ಶಿವಮೊಗ್ಗ : ಮಹಾನಗರ ಪಾಲಿಕೆಯಲ್ಲಿ ಕೆಲವು ಅಧಿಕಾರಿಗಳು ಅಂದಾ ದರ್ಬಾರ್ ನಡೆಸುತ್ತಿದ್ದು ಇವರಿಗೆ ಹೇಳುವವರು ಕೇಳುವವರು ಇಲ್ಲವಾಗಿದೆ.
ಯಾವುದೇ ಕೆಲಸ ಮಾಡಿದರೂ ಸಮರ್ಪಕವಾದ ದಾಖಲೆಗಳನ್ನು ಇಟ್ಟುಕೊಂಡು ಕಾರ್ಯನಿರ್ವಹಿಸಬೇಕು ಆದರೆ ಮಹಾನಗರ ಪಾಲಿಕೆಯಲ್ಲಿ ಕೆಲವು ಭ್ರಷ್ಟಾ ಅಧಿಕಾರಿಗಳು ಲಂಚದ ಆಸೆಗೆ ಬಿದ್ದು ತರಾತುರಿಯಲ್ಲಿ ಕೆಲವು ಕಾಮಗಾರಿಗಳನ್ನು ಪೂರ್ವಾನುಮತಿ ಇಲ್ಲದೆಯೇ ಪ್ರಾರಂಭಿಸಿ ಸಂಬಂಧಪಟ್ಟ ಪ್ರಾಧಿಕಾರಗಳಿಂದ ಅನುಮತಿಗಳನ್ನು ತೆಗೆದುಕೊಳ್ಳದೆ ತರಾತುರಿಯಲ್ಲಿ ಹಣ ಹೊಡೆಯುವ ಸಂಚಿನಿಂದ ತಮಗೆ ಬೇಕಾದವರಿಗೆ ಕಾಮಗಾರಿ ಮಾಡಿಕೊಡುವ ಈ ಭ್ರಷ್ಟರ ಮೊದಲನೆಯ ಕಥೆ …
”
ಏನಿದು ಪ್ರಕರಣ:
ನಗರದ ಜಿ ಎಚ್ ಪಟೇಲ್ ಬಡಾವಣೆಯಲ್ಲಿ ಹಾಲಿ ಚಾಲನೆಯಲ್ಲಿರುವ ಒಳಚರಂಡಿ ಕೊಳವೆ ಮಾರ್ಗಗಳನ್ನು ನಾರ್ಧನ್ ಔಟ್ ಪಾಲ್ ಗೆ ಲಿಂಕ್ ಮಾಡುವ ಕಾಮಗಾರಿಯನ್ನು ತರಾತುರಿಯಲ್ಲಿ ಪ್ರಾರಂಭ ಮಾಡಿದ್ದು ಅಂದಾಜು 83.70 ಲಕ್ಷದ ಕಾಮಗಾರಿಗೆ ನಿಯಮದ ಪ್ರಕಾರ ಕರ್ನಾಟಕ ನೀರಾವರಿ ನಿಗಮ ನಿಯಮಿತದ ಅನುಮತಿಯನ್ನು ತೆಗೆದುಕೊಂಡು ಕಾಮಗಾರಿಯನ್ನು ಪ್ರಾರಂಭಿಸಬೇಕಾಗಿತ್ತು.

ಆದರೆ ತರಾತುರಿಯಲ್ಲಿ ಪಾಲಿಕೆಯ ಭ್ರಷ್ಟಾ ಅಧಿಕಾರಿಗಳು ಹಣ ದೋಚುವ ಲೆಕ್ಕಾಚಾರ ಹಾಕಿಕೊಂಡು ಮೇಲ್ಕಂಡ ಕಾಮಗಾರಿಗೆ ಸಂಬಂಧಿಸಿದಂತೆ ಮಹಾನಗರ ಪಾಲಿಕೆ ವತಿಯಿಂದ ತುಂಗಾ ಮೇಲ್ದಂಡೆ ಯೋಜನೆ ವಿಭಾಗಕ್ಕೆ ನಿರಾಕ್ಷೇಪಣಾ ಪತ್ರಕ್ಕೆ ಅರ್ಜಿ ಸಲ್ಲಿಸಿರುತ್ತಾರೆ. ಆದರೆ ಕರ್ನಾಟಕ ನೀರಾವರಿ ನಿಗಮ ನಿಯಮಿತದಿಂದ ಈ ಕಾಮಗಾರಿಗೆ ನಿರಾಕ್ಷೇಪಣಾ ಪತ್ರ ನೀಡಿರುವುದಿಲ್ಲ ಬದಲಾಗಿ ಪಾಲಿಕೆಯ ಪತ್ರಕ್ಕೆ ಉತ್ತರ ನೀಡುತ್ತಾ ತಾವು ಸಲ್ಲಿಸಿರುವ ಅನುಮತಿ ಪ್ರಸ್ತಾವನೆ ಪತ್ರದಲ್ಲಿ ಕಾಮಗಾರಿ ನಿರ್ವಹಿಸಬೇಕಾಗಿರುವ ಸ್ಥಳದ ನಕ್ಷೆ ಮತ್ತು ಟೋಪೋ ನಕ್ಷೆ ಹಾಗೂ ವಿವರವಾದ ವರದಿಯೊಂದಿಗೆ ಪ್ರಸ್ತಾವನೆಯನ್ನು ಮರಳಿ ಸಲ್ಲಿಸಿ ಎಂದು ಖುದ್ದಾಗಿ ಸೂಚಿಸಿರುತ್ತಾರೆ ಆದರೆ ತುಂಗಾ ಮೇಲ್ದಂಡೆ ಯೋಜನೆಯ ಅಧಿಕಾರಿಗಳು ಕೇಳಿದ ಮಾಹಿತಿ ನೀಡದೇ ನಿಗಮದ ಗಮನಕ್ಕೂ ತರದೆ ಅನುಮತಿ ಇಲ್ಲದೆ ಮಹಾನಗರ ಪಾಲಿಕೆಯವರು ತಮ್ಮ ಕೆಲಸ ಪ್ರಾರಂಭಿಸಿರುತ್ತಾರೆ ಸ್ಥಳೀಯರು ದೂರವಾಣಿ ಮುಖಾಂತರ ತುಂಗಾ ಮೇಲ್ದಂಡೆ ಯೋಜನೆಯ ಅಧಿಕಾರಿಗಳಿಗೆ ಕರೆ ಮಾಡಿ ತಿಳಿಸಿದಾಗ ಅಧಿಕಾರಿಗಳ ಸೂಚನೆ ಮೇರೆಗೆ ಕಾಮಗಾರಿ ನಿಲ್ಲಿಸಿರುತ್ತಾರೆ ಇದು ಕರ್ತವ್ಯ ಲೋಪ ವಾಗಿದ್ದು ಇವರ ವಿರುದ್ಧ ಕಾನೂನು ರೀತಿಯಲ್ಲಿ ಕರ್ನಾಟಕ ನೀರಾವರಿ ನಿಗಮ ನಿಯಮಿತ ದ ಕಾರ್ಯಪಾಲಕ ಇಂಜಿನಿಯರ್ ಎಫ್ ಐ ಆರ್ ದಾಖಲಿಸಿ ಅನುಮತಿ ಇಲ್ಲದೆ ಕೆಲಸ ಮಾಡಿರುವ ಸಂಪೂರ್ಣ ಕಾಮಗಾರಿಯನ್ನು ತಡೆಹಿಡಿದು ಆ ಸ್ಥಳದಿಂದ ತೆಗಿಸಬೇಕು ಮತ್ತೆ ಅನುಮತಿ ಸಿಗುವವರೆಗೂ ಕೆಲಸ ಮಾಡದಂತೆ ನೋಡಿಕೊಳ್ಳಬೇಕು ತರಾತುರಿಯಲ್ಲಿ ಕಾರ್ಯ ಪ್ರಾರಂಭಿಸಿದ ಮಹಾನಗರ ಪಾಲಿಕೆಯ ಇಂಜಿನಿಯರ್, ಸಹಾಯಕ ಕಾರ್ಯಪಾಲಕ ಅಭಿಯಂತರರು, ಹಾಗೂ ವಿಶೇಷವಾಗಿ ಇದಕ್ಕೆಲ್ಲ ಕುಮ್ಮಕ್ಕು ನೀಡುವ ಮೂರು ಹುದ್ದೆಯನ್ನು ತನ್ನಲ್ಲೇ ಇಟ್ಟುಕೊಂಡಿರುವ ಕಡು ಭ್ರಷ್ಟ ಅಧಿಕಾರಿ ಕಾರ್ಯಪಾಲಕ ಅಭಿಯಂತರ ಭರತ್ ವಿರುದ್ಧ ದೂರು ದಾಖಲಾಗಬೇಕು. ಈತನ ಮನೋಪೋಲಿ ಮಹಾನಗರ ಪಾಲಿಕೆಯಲ್ಲಿ ಎಗ್ಗಿಲ್ಲದೆ ಸಾಗಿದೆ ಸಾಲದ್ದಕ್ಕೆ ಈತನಿಗೆ ಮೂರು ಹುದ್ದೆಗಳು ಈ ಹುದ್ದೆಯನ್ನು ನಿರ್ವಹಿಸಲಾಗದೆ ಚಡಪಡಿಸುತ್ತಿರುವ ಭರತ್ ನಿಗೆ ಮುಕ್ತಿ ಕೊಡಬೇಕು ಎರಡು ಎಕ್ಸಿಕ್ಯೂಟಿವ್ ಹುದ್ದೆ, ಒಂದು ಎಸ್ ಇ ಹುದ್ದೆ ಮೂರು ಹುದ್ದೆಗಳು ಬೇಕಾ..?! ಒಬ್ಬ ವ್ಯಕ್ತಿ ಮೂರು ಹುದ್ದೆಯನ್ನು ನಿರ್ವಹಿಸಬಹುದಾ..?! ಇವೆಲ್ಲ ಜವಾಬ್ದಾರಿಗಳ ಜೊತೆಗೆ ವೈಯಕ್ತಿಕವಾಗಿ ಆತನಿಗೆ ಇನ್ನೊಂದು ಜವಾಬ್ದಾರಿ ಬೇರೆ ಇದೆ ಅದು ಬಿಸಿ ತುಪ್ಪ ಬಿಟ್ಟುಕೊಡುವಾಗಿಲ್ಲ ಅವರು ಒಳ್ಳೆ ಆಫೀಸರ್ ಅವರನ್ನು ನಾನು ರಕ್ಷಣೆ ಮಾಡುತ್ತೇನೆ ಎನ್ನುತ್ತಾನೆ ಏತಕ್ಕೆ ರಕ್ಷಣೆ ಮಾಡುತ್ತಿದ್ದಾನೆ ಎನ್ನುವುದು ನಮಗೆ ಗೊತ್ತಿದೆ ಸಮಯ ಬಂದಾಗ ಹೇಳುತ್ತೇವೆ ಪಾಲಿಕೆಯಲ್ಲಿ ಭರತಾ ತರಾತುರಿಯಲ್ಲಿ ಸಾಕಷ್ಟು ಕಳಪೆ ಕಾಮಗಾರಿಗಳನ್ನು ಮಾಡಲು ಅನುಮತಿ ನೀಡಿದ್ದಾನೆ. ಈತ ಮಹಾನಗರ ಪಾಲಿಕೆಗೆ ಒಕ್ಕರಿಸಿಕೊಂಡ ನಂತರ ಬರೀ ಕಳಪೆ ಕಾಮಗಾರಿಗಳೆ ನಡೆದಿವೆ ಎನ್ನುತ್ತಾರೆ ಪಾಲಿಕೆಯ ಹಲವರು ಅದಕ್ಕೆ ಪತ್ರಿಕೆ ಬಳಿ ದಾಖಲೆಗಳು ಇವೆ ಮುಂದಿನ ದಿನಗಳಲ್ಲಿ ಒಂದೊಂದಾಗಿ ಅದೆಲ್ಲವನ್ನು ಸಾರ್ವಜನಿಕರ ಹಾಗೂ ಸಂಬಂಧಪಟ್ಟ ಅಧಿಕಾರಿಗಳ ಮುಂದೆ ತೆರೆದಿಡಲಾಗುವುದು.
ಈ ಪ್ರಕರಣದಲ್ಲಿ ಗಮನಿಸಬೇಕಾದ ಅಂಶಗಳು :
1)ಜಿಹೆಚ್ ಪಟೇಲ್ ಬಡಾವಣೆಯಲ್ಲಿ ಹಾಲಿ ಚಾಲನೆಯಲ್ಲಿರುವ ಒಳಚರಂಡಿ ಕೊಳವೆ ಮಾರ್ಗಗಳನ್ನು ನಾರ್ಧನ್ ಔಟ್ ಫಾಲ್ ಗೆ ಲಿಂಕ್ ಮಾಡುವ ಕಾಮಗಾರಿಯನ್ನು ಅಂದಾಜು 83.70 ಲಕ್ಷ ವೆಚ್ಚದಲ್ಲಿ ಕಾಮಗಾರಿ ನಡೆಸಲು ಕಾರ್ಯ ದೇಶ ನೀಡಿರುವುದು ದಿನಾಂಕ 24/7 2025 ರಂದು ಅಂದರೆ ಕಾರ್ಯದೇಶ ನೀಡಿದ ನಂತರ ಸಂಬಂಧಪಟ್ಟ ತುಂಗಾ ಮೇಲ್ದಂಡೆ ಯೋಜನೆ ವಿಭಾಗಕ್ಕೆ ನಿರಾಕ್ಷೇಪಣಾ ಪತ್ರಕ್ಕೆ ದಿನಾಂಕ 4 /8 /2025 ರಂದು ಹಾಗೂ 29/07/2025 ರಂದು ಅನುಮತಿ ಗಾಗಿ ಪತ್ರ ಬರೆಯಲಾಗಿದೆ. ಇಲ್ಲೇ ಗಮನಿಸಿ ಇವರ ಭ್ರಷ್ಟಾಚಾರವನ್ನು ಅನುಮತಿ ಸಿಗುವ ಮೊದಲೇ ಕಾರ್ಯದೇಶ ನೀಡಲಾಗಿದೆ.
ಇದು ದಸರಾ ಧಮಾಕದ ಮೊದಲನೇ ಭರತನ ಬ್ರಹ್ಮಾಂಡ ಭ್ರಷ್ಟಾಚಾರದ ಕಥೆ ಇನ್ನು ತುಂಬಾ ಇದೆ ಪತ್ರಿಕೆ ದಾಖಲೆಗಳಿಲ್ಲದೆ ಸುದ್ದಿ ಮಾಡುವುದಿಲ್ಲ ಪತ್ರಿಕೆ ಮಾಡಿದ ಸುದ್ದಿ ಸುಳ್ಳಾಗುವುದಿಲ್ಲ ಭ್ರಷ್ಟಾ ಅಧಿಕಾರಿಗಳನ್ನು ಬೆತ್ತಲು ಮಾಡುವ ಸಮಯ ಹತ್ತಿರವಾಗಿದೆ ಒಂದೊಂದಾಗಿ ಒಂದೊಂದೇ ಹಗರಣಗಳು ಇನ್ನು ಮುಂದೆ ನಿರೀಕ್ಷಿಸಿ ಯಾರ ಮುಲಾಜು ಪತ್ರಿಕೆಗೆ ಇಲ್ಲ ಆದರೆ ಒಂದಿಷ್ಟು ಜನರ ಮೇಲೆ ಗೌರವವಿದೆ ಹಾಗೆ ಒಂದಷ್ಟು ಅಧಿಕಾರಿಗಳ ಮೇಲು ಕೂಡ ಗೌರವವಿದೆ ಆದರೆ ನಂಬಿಕೆಗೆ ದ್ರೋಹ ಮಾಡುವವರ ಮೇಲೆ ಅಲ್ಲ ನೆನಪಿರಲಿ…
ರಘುರಾಜ್ ಹೆಚ್ ಕೆ..9449553305...



