226
ಶಿವಮೊಗ್ಗ : ನಗರದ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಕಳೆದ ಎರಡು ವರ್ಷದಿಂದ ಕಾರ್ಯನಿರ್ವಹಿಸುತ್ತಿದ್ದ ರವಿ ಪಾಟೀಲ್ ಚಿಕ್ಕಮಂಗಳೂರು ಜಿಲ್ಲೆಯ ಕೊಪ್ಪ ತಾಲ್ಲೂಕಿಗೆ ವರ್ಗಾವಣೆಯಾದ ಬೆನ್ನಲ್ಲೇ ಅವರ ಜಾಗಕ್ಕೆ ಯಾರು ಬರುತ್ತಾರೆ ಎನ್ನುವ ಕುತೂಹಲ ಎಡೆ ಮಾಡಿದೆ.
ಒಂದು ಕಡೆ ಹಿಂದೆ ತುಂಗಾ ನಗರ ಪೊಲೀಸ್ ಠಾಣೆಯಲ್ಲಿ ಮೂರುವರೆ ವರ್ಷಗಳ ಕಾಲ ಕಾರ್ಯನಿರ್ವಹಿಸಿದ ಮಂಜುನಾಥ್ ಅವರು ಬರುವ ಸಾಧ್ಯತೆ ಇದೆ ಎಂದು ಹಲವು ಮೂಲಗಳಿಂದ ತಿಳಿದುಬಂದಿದೆ.ಇನ್ನೊಂದೆಡೆ ಶಿವಮೊಗ್ಗದ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕಾರ್ಯನಿರ್ವಹಿಸಿದ ಇನ್ಸ್ಪೆಕ್ಟರ್ ಸತ್ಯ ನಾರಾಯಣ್ ಬರುವ ಸಾಧ್ಯತೆ ಇದೆ ಎನ್ನ ಲಾಗುತ್ತಿದ್ದು.
ಸತ್ಯ ನಾರಾಯಣ್ ಹಾಗೂ ಮಂಜುನಾಥ್ ಇಬ್ಬರು ಉತ್ತಮ ಅಧಿಕಾರಿಗಳೇ ಜನರೊಂದಿಗೆ ಬೆರೆತು ಜನರ ಭಾವನೆಗಳಿಗೆ ಸ್ಪಂದಿಸುವ ಅಧಿಕಾರಿಗಳು.
ಇನ್ಸ್ಪೆಕ್ಟರ್ ಸತ್ಯನಾರಾಯಣ ಬಗ್ಗೆ ಒಂದೆರಡು ಮಾತು…
ಶಿವಮೊಗ್ಗದ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಇನ್ಸ್ಪೆಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಸತ್ಯ ನಾರಾಯಣ ಅವರಿಗೆ ಬಂದ ಹೊಸತರಲ್ಲಿಯೇ ರಾಗಿಗುಡ್ಡ ಪ್ರಕರಣ ಸವಾಲಾಗಿ ಪರಿಣಮಿಸಿತ್ತು ರಾಗಿಗುಡ್ಡ ಶಾಂತಿನಗರ ಕೋಮು ಸಂಘರ್ಷ ಪ್ರಕರಣ ಇಡೀ ರಾಜ್ಯದಲ್ಲಿ ಸುದ್ದಿಯಾಗಿತ್ತು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಚಾಣಾಕ್ಷ ಅಧಿಕಾರಿ ಅಭಯ್ ಪ್ರಕಾಶ್ ಅವರನ್ನು ವಿನಾಕಾರಣ ಎತ್ತಂಗಡಿ ಮಾಡಲಾಗಿತ್ತು ಆ ಜಾಗಕ್ಕೆ ಬಂದ ಸತ್ಯನಾರಾಯಣ ಅಂದಿನ ಜಿಲ್ಲಾಧಿಕಾರಿ ಡಾ/ಸೆಲ್ವ ಮಣಿ ಹಾಗೂ ಅಂದಿನ ಪೊಲೀಸ್ ವರಿಷ್ಠಾಧಿಕಾರಿಗಳಾಗಿದ್ದ ಮಿಥುನ್ ಕುಮಾರ್ ಅವರ ಸಹಕಾರದೊಂದಿಗೆ ರಾಗಿಗುಡ್ಡ ಶಾಂತಿನಗರದಲ್ಲಿ ಮತ್ತೆ ಶಾಂತಿ ನೆಲೆಸುವಂತೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು ಹಗಲು ರಾತ್ರಿ ಎನ್ನದೆ ಕಾರ್ಯನಿರ್ವಹಿಸಿದ ಇನ್ಸ್ಪೆಕ್ಟರ್ ಸತ್ಯ ನಾರಾಯಣ್ ಅವರಿಗೆ ಅವರ ಸಿಬ್ಬಂದಿಗಳು ಉತ್ತಮ ಸಾಥ್ ನೀಡಿದ್ದರು ಹೀಗಾಗಿ ರಾಗಿಗುಡ್ಡ ಶಾಂತಿನಗರ ಜನರ ಭಾವನೆಗಳಿಗೆ ಬೆಲೆಕೊಟ್ಟು ನಿರಂತರ ಸಭೆಗಳನ್ನು ಮಾಡಿ ಎಲ್ಲರೊಂದಿಗೂ ಸಂಪರ್ಕದಲ್ಲಿದ್ದು ಎಲ್ಲೂ ಒಂದು ಚಿಕ್ಕ ಗಲಾಟೆ ಆಗದಂತೆ ನೋಡಿಕೊಂಡ ಕೀರ್ತಿ ಸತ್ಯ ನಾರಾಯಣ್ ಹಾಗೂ ಅವರ ಸಿಬ್ಬಂದಿಗಳಿಗೆ ಸಲ್ಲಬೇಕು ಇದರ ಜೊತೆಗೆ ಒಂದಷ್ಟು ಪ್ರೊಫೆಷನಲ್ ಎಥಿಕ್ಸ್ ಇಟ್ಟುಕೊಂಡಿರುವ ಅಧಿಕಾರಿ ಸತ್ಯ ನಾರಾಯಣ್ ಎಂದರೆ ತಪ್ಪಾಗಲಾರದು ಪೊಲೀಸ್ ಇಲಾಖೆಯಲ್ಲಿ ಒಂದಷ್ಟು ಪ್ರೊಫೆಷನಲ್ ಎಥಿಕ್ಸ್ ಇಟ್ಟುಕೊಳ್ಳದೆ ಇದ್ದರೆ ಕಷ್ಟ ಆ ದಿಕ್ಕಿನಲ್ಲಿ ಯೋಚಿಸಿದಾಗ ಸತ್ಯನಾರಾಯಣ ಒಬ್ಬ ಉತ್ತಮ ಅಧಿಕಾರಿ ಅಂತವರು ದೊಡ್ಡಪೇಟೆ ಠಾಣೆಗೆ ಬಂದರೆ ಒಳಿತು ಅತ್ಯಂತ ಸೂಕ್ಷ್ಮ ಠಾಣೆಗಳಲ್ಲಿ ಒಂದಾದ ದೊಡ್ಡಪೇಟೆ ಠಾಣೆ ನಿರ್ವಹಿಸುವುದು ಸುಲಭದ ಮಾತಲ್ಲ ಅಲ್ಲಿ ಎಲ್ಲವೂ ಇದೆ ದೊಡ್ಡಪೇಟೆ ಠಾಣೆಯಲ್ಲಿ ಕಾರ್ಯನಿರ್ವಹಿಸಬೇಕಾದರೆ ಬಹಳ ಎಚ್ಚರಿಕೆಯಿಂದ ಕಾರ್ಯನಿರ್ವಹಿಸಬೇಕು ಸತ್ಯನಾರಾಯಣ್ ಆ ಕಾರ್ಯವನ್ನು ನಿರ್ವಹಿಸುತ್ತಾರೆ ಎನ್ನುವ ನಂಬಿಕೆ ಹಲವರಲ್ಲಿ ಅವರ ನಂಬಿಕೆ ಉಸಿಯಾಗದಿರಲಿ ಸತ್ಯನಾರಾಯಣ ಬರಲಿ ಎನ್ನುವುದು ಪತ್ರಿಕೆಯ ಆಶಯ ಕೂಡ ಹೌದು…
ರಘುರಾಜ್ ಹೆಚ್ ಕೆ..9449553305…

