Home ಶಿವಮೊಗ್ಗBig breaking news: ಲಗಾನ್ ಸ್ಕೈಲೈನ್ ಕಾಮಗಾರಿಗೆ ಕೋರ್ಟ್ ನಿಂದ ತಡೆಯಾಜ್ಞೆ ..! ಇನ್ನು ಮುಂದೆ ನಡೆಯಲ್ಲ ಕಾಮಗಾರಿ ..!ಅಪಾರ್ಟ್ಮೆಂಟ್ ಕೊಳ್ಳಲು ಹಣ ಹಾಕಿದವರ ಕಥೆ ಏನು..?! ಯಾರಿಗೆಲ್ಲ ಕೊಡಬೇಕು ಹಿರೇಮಠ್ ಹಣ..!

Big breaking news: ಲಗಾನ್ ಸ್ಕೈಲೈನ್ ಕಾಮಗಾರಿಗೆ ಕೋರ್ಟ್ ನಿಂದ ತಡೆಯಾಜ್ಞೆ ..! ಇನ್ನು ಮುಂದೆ ನಡೆಯಲ್ಲ ಕಾಮಗಾರಿ ..!ಅಪಾರ್ಟ್ಮೆಂಟ್ ಕೊಳ್ಳಲು ಹಣ ಹಾಕಿದವರ ಕಥೆ ಏನು..?! ಯಾರಿಗೆಲ್ಲ ಕೊಡಬೇಕು ಹಿರೇಮಠ್ ಹಣ..!

by EDITOR NEWS WARRIORS
0 comments

 

ಶಿವಮೊಗ್ಗ: ಗಾಡಿಕೊಪ್ಪ ಸರ್ವೆ ನಂಬರ್ 15 ರ  ವಿವಾದಿತ ಜಾಗದ ಪಕ್ಕದ ಇರುವ ಸರ್ವೆ ನಂಬರ್ 22‌/2B ಮತ್ತು 22/2C  ಜಾಗದಲ್ಲಿ ಸರಿ ಸುಮಾರು 13 ಅಂತಸ್ತಿನ 238 ಅಪಾರ್ಟ್ಮೆಂಟ್ ಗಳನ್ನು ಕಟ್ಟಿಸುತ್ತೇನೆಂದು  ಸತ್ಯನಾರಾಯಣ ಅವರ‌ ಜೊತೆ ಒಪ್ಪಂದ ಮಾಡಿಕೊಂಡು ಕೆಲಸ ಶುರುಮಾಡಿದ  ಹುಬ್ಬಳ್ಳಿ ಮೂಲದ  ಗದಿಗಯ್ಯ ಹಿರೇಮಠ್ ಎನ್ನುವ ವ್ಯಕ್ತಿ ತನ್ನದೇ ಆದ ಜಿಬಿ ಬಿಲ್ಡರ್ಸ್ ಅಂಡ್ ಡೆವಲಪರ್ಸ್ ಎನ್ನುವ ಸಂಸ್ಥೆಯ ಮೂಲಕ ಗಾಂಧಿನಗರದಲ್ಲಿ ಬಾಡಿಗೆ ಕಚೇರಿಯನ್ನು ಮಾಡಿಕೊಂಡು ಅಪಾರ್ಟ್ಮೆಂಟ್ ಕಾಮಗಾರಿಗೆ ಕೈ ಹಾಕಿದ ಆದರೆ ಅಪಾರ್ಟ್ಮೆಂಟ್ ಮಾಡುವ ಎಬಿಸಿಡಿ ಗೊತ್ತಿರದ ಈತ ಮೊದಲೇ ತನ್ನ ಇನ್ನೊಂದು ಅಪಾರ್ಟ್ಮೆಂಟ್ ನಲ್ಲಿ  ಸಾಕಷ್ಟು ಗೊಂದಲ ಮಾಡಿಕೊಂಡಿದ್ದ ಅದರ ನಡುವೆ ಇಷ್ಟು ದೊಡ್ಡ ಪ್ರಾಜೆಕ್ಟ್ ಗ ಕೈ ಹಾಕಿದ  ಇವನಿಗೆ ದಂಪತಿಗಳಿಬ್ಬರೂ ಸಾಥ್ ನೀಡಿದ್ದರು.

ಅಪಾರ್ಟ್ಕಾಮೆಂಟ್ ಕಾಮಗಾರಿ ಪ್ರಾರಂಭ ಮಾಡಲು ಬೇಕಾದ  ಸರಿಯಾದ ಅನುಮತಿ ಪತ್ರಗಳನ್ನು ಪಡೆದುಕೊಳ್ಳದೆ ಪ್ರಾಧಿಕಾರಗಳ ನಿಯಮಗಳನ್ನು ಉಲ್ಲಂಘನೆ ಮಾಡಿ ಅಪಾರ್ಟ್ಮೆಂಟ್ ನಿರ್ಮಾಣ ಮಾಡಲು ಶುರುಮಾಡುತ್ತಾನೆ ಇದು ಸಾಲದೆಂಬಂತೆ ಇಲ್ಲಿ ಪಿಲ್ಲರ್ ಮಾಡಲು ತೆಗೆದ ಮಣ್ಣನ್ನು ಹಾಗೂ ಕಲ್ಲನ್ನು ಕೂಡ ಹೊರಗಡೆ ಯಾವುದೇ ಜಿಪಿಎಸ್ ಇಲ್ಲದೆ ಗಣಿ ಮತ್ತು ಭೂವಜ್ಞಾನ ಇಲಾಖೆಯ ಅನುಮತಿ ತೆಗೆದುಕೊಳ್ಳದೆ ಸರ್ಕಾರಕ್ಕೆ ರಾಜಧನ ಕಟ್ಟದೆ ಹೊರಗಡೆ  ಮಾರಾಟ ಮಾಡುತ್ತಾನೆ   ಆಗ ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ಸಾಕ್ಷಿ ಸಮೇತ ಸಿಕ್ಕಿಬಿಡುತ್ತಾನೆ  ಅದರ ದಂಡವೇ ಸುಮಾರು ಒಂದು ಕೋಟಿಗೂ ಅಧಿಕವಾಗುತ್ತದೆ.  ಅದು ಇನ್ನೂ ಕಟ್ಟಿಲ್ಲ . ಪ್ರತಿಷ್ಠಿತ ವ್ಯಕ್ತಿಗಳ ಹತ್ತಿರ ಕೋಟಿ ಕೋಟಿ ಲೂಟಿ ಮಾಡಿದ್ದಾನೆ ಕೆಲವರ ಬಳಿ ಈತ ಮಾತನಾಡಿರುವ ಆಡಿಯೋ ವಿಡಿಯೋ ಕೂಡ ಇದೆ.
ಕಾಮಗಾರಿ ನಿರ್ಮಾಣ ಮಾಡುವಲ್ಲಿ ಲೋಪ..!
*)  ನಿಯಮಗಳ ಪ್ರಕಾರ ಅಪಾರ್ಟ್ಮೆಂಟ್ ಕಾಮಗಾರಿ ನಿರ್ಮಾಣ ಮಾಡುತ್ತಿಲ್ಲ.
*)ಸಂಬಂಧಪಟ್ಟ ಪ್ರಾಧಿಕಾರಗಳಿಂದ ಸರಿಯಾದ ಅನುಮತಿಗಳನ್ನು ತೆಗೆದುಕೊಂಡಿಲ್ಲ.
*)ರೇರಾ ನಿಯಮದ ಪ್ರಕಾರ  ಅಪಾರ್ಟ್ಮೆಂಟ್ ಕೊಳ್ಳುವ ಗ್ರಾಹಕರ ಹಣ ರೇರಾ ಖಾತೆಗೆ ಹೋಗಬೇಕು ಆದರೆ ಇಲ್ಲಿ ಹಿರೇಮಠ್ ನೇರವಾಗಿ ತನ್ನ ಖಾತೆಗೆ ಹಣವನ್ನು ತೆಗೆದುಕೊಂಡಿದ್ದಾನೆ.
*)ಜೊತೆಗೆ ಕಾರ್ಮಿಕ ಇಲಾಖೆ ಮುಂತಾದ ಇಲಾಖೆಗಳಲ್ಲಿ ಅನುಮತಿಗಳನ್ನೇ ತೆಗೆದುಕೊಂಡಿಲ್ಲ. 
*)ಕಳಪೆ ಗುಣಮಟ್ಟದ ವಸ್ತುಗಳನ್ನು ಅಪಾರ್ಟ್ಮೆಂಟ್ ಕಾಮಗಾರಿಗೆ ಬಳಸುತ್ತಿದ್ದಾನೆ.
ಇದೆಲ್ಲವನ್ನು ಪತ್ರಿಕೆ ವಿಸ್ತಾರವಾಗಿ ಹಿಂದೆ ಪ್ರಕಟ ಮಾಡಿತ್ತು ಅಪಾರ್ಟ್ಮೆಂಟ್ ಕೊಳ್ಳುವ ಗ್ರಾಹಕರಿಗೆ ಎಚ್ಚರಿಕೆಯನ್ನು ನೀಡಿತ್ತು ಕೆಲವರು ಹುಷಾರಾದರು ಕೆಲವರು ಅವರು ಈಗ ಕಂಗಾಲಾಗಿದ್ದಾರೆ .

ಹಿಂದೆ ಪತ್ರಿಕೆ ಪ್ರಕಟಿಸಿದ ಸುದ್ದಿ..!

ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲು ರೆಡಿಯಾಗಿದ್ದಾರೆ…!
ಈತನ ವಂಚನೆ ಲಕ್ಷ ಗಳಲ್ಲಿ ಇಲ್ಲ ಕೋಟಿಗಟ್ಟಲೆ  ಇದೆ ಒಂದು ಅಂದಾಜಿನ ಪ್ರಕಾರ 35 ರಿಂದ 40 ಕೋಟಿ ವಂಚಿಸಿದ್ದಾನೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ .
ಈತನ ವಂಚನೆಯ ಜಾಲಕ್ಕೆ ಶಿವಮೊಗ್ಗದ ಪ್ರತಿಷ್ಠಿತ ವೈದ್ಯರು, ವ್ಯಾಪಾರಸ್ಥರು, ಕೆಲವು ರಾಜಕಾರಣಿಗಳು, ನಿವೃತ್ತ ಸರ್ಕಾರಿ ನೌಕರರು ಇದ್ದು ಶಿವಮೊಗ್ಗ ಸೇರಿದಂತೆ ಸಾಗರ ,ಶಿರಸಿ, ಹುಬ್ಬಳ್ಳಿಯಲ್ಲಿ ಕೂಡ ಈತನ ವಂಚನೆಯ ಜಾಲ ಹರಡಿದೆ. ಅಲ್ಲಿರುವವರಿಗೂ ಕೂಡ ಈತ ಹಣ ನೀಡಬೇಕು ಪತ್ರಿಕೆ ಜೊತೆ ಕೆಲವರು ತಮ್ಮ ಮಾಹಿತಿ ಹಂಚಿಕೊಂಡಿದ್ದಾರೆ ದೂರು ನೀಡಲು ರೆಡಿಯಾಗಿದ್ದಾರೆ.
ದಂಪತಿಗಳಿಬ್ಬರು ಇವನಿಗೆ ಸಾಥ್..! 
ದಂಪತಿಗಳಿಬ್ಬರು ಇವನಿಗೆ ಸಾಥ್ ನೀಡಿದ್ದು  ಅವರು ಸಾಕಷ್ಟು ಆಸ್ತಿಪಾಸ್ತಿ ಮಾಡಿಕೊಂಡಿದ್ದಾರೆ ಎನ್ನುವ ಮಾಹಿತಿ ಇದೆ ಅವರು ಯಾರು..?! ಅವರು ಎಲ್ಲಿದ್ದರೂ ಇಷ್ಟೊಂದು ಆಸ್ತಿ ಅವರಿಗೆ ಬಂದಿದ್ದಾದರೂ ಹೇಗೆ..?! ಇವನ ಜೊತೆ ಅವರ ಲಿಂಕ್ ಆಗಿದ್ದು ಹೇಗೆ..?! ದಂಪತಿಗಳು ಯಾರ್ಯಾರಿಗೆ ವಂಚಿಸಿದ್ದಾರೆ… ಎಲ್ಲವನ್ನು ಸಾಕ್ಷಿ ಸಮೇತ ಪತ್ರಿಕೆ ಪ್ರಕಟಿಸಲಿದೆ ನಿರೀಕ್ಷಿಸಿ … 
ಈ ವಂಚಕ ಹಿರೇಮಠ್ ಕೆಲವರ ಹತ್ತಿರ ನಗದು ರೂಪದಲ್ಲಿ ಹಣ ತೆಗೆದುಕೊಂಡಿದ್ದರೆ ಇನ್ನು ಕೆಲವರು ಹತ್ತಿರ ನೇರವಾಗಿ ತನ್ನ ಖಾತೆಗೆ ಹಣವನ್ನು ಹಾಕಿಸಿಕೊಂಡಿದ್ದಾನೆ.
ಈತನ ಜೊತೆ ಒಪ್ಪಂದ ಮಾಡಿಕೊಂಡಿರುವ ಸತ್ಯನಾರಾಯಣ ಮತ್ತು ಸಂಗಡಿಗರ   ಈತ ಯಾವುದೇ ಕಾರಣಕ್ಕೂ ಕಾಮಗಾರಿಯನ್ನು ಮುಂದುವರಿಸಬಾರದು ಹಾಗೂ ಅಪಾರ್ಟ್ಮೆಂಟ್ ಅನ್ನು ಯಾರಿಗೂ ಮಾರಾಟ ಮಾಡಬಾರದು ಎಂದು ನ್ಯಾಯಲಯದಲ್ಲಿ ಇದೇ ತಿಂಗಳ 2 ರಂದು  ತಡೆಯಾಜ್ಞೆ ತಂದಿದ್ದು.ಈತ ಇದು ಮಾತ್ರ  ನ್ಯಾಯಾಲಯದ ಹೊರಗೆ ಮಾತುಕತೆ ನಡೆಯುತ್ತಿದೆ ಎಲ್ಲವೂ ಸರಿ ಹೋಗುತ್ತದೆ ನಿಮ್ಮ ಹಣ ನಿಮಗೆ ಕೊಟ್ಟುಬಿಡುತ್ತೇನೆ ಎಂದು ಕಥೆ ಹೇಳುತ್ತಿದ್ದಾನೆ.
ಹಣ ಕೊಟ್ಟವರು ಮಾತ್ರ ಈತನನ್ನು ನಂಬಿ ಆ ದಂಪತಿಗಳನ್ನು ನಂಬಿ ಮೋಸ ಹೋದೆವು ಎಂದು ತಮ್ಮ ಅಳಲನ್ನು ತೋಡಿಕೊಳ್ಳುತ್ತಿದ್ದಾರೆ. ಈತನಿಗೆ ನ್ಯಾಯಾಲಯದಿಂದ ತಕ್ಕ ಬುದ್ಧಿ ಕಲಿಸಬೇಕು ಎನ್ನುವ ನಿರ್ಧಾರಕ್ಕೂ ಬಂದಿದ್ದಾರೆ.
ಇನ್ನೂ ಒಂದಷ್ಟು ಇಂಟ್ರೆಸ್ಟಿಂಗ್ ಸುದ್ದಿಗಳು ಮುಂದೆ ನಿರೀಕ್ಷಿಸಿ…..
ರಘುರಾಜ್ ಹೆಚ್‌ ಕೆ.. 9449553305…. 

Related Articles

Latest news
ಸೇವೆಯೇ ಶಿಕ್ಷಣ ಇಲಾಖೆಯ ಮುಖ್ಯ ಧ್ಯೇಯ ಸಚಿವ ಎಸ್.ಮಧು ಬಂಗಾರಪ್ಪ..! ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR): 98.53% ಡಿಜಿಟಲೀಕರಣ ಪೂರ್ಣ..! Big news :  ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ನಲ್ಲಿ  ಮಹತ್ವದ ಬದಲಾವಣೆ..! ಯಾರಿಗೆ ಯಾವ ಸ್ಥಾನ..?! ಕೋಟೆ ಪೊಲೀಸರ ಖಡಕ್ ಕಾರ್ಯಾಚರಣೆ ವಿದ್ಯಾನಗರದ ಎವರ್ ಗ್ರೀನ್ ಬ್ಯೂಟಿ ಪಾರ್ಲರ್ ಮೇಲೆ ದಾಳಿ  ಒಬ್ಬನ ಬಂಧನ ಇನ್ನೊಬ್ಬಳು ಪ... Big news : ಗಣಿ ಮತ್ತು ಭೂವಿಜ್ಞಾನ ಇಲಾಖೆಯಲ್ಲಿ ಬೃಹತ್ ಶಸ್ತ್ರಚಿಕಿತ್ಸೆ: 22 ಹಿರಿಯ ಭೂವಿಜ್ಞಾನಿಗಳ ವರ್ಗಾವಣೆ..! ದ... ಜಿಲ್ಲೆಯಲ್ಲಿ ಭಾರತ್ ಜೋಡೋ ಯುವಕ ಸಂಘಗಳ ಸ್ಥಾಪನೆಗೆ ಕ್ರಮ : ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ..! ಬರ ಪರಿಸ್ಥಿತಿ ನಿರ್ವಹಣೆ: ತಂಡವಾಗಿ ಕರ್ತವ್ಯ ನಿರ್ವಹಿಸೋಣ – ಜಿಲ್ಲಾಧಿಕಾರಿಗಳ ಕರೆ..! ಸಾಗುವಾನಿ ಮರಗಳ ಕಡಿತಲೆ ಕರಕುಚ್ಚಿಯ ಕೃಷ್ಣಮೂರ್ತಿ ಬಂಧನ..! Shivamogga breaking : ಬ್ಯೂಟಿ ಸ್ಪಾ ಅಡ್ಡೆ ಮೇಲೆ ತುಂಗಾನಗರ ಪೊಲೀಸರ ರೈಡ್..! ಉಳಿದ ಸ್ಪಾಗಳ ಕಥೆ ಏನು..?! Shivamogga breaking : ನಕಲಿ ಬಂಗಾರದ ಜಾಲ ಬೆನ್ನತ್ತಿದ ಪೊಲೀಸರು ತೀರ್ಥಹಳ್ಳಿ ಮೂಲದ ಒಬ್ಬ ಅರೆಸ್ಟ್..?! ಇದರಲ್ಲಿ ಶಿ...