571
ಶಿವಮೊಗ್ಗ : ನಗರದಲ್ಲಿ ಮಸಾಜ್ ಪಾರ್ಲರ್ ಹೆಸರಿನಲ್ಲಿ ಮಹಿಳೆಯರ ಮೈ ಮಾರಾಟ ದಂಧೆ ನಡೆಯುತ್ತಿದ್ದು ಒಂದೊಂದು ಕೆಲಸಕ್ಕೆ ಒಂದೊಂದು ರೇಟ್ ಫಿಕ್ಸ್ ಮಾಡಲಾಗಿದೆ.
ಸ್ಥಳೀಯವಾಗಿ ಶಿವಮೊಗ್ಗ ಸೇರಿದಂತೆ ಬೆಂಗಳೂರಿನಿಂದ ಹಾಗೂ ಅನ್ಯ ರಾಜ್ಯಗಳಿಂದ ಬರುವ ಯುವತಿಯರನ್ನು ಮೈ ಮಾರಾಟ ದಂಧೆಗೆ ಇಳಿಸುವ ಪಾರ್ಲರ್ ಮಾಲೀಕರು ದಿನನಿತ್ಯ ಲಕ್ಷ ಲಕ್ಷ ಹಣ ಎಣಿಸುತ್ತಿದ್ದಾರೆ.
ಎಲ್ಲೆಲ್ಲಿ ನಡೆಯುತ್ತಿದೆ ಈ ದಂದೆ..?!
ವಿನೋಬಾ ನಗರ,ಜೈಲ್ ಸರ್ಕಲ್, ಶಂಕರಮಠ ರೋಡ್, ಕೋಟೆ ರಸ್ತೆಯಲ್ಲಿ ಪೊಲೀಸ್ ಠಾಣೆಯ ಸಮೀಪ ದಂಧೆ ವ್ಯಾಪಕವಾಗಿ ನಡೆಯುತ್ತಿದೆ.ಜೈಲ್ ರಸ್ತೆಯಲ್ಲಿ, ಕುವೆಂಪು ರಸ್ತೆಯಲ್ಲಿ, ಮೆಟ್ರೋ ಆಸ್ಪತ್ರೆ ಸಮೀಪ, ಗಾಂಧಿನಗರದಲ್ಲಿ, ವಿದಾತಿ ಭವನ ಹೋಟೆಲ್ ಹತ್ತಿರ, ದುರ್ಗಿಗುಡಿ ಯಲ್ಲಿ, ಪೋಲಿಸ್ ಚೌಕಿಯ ಕೆಳಗೆ, ಗೋಪಿ ಸರ್ಕಲ್ , ಗೋಪಾಳ ಹತ್ತಿರ ಹೀಗೆ ಸಾಲು ಸಾಲು ಮೈ ಮಾರಾಟ ನಡೆಸುವ ಮಸಾಜ್ ಪಾರ್ಲರ್ ಗಳು ತಲೆಯೆತ್ತಿ ನಿಂತಿವೆ.
ಒಂದೊಂದು ಕೆಲಸಕ್ಕೆ ಒಂದೊಂದು ರೈಟ್ ಪಿಕ್ಸ್..!
ಮಸಾಜ್ ಪಾರ್ಲರ್ ನಲ್ಲಿ ನಡೆಸುವ ಮೈ ಮಾರಾಟ ದಂಧೆಯಲ್ಲಿ ಒಂದೊಂದು ಕೆಲಸಕ್ಕೆ ಒಂದೊಂದು ರೈಟ್ ಅನ್ನು ಫಿಕ್ಸ್ ಮಾಡಲಾಗಿದೆ ಉದಾಹರಣೆಗೆ ಐಸ್ ಕ್ರೀಮ್ ಗೆ ಒಂದು ರೇಟ್, ಬಾಡಿ ಟು ಬಾಡಿ ಮಸಾಜ್ ಗೆ ಒಂದು ರೇಟ್, ಹ್ಯಾಪಿ ಎಂಡಿಂಗ್ ಗೆ ಒಂದು ರೇಟ್, ಹೊರಗಡೆ ಕರೆದುಕೊಂಡು ಹೋಗಲು ಒಂದು ರೇಟ್, ಹೀಗೆ ಒಂದೊಂದು ಕೆಲಸಕ್ಕೆ ಒಂದೊಂದು ರೇಟ್ ಫಿಕ್ಸ್ ಮಾಡಲಾಗಿದ್ದು ಯುವತಿಯರನ್ನು ಕರೆತರುವವರಿಗೆ ಕಮಿಷನ್ ನೀಡಲಾಗುತ್ತದೆ ಕೆಲವು ಪಾರ್ಲರ್ ಗಳಲ್ಲಿ ಒಬ್ಬ ಯುವತಿಯನ್ನು ಎರಡು ಮೂರು ದಿನ ಇಟ್ಟುಕೊಂಡು ಮತ್ತೆ ಬೇರೆ ಯುವತಿಯನ್ನು ಕರೆತರುತ್ತಾರೆ ಕೆಲವು ಪಾರ್ಲರ್ ಗಳಲ್ಲಿ ಒಬ್ಬ ಯುವತಿಯನ್ನು ಅವರದೇ ಮಾಲೀಕತ್ವದಲ್ಲಿ ಇರುವ ಬೇರೆ ಬೇರೆ ಪಾರ್ಲರ್ ಗಳಿಗೆ ಎಕ್ಸ್ಚೇಂಜ್ ಮಾಡುತ್ತಾರೆ ಹೀಗೆ ದಂಧೆ ನಿರಂತರವಾಗಿ ನಡೆಯುತ್ತಿದೆ ಯಾರ ಭಯವಿಲ್ಲದೆ ….
ಮಸಾಜ್ ಪಾರ್ಲರ್ ಗಳ ಹೆಸರುಗಳು ಅದರ ಮಾಲೀಕರ ಹೆಸರುಗಳನ್ನು ಪ್ರಕಟಿಸಿಲ್ಲ , ಜೊತೆಗೆ ಫೋಟೋ ವಿಡಿಯೋಗಳನ್ನು ಹಾಕಿಲ್ಲ, ಸಂಬಂಧಪಟ್ಟ ಪೊಲೀಸ್ ಠಾಣೆ ವ್ಯಾಪ್ತಿಯ ಇನ್ಸ್ಪೆಕ್ಟರ್ ಗಳಿಗೆ, ಡಿ ವೈ ಎಸ್ ಪಿ ಅವರಿಗೆ, ಮಾನ್ಯ ಎಸ್ ಪಿ ಅವರಿಗೆ, ಹಾಗೂ ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರಾದ ಡಾ/ ನಾಗಲಕ್ಷ್ಮಿ ಅವರ ಗಮನಕ್ಕೆ ಸಾಕ್ಷಿ ಸಮೇತ ನೀಡಲಾಗುವುದು .
ಮಸಾಜ್ ಪಾರ್ಲರ್ ಗಳು ಅನುಸರಿಸಬೇಕಾದ ನಿಯಮಗಳೇನು..?!
1)ಮಸಾಜ್ ಪಾರ್ಲರ್ ನಲ್ಲಿ ಕಡ್ಡಾಯವಾಗಿ ನುರಿತ ತಜ್ಞ ಪರಿಣಿತಿ ಹೊಂದಿರುವ ಮಸಾಜ್ ಮಾಡುವ ಸಿಬ್ಬಂದಿಗಳಿರಬೇಕು.
2)ಮಸಾಜ್ ಪಾರ್ಲರ್ ನಲ್ಲಿ ಮಸಾಜ್ ಮಾಡುವಾಗ ಬಾಗಿಲುಗಳನ್ನು ಹಾಕಿಕೊಳ್ಳದೆ ತೆರೆದಿಟ್ಟುಕೊಳ್ಳಬೇಕು.
3)ಮಸಾಜ್ ಪಾರ್ಲರ್ ನಲ್ಲಿ ಕಡ್ಡಾಯವಾಗಿ ಲೆಡ್ಜರ್ (ದಾಖಲಾತಿ ಪುಸ್ತಕ) ವನ್ನು ಇಡಬೇಕು.
4)ಪಾರ್ಲರ್ ಗೆ ಬರುವ ಪ್ರತಿಯೊಬ್ಬ ವ್ಯಕ್ತಿಗಳ ವಿಳಾಸ ಮಾಹಿತಿ ಬರೆದುಕೊಳ್ಳಬೇಕು ಜೊತೆಗೆ ಆರೋಗ್ಯ ಸರಿಯಿಲ್ಲದೆ ಚಿಕಿತ್ಸೆಗಾಗಿ ಬರುವ ವ್ಯಕ್ತಿಗಳ ವಿವರಗಳನ್ನು ಪಡೆದುಕೊಳ್ಳಬೇಕು.
5)ಎಲ್ಲಕ್ಕಿಂತ ಹೆಚ್ಚಾಗಿ ಸಿಸಿ ಕ್ಯಾಮೆರಾ ಗಳನ್ನು ಅಳವಡಿಸಿರಬೇಕು ಹಾಗೂ ಅದರಲ್ಲಿ ದಾಖಲಾದ ಮಾಹಿತಿಯನ್ನು ಸಂಗ್ರಹಿಸಿ ಇಟ್ಟುಕೊಳ್ಳಬೇಕು.
ಇವೆಲ್ಲಾ ನಿಯಮಗಳನ್ನು ಮಸಾಜ್ ಪಾರ್ಲರ್ ಗಳು ಅನುಸರಿಸಬೇಕು ಆದರೆ ಅನುಸರಿಸುತ್ತಿದ್ದಾರಾ..?! ಪೊಲೀಸ್ ಇಲಾಖೆ ಇದರ ಬಗ್ಗೆ ಗಮನ ಹರಿಸಬೇಕು ಭೇಟಿ ನೀಡಿ ಪರಿಶೀಲಿಸಬೇಕು ಕೂಡಲೇ ಬಂದ್ ಮಾಡಿಸಬೇಕು.
ವಿ ಸೂ: ಕೆಲವು ಪಾರ್ಲರ್ ಗಳು ಭಿನ್ನವಾಗಿವೆ ಎಲ್ಲಾ ನಿಯಮಗಳನ್ನು ಪಾಲಿಸಿ ಉತ್ತಮವಾಗಿ ಸಲೂನ್, ಮಸಾಜ್ ಸೆಂಟರ್ ಗಳನ್ನು ನಡೆಸುತ್ತಿದ್ದಾರೆ.

