Home ತೀರ್ಥಹಳ್ಳಿಜಿಲ್ಲಾಧಿಕಾರಿಗಳೇ ಗಮನಿಸಿ, ಇದು ನ್ಯೂಸ್ ವಾರಿಯರ್ಸ್ ಎಫೆಕ್ಟ್ ..! ತೀರ್ಥಹಳ್ಳಿ ಅಕ್ರಮ ಮರಳು ಸಾಗಾಣಿಕೆಗೆ ಬಿತ್ತು ಬ್ರೇಕ್..!

ಜಿಲ್ಲಾಧಿಕಾರಿಗಳೇ ಗಮನಿಸಿ, ಇದು ನ್ಯೂಸ್ ವಾರಿಯರ್ಸ್ ಎಫೆಕ್ಟ್ ..! ತೀರ್ಥಹಳ್ಳಿ ಅಕ್ರಮ ಮರಳು ಸಾಗಾಣಿಕೆಗೆ ಬಿತ್ತು ಬ್ರೇಕ್..!

by EDITOR NEWS WARRIORS
0 comments
ಶಿವಮೊಗ್ಗ: ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನಲ್ಲಿ  ಯಥೇಚ್ಛವಾಗಿ ಅಕ್ರಮ  ಮರಳು ಹಾಗೂ  ಕಲ್ಲು ಗಣಿಗಾರಿಕೆ  ನಡೆಯುತ್ತಿದ್ದು  ಪತ್ರಿಕೆಗೆ ಬಂದ ಮಾಹಿತಿಯ ಆಧಾರದ ಮೇಲೆ ಪತ್ರಿಕಾ ತಂಡ ತಾಲೂಕಿನ ಮೇಗರವಳ್ಳಿ ಸಮೀಪ ಇರುವ ಬಗ್ಗೋಡಿಗೆ ಮರಳು ಕೋರೆಗೆ  ದಿಡೀರ್ ಭೇಟಿ ನೀಡಿದಾಗ ಅಲ್ಲಿ ಸಾವಿರಾರು ಲೋಡ್ ಮರಳನ್ನು ತೆಗೆದು ಅಕ್ರಮವಾಗಿ ಸಾಗಾಟ ಮಾಡಿರುವುದು ಕಂಡುಬಂದಿದ್ದು  ಕೆಲವು ಕಡೆ ಮರಳನ್ನು ದಾಸ್ತಾನು ಮಾಡಿ ಇಟ್ಟುಕೊಂಡಿದ್ದಾರೆ ಅದರಲ್ಲೂ ಪ್ರಮುಖವಾಗಿ ಅರಣ್ಯ ಇಲಾಖೆಯ ವ್ಯಾಪ್ತಿಗೆ ಒಳಪಡುವ ಕಂದಾಯ ಇಲಾಖೆಯ ವ್ಯಾಪ್ತಿಗೆ ಒಳಪಡುವ ಜಾಗಗಳೇ ಮರಳು ದಾಸ್ತಾನಿಗೆ ಮೀಸಲಿಟ್ಟಂತೆ ಆಗಿದೆ ಇದನ್ನು ಕಣ್ಣಾರೆ ಕಂಡ ಪತ್ರಿಕಾ ತಂಡ ತಡ ಮಾಡದೆ ಸಂಬಂಧಪಟ್ಟ ಇಲಾಖೆಗಳಾದ ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಅರಣ್ಯ ಇಲಾಖೆ, ಕಂದಾಯ ಇಲಾಖೆ, ಪೋಲಿಸ್ ಇಲಾಖೆ, ಹಾಗೂ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ  ಮಾಹಿತಿ ನೀಡಿದಾಗ ಅಧಿಕಾರಿಗಳು ಸ್ಪಂದಿಸಿ ಕೂಡಲೇ ಸ್ಥಳಕ್ಕೆ ಧಾವಿಸಿ ಅಕ್ರಮವಾಗಿ ದಾಸ್ತಾನು ಮಾಡಿರುವ ಮರಳನ್ನು ಸೀಜ್ ಮಾಡಿ  ಸುಮೋಟೋ ಪ್ರಕರಣವನ್ನು ದಾಖಲು ಮಾಡಿಕೊಂಡು ಎಫ್ ಐ ಆರ್ ದಾಖಲಿಸಿದ್ದಾರೆ . ಹಾಗೆ ಅರಣ್ಯ ಇಲಾಖೆಯವರು ಕೂಡ ಎಫ್ ಐ ಆರ್ ದಾಖಲಿಸಿದ್ದು  ಸ್ಥಳೀಯ ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿ ಎಲ್ಲಾ ಅಧಿಕಾರಿಗಳ ಜೊತೆಗೂಡಿ ಆ ಸ್ಥಳಕ್ಕೆ ಮತ್ತೆ ಹೋಗದಂತೆ ಬೃಹದ್ದಾಕಾರದ ಟ್ರಂಚ್  ಹೊಡಿಸಿದ್ದಾರೆ .

ಮರಳು ಕೋರೆಗಳು ಹರಾಜು ಆಗದ ಕಾರಣ ಈ ರೀತಿ ಅಕ್ರಮ  ಮರಳು ಹಾಗೂ ಕಲ್ಲು ಗಣಿಗಾರಿಕೆ  ನಿರಂತರವಾಗಿ ನಡೆಯುತ್ತಿದ್ದು  ಕುಶಾವತಿ ಹಳ್ಳ,ಶಿರುಪತಿ, ನರಟೂರು, ದಬ್ಬಣಗದ್ದೆ, ಆರಗ, ಹುಣಸವಳ್ಳಿ, ಪೀರನಗುಡ್ಡೆ, ಹಿರೇಸರ, ಆಂದಿನಿ, ಬಗ್ಗುಡುಗೆ ಸಮೀಪ ಅಕ್ಕಪಕ್ಕದಲ್ಲಿ ,ಅರೇಹಳ್ಳಿ, ಹೆದ್ದೂರು ಭಾಗದಲ್ಲಿ  ನಿರಂತರವಾಗಿ ಪಿಕಪ್ ಗಳಲ್ಲಿ  ಹಗಲು ರಾತ್ರಿ ಎನ್ನದೆ  ವಾಹನಗಳು  ಹಳ್ಳ ಮತ್ತು ನದಿ ಗಳಿಂದ  ಜೆಸಿಬಿ ಯಂತ್ರಗಳಿಂದ ಮರಳನ್ನು  ತೆಗೆಯುತ್ತಿದ್ದು.  ಪ್ರತಿ ದಿನ ಲಕ್ಷಾಂತರ ವಹಿವಾಟು ನಡೆಯುತ್ತದೆ ಸರ್ಕಾರದ ಬಕ್ಕಸಕ್ಕೆ  ಒಂದು ನಯಾ  ಪೈಸೆ ಹಣ ಬರುತ್ತಿಲ್ಲ .

ಗಣಿ ಮತ್ತು ಭೂವಿಜ್ಞಾನ ಇಲಾಖೆ ಪಾತ್ರವೇನು ‌…?!
ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಇರುವುದು ಶಿವಮೊಗ್ಗದಲ್ಲಿ ಆದರೆ ಮೊದಲೇ ಅಲ್ಲಿ ಸಿಬ್ಬಂದಿಗಳ ಕೊರತೆ ಸಾಕಷ್ಟು ಸಮಸ್ಯೆಗಳು ಇದರ ನಡುವೆ ಶಿವಮೊಗ್ಗದಿಂದ ತೀರ್ಥಹಳ್ಳಿಗೆ ಬರುವಷ್ಟರಲ್ಲಿ ಅಲರ್ಟ್ ಆಗುತ್ತಾರೆ ಹಾಗಾಗಿ ಮಾತೃ ಇಲಾಖೆ ಗಣಿ ಇಲಾಖೆಗೆ ನೇರವಾಗಿ ವಾಹನಗಳು ಸಿಗುವುದು ಕಷ್ಟ.
ಅರಣ್ಯ, ಕಂದಾಯ, ಪೋಲಿಸ್, ಗ್ರಾಮ ಪಂಚಾಯಿತಿ ಪಾತ್ರವೇನು..?!
ಅರಣ್ಯ ಇಲಾಖೆ , ಕಂದಾಯ ಇಲಾಖೆ ವ್ಯಾಪ್ತಿ ಒಳಗೆ ಅಕ್ರಮ ಮರಳನ್ನು ದಾಸ್ತಾನು ಮಾಡಿಟ್ಟು ಅಲ್ಲಿಂದ ಮರಳನ್ನು ಸಾಗಾಟ ಮಾಡುತ್ತಾರೆ ಇದನ್ನು ನೋಡಿಕೊಳ್ಳಬೇಕಾದ ವಾಚರ್ ಗಳು, ಗಾರ್ಡ್ ಗಳು, ಈ ಭಾಗಗಳ ಗಸ್ತಿನ ಜವಾಬ್ದಾರಿ  ಇರುವ ಅರಣ್ಯ ಇಲಾಖೆ ಸಿಬ್ಬಂದಿ ಗಳು ತಮ್ಮ ಮೇಲಾಧಿಕಾರಿಗಳ ಗಮನಕ್ಕೆ ಈ ವಿಷಯವನ್ನು ತರಬೇಕು ಆದರೆ ಸ್ಥಳೀಯರ ಒತ್ತಡಕ್ಕೆ ಮಣಿದು ಇನ್ಯಾವುದೋ ಆಮಿಷಕ್ಕೆ ಒಳಗಾಗಿ ಮೇಲಾಧಿಕಾರಿಗಳ ಗಮನಕ್ಕೆ ತರುವುದಿಲ್ಲ ಮೇಲಾಧಿಕಾರಿಗಳು ಕೂಡ ಇದರ ಬಗ್ಗೆ ಗಮನ ಹರಿಸಬೇಕು ಇಲ್ಲವಾದಲ್ಲಿ ಮುಂದೆ ಅವರ ಕೆಲಸಕ್ಕೆ ತೊಂದರೆ ಆಗಬಹುದು ಎಚ್ಚರವಿರಲಿ ಮಲೆನಾಡಿನ ಭಾಗದಲ್ಲಿ ಇರುವ ಆಗುಂಬೆ ಹಾಗೂ ಮಾಲೂರು ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಸಿಬ್ಬಂದಿಗಳ ಕೊರತೆ ಇದೆ ಆದರೂ ಕೂಡ ಇರುವ ಸಿಬ್ಬಂದಿಗಳನ್ನೇ ಬಳಸಿಕೊಂಡು ಉಳಿದ ಇಲಾಖೆಗಳ ಸಹಕಾರ ತೆಗೆದುಕೊಂಡು ಮರಳು ಮಾಫಿಯಾವನ್ನು ನಿಯಂತ್ರಣಕ್ಕೆ ತರಬೇಕು.
ತೀರ್ಥಳ್ಳಿಯ ಕಲ್ಲು ಗಣಿಗಾರಿಕೆ ಬಗ್ಗೆ ಬರಿಯೋದು ಸಾಕಷ್ಟಿದೆ ಈಗಾಗಲೇ ಸಾಕಷ್ಟು ಬಾರಿ ಬರೆದು ಆಗಿದೆ ಇಲಾಖೆ ಕ್ರಮ ಕೂಡ ತೆಗೆದುಕೊಂಡಿದೆ ಆದರೂ ಕೂಡ ಮಾಜಿ ಸಚಿವರೊಬ್ಬರು ಇವರ ಪರವಾಗಿ ಧರಣಿ ಕೂತುಕೊಳ್ಳುವುದು ಎಷ್ಟು ಸರಿ ಮಾಜಿ ಸಚಿವರು ತುಂಬಾ ಸಬ್ಯರು ದುಷ್ಟರಲ್ಲ, ಭ್ರಷ್ಟರಲ್ಲ, ಆದರೆ ನೇರವಾಗಿ ಅಲ್ಲದಿದ್ದರೂ ಪರೋಕ್ಷವಾಗಿ ಈ ಅಕ್ರಮಕ್ಕೆ ಅವರು ಸಾಥ್ ನೀಡುತ್ತಿದ್ದಾರೆ. ಆರು ಎಕ್ರೆ ಅಕ್ರಮ ಕಲ್ಲು ಗಣಿಗಾರಿಕೆ ನಿಲ್ಲುವುದು ಯಾವಾಗ ಮಾಜಿ ಸಚಿವರೇ ಇದರಲ್ಲಿ ಭಾಗಿಯಾದ ಬಾಗಿ ಆಗಿರುವ ಪ್ರತಿಯೊಬ್ಬರ ಮಾಹಿತಿಯನ್ನು ಮುಂದಿನ ಸುದ್ದಿಯಲ್ಲಿ ಬಿತ್ತರಿಸಲಾಗುವುದು….
ಪತ್ರಿಕೆ ಬಳಿ ದಾಸ್ತಾನಿನ ಮಾಹಿತಿ ಲಭ್ಯ..! 
ಪತ್ರಿಕೆಯ ಬಳಿ ಅಕ್ರಮವಾಗಿ ಮರಳು ಎಲ್ಲೆಲ್ಲಿ ದಾಸ್ತನಾಗಿದೆ ಎನ್ನುವ ಮಾಹಿತಿ ಲಭ್ಯವಿದ್ದು ಅಧಿಕಾರಿಗಳು ಅವಶ್ಯವಿದ್ದಲ್ಲಿ ಕೇಳಿ ಪಡೆದುಕೊಳ್ಳಬಹುದು ಇಲ್ಲವಾದಲ್ಲಿ ನೇರವಾಗಿ ಪತ್ರಿಕೆಯೇ ಅಧಿಕಾರಿಗಳ ಗಮನಕ್ಕೆ ತರುತ್ತದೆ .
ವಿಶೇಷ ಸೂಚನೆ : ಪತ್ರಿಕೆಯ ಹೆಸರು ಹೇಳಿಕೊಂಡು ಯಾರಾದರೂ ಮರಳು ಮಾಫಿಯಾ ಮಾಡುವವರ ಜೊತೆ ಹಣ ಕೇಳಿದರೆ ಅಂತವರ ವಿರುದ್ಧ    ಸಾಕ್ಷಿ ಸಮೇತ  ಸಂಬಂಧಪಟ್ಟ ಪೊಲೀಸ್ ಠಾಣೆಗೆ  ದೂರು  ನೀಡಿ ಇಲ್ಲವಾದಲ್ಲಿ ನೇರವಾಗಿ ನಮ್ಮ ಗಮನಕ್ಕೆ ತನ್ನಿ ತಮ್ಮ ‌ ಹೆಸರು ಹಾಗೂ ದೂರವಾಣಿ ಸಂಖ್ಯೆಯನ್ನು ಗೌಪ್ಯವಾಗಿ ಇಡಲಾಗುವುದು. 
ರಘುರಾಜ್ ಹೆಚ್‌ ಕೆ..9449553305…

Related Articles

Latest news
ಶಾಂತಿನಗರದಲ್ಲಿ ಸೌಹಾರ್ದತೆಗೆ ಸಾಕ್ಷಿಯಾದ ಸಂಭ್ರಮದ ಈದ್ ಮೀಲಾದ್...! ಶಿವಮೊಗ್ಗ ಉಪವಿಭಾಗಾಧಿಕಾರಿಯಾಗಿ ಡಾ. ಮೈತ್ರಿ ಹೆಚ್ ಪಿ, ಎಸ್ ಮುಂದುವರಿಕೆ..! ಶಿವಮೊಗ್ಗದಲ್ಲಿ ‘ಅವಿಸ್ಮರಣೀಯ ಪ್ರಕರಣಗಳು’ ಕೃತಿ ಬಿಡುಗಡೆ..! Shivamogga breaking: ಶಿವಮೊಗ್ಗ ಉಪವಿಭಾಗಾಧಿಕಾರಿಯಾಗಿ ಮತ್ತೆ ಜಿ ಹೆಚ್ ಸತ್ಯನಾರಾಯಣ ಮುಂದುವರಿಕೆ...?! ಡಾ. ಮೈತ್ರಿ... Big news : ಜಿಪಿಟಿ ನೇಮಕಾತಿಯಲ್ಲಿ ಇಂಗ್ಲಿಷ್ ಶಿಕ್ಷಕರ ಹುದ್ದೆ ಗಣನೀಯ ಕಡಿತ: ಸರ್ಕಾರದ ವಿರುದ್ಧ ಆಕಾಂಕ್ಷಿಗಳ ತೀವ್ರ ... ಸೇವೆಯೇ ಶಿಕ್ಷಣ ಇಲಾಖೆಯ ಮುಖ್ಯ ಧ್ಯೇಯ ಸಚಿವ ಎಸ್.ಮಧು ಬಂಗಾರಪ್ಪ..! ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR): 98.53% ಡಿಜಿಟಲೀಕರಣ ಪೂರ್ಣ..! Big news :  ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ನಲ್ಲಿ  ಮಹತ್ವದ ಬದಲಾವಣೆ..! ಯಾರಿಗೆ ಯಾವ ಸ್ಥಾನ..?! ಕೋಟೆ ಪೊಲೀಸರ ಖಡಕ್ ಕಾರ್ಯಾಚರಣೆ ವಿದ್ಯಾನಗರದ ಎವರ್ ಗ್ರೀನ್ ಬ್ಯೂಟಿ ಪಾರ್ಲರ್ ಮೇಲೆ ದಾಳಿ  ಒಬ್ಬನ ಬಂಧನ ಇನ್ನೊಬ್ಬಳು ಪ... Big news : ಗಣಿ ಮತ್ತು ಭೂವಿಜ್ಞಾನ ಇಲಾಖೆಯಲ್ಲಿ ಬೃಹತ್ ಶಸ್ತ್ರಚಿಕಿತ್ಸೆ: 22 ಹಿರಿಯ ಭೂವಿಜ್ಞಾನಿಗಳ ವರ್ಗಾವಣೆ..! ದ...