ಭದ್ರಾವತಿ : ಓಲ್ಡ್ ಟೌನ್ ಠಾಣೆಯ ವ್ಯಾಪ್ತಿಯಲ್ಲಿ ನಿನ್ನೆ ನಡೆದ ಡಬಲ್ ಮರ್ಡರ್ ಗೆ ಸಂಬಂಧಿಸಿದಂತೆ ಐದು ಜನ ಆರೋಪಿಗಳನ್ನು ಬಂಧಿಸಿರುವ ಪೊಲೀಸರು ಇಂದು ಅವರುಗಳ ಫೋಟೋ ಅನ್ನು ಬಿಡುಗಡೆಗೊಳಿಸಿದ್ದಾರೆ.
ಆರೋಪಿಗಳ ವಿವರ ಈ ಕೆಳಗಿನಂತಿದೆ :
1) ಮಂಜುನಾಥ್ ಸೈಲೆಂಟ್ ಶಶಿ ತಂದೆ ಕುಮಾರ 29 ವರ್ಷ ನಗರ ಸಭೆಯಲ್ಲಿ ಪೌರ ಕಾರ್ಮಿಕ ವಾಸ ಜೈ ಭೀಮ್ ನಗರ 4 ನೇ ತಿರುವು ಭದ್ರಾವತಿ ಟೌನ್.
2) ಭರತ್ @ಸುಂಡು ತಂದೆ ಕುಮಾರ 32 ವರ್ಷ ನಗರ ಸಭೆಯಲ್ಲಿ ಟಾಟಾ ಎ ಸಿ ಗಾಡಿ ಚಾಲಕ ವಾಸ ಜೈ ಭೀಮ್ ನಗರ 1 ನೇ ತಿರುವು ಭದ್ರಾವತಿ ಟೌನ್.
3) ಸಂಜಯ್ @ ಕುಳ್ಳಿ ತಂದೆ ವಡಿವೇಲು 24 ವರ್ಷ ನಗರ ಸಭೆಯಲ್ಲಿ ಕೂಲಿ ಮತ್ತು ಡ್ರೈವರ್ ಕೆಲಸ ವಾಸ ಜೈ ಭೀಮ್ ನಗರ 1 ನೇ ತಿರುವು ಭದ್ರಾವತಿ ಟೌನ್.
4) ಸುರೇಶ್ @ ಸೂರಿ ತಂದೆ ಕಲಾ 27 ವರ್ಷ ಕೂಲಿ ಕೆಲಸ ವಾಸ ಮನೆ ನಂ 1 ಬಿ ಬ್ಲಾಕ್ ಜೈ ಭೀಮ್ ನಗರ 2 ನೇ ತಿರುವು ಭದ್ರಾವತಿ ಟೌನ್.
5) ವೆಂಕಟೇಶ್ @ಕೆಂಚ ತಂದೆ ಕುಮಾರ್ 28 ವರ್ಷ ನಗರ ಸಭೆಯಲ್ಲಿ ಪೌರ ಕಾರ್ಮಿಕ ವಾಸ ಜೈ ಭೀಮ್ ನಗರ 1 ನೇ ತಿರುವು ಭದ್ರಾವತಿ ಟೌನ್ .
ಪ್ರೀತಿ ವಿಚಾರಕ್ಕೆ ನಡೆದ ಘಟನೆ ಎರಡು ಕೊಲೆಯಲ್ಲಿ ಅಂತ್ಯವಾಗಿದೆ ನಂದೀಶ್ ಹಾಗೂ ಸ್ಮೃತಿ ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದು ಇವರಿಗೆ ಕಿರಣ್ ಮತ್ತು ಸುರೇಶ್ ಬೆಂಗಾವಲಾಗಿ ನಿಂತಿದ್ದರು ಕಳೆದ ಎರಡು ದಿನದ ಹಿಂದೆ ಈ ನವಜೋಡಿಗಳು ಊರನ್ನು ಬಿಟ್ಟು ದೂರದ ಹೈದರಾಬಾದ್ ಹೋಗಿ ಅಲ್ಲಿ ವಿವಾಹವಾಗಿ ಇದ್ದರು.
ಈ ಜೋಡಿ ನಾಪತ್ತೆಯಾದ ಬೆನ್ನಲ್ಲೇ ಭದ್ರಾವತಿಯಲ್ಲಿ ಎರಡು ಕುಟುಂಬಗಳ ಮಧ್ಯೆ ದೊಡ್ಡಮಟ್ಟದ ಗಲಾಟೆಗೆ ವೇದಿಕೆ ಸಿದ್ಧವಾಗಿತ್ತು. ಇದನ್ನು ಅರಿತ ಓಡಿ ಹೋದ ಜೀವಗಳು ಊರಿಗೆ ವಾಪಸ್ ಬಂದು ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದರು ಠಾಣೆಯಲ್ಲಿ ಎಲ್ಲವೂ ಸರಿಹೋಯಿತು ಎಂದುಕೊಂಡು ಹೊರ ಬಂದಾಗ ಯುವತಿ ಯುವಕನ ಜೊತೆ ಹೋಗುತ್ತೇನೆ ಎಂದಳು ಆಗ ಕೆರಳಿದ ಯುವತಿಯ ಸಹೋದರ ಗ್ಯಾಂಗ್ ಕಟ್ಟಿಕೊಂಡು ಈಕೆಯ ಪ್ರಿಯತಮನ ಸ್ನೇಹಿತರಾದ ಕಿರಣ್ ಹಾಗೂ ಸುರೇಶ್ ಮೇಲೆ ಇವರಿಂದಲೇ ಇವರು ಓಡಿ ಹೋಗಲು ಕಾರಣ ಇವರನ್ನು ಬದುಕಲು ಬಿಡಬಾರದು ಎಂದು ಚಾಕುವಿನಿಂದ ಇರಿದಿದ್ದಾರೆ. ಈ ಘಟನೆಯಲ್ಲಿ ಕಿರಣ್ ಸ್ಥಳದಲ್ಲೇ ಸಾವನ್ನಪ್ಪಿದ್ದರೆ ಸುರೇಶ್ ಆಸ್ಪತ್ರೆಗೆ ದಾಖಲಾಗಿದ್ದ ದುರಂತವೆಂದರೆ ಈ ಜಗಳವನ್ನು ಬಿಡಿಸಲು ಬಂದ 65 ವರ್ಷದ ವೃದ್ಧ ಮಂಜುನಾಥ್ ಇವರ ಏಟಿಗೆ ಮೃತಪಟ್ಟಿದ್ದಾರೆ.
ಈ ಪ್ರಕರಣದಲ್ಲಿ ಭಾಗಿಯಾದ ಎಲ್ಲಾ ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಒಟ್ಟಿನಲ್ಲಿ ಪ್ರೀತಿಸಿದ್ದೆ ತಪ್ಪಾ ಎಂದಾದರೆ ಅದಕ್ಕೆ ಬೆಂಬಲ ನೀಡಿದ್ದು ದೊಡ್ಡ ತಪ್ಪು ಎನ್ನುವಂತಾಗಿದೆ ಅದೆಲ್ಲಕ್ಕಿಂತ ಹೆಚ್ಚಾಗಿ ಗಲಾಟೆ ನೋಡಿಕೊಂಡು ಸುಮ್ಮನಿರಲಾರದೆ ಬಿಡಿಸಲು ಹೋಗಿದ್ದೆ ದೊಡ್ಡ ತಪ್ಪು ಎನ್ನುವಂತಾಗಿದೆ.