Home ಭದ್ರಾವತಿBig news : ಭದ್ರಾವತಿ ಶಾಸಕ ಸಂಗಮೇಶ್ ಮಗನಿಗೆ ಸ್ಕೆಚ್..?! ಡಕಾಯಿತಿಗೂ ಹೊಂಚು..! ಮೋಸ್ಟ್ ವಾಂಟೆಡ್ ಡಿಚ್ಚಿ ಮುಬಾರಕ್ ಗ್ಯಾಂಗ್ ಮತ್ತು ಭದ್ರಾವತಿ ಪೊಲೀಸರ ನಡುವೆ ನಡೆದಿದ್ದೇನು…?! ವೆರಿ ಇಂಟೆರೆಸ್ಟಿಂಗ್ ಫುಲ್ ಡೀಟೇಲ್ಸ್..!

Big news : ಭದ್ರಾವತಿ ಶಾಸಕ ಸಂಗಮೇಶ್ ಮಗನಿಗೆ ಸ್ಕೆಚ್..?! ಡಕಾಯಿತಿಗೂ ಹೊಂಚು..! ಮೋಸ್ಟ್ ವಾಂಟೆಡ್ ಡಿಚ್ಚಿ ಮುಬಾರಕ್ ಗ್ಯಾಂಗ್ ಮತ್ತು ಭದ್ರಾವತಿ ಪೊಲೀಸರ ನಡುವೆ ನಡೆದಿದ್ದೇನು…?! ವೆರಿ ಇಂಟೆರೆಸ್ಟಿಂಗ್ ಫುಲ್ ಡೀಟೇಲ್ಸ್..!

by EDITOR NEWS WARRIORS
0 comments
ಶಿವಮೊಗ್ಗ: ಜಿಲ್ಲೆಯ ಭದ್ರಾವತಿ ತಾಲೂಕು ಯಾವಾಗಲೂ ಸುದ್ದಿಯಲ್ಲಿರುತ್ತದೆ ಇದಕ್ಕೆ ಕಾರಣ ಇಲ್ಲಿ ನಡೆಯುವ ಕ್ರಿಮಿನಲ್ ಆಕ್ಟಿವಿಟೀಸ್ ಅಕ್ರಮ ಚಟುವಟಿಗಳ ತಾಣವಾಗಿ ಪರಿವರ್ತನೆ ಆಗಿರುವ ಭದ್ರಾವತಿ ಪೊಲೀಸರ ಇತಿಮಿತಿಗೆ ಸಿಗುತ್ತಿಲ್ಲ ಓಸಿ, ಇಸ್ಪೀಟ್, ಮರಳು, ತೂರೆಬಿಲ್ಲೆ, ಅಂತಹ ಅಕ್ರಮ ಚಟುವಟಿಕೆಗಳು ಇಲ್ಲಿ ಗರಿಗೆದರಿ ನಿಂತಿವೆ ಇದು ಸಾಲದೆಂಬಂತೆ ರೌಡಿಸಂ, ಗ್ಯಾಂಗ್ ವಾರ್, ಕೂಡ ಮಿತಿಮೀರಿದೆ ಡಕಾಯಿತಿ ಕಳ್ಳತನ ಮಾಮೂಲಾಗಿ ಹೋಗಿದೆ ಇದು ಯಾವ ಮಟ್ಟಿಗೆ ಹೋಗಿದೆ ಎಂದರೆ ಗಾಂಜಾ ಮತ್ತಿನಲ್ಲಿ ಪೊಲೀಸರ ಮೇಲೆ ಲಾಂಗು ಮಚ್ಚುಗಳನ್ನು ಬೀಸುವುದು ವೆಪನ್ ತೋರಿಸಿ ಹೆದರಿಸುವುದು ಮಾಮೂಲಾಗಿದೆ.
ಮಿಥುನ್ ಕುಮಾರ್ ಕಾಲದಲ್ಲಿ ನಿರಂತರ ಫೈರಿಂಗ್..!
ಹಿಂದಿನ ಎಸ್ ಪಿ ಮಿಥುನ್ ಕುಮಾರ್ ಕಾಲದಲ್ಲಿ ನಡೆದ ಫೈರಿಂಗ್ ನಲ್ಲಿ ಬಹುತೇಕ ಸುಮಾರು 20ಕ್ಕೂ ಅಧಿಕ ಫೈರಿಂಗ್ ಗಳು ಭದ್ರಾವತಿ ಪ್ರಕರಣಗಳಲ್ಲಿ ನಡೆದಿರೋದು ವಿಶೇಷ ಈಗ ಹೊಸದಾಗಿ ಬಂದಿರುವ ಎಸ್ ಪಿ ನಿಖಿಲ್ ಅವರ ಡೈರೆಕ್ಷನ್ನಲ್ಲಿ ನಡೆದ ಮೊದಲ ಫೈರಿಂಗ್ ಡಿಚ್ಚಿ ಮುಬಾರಕ್ ನದ್ದು.
ಯಾರು ಈ ಡಿಚ್ಚಿ ಮುಬಾರಕ್..!

 

 

ಭದ್ರಾವತಿ ಪಾತಕ ಲೋಕದಲ್ಲಿ ತನ್ನದೇ ಆದ ಚಾಪು ಮೂಡಿಸಿರುವ ಡಿಚ್ಚಿ ಮುಬಾರಕ್ ಹಲವಾರು ಪ್ರಕರಣಗಳಲ್ಲಿ ಆರೋಪಿತನಾಗಿದ್ದು ಸುಮಾರು 15ಕ್ಕೂ ಅಧಿಕ ಪ್ರಕರಣಗಳು ಈತನ ಮೇಲೆ ಇದೆ ಅದರಲ್ಲಿ ಬಹುತೇಕ ಟಾಕಾಯಿತಿ ಕಳ್ಳತನ, ಕೊಲೆ ಯತ್ನ, ಗಾಂಜಾ ಮಾರಾಟ ಪ್ರಕರಣಗಳೇ ಅಧಿಕವಾಗಿವೆ ಈ ಹಿಂದೆ ಸುಮಾರು ಒಂದುವರೆ ವರ್ಷಗಳ ಹಿಂದೆ ಭದ್ರಾವತಿ ಶಾಸಕ ಸಂಗಮೇಶ್ ಮಗನಿಗೆ ಸ್ಕೆಚ್ ಹಾಕಿದ್ದ ಆರೋಪ ದೂರು ನೀಡಿಲ್ಲ ಗಮನವಿರಲಿ  ಹಾಗೂ ಕೆಲವೊಂದು ಪ್ರಕರಣಗಳಲ್ಲಿ ವಾರೆಂಟ್ ಇದ್ದರಿಂದ ಈತನನ್ನು ಪೊಲೀಸರು ಬಂಧಿಸಿ ಜೈಲಿಗೆ ಕಳಿಸಿದ್ದರು ಇದೀಗ ಒಂದುವರೆ ವರ್ಷಗಳ ನಂತರ ಮೊನ್ನೆ  ಶುಕ್ರವಾರ ಮುಬಾರಕ್ ಆಲಿಯಾಸ್ ಡಿಚ್ಚಿ ಮುಬಾರಕ್ ಜೈಲಿನಿಂದ ಬಿಡುಗಡೆಯಾಗಿದ್ದ.
ಜೈಲಿನಿಂದ ಬಂದು ದರ್ಗಾಕ್ಕೆ ಭೇಟಿ ನೀಡಿದ ಮುಬಾರಕ್..!
ಜೈಲಿನಿಂದ ಬಿಡುಗಡೆಯಾಗಿ ಬಂದ ಮುಬಾರಕ್ ನೇರವಾಗಿ ತರಿಕೆರೆ ಬಳಿಯಲ್ಲಿರುವ ಜಾವಗಲ್ ದರ್ಗಾಕ್ಕೆ ಭೇಟಿ ನೀಡಿ ಅಲ್ಲಿಂದ ಅಲ್ಲಿಂದ ಹೊರ ಬಂದು ಎರಡು ಸ್ಕೆಚ್ ರೆಡಿ ಮಾಡಿಕೊಳ್ಳುತ್ತಾನೆ ಒಂದು ಹಿಂದೆ ತಪ್ಪಿ ಹೋಗಿದ್ದ ಭದ್ರಾವತಿ ಶಾಸಕ ಸಂಗಮೇಶ್ ಮಗನ ಮೇಲೆ ದಾಳಿ ಇನ್ನೊಂದು ಡಕಾಯಿತಿ ಎರಡಕ್ಕೂ ಹುಡುಗರನ್ನು ರೆಡಿ ಮಾಡಿಕೊಂಡು ಭದ್ರಾವತಿಗೆ ಬರುತ್ತಾನೆ.
ಭದ್ರಾವತಿಯಲ್ಲಿರುವ ಫಾರ್ಮ್ ಹೌಸ್ ಬಳಿ ರೌಂಡ್ಸ್ ಶುರು ಮಾಡುತ್ತಾನೆ..!
ಭದ್ರಾವತಿ ಬಳಿ ಇರುವ ಸಂಗಮೇಶ್ ಮಗ ಬಸವೇಶ್ ಕಾಲ ಕಳೆಯುವ ಫಾರ್ಮ್ ಹೌಸ್ ಬಳಿ ರೌಂಡ್ಸ್ ಶುರು ಮಾಡುತ್ತಾನೆ ಇಲ್ಲಿ ಗಮನಿಸಬೇಕಾದ ಸಂಗತಿ ಎಂದರೆ ಈತನ ಜೊತೆಗೆ ಶಿವಮೊಗ್ಗ ಹಾಗೂ ತರೀಕೆರೆ ಮೂಲದ ಹುಡುಗರು ಸಾಥ್ ನೀಡಿರುತ್ತಾರೆ ಆದರೆ ಇದ್ಯಾವುದೂ ಶಾಸಕರ ಮಗ ಬಸವೇಶ್ ಗಮನಕ್ಕೆ ಇರುವುದಿಲ್ಲ ಮೋಸ್ಟ್ ಡೇಂಜರಸ್ ಕ್ರಿಮಿನಲ್ ಆದ ಡಿಚ್ಚಿ ಮುಬಾರಕ್ ಜೈಲಿನಿಂದ ಬಿಡುಗಡೆಯಾಗಿದ್ದಾಗ ಭದ್ರಾವತಿ ಪೊಲೀಸರು ಕೂಡ ಅಲರ್ಟ್ ಆಗಿದ್ದರು ಯಾವಾಗ ಇವನ ಚಟುವಟಿಕೆಗಳು ಫಾರ್ಮ್ ಹೌಸ್ ಹತ್ತಿರ ಶುರುವಾಗಿದ್ದಾವೆ ಎನ್ನುವ ಮಾಹಿತಿ ಗೊತ್ತಾಯಿತೋ ಅಲರ್ಟ್ ಆದ ಭದ್ರಾವತಿ ಪೊಲೀಸರು ತಮ್ಮ ಟೀಮ್ ರೆಡಿ ಮಾಡಿಕೊಂಡು ಮುಬಾರಕ್ ಗ್ಯಾಂಗ್ ಅನ್ನು ಹಿಡಿಯಲು ಹೊರಟುಬಿಟ್ಟರು.
ಸಿನಿಮಿಯ ರೀತಿಯಲ್ಲಿ ಚೇಸಿಂಗ್ ಮಾಡಿದ ಭದ್ರಾವತಿ ಪೊಲೀಸ್..!

ಭದ್ರಾವತಿ ತಾಲೂಕು ಶಿವನಿ ಕ್ರಾಸ್ ಗೌರಪುರದ ಬಳಿ ಇರುವ ಬಗ್ಗೆ ಪೊಲೀಸರಿಗೆ ಖಚಿತ ಮಾಹಿತಿ ಲಭಿಸಿತ್ತು. ಬಳಿಕ ಭದ್ರಾವತಿ ಡಿವೈಎಸ್ಪಿ ಅವರು ಸ್ಥಳಕ್ಕೆ ಒಂದು ತಂಡ ರಚನೆ ಮಾಡಿ ಕಳುಹಿಸಿದ್ದರು.ಒಂದು ಕಾರ್ ಒಂದು  ಪೊಲೀಸ್ ಜೀಪಿನಲ್ಲಿ  ಹೊರಟ ಭದ್ರಾವತಿ ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸಲು ಶುರು ಮಾಡಿದ್ರು ಡಿಚ್ಚಿ ಮುಬಾರಕ್ ತಂಡ ಆದರೆ  ಇವರ ತಂಡವನ್ನು ಭದ್ರಾವತಿ ಪೊಲೀಸರು ಹಿಂಬಾಲಿಸಿದರು ಆದರೆ ಎಕ್ಸ್ ವಿ ಸೆವೆನ್ ಹಂಡ್ರೆಡ್ ಕಾರನಲ್ಲಿ ಇದ್ದ ಮುಬಾರಕ್ ಹುಡುಗರು ಮತ್ತು ಇನ್ನೊಂದು ಸ್ಕೂಟಿಯಲ್ಲಿ ಮತ್ತೊಂದು ಗ್ಯಾಂಗ್ ಭದ್ರಾವತಿ ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸಲು ಶುರು ಮಾಡಿದರು ಪೊಲೀಸರು ಶಿವಣಿ ಬಳಿಯಿದ್ದ ರೈಲ್ವೆ ಕ್ರಾಸ್ ಬಂದ್ ಮಾಡಿಸುತ್ತಾರೆ ನಂತರ ಹಿಂಬಾಲಿಸಿಕೊಂಡು ಹೊರಟಾಗ ಪೊಲೀಸರ ಕಾರಿಗೆ ಡಿಕ್ಕಿ ಹೊಡೆದ ಮುಬಾರಕ್ ತಂಡ ತಪ್ಪಿಸಿಕೊಂಡು ಹೋಗಲು ಯತ್ನಿಸಿತ್ತು ಆಗ ಭದ್ರಾವತಿ ಪೊಲೀಸರು ಮತ್ತೆ ಹಿಂಬಾಲಿಸಿದರು ಮುಬಾರಕ್ ಇದ್ದ ಎಕ್ಸಿ ವಿ ಸೆವೆನ್ ಹಂಡ್ರೆಡ್ ಕಾರು ಈ ಚೇಸಿಂಗ್ ನಲ್ಲಿ ಒಂದು ಕರೆಂಟ್ ಕಂಬಕ್ಕೆ ಡಿಕ್ಕಿ ಹೊಡೆಯಿತು ಅಲ್ಲಿಂದ ಹೊರ ಬಂದ ಮುಬಾರಕ್ ಬ್ಯಾಟ್ ಕೊಡ್ರೋ ಹೋಡೆಯೋಣ ಪೊಲೀಸರಿಗೆ ಎಂದು ಕೂಗಲು ಪ್ರಾರಂಭಿಸುತ್ತಾನೆ ಅವನ ಕೈಗೆ ಏನಾದರೂ ವೆಪನ್ ಸಿಕ್ಕಿದ್ದರೆ ಪೊಲೀಸರ ಕಥೆ ಏನಾಗುತ್ತಿತ್ತು ಆ ಸಮಯದಲ್ಲಿ ಸಂಯಮ ಕಾಯ್ದುಕೊಂಡ ಪೊಲೀಸರು ಎಲ್ಲರನ್ನು ಹಿಡಿದು ಕರೆದುಕೊಂಡು ಹೋಗುತ್ತಿರುವಾಗ ಮುಬಾರಕ್ 150 ಮೀಟರ್ ಅಂತರದಲ್ಲಿ ಮತ್ತೆ ತಪ್ಪಿಸಿಕೊಳ್ಳುತ್ತಾನೆ .
ಪೊಲೀಸರ ಮೇಲೆ ಹಲ್ಲೆ ಮಾಡಿದ ಆರೋಪಿಗಳು..!

ಮುಬಾರಕ್ ಮತ್ತು ತಂಡ ಕಲ್ಲು ಮತ್ತು ಚಾಕುಗಳಿಂದ ಪೊಲೀಸರ ಮೇಲೆ ಮಾರಾಣಾಂತಿಕ ಹಲ್ಲೆ ಮಾಡಿದ್ದಾರೆ. ಇದರಿಂದ ಹೊಸಮನೆ ಠಾಣೆ ಪಿಎಸ್ಐ ಸಿದ್ದಪ್ಪನವರ ಕಾಲಿನ ಮೂಳೆ ಮುರಿತವಾಗಿದೆ. ಇವರ ಮೇಲೆ ಚಾಕುವಿನಿಂದ ಚುಚ್ಚಿ ಗಾಯಗೊಳಿಸಲಾಗಿದೆೆ. ಅಲ್ಲದೆ, ಕೃಷ್ಣಕುಮಾರ್ ಅವರ ಕೈ ಬೆರಳು ಮುರಿತವಾಗಿದೆ. ಜೊತೆಗೆ, ಆದರ್ಶ್ ಅವರ ಕಾಲಿಗೂ ಗಾಯವಾಗಿದೆ.ಈ ವೇಳೆ‌, ಪಿಎಸ್ಐ ಕೃಷ್ಣಕುಮಾರ್ ಅವರು ಡಿಚ್ಚಿ ಮುಬಾರಕ್ಗೆ ಶರಣಾಗುವಂತೆ ಸೂಚಿಸಿದರೂ ಪೊಲೀಸರ ಮೇಲೆ ಹಲ್ಲೆಗೆ ಮುಂದಾದಾಗ ಗಾಳಿಯಲ್ಲಿ ಗುಂಡು ಹಾರಿಸುತ್ತಾರೆ. ಆದರೂ ಮುಬಾರಕ್ ಪೊಲೀಸರಿಗೆ ಆವಾಜ್ ಹಾಕಿ ತನ್ನ ಬಳಿ ಇದ್ದ ಚಾಕುವಿನಿಂದ ಚುಚ್ಚಲು ಹೋಗಿದ್ದ. ಈ ವೇಳೆ ಕೃಷ್ಣಕುಮಾರ್ ತಮ್ಮ‌ ಆತ್ಮರಕ್ಷಣೆಗೆ ಡಿಚ್ಚಿಯ ಬಲಗಾಲಿಗೆ ಗುಂಡೇಟು ಹೊಡೆದಿದ್ದಾರೆ. ಆತನ ಜೊತೆ ಸಹಚರಾದ ಜಹೀರ್, ರೆಹಮತ್, ಪಾಷಾ, ಜುನೈದ್ ಮತ್ತು ಮನುಸಿಂಗ್ ರನ್ನು ವಶಕ್ಕೆ ಪಡೆಯಲಾಗಿದ್ದು ಉಳಿದವರ ಹುಡುಕಾಟದಲ್ಲಿ ಪೊಲೀಸರಿದ್ದಾರೆ.

ಈ ಕಾರ್ಯಚರಣೆಯಲ್ಲಿ  ಹೊಸಮನೆ ಪಿಎಸ್ಐ ಸಿದ್ದಪ್ಪ ಎಂ.ಪಿ., ಪೇಪರ್ ಟೌನ್ ಠಾಣೆ ಪಿಎಸ್ಐ ಕೃಷ್ಣಕುಮಾರ್, ನ್ಯೂ ಟೌನ್ ಠಾಣೆ ಪಿಎಸ್ಐ ರಮೇಶ್ ಹಾಗೂ ಸಿಬ್ಬಂದಿಯಾದ ವೆಂಕಟೇಶ್, ಆದರ್ಶ್, ಮಂಜುನಾಥ್, ಚಿನ್ನನಾಯ್ಕ್, ಸುನೀಲ್, ಕಾಂತರಾಜ್, ನಾಗರಾಜ್ ಹಾಗೂ ತೇಜಕುಮಾರ್ ಇದ್ದರು.
ಮಾಹಿತಿಯ ಪ್ರಕಾರ 2 ಕೆಜಿಗೆ ಅಧಿಕ ಗಾಂಜಾ ಡಿಚ್ಚಿ ಮುಬಾರಕ್ ತಂಡದಲ್ಲಿತ್ತು ಹಾಗೂ ಎಲ್ಲರೂ ಗಾಂಜಾ ಸೇವಿಸಿದ್ದರು ಎನ್ನುತ್ತವೆ ಮೂಲಗಳು ಇವರ ಟಾರ್ಗೆಟ್ ಭದ್ರಾವತಿ ಶಾಸಕರ ಮಗ ಬಸವೇಶ್ ಆಗಿತ್ತಾ..?! ಅದಕ್ಕೋಸ್ಕರ ಸ್ಕೆಚ್ ಹಾಕಿದ್ರಾ ಅಥವಾ ದರೋಡೆ ಅಷ್ಟೇ ಉದ್ದೇಶವಾಗಿತ್ತಾ ಇವರಿಗೆ ಗಾಂಜಾ ಸಪ್ಲೈ ಎಲ್ಲಿಂದ ಆಗುತ್ತಿದೆ..? ಬಹುತೇಕ ಚಿಕ್ಕಮಂಗಳೂರು ತರೀಕೆರೆ ಶಿವಮೊಗ್ಗದ ಮೂಲಗಳ ಮೂಲದ ಹುಡುಗರು  ಮುಬಾರಕ್ ಗ್ಯಾಂಗ್ ನಲ್ಲಿ ಇರುವುದು ಹೇಗೆ..?! ಎಲ್ಲವೂ ಬಯಲಾಗಬೇಕಾಗಿದೆ ಅಷ್ಟಕ್ಕೂ ಶಾಸಕರ ಮಗನೇ ಮುಬಾರಕ್ ಗೆ ಟಾರ್ಗೆಟ್ ಏಕೆ..? ಪೊಲೀಸರ ತನಿಖೆಯಿಂದ ಹೊರಬರಬೇಕಾಗಿದೆ…
ರಘುರಾಜ್ ಹೆಚ್‌ ಕೆ..9449553305…

Related Articles

Latest news
ಶಾಂತಿನಗರದಲ್ಲಿ ಸೌಹಾರ್ದತೆಗೆ ಸಾಕ್ಷಿಯಾದ ಸಂಭ್ರಮದ ಈದ್ ಮೀಲಾದ್...! ಶಿವಮೊಗ್ಗ ಉಪವಿಭಾಗಾಧಿಕಾರಿಯಾಗಿ ಡಾ. ಮೈತ್ರಿ ಹೆಚ್ ಪಿ, ಎಸ್ ಮುಂದುವರಿಕೆ..! ಶಿವಮೊಗ್ಗದಲ್ಲಿ ‘ಅವಿಸ್ಮರಣೀಯ ಪ್ರಕರಣಗಳು’ ಕೃತಿ ಬಿಡುಗಡೆ..! Shivamogga breaking: ಶಿವಮೊಗ್ಗ ಉಪವಿಭಾಗಾಧಿಕಾರಿಯಾಗಿ ಮತ್ತೆ ಜಿ ಹೆಚ್ ಸತ್ಯನಾರಾಯಣ ಮುಂದುವರಿಕೆ...?! ಡಾ. ಮೈತ್ರಿ... Big news : ಜಿಪಿಟಿ ನೇಮಕಾತಿಯಲ್ಲಿ ಇಂಗ್ಲಿಷ್ ಶಿಕ್ಷಕರ ಹುದ್ದೆ ಗಣನೀಯ ಕಡಿತ: ಸರ್ಕಾರದ ವಿರುದ್ಧ ಆಕಾಂಕ್ಷಿಗಳ ತೀವ್ರ ... ಸೇವೆಯೇ ಶಿಕ್ಷಣ ಇಲಾಖೆಯ ಮುಖ್ಯ ಧ್ಯೇಯ ಸಚಿವ ಎಸ್.ಮಧು ಬಂಗಾರಪ್ಪ..! ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR): 98.53% ಡಿಜಿಟಲೀಕರಣ ಪೂರ್ಣ..! Big news :  ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ನಲ್ಲಿ  ಮಹತ್ವದ ಬದಲಾವಣೆ..! ಯಾರಿಗೆ ಯಾವ ಸ್ಥಾನ..?! ಕೋಟೆ ಪೊಲೀಸರ ಖಡಕ್ ಕಾರ್ಯಾಚರಣೆ ವಿದ್ಯಾನಗರದ ಎವರ್ ಗ್ರೀನ್ ಬ್ಯೂಟಿ ಪಾರ್ಲರ್ ಮೇಲೆ ದಾಳಿ  ಒಬ್ಬನ ಬಂಧನ ಇನ್ನೊಬ್ಬಳು ಪ... Big news : ಗಣಿ ಮತ್ತು ಭೂವಿಜ್ಞಾನ ಇಲಾಖೆಯಲ್ಲಿ ಬೃಹತ್ ಶಸ್ತ್ರಚಿಕಿತ್ಸೆ: 22 ಹಿರಿಯ ಭೂವಿಜ್ಞಾನಿಗಳ ವರ್ಗಾವಣೆ..! ದ...