Home ತೀರ್ಥಹಳ್ಳಿBig breaking news : ತೀರ್ಥಹಳ್ಳಿ ಮಾಜಿ ಸಚಿವರ ಪರಮಾಪ್ತನಿಂದ ನೂರು ಕೋಟಿ ವಂಚನೆ..?! ತಲೆಮರಿಸಿಕೊಂಡಿರುವ ಸಚಿವರ ಆಪ್ತ..! ಯಾರಿದು..?!

Big breaking news : ತೀರ್ಥಹಳ್ಳಿ ಮಾಜಿ ಸಚಿವರ ಪರಮಾಪ್ತನಿಂದ ನೂರು ಕೋಟಿ ವಂಚನೆ..?! ತಲೆಮರಿಸಿಕೊಂಡಿರುವ ಸಚಿವರ ಆಪ್ತ..! ಯಾರಿದು..?!

by EDITOR NEWS WARRIORS
0 comments
ಶಿವಮೊಗ್ಗ : ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಮಾಜಿ ಸಚಿವರ ಪರಮಾಪ್ತ ,ಬಲಗೈ ಬಂಟ, ತಲೆಮರಿಸಿಕೊಂಡಿದ್ದು ಇವರ ಮೇಲೆ ಕೋಟಿ ಕೋಟಿ ವಂಚನೆ ಮಾಡಿರುವ ಆರೋಪ ಕೇಳಿ ಬರುತ್ತಿದೆ.
ಏನಿದು ಪ್ರಕರಣ :
ತೀರ್ಥಹಳ್ಳಿ ಮೂಲದ ಶಿಕ್ಷಕಿ ಒಬ್ಬರು ಬೆಂಗಳೂರಿನ ಪ್ರತಿಷ್ಠಿತ ಶಾಲೆ ಒಂದರಲ್ಲಿ ಕಾರ್ಯನಿರ್ವಹಿಸುತ್ತಿದ್ದು ಇವರಿಗೆ ಪರಿಚಯವಾದ  ಮಾಜಿ ಸಚಿವರ ಆಪ್ತ (ಸಿಎಸ್ಆರ್ ಪಂಡ್)  ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ ನಿಧಿ ಇಂದ ನಿಮ್ಮ ಶಾಲೆಗೆ 100 ಕೋಟಿ ಹಣ ಕೊಡಿಸುತ್ತೇನೆ  ಆದರೆ ನೀವು ಈಗ ನನಗೆ 80 ಲಕ್ಷ ಹಣ ನೀಡಬೇಕು ನಂತರ ಬಂದ 100 ಕೋಟಿಯಲ್ಲಿ 50/50 ಕೋಟಿ ಹಂಚಿಕೊಳ್ಳೋಣ ಎಂದು ಹೇಳಿ ಒಂದು ಸಲ ತನ್ನ ಅಕೌಂಟಿಗೆ 25 ಲಕ್ಷ ಮತ್ತೊಂದು ಸಲ 10 ಲಕ್ಷ ಹಾಕಿಸಿಕೊಂಡು ನಂತರ ಅವರಿಗೆ ಯಾವುದೇ ಹಣವನ್ನು ಕೊಡಿಸದೆ ವಂಚಿಸಿದ್ದು ವಿಧಿ ಇಲ್ಲದೆ ಆ ಶಿಕ್ಷಕಿ ಇವರ ವಿರುದ್ಧ ದೂರು ದಾಖಲಿಸಿದ್ದು ಎಫ್ ಐ ಆರ್ ದಾಖಲಾದ ಬೆನ್ನಲ್ಲೇ ಈ ವ್ಯಕ್ತಿ ಕಳೆದ ಒಂದುವರೆ ತಿಂಗಳಿಂದ ನಾಪತ್ತೆಯಾಗಿದ್ದು ನಿನ್ನೆ ನ್ಯಾಯಾಲಯದಲ್ಲಿ ನಿರೀಕ್ಷಣಾ ಜಾಮೀನು ಕೂಡ ಸಿಕ್ಕಿಲ್ಲ ಎನ್ನುವ ಮಾಹಿತಿ ಇದೆ.
ಬಹುತೇಕ ಈ ವ್ಯವಹಾರ ಕಳೆದ 6 ತಿಂಗಳಿಂದ ನಡೆಯುತ್ತಿದ್ದು ಮಾಜಿ ಸಚಿವರ ಪಾತ್ರ ಇದರಲ್ಲಿ ಇದೆಯಾ..? ಎನ್ನುವ ಚರ್ಚೆ ತೀರ್ಥಹಳ್ಳಿಯಲ್ಲಿ ನಡೆಯುತ್ತಿದೆ…
ಮಲೆನಾಡಿನಲ್ಲಿ ಮನಿ ಫ್ರಾಡ್ ..!
ಸಭ್ಯರು, ಸುಸಂಸ್ಕೃತರು ,ಇರುವ ತೀರ್ಥಹಳ್ಳಿ ಅಂತಹ ಮಲೆನಾಡಿನ ಹೆಬ್ಬಾಗಿಲಿನಲ್ಲಿ ಇತ್ತೀಚಿಗೆ ಇಂತಹ  ವಂಚನೆ ಪ್ರಕರಣಗಳು ಹೆಚ್ಚಾಗಿದ್ದು  ಅದು ಬೇರೆಯವರಿಗೆ ಸದಾ ಬುದ್ಧಿವಾದ ಹೇಳುವ ಮಾಜಿ ಸಚಿವರ ಆಪ್ತರೇ ಮನಿ ಫ್ರಾಡ್ ನಲ್ಲಿ ಇರುವುದು ಸಾಕಷ್ಟು ಅನುಮಾನಗಳನ್ನು ಹುಟ್ಟಿಸಿದೆ .
ಜೊತೆಗೆ ಯಾರು ಈ ಸಚಿವರ ಆಪ್ತ ಯಾವ ಠಾಣೆಯಲ್ಲಿ ಈತನ ಮೇಲೆ ಎಫ್ ಐ ಆರ್ ದಾಖಲಾಗಿದೆ..?! ಎನ್ನುವ ಎಲ್ಲಾ ಮಾಹಿತಿಯೊಂದಿಗೆ ಶೀಘ್ರದಲ್ಲಿ ನಿಮ್ಮ ಮುಂದೆ…
ರಘುರಾಜ್ ಹೆಚ್‌ ಕೆ..9449553305…

Related Articles

Latest news
ಅಂಬು ಗ್ಯಾಂಗಿನ ಹುಡುಗರ ಮಧ್ಯೆ ಕಿತ್ತಾಟ ರಾಮಿನಕೊಪ್ಪದ ಉಮೇಶ ಕುಳ್ಳಿ ಕಿರಣನನ್ನು ಕೊಲೆ ಮಾಡಲು ಕಾರಣವೇನು..? ಶಾಂತಿನಗರದಲ್ಲಿ ಸೌಹಾರ್ದತೆಗೆ ಸಾಕ್ಷಿಯಾದ ಸಂಭ್ರಮದ ಈದ್ ಮೀಲಾದ್...! ಶಿವಮೊಗ್ಗ ಉಪವಿಭಾಗಾಧಿಕಾರಿಯಾಗಿ ಡಾ. ಮೈತ್ರಿ ಹೆಚ್ ಪಿ, ಎಸ್ ಮುಂದುವರಿಕೆ..! ಶಿವಮೊಗ್ಗದಲ್ಲಿ ‘ಅವಿಸ್ಮರಣೀಯ ಪ್ರಕರಣಗಳು’ ಕೃತಿ ಬಿಡುಗಡೆ..! Shivamogga breaking: ಶಿವಮೊಗ್ಗ ಉಪವಿಭಾಗಾಧಿಕಾರಿಯಾಗಿ ಮತ್ತೆ ಜಿ ಹೆಚ್ ಸತ್ಯನಾರಾಯಣ ಮುಂದುವರಿಕೆ...?! ಡಾ. ಮೈತ್ರಿ... Big news : ಜಿಪಿಟಿ ನೇಮಕಾತಿಯಲ್ಲಿ ಇಂಗ್ಲಿಷ್ ಶಿಕ್ಷಕರ ಹುದ್ದೆ ಗಣನೀಯ ಕಡಿತ: ಸರ್ಕಾರದ ವಿರುದ್ಧ ಆಕಾಂಕ್ಷಿಗಳ ತೀವ್ರ ... ಸೇವೆಯೇ ಶಿಕ್ಷಣ ಇಲಾಖೆಯ ಮುಖ್ಯ ಧ್ಯೇಯ ಸಚಿವ ಎಸ್.ಮಧು ಬಂಗಾರಪ್ಪ..! ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR): 98.53% ಡಿಜಿಟಲೀಕರಣ ಪೂರ್ಣ..! Big news :  ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ನಲ್ಲಿ  ಮಹತ್ವದ ಬದಲಾವಣೆ..! ಯಾರಿಗೆ ಯಾವ ಸ್ಥಾನ..?! ಕೋಟೆ ಪೊಲೀಸರ ಖಡಕ್ ಕಾರ್ಯಾಚರಣೆ ವಿದ್ಯಾನಗರದ ಎವರ್ ಗ್ರೀನ್ ಬ್ಯೂಟಿ ಪಾರ್ಲರ್ ಮೇಲೆ ದಾಳಿ  ಒಬ್ಬನ ಬಂಧನ ಇನ್ನೊಬ್ಬಳು ಪ...