Home ಪೊಲೀಸ್ ಇಲಾಖೆShivamogga police: ಅಂದು ಮುಖ್ಯಮಂತ್ರಿ ಪದಕ ಇಂದು ರಾಷ್ಟ್ರಪತಿ ಪದಕಕ್ಕೆ ಪಿಎಸ್ಐ ಶಕುಂತಲಾ ಹೆಚ್‌ ಕೆ ಅವರು ಆಯ್ಕೆಯಾಗಿದ್ದು ಹೇಗೆ..?! ಏನಿದು ಟ್ರಯಲ್ ಮಾನಿಟರಿಂಗ್ ಸೆಲ್ ..?!

Shivamogga police: ಅಂದು ಮುಖ್ಯಮಂತ್ರಿ ಪದಕ ಇಂದು ರಾಷ್ಟ್ರಪತಿ ಪದಕಕ್ಕೆ ಪಿಎಸ್ಐ ಶಕುಂತಲಾ ಹೆಚ್‌ ಕೆ ಅವರು ಆಯ್ಕೆಯಾಗಿದ್ದು ಹೇಗೆ..?! ಏನಿದು ಟ್ರಯಲ್ ಮಾನಿಟರಿಂಗ್ ಸೆಲ್ ..?!

by EDITOR NEWS WARRIORS
ಶಿವಮೊಗ್ಗ: ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯಲ್ಲಿ ಡಿ ಎಸ್ ಪಿ ವಿಭಾಗದಲ್ಲಿ ಪಿಎಸ್ಐಯಾಗಿ ಕಾರ್ಯನಿರ್ವಹಿಸುತ್ತಿರುವ ಶಕುಂತಲಾ ಹೆಚ್‌ಕೆ ಅವರು ಇದೀಗ ರಾಷ್ಟ್ರಪತಿ ಪದಕಕ್ಕೆ ಭಾಜನರಾಗಿದ್ದಾರೆ.
ಯಾರು ಈ ಶಕುಂತಲಾ..?!

ಕಳೆದ 30 ವರ್ಷಗಳಿಂದ ಪೊಲೀಸ್ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಶಕುಂತಲಾ ಅವರು ಮೂಲತಃ ಶಿವಮೊಗ್ಗ ಜಿಲ್ಲೆಯವರಾಗಿದ್ದು ಡಿಪ್ಲೋಮೋ ಇಂಜಿನಿಯರಿಂಗ್ ಪದವೀಧರರಾಗಿದ್ದು ಪತಿ ಕೂಡ ‌ ಪೋಲಿಸ್ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ ಇಬ್ಬರು ಮಕ್ಕಳನ್ನು ಹೊಂದಿರುವ ತುಂಬು ಕುಟುಂಬ ಶಕುಂತಲಾ ಅವರದ್ದು ದೊಡ್ಡಪೇಟೆ, ತುಂಗಾನಗರ, ‌ ಜಯನಗರ, ಸೆನ್ ಪೊಲೀಸ್ ಠಾಣೆಯಲ್ಲಿ ಕಾರ್ಯನಿರ್ವಹಿಸಿರುವ ಶಕುಂತಲಾ ಅವರು 2019 ರಿಂದ ಸಬ್ ಇನ್ಸ್ಪೆಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದು 2022 ರಲ್ಲಿ ಲಕ್ಷ್ಮಿ ಪ್ರಸಾದ್ ಅವರು ಪೊಲೀಸ್ ವರಿಷ್ಠಾಧಿಕಾರಿಗಳಾಗಿದ್ದ ಸಂದರ್ಭದಲ್ಲಿ ಟ್ರಯಲ್ ಮಾನಿಟರಿಂಗ್ ಸೆಲ್ ಅನ್ನು ಶಿವಮೊಗ್ಗ ಜಿಲ್ಲೆಯಲ್ಲಿ ಪ್ರಾರಂಭ ಮಾಡಿ ಮಾಡಿದ್ದರು. ಇದರಲ್ಲಿ ಪಿಎಸ್ಐ ಯಾಗಿ 2022 ರಿಂದ ಶಕುಂತಲಾ ಅವರು ಕಾರ್ಯನಿರ್ವಹಿಸುತ್ತಿದ್ದಾರೆ.
ಏನಿದು ಟ್ರಯಲ್ ಮಾನಿಟರಿಂಗ್ ಸೆಲ್ ಏನಿದರ ಕೆಲಸ..?

ಪ್ರತಿ ಜಿಲ್ಲೆಯಲ್ಲೂ ಟ್ರಯಲ್ ಮಾನಿಟರಿಂಗ್ ಸೆಲ್ ಪ್ರಾರಂಭ ಮಾಡಬೇಕು ಎನ್ನುವ ಆದೇಶ ಇದ್ದರೂ ಕೂಡ ಎಲ್ಲಾ ಜಿಲ್ಲೆಯಲ್ಲೂ ಈ ಆದೇಶ ಪಾಲನೆ ಆಗಿಲ್ಲ ಆದರೆ ಶಿವಮೊಗ್ಗ ಜಿಲ್ಲೆಯಲ್ಲಿ 2022 ರಲ್ಲಿ ಲಕ್ಷ್ಮಿ ಪ್ರಸಾದ್ ಅವರು ಪೋಲಿಸ್ ವರಿಷ್ಠಾಧಿಕಾರಿಗಳಾಗಿದ್ದ ಸಂದರ್ಭದಲ್ಲಿ ‌ ಈ ಟ್ರಯಲ್ ಮಾನಿಟರಿಂಗ್ ಸೆಲ್ ಅನ್ನು ‌ ಪ್ರಾರಂಭ ಮಾಡಿದರು.ನಂತರ ಬಂದ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್ ಕುಮಾರ್ ಅವರು ಇದನ್ನು ಪರಿಣಾಮಕಾರಿಯಾಗಿ ಜಾರಿಗೆ ತರುವಲ್ಲಿ ಯಶಸ್ವಿಯಾದರು.
ಇದರ ಉದ್ದೇಶ ಬಹುತೇಕ ಪ್ರಕರಣಗಳಲ್ಲಿ ಆರೋಪಿತರು ಸಾಕ್ಷಿಗಳ ಕೊರತೆಯಿಂದ ನಿರಪರಾಧಿಗಳಾಗಿ ಹೊರ ಬರುತ್ತಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿ ಮರ್ಡರ್, ಹಲ್ಲೆ, ಪೋಕ್ಸೋ, ಡಕಾಯಿತಿ, ಅತ್ಯಾಚಾರ, ದಂತಹ ಗಂಭೀರ ಪ್ರಕರಣಗಳಲ್ಲಿ ಕೂಡ ಸಾಕ್ಷಿಗಳ ಕೊರತೆಯಿಂದ ಪ್ರಕರಣ ಖುಲಾಸೆಯಾಗಿ ಆರೋಪಿತರು ನಿರಪರಾಧಿಗಳಾಗಿ ಹೊರಬರುತ್ತಾರೆ ಇದು ಸಮಾಜಕ್ಕೆ ಕೆಟ್ಟ ಸಂದೇಶವನ್ನು ನೀಡುತ್ತದೆ ನಾವು ಏನು ಮಾಡಿದರು ನ್ಯಾಯಾಲಯದಲ್ಲಿ ಪ್ರಕರಣ ನಿಲ್ಲುವುದಿಲ್ಲ ಖುಲಾಸೆ ಆಗುತ್ತದೆ ಎನ್ನುವ ಧೈರ್ಯ ಆರೋಪಿಗಳಿಗೆ ಬಂದುಬಿಡುತ್ತದೆ ಇದು ಮುಂದೆ ಸಣ್ಣಪುಟ್ಟ ಅಪರಾಧಗಳನ್ನು ಮಾಡಿ ಜೈಲಿಗೆ ಹೋಗುವ ಆರೋಪಿಗಳು ಕೂಡ ಮುಂದೆ ದೊಡ್ಡ ಮಟ್ಟದ ಗಂಭೀರ ಪ್ರಕರಣಗಳಲ್ಲಿ ಭಾಗಿಯಾಗಲು ಪ್ರೇರಣೆಯಾಗುತ್ತದೆ ಇದನ್ನು ತಪ್ಪಿಸುವ ಸಲುವಾಗಿ “ಟ್ರಯಲ್ ಮಾನಿಟರಿಂಗ್ ಸೆಲ್ ” ಅನ್ನು ಶಿವಮೊಗ್ಗದಲ್ಲಿ ‌ ಪ್ರಾರಂಭ ಮಾಡಿದ್ದು ಈ‌ ಸೆಲ್ ಪ್ರಾರಂಭವಾದ ನಂತರ ಹಲವು ಗಂಭೀರ ಪ್ರಕರಣಗಳಲ್ಲಿ ಆರೋಪಿತರಿಗೆ ಶಿಕ್ಷೆಯಾಗಿದೆ ಹಾಗೆ ಶಿಕ್ಷೆಯ ಪ್ರಮಾಣ 2017 ರಿಂದ 2022 ಕ್ಕೆ ಹೋಲಿಸಿದಾಗ ವರ್ಷಕ್ಕೆ 20 ರಿಂದ 21 ಪ್ರಕರಣಗಳಲ್ಲಿ ಅಷ್ಟೇ ಶಿಕ್ಷೆ ಆಗುತ್ತಿತ್ತು. ಆದರೆ ಈ ಸೆಲ್ ಪ್ರಾರಂಭವಾದ ನಂತರ ಶಿಕ್ಷೆಯ ಪ್ರಮಾಣ ಹೆಚ್ಚಾಯಿತು 2022 ರಲ್ಲಿ 36 ಪ್ರಕರಣಗಳಲ್ಲಿ, 2023ರಲ್ಲಿ 51 ಪ್ರಕರಣಗಳಲ್ಲಿ, 2024 ರಲ್ಲಿ 35 ಪ್ರಕರಣಗಳಲ್ಲಿ 2025 ರಲ್ಲಿ 52 ಪ್ರಕರಣಗಳಲ್ಲಿ ಆರೋಪಿತರಿಗೆ ಶಿಕ್ಷೆಯಾಗಿದ್ದು ವರ್ಷಯಿಂದ ವರ್ಷಕ್ಕೆ ಶಿಕ್ಷೆಯ ಪ್ರಮಾಣ ಹೆಚ್ಚಾಗುತ್ತಿದೆ
ಶಿವಮೊಗ್ಗದಲ್ಲಿ ಏಳು ಸೆಷನ್ ನ್ಯಾಯಾಲಯಗಳಿದ್ದು ಪ್ರತಿ ನ್ಯಾಯಾಲಯಕ್ಕೂ ಒಬ್ಬೊಬ್ಬರು ಈ ಸೆಲ್ ನಿಂದ ನೇಮಕವಾಗಿರುತ್ತಾರೆ ಇವರ ಕೆಲಸ ಪ್ರಕರಣಗಳಲ್ಲಿ ಸಾಕ್ಷಿದಾರರಿಗೆ ಧೈರ್ಯ ತುಂಬುವುದು ಸಾಕ್ಷಿ ಗಟ್ಟಿಯಾಗಿ ನಿಲ್ಲುವಂತೆ ನೋಡಿಕೊಳ್ಳುವುದು ಹಾಗೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಪ್ರಕ್ರಿಯೆಗಳನ್ನು ಹಿಂಬಾಲಿಸುವುದು ಪ್ರಕರಣಗಳಲ್ಲಿ ಭಾಗಿಯಾದ ಆರೋಪಿತರಿಗೆ ಶಿಕ್ಷೆ ಆಗುವಂತೆ ನೋಡಿಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸುವುದು ಹಾಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇರುವ ಪೊಲೀಸ್ ಅಧಿಕಾರಿಗಳ ಗಮನಕ್ಕೆ ನ್ಯಾಯಾಲಯದ ದಿನಾಂಕಗಳನ್ನು ತಿಳಿಸುವುದು ಇವರ ಬಹುಮುಖ್ಯ ಕಾರ್ಯವಾಗಿರುತ್ತದೆ. ಇದರ ಪರಿಣಾಮವಾಗಿ ಇತ್ತೀಚಿನ ವರ್ಷಗಳಲ್ಲಿ ಬಹುತೇಕ ಪ್ರಕರಣಗಳಲ್ಲಿ ಶಿಕ್ಷೆಯ ಪ್ರಮಾಣ ಹೆಚ್ಚಾಗುತ್ತಿದೆ ಇದು ಇನ್ನಷ್ಟು ಹೆಚ್ಚಾಗಬೇಕು ಆರೋಪಿತರಿಗೆ ಭಯ ಹುಟ್ಟಬೇಕು ಆ ದಿಕ್ಕಿನಲ್ಲಿ ಟ್ರಯಲ್ ಮಾನಿಟರಿಂಗ್ ಸೆಲ್ ನ ಕೆಲಸ ಇನ್ನಷ್ಟು ಹೆಚ್ಚಾಗಲಿ ಹಾಗೆ ಹಲವು ಪ್ರಕರಣಗಳಲ್ಲಿ ಪೊಲೀಸ್ ಠಾಣೆಗಳಲ್ಲಿ ಸಾಕ್ಷಿಯಾಗುವ ವ್ಯಕ್ತಿಗಳು ನಂತರ ಪ್ರಕರಣ ನ್ಯಾಯಾಲಯಕ್ಕೆ ಹೋದಾಗ ಅಲ್ಲೂ ಕೂಡ ಧೈರ್ಯವಾಗಿ ಸಾಕ್ಷಿ ಹೇಳಬೇಕು ಆಗ ಶಿಕ್ಷೆಯ ಪ್ರಮಾಣ ಹೆಚ್ಚಾಗುತ್ತದೆ.
ಒಟ್ಟಿನಲ್ಲಿ ಹಲವು ಪ್ರಕರಣಗಳಲ್ಲಿ ಆರೋಪಿತರಿಗೆ ಶಿಕ್ಷೆಯಾಗಲು ‌ ಕಾರಣರಾದ ಪಿಎಸ್ಐ ಶಕುಂತಲಾ ಹೆಜ್ ಕೆ ಅವರು ಈ ಹಿಂದೆ ಅಂದರೆ 2022 ರಲ್ಲಿ ಮುಖ್ಯಮಂತ್ರಿಗಳ ಚಿನ್ನದ ಪದಕಕ್ಕೆ ಭಾಜನರಾಗಿದ್ದರು ಇದೀಗ ರಾಷ್ಟ್ರಪತಿ ಪದಕಕ್ಕೆ ಬಾಜನರಾಗಿರುವುದು ಶಿವಮೊಗ್ಗ ಜಿಲ್ಲೆಗೆ ಹಾಗೂ ಶಿವಮೊಗ್ಗ ಪೊಲೀಸ್ ಇಲಾಖೆಗೆ ‌ ಹೆಮ್ಮೆಯ ವಿಷಯವಾಗಿದೆ. ಇವರ ಕಾರ್ಯ ಹೀಗೆ ಮುಂದುವರಿಯಲಿ ಪತ್ರಿಕೆಯಿಂದ ಕೂಡ ಇವರಿಗೆ ಅಭಿನಂದನೆಗಳು.
ರಘುರಾಜ್ ಹೆಚ್‌ ಕೆ.. 9449553305..

Related Posts

Latest news
Shivamogga breaking : ಅಕ್ರಮ ಮರಳುಗಾರಿಕೆಯ ಮೇಲೆ ಮುಗಿಬಿದ್ದ ಲೋಕಾಯುಕ್ತ ಅಧಿಕಾರಿಗಳು...! ಎಲ್ಲೆಲ್ಲಿ ನಡೆಯುತ್ತಿದ... Shivamogga breaking : ಅಕ್ರಮ ಮರಳುಗಾರಿಕೆಯ ಮೇಲೆ ಮುಗಿಬಿದ್ದ ಲೋಕಾಯುಕ್ತ ಅಧಿಕಾರಿಗಳು...! ಎಲ್ಲೆಲ್ಲಿ ನಡೆಯುತ್ತಿದ... Shivamogga : ದೊಡ್ಡಪೇಟೆ ಪೊಲೀಸರ ಮಹತ್ವದ ಕಾರ್ಯಾಚರಣೆ ನೇಪಾಳಿ ಮಂಜ ಅಂದರ್..! Railway shivamogga: ರೈಲ್ವೆ ಹಳಿಗೆ ಬಿದ್ದ ಮಹಿಳೆ ಯಾರು..?! Health department: ಆರೋಗ್ಯ ಇಲಾಖೆಗೆ ಮೇಜರ್ ಸರ್ಜರಿ ಮಾಡಿದ್ದ ಹರ್ಷ ಗುಪ್ತಾ ವರ್ಗಾವಣೆ..! 26 ವರ್ಷ ಸೇವೆ 30 ಸಲ ಎತ... North East police:ಯಲಹಂಕ ನ್ಯೂಟೌನ್ ಪೊಲೀಸರ ಮಹತ್ವದ ಕಾರ್ಯಾಚರಣೆ..! ವಿದೇಶಿ ಪ್ರಜೆಯಿಂದ ₹2 ಕೋಟಿ ಮೌಲ್ಯದ 2 ಕೆ.ಜ... ತೀರ್ಥಹಳ್ಳಿ : ನಾಬಳ ಶಚಿಂದ್ರ ಹೆಗ್ಡೆ ಪತ್ನಿ ಶ್ರೀಮತಿ ಅಚಲಾ ಶಚಿಂದ್ರ ಹೆಗ್ಡೆ ಇನ್ನಿಲ್ಲ...! ಏನಾಗಿತ್ತು ಇವರಿಗೆ..?!... ವೈದ್ಯಾಧಿಕಾರಿಗಳ ಹುದ್ದೆಗೆ ನೇರ ಸಂದರ್ಶನ..! Shivamogga police : ಅಡಿಶನಲ್ ಎಸ್ ಪಿ ರಮೇಶ್ ಕುಮಾರ್ ಜೊತೆ ಕ್ರೈಂ ವಿಭಾಗದ ಇಬ್ಬರಿಗೆ ಮುಖ್ಯಮಂತ್ರಿ ಪದಕ..! ಸರ್ಕಾರಿ ಶಾಲಾ-ಪಿಯುಸಿ ಕಾಲೇಜುಗಳ ಭೂಮಿ ರಕ್ಷಣೆಯ ಐತಿಹಾಸಿಕ ಮಸೂದೆಗೆ ವಿಧಾನ ಪರಿಷತ್ತಿನಲ್ಲೂ ಒಮ್ಮತದ ಅಂಗೀಕಾರ..!