ಶಿವಮೊಗ್ಗ: ಗ್ರೀನ್ ಪಾರ್ಕ್ ಕ್ರಿಕೆಟರ್ಸ್ ವತಿಯಿಂದ ರಾಜ್ಯದ ಮಾಜಿ ಮುಖ್ಯಮಂತ್ರಿಗಳು ಅಭಿವೃದ್ಧಿ ಹರಿಕಾರರು ಆದ ಬಿಎಸ್ ಯಡಿಯೂರಪ್ಪ ರವರ ಹುಟ್ಟುಹಬ್ಬದ ಹಬ್ಬದ ಅಂಗವಾಗಿ ಬಿಎಸ್ವೈ ಸೀಸನ್ -2 NES ಮೈದಾನ ದಲ್ಲಿ ಜರುಗಿತು.
ಸುಮಾರು 16 ತಂಡಗಳು ಭಾಗವಹಿಸಿದ್ದ ಈ ಟೂರ್ನಿ ಯಲ್ಲಿ ಜಾಕಿ ಫ್ರೆಂಡ್ಸ್ ಪ್ರಥಮ ಬಹುಮಾನ ಮತ್ತು ಒಂದು ಲಕ್ಷ ರೂ ಗಳನ್ನು ಮತ್ತು ಪ್ರತೀಶ್ ಫ್ರೆಂಡ್ಸ್ ತಂಡ ದ್ವಿತೀಯ ಮತ್ತು ಐವತ್ತು ಸಾವಿರ ರೂ ಗಳನ್ನು ತನ್ನದಾಗಿಸಿಕೊಂಡಿತು
ಈ ಬಹುಮಾನ ವಿತರಣೆ ಕಾರ್ಯಕ್ರಮ ವನ್ನು ಯುವ ಮುಖಂಡರು ಯುವ ಉದ್ಯಮಿಗಳು ಬಿ ವೈ ರಾಘವೇಂದ್ರರವರ ಸುಪುತ್ರರು ಆದ ಸುಭಾಷ್ ರಾಘವೇಂದ್ರ ರವರು ಬಹುಮಾನ ವಿತರಣೆ ಮಾಡಿದರು ಜೊತೆಯಲ್ಲಿ ಜ್ಯೋತಿ ಪ್ರಕಾಶ್. ರಾಜೇಶ್ ಕಾಮತ್ ,ದಿವಾಕರ್ ಶೆಟ್ಟಿ ,ಐಡಿಯಲ್ ಗೋಪಿ, ಶ್ರೀಮತಿ ಸುಮಾ ಭೂಪಾಳಂ ರವರು ಉಪಸ್ಥಿತರಿದ್ದರು .