಗಮನ ಹರಿಸುತ್ತಾ ಅವರಿಗೆ ನೆರವಾಗುತ್ತಾ ಸದಾ ಜನರ ನಡುವೆಯೇ ಇರುವ ಜನನಾಯಕ ಹಾಗೂ ಸದನದಲ್ಲಿ ಅಧಿಕಾರದಲ್ಲಿ ಇಲ್ಲದಿದ್ದಾಗ ಕೂಡ ಸಾಮಾನ್ಯ ಶಾಸಕರಾಗಿ ಕ್ಷೇತ್ರದ ಹಾಗೂ ರಾಜ್ಯದ ಸಮಸ್ಯೆಗಳ ಬಗ್ಗೆ ಸದನದ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿ ಆಡಳಿತ ಪಕ್ಷದ ಗಮನಸೆಳೆದು ಸಮಸ್ಯೆ ಬಗೆಹರಿಸುವಲ್ಲಿ ಮುಂಚೂಣಿಯಲ್ಲಿ ಇರುತ್ತಿದ್ದ ಶಾಸಕರಾಗಿದ್ದರು.
ಇಂತಹ ಸಾಧನೆಗೈದ ಶಾಸಕರಾದ ಬಿಎಸ್ ಯಡಿಯೂರಪ್ಪನವರು ಯುವ ಶಾಸಕರಿಗೆ ಮಾದರಿ ಎಂದರೆ ತಪ್ಪಾಗಲಾರದು.
ಅಧಿಕಾರಿಗಳಿಂದ ಅವರು ಕೆಲಸ ತೆಗೆದುಕೊಳ್ಳುವ ರೀತಿ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವ ರೀತಿ ಬೇರೆಯವರಿಗೆ ಮಾರ್ಗದರ್ಶನ ಎನ್ನಬಹುದು.
ಇಂತಹ ಜನನಾಯಕನಿಗೆ ಅತ್ಯುತ್ತಮ ಶಾಸಕ ಎನ್ನುವ ಪ್ರಶಸ್ತಿ ನೀಡುವುದರ ಮೂಲಕ ಉಳಿದ ಶಾಸಕರಿಗೂ ಆ ದಿಕ್ಕಿನಲ್ಲಿ ಹೋಗಲು ಪ್ರೇರಣೆ ನೀಡಲು ಹೊಸ ನಾಂದಿ ಹಾಡಲಾಗಿದೆ.
ಅತ್ಯುತ್ತಮ ಶಾಸಕ ಪ್ರಶಸ್ತಿಗೆ ಪಾತ್ರವಾದ ಬಿಎಸ್ ಯಡಿಯೂರಪ್ಪ ನವರಿಗೆ ಶಿವಮೊಗ್ಗ ನಗರ ಒಕ್ಕಲಿಗರ ಸಂಘದ ಅಧ್ಯಕ್ಷರಾದ ಎಸ್, ಕೆ ರಾಘವೇಂದ್ರ ಅವರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ…
ಸುದ್ದಿ ಮತ್ತು ಜಾಹೀರಾತು ನೀಡಲು ಸಂಪರ್ಕಿಸಿ:9449553305/7892830899..