Home ಅರಣ್ಯ ಇಲಾಖೆBig news:ದಸರಾ ಅಂಬಾರಿಯಲ್ಲಿ ಪಾಲ್ಗೊಂಡ ಬಾಲಣ್ಣ ಬದುಕಲ್ವಾ..?!ಉಳಿದ ಆನೆಗಳ ಕಥೆ ಏನು..!ಗಾಯಗೊಂಡ ಆನೆಗಳ ಫೋಟೋಗಳಿವೆ ಸುದ್ದಿ ನೋಡಿ..!

Big news:ದಸರಾ ಅಂಬಾರಿಯಲ್ಲಿ ಪಾಲ್ಗೊಂಡ ಬಾಲಣ್ಣ ಬದುಕಲ್ವಾ..?!ಉಳಿದ ಆನೆಗಳ ಕಥೆ ಏನು..!ಗಾಯಗೊಂಡ ಆನೆಗಳ ಫೋಟೋಗಳಿವೆ ಸುದ್ದಿ ನೋಡಿ..!

by EDITOR NEWS WARRIORS
0 comments
ಶಿವಮೊಗ್ಗ ದಸರಾ ಅಂಬಾರಿ ಹೊತ್ತ ಸಾಗರನ ಜೊತೆ ಹೆಜ್ಜೆ ಹಾಕಿದ ಬಾಲಣ್ಣನ ಪರಿಸ್ಥಿತಿ ಗಂಭೀರವಾಗಿದೆ ಅಧಿಕಾರಿಗಳ ನಿರ್ಲಕ್ಷವೇ ಬಾಲಣ್ಣನ ಈ ಸ್ಥಿತಿಗೆ ಕಾರಣ…
ಏನಾಗಿದೆ ಬಾಲಣ್ಣನಿಗೆ..?!

ಸಾಗರನ ಜೊತೆ ಬಹದ್ದೂರ್ ಹಾಗೂ ಬಾಲಣ್ಣ ದಸರಾ ಅಂಬಾರಿಯಲ್ಲಿ ಹೆಜ್ಜೆ ಹಾಕಿದ್ದರು ಇಡೀ ಶಿವಮೊಗ್ಗ ಜಿಲ್ಲೆ ಸೇರಿದಂತೆ ಪಕ್ಕದ ಜಿಲ್ಲೆಯವರು ಕೂಡ ದಸರಾದಲ್ಲಿ ಪಾಲ್ಗೊಂಡು ಈ ಆನೆಗಳನ್ನು ಕಣ್ತುಂಬಿಕೊಂಡಿದ್ದರು ದಸರಾ ಸಂಭ್ರಮದಲ್ಲಿ ಎಲ್ಲರನ್ನು ಖುಷಿಪಡಿಸಿದ ಆನೆಗಳ ಪರಿಸ್ಥಿತಿ ಹೀನಾಯವಾಗಿದೆ. ಸಾಗರನ ಜೊತೆ ಹೆಜ್ಜೆ ಹಾಕಿದ ಇನ್ನೊಂದು ಆನೆ ಬಾಲಣ್ಣನ ಕಿವಿ ಕೊಳೆತು ಹೋಗಿ ಬಾಲಣ್ಣ ಬದುಕುಳಿಯುವುದೇ ಕಷ್ಟವಾಗಿದೆ ಬಾಲಣ್ಣನ ತಲೆ ಗುದ್ದಿದರೆ ಹುಳಗಳು ಬೀಳುತ್ತವೆ ಎನ್ನಲಾಗುತ್ತಿದೆ. ಕಿವಿ ಸದ್ಯದಲ್ಲೇ ಉದುರುವ ಸಾಧ್ಯತೆಯೇ ಹೆಚ್ಚಿದೆ. ಅಸಲಿಗೆ ದಸರಾ ಅಂಬಾರಿಗೆ ಬಾಲಣ್ಣ ಹೋಗುವಂತಿರಲಿಲ್ಲ ಬಾಲಣ್ಣನಿಗೆ ಕಾಲು ನೋವಿತ್ತು ಅರ್ಜುನ ಹೋಗಬೇಕಾಗಿತ್ತು ಆದರೆ ಕೊನೆ ಗಳಿಗೆಯಲ್ಲಿ ಅರ್ಜುನನ ಬದಲಾಗಿ ಕಾಲು ನೋವಿದ್ದ ಬಾಲಣ್ಣನನ್ನು ದಸರಾ ಅಂಬಾರಿ ತಯಾರಿಗೆ ಕಳುಹಿಸಲಾಯಿತು ಮೊದಲೇ ಕಾಲು ನೋವು ಹೇಳುವುದು ಯಾರ ಹತ್ತಿರ ಮೂಕ ಜೀವಿ ಅಂಬಾರಿಗೆ ಹೋಗಿ ಆಯ್ತು ಆದರೆ ಕಾಲು ನೋವು ಹೆಚ್ಚಾದಾಗ ಬಾಲಣ್ಣನಿಗೆ ಕಿವಿಗೆ ಇಂಜೆಕ್ಷನ್ ನೀಡಲಾಯಿತು ಇಬ್ಬರು ವೈದ್ಯರು ಎರಡು ಇಂಜೆಕ್ಷನ್ ಅನ್ನು ನೀಡಿದ್ದಾರೆ.
ಅದು ರಿಯಾಕ್ಷನ್ ಆಗಿ ಬಾಲಣ್ಣನ ಕಿವಿ ಈಗ ಕೊಳೆತು ಹೋಗಿದೆ ಹೊರಗಿನಿಂದ ವೈದ್ಯರನ್ನು ಕರೆಸಿ ಚಿಕಿತ್ಸೆ ಕೊಡಿಸಿದ್ದು ಅದು ಫಲಕಾರಿಯಾಗುವ ಸಾಧ್ಯತೆ ಕಡಿಮೆ ಇದೆ ಇನ್ನೇನು ಕಿವಿ ಬೀಳುವ ಪರಿಸ್ಥಿತಿಯಿದೆ ಬಾಲಣ್ಣನ ಜೀವಕ್ಕೆ ಅಪಾಯವಾದರೂ ಅಚ್ಚರಿ ಇಲ್ಲ.
ಉಳಿದ ಆನೆಗಳ ಕಥೆ ಏನು..?!//ನಿರ್ಲಕ್ಷದಿಂದ ಕರ್ತವ್ಯ ನಿರ್ವಹಿಸುತ್ತಿರುವ ಆರ್ ಎಫ್ ಓ ವಿನಯ್// 
ಆನೆ ಕ್ಯಾಂಪಿನಲ್ಲಿ ಇರುವ ಉಳಿದ ಆನೆಗಳ ಕಥೆ ಹೀನಾಯವಾಗಿದೆ ಯಾವಾಗಲೂ ಅಂಬಾರಿ ಬರುವ ಸಾಗರನ ಪರಿಸ್ಥಿತಿ ಕೂಡ ಸರಿ ಇಲ್ಲ ಸಾಗರನಿಗೆ ಹೊಟ್ಟೆ ನೋವು ಎಂದು ಕೊಟ್ಟ ಇಂಜೆಕ್ಷನ್ ನಿಂದ ಆದ ಗಾಯ ದೊಡ್ಡದಾಗಿದೆ. ಉಳಿದಂತೆ ವಿಕ್ರಾಂತ್ ಆನೆಯ ಕಾಲು ಕೊಳೆತು ಹೋಗಿದೆ ಆಡ್ಕ ಬಡ್ಕಾ ಎನ್ನುವ ಕುಂದಾಪುರದ ಹಾಲಾಡಿ ಹತ್ತಿರ ಹಿಡಿದು ತಂದ ಆನೆ ಪರಿಸ್ಥಿತಿ ಕೂಡ ಸರಿ ಇಲ್ಲ ಹೀಗೆ ಅಂಬಾರಿ ಹೊತ್ತ ಸಾಗರ್, ಜೊತೆಗೆ ಹೆಜ್ಜೆ ಹಾಕಿದ ಬಾಲಣ್ಣ, ಉಳಿದಂತೆ ವಿಕ್ರಾಂತ್, ಹಾಗೂ ಅಡ್ಕ ಬಡ್ಕ ಹೀಗೆ  ನಾಲ್ಕು ಆನೆಗಳ ಪರಿಸ್ಥಿತಿ ಹೀನಾಯವಾಗಿದೆ.
ಎರಡು ವರ್ಷದ ಹಿಂದೆ ಅಂಬಾರಿಗೆ ತಂದ ನೇತ್ರಾವತಿ ಆನೆ ಮೆರವಣಿಗೆಯಲ್ಲಿ ಮರಿಹಾಕುವ ಸಾಧ್ಯತೆ ಇತ್ತು..!

ಅರಣ್ಯ ಅಧಿಕಾರಿಗಳ ನಿರ್ಲಕ್ಷದಿಂದ ಎರಡು ವರ್ಷದ ಹಿಂದೆ ದಸರಾ ಜಂಬೂ ಸವಾರಿಗೆ ಎಂದು ಕರೆ ತಂದ ನೇತ್ರಾವತಿ ಎನ್ನುವ ಹೆಣ್ಣು ಆನೆಯನ್ನು ಅದು ಗರ್ಭವತಿ ಎನ್ನುವುದನ್ನು ಪರೀಕ್ಷಿಸದೆ ಅದನ್ನು ಅಂಬಾರಿಗೆ ತಯಾರು ಮಾಡಿದ್ದು ಕೊನೆಗಳಿಗೆಯಲ್ಲಿ ಅಂಬಾರಿಯ ಹಿಂದಿನ ದಿನ ಅದು ಮರಿ ಹಾಕಿತ್ತು ಒಂದು ವೇಳೆ ಮೆರವಣಿಗೆಯ ಸಂದರ್ಭದಲ್ಲಿ ಮರಿ ಹಾಕಿದ್ದರೆ ಪರಿಸ್ಥಿತಿ ಏನಾಗಿರುತ್ತಿತ್ತು.
ಆ ಮೂಕ ಜೀವಿಗೆ ಗರ್ಭವತಿ ಎಂದು ತಿಳಿಯದೆ ಕಸರತ್ತು ಮಾಡಿಸಿ ಹಿಂಸೆ ಮಾಡಿದ್ದರು ಅದೃಷ್ಟವಶಾತ್ ನೇತ್ರಾವತಿಗೆ ಏನು ಆಗಲಿಲ್ಲ ಅಲ್ಲೂ ಕೂಡ ಅಧಿಕಾರಿಗಳ ನಿರ್ಲಕ್ಷ ಎದ್ದು ಕಾಣುತ್ತಿತ್ತು. ಈಗ ಬಾಲಣ್ಣನ ಪರಿಸ್ಥಿತಿ ಸಮಯಕ್ಕೆ ಸರಿಯಾಗಿ ಈ ಆನೆಗಳ ಮೇಲ್ವಿಚಾರಣೆ ನೋಡಿಕೊಳ್ಳುವ ಡಿ ಆರ್ ಎಫ್ ಪ್ರಿಯಾಂಕ ಹಾಗೂ ಆರ್ ಎಫ್ ಓ ವಿನಯ್ ನಿರ್ಲಕ್ಷವೇ ಇದಕ್ಕೆ ಮುಖ್ಯ ಕಾರಣ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ನೀಡಿದ್ದರೆ ಈ ಪರಿಸ್ಥಿತಿ ಉದ್ಭವಿಸುತ್ತಿರಲಿಲ್ಲ ಇತ್ತೀಚಿಗೆ ಎಸಿಎಫ್ ಆಗಿ ವರ್ಗಾವಣೆಯಾಗಿ ಬಂದಿರುವ ವಿಜಯಕುಮಾರ್ ಪರ್ವಾಗಿಲ್ಲ ಮಾಹಿತಿ ಕೇಳಿದಾಗ ಸ್ಪಂದಿಸುತ್ತಾರೆ. ಆದರೆ  ಆರ್ ಎಫ್ ಓ ವಿನಯ್ ಹಾಗಲ್ಲ ಸ್ಪಂದಿಸುವುದಿರಲಿ ಎಲ್ಲಾ ಮುಚ್ಚಿಡುವ ಪ್ರಯತ್ನ ಮಾಡುತ್ತಿದ್ದಾರೆ.
ಆನೆಗಳನ್ನು ತೋರಿಸುವುದಕ್ಕೆ ಹಿಂದೇಟು ಹಾಕುವ ಮನುಷ್ಯ ಆನೆಗಳ ಹತ್ತಿರನು ಬರುವುದಿಲ್ಲ ಇನ್ನು ಆನೆಗಳಿಗೆ ಚಿಕಿತ್ಸೆ ಹೇಗೆ..?!
ಜನಪ್ರತಿನಿಧಿಗಳೇ ಇತ್ತ ಗಮನಹರಿಸಿ..!
ಶಿವಮೊಗ್ಗ ದಸರಾ ಜಂಬೂ ಸವಾರಿಯಲ್ಲಿ ಉತ್ಸಾಹದಿಂದ ಪಾಲ್ಗೊಂಡ ಜನಪ್ರತಿನಿಧಿಗಳೇ, ಇತ್ತ ಗಮನ ಹರಿಸಿ ಆನೆಗಳ ಹೀನಾಯ ಪರಿಸ್ಥಿತಿಗೆ ಕಾರಣರಾದ ಅಧಿಕಾರಿಗಳನ್ನು ಕರ್ತವ್ಯದಿಂದ ಅಮಾನತ್ತು ಗೊಳಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿ.
 ಸಿ ಸಿ ಎಫ್ ಅವರ ಗಮನಕ್ಕೆ..!
ಮಾನ್ಯ ,
ಸಿಸಿಎಫ್ ಅವರು ಈ ಕೂಡಲೇ ಈ ಇಬ್ಬರು ಅಧಿಕಾರಿಗಳನ್ನು ಸೇವೆಯಿಂದ ಅಮಾನತ್ತು ಮಾಡಿ ಆನೆಗಳ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡು ತನಿಖೆ ಮಾಡಿ ಇಲ್ಲಿ ತಪ್ಪಿತಸ್ಥರಿಗೆ ಸರಿಯಾದ ಶಿಕ್ಷೆ ನೀಡಬೇಕು ಇಲ್ಲವಾದಲ್ಲಿ ಪತ್ರಿಕೆ ಇದರ ವಿರುದ್ಧ ಕಾನೂನು ಹೋರಾಟ ಮಾಡುತ್ತದೆ.
ರಘುರಾಜ್ ಹೆಚ್‌ .ಕೆ .9449553‏‏305….

 

Related Articles

Latest news
ಅಂಬು ಗ್ಯಾಂಗಿನ ಹುಡುಗರ ಮಧ್ಯೆ ಕಿತ್ತಾಟ ರಾಮಿನಕೊಪ್ಪದ ಉಮೇಶ ಕುಳ್ಳಿ ಕಿರಣನನ್ನು ಕೊಲೆ ಮಾಡಲು ಕಾರಣವೇನು..? ಶಾಂತಿನಗರದಲ್ಲಿ ಸೌಹಾರ್ದತೆಗೆ ಸಾಕ್ಷಿಯಾದ ಸಂಭ್ರಮದ ಈದ್ ಮೀಲಾದ್...! ಶಿವಮೊಗ್ಗ ಉಪವಿಭಾಗಾಧಿಕಾರಿಯಾಗಿ ಡಾ. ಮೈತ್ರಿ ಹೆಚ್ ಪಿ, ಎಸ್ ಮುಂದುವರಿಕೆ..! ಶಿವಮೊಗ್ಗದಲ್ಲಿ ‘ಅವಿಸ್ಮರಣೀಯ ಪ್ರಕರಣಗಳು’ ಕೃತಿ ಬಿಡುಗಡೆ..! Shivamogga breaking: ಶಿವಮೊಗ್ಗ ಉಪವಿಭಾಗಾಧಿಕಾರಿಯಾಗಿ ಮತ್ತೆ ಜಿ ಹೆಚ್ ಸತ್ಯನಾರಾಯಣ ಮುಂದುವರಿಕೆ...?! ಡಾ. ಮೈತ್ರಿ... Big news : ಜಿಪಿಟಿ ನೇಮಕಾತಿಯಲ್ಲಿ ಇಂಗ್ಲಿಷ್ ಶಿಕ್ಷಕರ ಹುದ್ದೆ ಗಣನೀಯ ಕಡಿತ: ಸರ್ಕಾರದ ವಿರುದ್ಧ ಆಕಾಂಕ್ಷಿಗಳ ತೀವ್ರ ... ಸೇವೆಯೇ ಶಿಕ್ಷಣ ಇಲಾಖೆಯ ಮುಖ್ಯ ಧ್ಯೇಯ ಸಚಿವ ಎಸ್.ಮಧು ಬಂಗಾರಪ್ಪ..! ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR): 98.53% ಡಿಜಿಟಲೀಕರಣ ಪೂರ್ಣ..! Big news :  ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ನಲ್ಲಿ  ಮಹತ್ವದ ಬದಲಾವಣೆ..! ಯಾರಿಗೆ ಯಾವ ಸ್ಥಾನ..?! ಕೋಟೆ ಪೊಲೀಸರ ಖಡಕ್ ಕಾರ್ಯಾಚರಣೆ ವಿದ್ಯಾನಗರದ ಎವರ್ ಗ್ರೀನ್ ಬ್ಯೂಟಿ ಪಾರ್ಲರ್ ಮೇಲೆ ದಾಳಿ  ಒಬ್ಬನ ಬಂಧನ ಇನ್ನೊಬ್ಬಳು ಪ...