Home ತೀರ್ಥಹಳ್ಳಿBig news:ಆಗುಂಬೆ ಗ್ರಾಮ ಪಂಚಾಯಿತಿಯ ಎದುರಿನಲ್ಲಿ ನಿರ್ಮಾಣವಾಗುತ್ತಿದೆ ಅಕ್ರಮ ಕಟ್ಟಡ ಇದರಲ್ಲಿ ಅಧಿಕಾರಿಗಳ ಪಾಲೆಷ್ಟು..?!

Big news:ಆಗುಂಬೆ ಗ್ರಾಮ ಪಂಚಾಯಿತಿಯ ಎದುರಿನಲ್ಲಿ ನಿರ್ಮಾಣವಾಗುತ್ತಿದೆ ಅಕ್ರಮ ಕಟ್ಟಡ ಇದರಲ್ಲಿ ಅಧಿಕಾರಿಗಳ ಪಾಲೆಷ್ಟು..?!

by EDITOR NEWS WARRIORS
0 comments
ಆಗುಂಬೆ : ಗ್ರಾಮ ಪಂಚಾಯಿತಿ ಎದುರಿನಲ್ಲಿ ಇರುವ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಂತೆ ಇರುವ  ಜಾಗದಲ್ಲಿ ಸುಮಾರು 10 ವರ್ಷಗಳ ಹಿಂದೆ ಮಲ್ಯ ರೆಸಿಡೆನ್ಸಿ ಎಂಬ ವಸತಿಗೃಹ ವನ್ನು ಸುಧೀಂದ್ರ ಮಲ್ಯ ಎನ್ನುವ ವ್ಯಕ್ತಿ ನಿರ್ಮಿಸಿದ್ದರು ಅವರಿಗೆ ವಸತಿ ಯೋಜನೆ ನೀಡಿ ಆ ಜಾಗವು ಮಂಜೂರಾಗಿದ್ದು ಆನಂತರ ವಾಣಿಜ್ಯ ಉದ್ದೇಶ ಕೋಸ್ಕರ ಪರಿವರ್ತನೆ ಮಾಡಿಕೊಂಡು ಕಟ್ಟಡ  ಕಟ್ಟಿರುತ್ತಾರೆ.

 ಆ ಸಮಯದಲ್ಲಿ ಅವರಿಗೆ ಮಂಜೂರಾದ ಜಾಗಕ್ಕಿಂತ ಅಧಿಕವಾಗಿ ಒತ್ತುವರಿಯಾಗಿ ಕಟ್ಟಡ ನಿರ್ಮಾಣ ಮಾಡಿರುತ್ತಾರೆ ಎಂದು ಗ್ರಾಮ ಪಂಚಾಯಿತಿಗೆ ದೂರು ಬರುತ್ತದೆ . ಆ ದೂರಿನ ಆಧಾರದ ಮೇಲೆ ಗ್ರಾಮ ಪಂಚಾಯಿತಿಯವರು  ಸ್ಥಳ ಪರಿಶೀಲನೆ ಮಾಡಿ ಅಳತೆ ಮಾಡಿ ನೋಡಿದಾಗ ಒತ್ತುವರಿಯಾಗಿರುವುದು ಕಂಡುಬರುತ್ತದೆ.

ಹಾಗೆ ಒತ್ತುವರಿ ಮಾಡಿದ ಜಾಗದ ಪಕ್ಕದಲ್ಲಿಯೇ ಅನಧಿಕೃತವಾಗಿ ವಿದ್ಯುತ್ ಕಂಬವನ್ನು ಹಾಕಿದ್ದು ಅದನ್ನು ತೆಗೆಯುವಂತೆ 3 ಬಾರಿ ನೋಟಿಸ್ ನೀಡುತ್ತಾರೆ ಅಂತಿಮ ನೋಟಿಸ್ ತಲುಪಿದ ದಿನಾಂಕ 6/3/ 2019 ರಂದು ಸುಧೀಂದ್ರ ಮಲ್ಯ ಅವರು ಜಾಗ ತೆರವುಗೊಳಿಸುವ ಬಗ್ಗೆ   ವಿದ್ಯುತ್ ಕಂಬವನ್ನು ಸ್ಥಳಾಂತರಿಸುತ್ತೇವೆ ಎಂದು  ಮುಚ್ಚಳಿಕೆ ಪತ್ರವನ್ನು ಬರೆದುಕೊಡುತ್ತಾರೆ.
ಆನಂತರ ಯಾವುದೇ ಅಕ್ರಮ ಒತ್ತುವರಿ ತೆರವುಗೊಳಿಸದೇ ಇದ್ದಾಗ ಮತ್ತೆ ಗ್ರಾಮ ಪಂಚಾಯತಿ ಯವರು ನೋಟಿಸ್ ನೀಡುತ್ತಾರೆ ಆಗ ಇದರ ವಿರುದ್ಧ ತಡೆಯಾಜ್ಞೆ ಗಾಗಿ ಸುಧೀಂದ್ರ ಮಲ್ಯ ಅವರು  ನ್ಯಾಯಾಲಯದ ಮೊರೆ ಹೋಗುತ್ತಾರೆ ತದನಂತರ ಒಂದು ವರ್ಷ ನಡೆದ ಪ್ರಕರಣ ನಾಟಕೀಯ ಬೆಳವಣಿಗೆ ಒಂದರಲ್ಲಿ ಲೋಕ್ ಆದಲತ್ ನಲ್ಲಿ ಮುಕ್ತಾಯವಾಗುತ್ತದೆ.

ಏನಾಯ್ತು ಲೋಕ್ ಆದಲತ್ ನಲ್ಲಿ..?!

ದೂರನ್ನು ದಾಖಲಿಸಿದ್ದ ಸುಧೀಂದ್ರ ಮಲ್ಯ ಅವರೇ ದೂರನ್ನು ಹಿಂಪಡೆಯಲು ಕಾರಣವೇನು..?! ಪ್ರತಿವಾದಿಗಳಾಗಿದ್ದ ಗ್ರಾಮ ಪಂಚಾಯಿತಿ ಅಧ್ಯಕ್ಷರು ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿ ಮೌನವಾಗಿ ಸಮ್ಮತಿಸಿದ್ದು ಏಕೆ..?! ಲೋಕ ಅದಾಲತ್  ನಲ್ಲಿ ಪ್ರಕರಣ ಯಾವ ರೀತಿಯಲ್ಲಿ ಮುಕ್ತಾಯವಾಯಿತು  ಎನ್ನುವ ಬಗ್ಗೆ  ಈಗಲೂ ಆಗುಂಬೆಯ ನಾಗರಿಕರಲ್ಲಿ ಗೊಂದಲವಿದೆ. 
ಮೊದಲೇ ನಿರ್ಮಾಣವಾಗಿದ್ದ ಮಲ್ಯ ರೆಸಿಡೆನ್ಸಿ ಕಟ್ಟಡ ಮಂಜೂರಾದ ಜಾಗಕ್ಕಿಂತ  ಹೆಚ್ಚಾಗಿ ಒತ್ತುವರಿಯಾಗಿ ನಿರ್ಮಿತವಾಗಿದೆ ಎನ್ನುವ ದೂರಿನ ಬೆನ್ನಲ್ಲೇ ಅದಕ್ಕೆ ಹೊಂದಿಕೊಂಡಂತೆ ಇನ್ನೊಂದು ಹೋಟೆಲ್ ಕಟ್ಟಡ ಹೇಗೆ ನಿರ್ಮಾಣವಾಯಿತು.ಇದು ಸಂಪೂರ್ಣ ಅನಧಿಕೃತ ಇದಕ್ಕೆ ಯಾವುದೇ ದಾಖಲೆಗಳು ಇಲ್ಲ ಆದರೂ ಪಾಪ ಗ್ರಾಮ ಪಂಚಾಯತಿ ಯವರು ಯಾವುದೇ ಅಪಸ್ವರ ಎತ್ತದೆ ಮೌನವಾಗಿ ಸಮ್ಮತಿಸಿಬಿಟ್ಟರು ಕಾರಣವೇನು..?! ಕಳೆದ ಹತ್ತು ವರ್ಷಗಳಿಂದ ಇರುವ ಮಲ್ಯ ರೆಸಿಡೆನ್ಸಿಗೆ  ಹೊಂದಿಕೊಂಡಂತೆ ಇರುವ ಇನ್ನೊಂದು ಹೋಟೆಲ್ ಕಟ್ಟಡ ನಿರ್ಮಾಣವಾಗಿದೆ ಕಳೆದ ಆರು ವರ್ಷಗಳಿಂದ ಹೋಟೆಲ್ ಉದ್ಯಮದಿಂದ ಬಂದ ಲಕ್ಷಾಂತರ ರೂಪಾಯಿ ಆದಾಯವನ್ನು ಸರ್ಕಾರಕ್ಕೆ ವಂಚಿಸಿದ್ದಾರೆ. ನಯಾ ಪೈಸೆ ಹಣ ಸರ್ಕಾರಕ್ಕೆ ಸಂದಾಯವಾಗಿಲ್ಲ.  ಮಲ್ಯ ರೆಸಿಡೆನ್ಸಿಗೆ  ಮಂಜೂರಾದ ಸ್ವಲ್ಪ ಜಾಗವನ್ನು ಇಟ್ಟುಕೊಂಡು ಇಷ್ಟು  ದೊಡ್ಡ ಪ್ರಮಾಣದಲ್ಲಿ ಆಗುಂಬೆಯ ಮುಖ್ಯ ರಸ್ತೆಯಲ್ಲಿ ಈ ಪ್ರಮಾಣದ ಒತ್ತುವರಿ ಮಾಡಿಕೊಂಡು ಕಟ್ಟಡವನ್ನು ಕಟ್ಟುತ್ತಿದ್ದರು  ಕಣ್ಣೆದುರೇ ಕೋಟ್ಯಾಂತರ ಬೆಳೆಬಾಳುವ ಜಾಗವನ್ನು ಕಳಿಸುತ್ತಿದ್ದರು  ನೋಡಿಕೊಂಡು ಮೌನ ಸಮ್ಮತಿಯನ್ನು ನೀಡಿ ತಾಲೂಕ ಆಡಳಿತ ಸುಮ್ಮನಿರುವುದು ಏಕೆ..?  ಯಾರೂ ಒಬ್ಬ ಬಡವ ಒಂದು ಮನೆ ಕಟ್ಟಲು ಹೋದರೆ ಕೂಡಲೇ ಅದನ್ನು ತೆರವುಗೊಳಿಸುವ ಅಧಿಕಾರಿಗಳೇ… ನಿಮ್ಮ  ಕಣ್ಣಿಗೆ ಈ ಬೆಳೆಬಾಳುವ ಕಟ್ಟಡ ಕಾಣುತ್ತಿಲ್ಲವೇ..?! ಇಷ್ಟು ವರ್ಷ ಸರ್ಕಾರಕ್ಕೆ ವಂಚಿಸಿ ಲಕ್ಷಾಂತರ ರೂಪಾಯಿ ತಮ್ಮ ಜೇಬಿಗೆ ಇಳಿಸಿಕೊಂಡ ಈ ಅಕ್ರಮ ಕಟ್ಟಡದ ಮಾಲೀಕರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಆ ಕಟ್ಟಡವನ್ನು ಕೆಡವಿ ಹೊಸದಾಗಿ ಕಟ್ಟಡ ನಿರ್ಮಾಣ ಮಾಡುತ್ತಿದ್ದರೂ ಸುಮ್ಮನಿರುವ ಅಧಿಕಾರಿಗಳ ಹಿಂದಿನ ಗುಟ್ಟೇನು..?! ಈ ಹೊಸ ಕಟ್ಟಡ ನಿರ್ಮಾಣಕ್ಕೆ ಇವರಲ್ಲಿ ಪರವಾನಿಗೆ ಎಲ್ಲಿದೆ..?! ಒಂದು ವೇಳೆ ಪರವಾನಿಗೆ ಇದ್ದರೆ ಕೊಟ್ಟವರು ಯಾರು..?! ಪರವಾನಿಗೆ ಇಲ್ಲದೆ  ಕಟ್ಟಡ ನಿರ್ಮಾಣ ಮಾಡಲು ಸಾಧ್ಯನಾ..?! ಇದಕ್ಕೆ ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿ  ಉತ್ತರಿಸಬೇಕು.
ಆಗುಂಬೆಯ ಗ್ರಾಮ ಪಂಚಾಯಿತಿಯ ಎದುರಿನಲ್ಲಿಯೇ ಅಕ್ರಮ ಕಟ್ಟಡವನ್ನು  ಹಿಂದೆ ನಿರ್ಮಿಸಿದ್ದು  ಮತ್ತೆ ಅದೇ ಕಟ್ಟಡ ತೆರವುಗೊಳಿಸಿ ಪುನರ್ ನಿರ್ಮಾಣವಾಗುತ್ತಿದ್ದರು  ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಕಣ್ಣಿದ್ದು ಕುರುಡರಂತೆ ನಾವು ನೋಡೇ ಇಲ್ಲ ಎಂಬಂತೆ ಇರುವುದಾದರೂ ಏಕೆ..?! ಇದು ಇವರ ಕರ್ತವ್ಯ ಲೋಪವಲ್ಲವೇ..?! ನಿರ್ಲಕ್ಷಿತನವಲ್ಲವೇ..?! ಲಂಚ ಬಾಕತನವಲ್ಲವೇ..?! 
ಯುವ ಉತ್ಸಾಹಿ ತಹಶೀಲ್ದಾರ್ ರಂಜಿತ್ ಅವರೇ…!

ಯುವಕರು ಎನ್ನುವ ಕಾರಣಕ್ಕಾಗಿ ನಿಮ್ಮ ಮೇಲೆ ಒಂದಷ್ಟು ಭರವಸೆ ಇಟ್ಟುಕೊಂಡಿದ್ದೇವೆ ಆದರೆ ನೀವು ನೋಡಿದರೆ ಆ ಭರವಸೆ ಈಡೇರಿಸುವಂತೆ ಕಾಣುತ್ತಿಲ್ಲ ಏಕೆಂದರೆ.. ಯಾವುದೇ ಸುದ್ದಿಗಳನ್ನು ನೀಡಿದ್ದರು ಕೂಡ ನೀವು ಅದರ ಬಗ್ಗೆ ಗಮನ ಹರಿಸುತ್ತಿಲ್ಲ ಕಾರಣ ಏನು ಗೊತ್ತಿಲ್ಲ..?! ನಿಮ್ಮ ಕಣ್ಣೆದುರಿನಲ್ಲಿ ನಿಮ್ಮ ತಾಲೂಕಿನಲ್ಲಿ ನಿಮ್ಮ ವ್ಯಾಪ್ತಿಗೆ ಒಳಪಟ್ಟಂತೆ ಮಣ್ಣು, ಮರಳು, ಕಲ್ಲು, ಕೋಟ್ಯಾಂತರ ಬೆಲೆಬಾಳುವ ಜಾಗಗಳು ಕಬಳಿಕೆ ಆಗುತ್ತಿದ್ದರು ಸುಮ್ಮನಿರುವುದು ಏಕೆ..?! ಇದರಲ್ಲಿ ನಿಮ್ಮ ಪಾಲು ಎಷ್ಟು..?! ಕೂಡಲೇ ಕಾಮಗಾರಿಯನ್ನು ನಿಲ್ಲಿಸುವಂತೆ ಹೇಳಿ ಅತಿಕ್ರಮಣ ಮಾಡಿ ಕಟ್ಟಡ ಕಟ್ಟಿದ್ದಕ್ಕೆ ಹಾಗೂ ಕಟ್ಟುತ್ತಿರುವುದಕ್ಕೆ ದಂಡ ಹಾಕಿ ಇಲ್ಲವಾದಲ್ಲಿ ಆ ಸ್ಥಾನಕ್ಕೆ ಬೆಲೆ ಇರುವುದಿಲ್ಲ ನೆನಪಿರಲಿ…

ಪಿಡಿಓ ಶ್ರೀ ಲಕ್ಷ್ಮಿ ಅವರೇ..!
ನಿಮ್ಮ ಬಗ್ಗೆ ಹೊರಗಡೆ ಒಳ್ಳೆಯ ಅಭಿಪ್ರಾಯ ಇದೆ ಆದರೆ ಏಕೋ ಗೊತ್ತಿಲ್ಲ ಮಲ್ಯ ರೆಸಿಡೆನ್ಸಿ ಒತ್ತುವರಿ ವಿಚಾರದಲ್ಲಿ ನೀವು ಮೌನವಾಗಿರುವುದು ನೋಡಿದರೆ ನಿಮ್ಮದು ಇದರಲ್ಲಿ ಪಾಲಿದೆ ಎನ್ನುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ ಪತ್ರಿಕೆಯಲ್ಲಿ ಬರೆದು ನಿರಂತರ ಕರೆ ಮಾಡಿ ಮಾಹಿತಿ ನೀಡುತ್ತಿದ್ದರು ಕೂಡ ನೀವು ಕ್ರಮ ಕೈಗೊಳ್ಳದೆ ಇರುವುದು ಹಲವು ಅನುಮಾನಗಳನ್ನು ಹುಟ್ಟು ಹಾಕಿದೆ ಈ  ಪ್ರಕರಣ ಲೋಕಾಯುಕ್ತಕ್ಕೆ  ಹೋದಾಗ ನಿಮ್ಮ ರಕ್ಷಣೆಗೆ ಯಾರೂ ಬರುವುದಿಲ್ಲ ನೆನಪಿರಲಿ… ಕೂಡಲೇ ಕಾಮಗಾರಿಯನ್ನು ನಿಲ್ಲಿಸಿ…
ರಘುರಾಜ್ ಹೆಚ್‌ ಕೆ…9449553305…

Related Articles

Latest news
ಅಂಬು ಗ್ಯಾಂಗಿನ ಹುಡುಗರ ಮಧ್ಯೆ ಕಿತ್ತಾಟ ರಾಮಿನಕೊಪ್ಪದ ಉಮೇಶ ಕುಳ್ಳಿ ಕಿರಣನನ್ನು ಕೊಲೆ ಮಾಡಲು ಕಾರಣವೇನು..? ಶಾಂತಿನಗರದಲ್ಲಿ ಸೌಹಾರ್ದತೆಗೆ ಸಾಕ್ಷಿಯಾದ ಸಂಭ್ರಮದ ಈದ್ ಮೀಲಾದ್...! ಶಿವಮೊಗ್ಗ ಉಪವಿಭಾಗಾಧಿಕಾರಿಯಾಗಿ ಡಾ. ಮೈತ್ರಿ ಹೆಚ್ ಪಿ, ಎಸ್ ಮುಂದುವರಿಕೆ..! ಶಿವಮೊಗ್ಗದಲ್ಲಿ ‘ಅವಿಸ್ಮರಣೀಯ ಪ್ರಕರಣಗಳು’ ಕೃತಿ ಬಿಡುಗಡೆ..! Shivamogga breaking: ಶಿವಮೊಗ್ಗ ಉಪವಿಭಾಗಾಧಿಕಾರಿಯಾಗಿ ಮತ್ತೆ ಜಿ ಹೆಚ್ ಸತ್ಯನಾರಾಯಣ ಮುಂದುವರಿಕೆ...?! ಡಾ. ಮೈತ್ರಿ... Big news : ಜಿಪಿಟಿ ನೇಮಕಾತಿಯಲ್ಲಿ ಇಂಗ್ಲಿಷ್ ಶಿಕ್ಷಕರ ಹುದ್ದೆ ಗಣನೀಯ ಕಡಿತ: ಸರ್ಕಾರದ ವಿರುದ್ಧ ಆಕಾಂಕ್ಷಿಗಳ ತೀವ್ರ ... ಸೇವೆಯೇ ಶಿಕ್ಷಣ ಇಲಾಖೆಯ ಮುಖ್ಯ ಧ್ಯೇಯ ಸಚಿವ ಎಸ್.ಮಧು ಬಂಗಾರಪ್ಪ..! ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR): 98.53% ಡಿಜಿಟಲೀಕರಣ ಪೂರ್ಣ..! Big news :  ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ನಲ್ಲಿ  ಮಹತ್ವದ ಬದಲಾವಣೆ..! ಯಾರಿಗೆ ಯಾವ ಸ್ಥಾನ..?! ಕೋಟೆ ಪೊಲೀಸರ ಖಡಕ್ ಕಾರ್ಯಾಚರಣೆ ವಿದ್ಯಾನಗರದ ಎವರ್ ಗ್ರೀನ್ ಬ್ಯೂಟಿ ಪಾರ್ಲರ್ ಮೇಲೆ ದಾಳಿ  ಒಬ್ಬನ ಬಂಧನ ಇನ್ನೊಬ್ಬಳು ಪ...