Home ಮಹಾನಗರ ಪಾಲಿಕೆಸರ್ಕಾರದಿಂದ ಬಂದಿರುವ ಕೋಟಿ ಕೋಟಿ ಹಣವನ್ನು ಲೂಟಿ ಮಾಡಲು ಇಳಿದಿರುವ ಪಾಲಿಕೆಯ ಭ್ರಷ್ಟ ಅಧಿಕಾರಿಗಳು..!

ಸರ್ಕಾರದಿಂದ ಬಂದಿರುವ ಕೋಟಿ ಕೋಟಿ ಹಣವನ್ನು ಲೂಟಿ ಮಾಡಲು ಇಳಿದಿರುವ ಪಾಲಿಕೆಯ ಭ್ರಷ್ಟ ಅಧಿಕಾರಿಗಳು..!

by EDITOR NEWS WARRIORS
0 comments

ಕಾರ್ಪೊರೇಷನ್ ಕರ್ಮಕಾಂಡ ಆಗುವುದೇ ಅಧಿಕಾರಿಗಳ ತಲೆದಂಡ..?!

 

ಶಿವಮೊಗ್ಗ ಮಹಾನಗರ ಪಾಲಕ ಪಾಲಿಕೆ ವ್ಯಾಪ್ತಿಯಲ್ಲಿ ಮಹಾತ್ಮ ಗಾಂಧಿ ವಿಕಾಸ್ ಯೋಜನೆಯಡಿ ಫೇಸ್ 2 ಪ್ಯಾಕೇಜ್ ನಂಬರ್ 1 ರಲ್ಲಿ 41 ಕೋಟಿ 85 ಲಕ್ಷ 92 ಸಾವಿರ 192 ಜಿಎಸ್‌ಟಿ ಹೊರತುಪಡಿಸಿ ಮತ್ತು ಪ್ಯಾಕೇಜ್ ನಂಬರ್ 2 ರಲ್ಲಿ 18ಕೋಟಿ 79 ಲಕ್ಷ 99 ಸಾವಿರ 680 ಜಿ ಎಸ್ ಟಿ ಘ ಹೊರತುಪಡಿಸಿ ಎರಡು ಕಾಮಗಾರಿಯನ್ನು ಆನಂದ್ ಪ್ರಮೋದ್ ಗುತ್ತಿಗೆದಾರರು ಬೆಂಗಳೂರು ಇವರಿಗೆ ದಿನಾಂಕ 23.04.2026 ರಂದು ಮುಖ್ಯ ಇಂಜಿನಿಯರ್ ಬೆಂಗಳೂರು ಕೆಲಸದ ಆದೇಶ ಕೊಟ್ಟಿರುತ್ತಾರೆ.

 

ಅದರಂತೆ ಇವರು ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ವಾರ್ಡ್ ನಂಬರ್ 17 ಮತ್ತು ವಾರ್ಡ್ ನಂಬರ್ 3 ರಲ್ಲಿ ಹಾಗೂ ಇತರೆ ವಾರ್ಡ್ ಗಳಲ್ಲಿ ಕಾಮಗಾರಿಯನ್ನು ಪ್ರಾರಂಭಿಸುತ್ತಾರೆ.

 

ಪತ್ರಿಕೆ ಗಮನಕ್ಕೆ ಬಂದ ಹಾಗೆ ಪ್ರಾರಂಭಗೊಂಡಿರುವ ಕಾಮಗಾರಿಗಳು ತುಂಬಾ ಕಳಪೆ ಗುಣಮಟ್ಟದಿಂದ ನಡೆಯುತ್ತಿದೆ.

 

ರಾಪ್ಟ್ ಮತ್ತು ಬೆಡ್ ಕಾಂಕ್ರೀಟ್ ಸೇರಿ 8 ಇಂಚು ಇರಬೇಕು ಆದರೆ 5 ಇಂಚು ಮಾತ್ರ ಹಾಕಿರುತ್ತಾರೆ.

 

ರಾತ್ರೋರಾತ್ರಿ ನಡೆಯುತ್ತಿದೆ ಕಳಪೆ ಕಾಮಗಾರಿ..!

 

ವಾರ್ಡ್ ನಂಬರ್ ಮೂರರಲ್ಲಿ ಡಾಂಬರೀಕರಣ ಮತ್ತು ಡ್ರೈನ್ ಕಾಮಗಾರಿ ತುಂಬಾ ಕಳಪೆ ಮಟ್ಟದಿಂದ ಕೂಡಿದ್ದು ಸುಮಾರು ಎರಡು ಕೋಟಿಯ ಕಾಮಗಾರಿ ಹಳ್ಳ ಹಿಡಿಯುತ್ತಿದೆ. ಇಲ್ಲೂ ಕೂಡ ರ‍್ಯಾಮ್ಟ್ ಮತ್ತು ಬೆಡ್ ಕಾಂಕ್ರೀಟ್ ಎಂಟು ಇಂಚು ಇರಬೇಕು ಆದರೆ ಬರೀ 5 ಇಂಚು ಇದೆ ಸ್ವತಃ ಇವರದೇ ಇಂಜಿನಿಯರ್ ಚೆಕ್ ಮಾಡಿರುವ ಫೋಟೋ ನಮ್ಮ ಬಳಿ ಇದೆ. ಹಾಗೆ ಇಲ್ಲಿ ಬಳಸಿರುವ ಸ್ಟೀಲ್ ಕೂಡ ಕಳಪೆ ಗುಣಮಟ್ಟದ್ದಾಗಿದ್ದು ತೂಕದಲ್ಲಿ ವ್ಯತ್ಯಾಸವಿದೆ. ಹಾಗೆ ಬಳಸಿರುವ ಎಂ ಸ್ಯಾಂಡ್ ಗೆ ಡಸ್ಟ್ ಮಿಕ್ಸ್ ಮಾಡಿ ಕಾಂಕ್ರೀಟ್ ವಾಲ್ ಗಳಿಗೆ ಬಳಸುತ್ತಿದ್ದಾರೆ. ಅಲ್ಲದೆ ಈ ಕಾಮಗಾರಿಗಳನ್ನು ಕಳ್ಳರ ರೀತಿ ರಾತ್ರೋರಾತ್ರಿ ನಡೆಸುತ್ತಿದ್ದು ಯಾವುದೇ ಮಾಹಿತಿ ಇಲ್ಲದ ಇಂಜಿನರ್ ಗಳನ್ನು ನೇಮಕ ಮಾಡಿಕೊಂಡಿದ್ದಾರೆ ಅಲ್ಲದೆ ಶಾಖಾಧಿಕಾರಿಗಳು ಮತ್ತು ಮೂರನೇ ತಪಾಸಣೆ ವ್ಯಕ್ತಿ ಥರ್ಡ್ ಪಾರ್ಟಿ ಇಲ್ಲದೆ ಕಾಮಗಾರಿ ನಡೆಯುತ್ತಿದ್ದು ಇಲ್ಲಿ ಕೆ ಸಂಬಂಧಪಟ್ಟ ಇಂಜಿನಿಯರ್ ಹಾಗೂ ಕರೆ ಮಾಡಿದರೆ ಕರೆ ಸ್ವೀಕರಿಸುವುದಿಲ್ಲ ಒಂದು ವೇಳೆ ಸ್ವೀಕರಿಸಿದರು ಕೂಡ ನಾವು ಊರಿನಲ್ಲಿ ಇಲ್ಲ ಎನ್ನುತ್ತಾರೆ ಇವರು ಊರಿನಲ್ಲಿ ಇಲ್ಲದ ಸಮಯದಲ್ಲಿ ಇವರು ಕಾಮಗಾರಿ ಹೇಗೆ ಮಾಡುತ್ತಾರೆ ಇವರಿಗೆ ಕಾಮಗಾರಿ ಮಾಡಲು ಅನುಮತಿ ನೀಡಿದವರು ಯಾರು ಇಲ್ಲಿ ಕಾಮಗಾರಿ ಗುಣಮಟ್ಟದಿಂದ ಕೂಡಿದಿದೆ ಕೂಡಿದೆಯಾ ಎಂದು ನೋಡುವವರು ಯಾರು..?!

 

ಗೋಪಾಲದಲ್ಲೂ ಇದೇ ಕಥೆ..!

ಗೋಪಾಲದ ಕಾಲೇಜ್ ಒಂದರ ಮುಂದೆ ನಡೆಯುತ್ತಿರುವ ಕಾಮಗಾರಿ ಕೂಡ ಸಂಪೂರ್ಣ ಕಳಪೆ ಗುಣಮಟ್ಟದಿಂದ ಅಂದಾಜು ಪಟ್ಟಿಯನ್ನೇ ಈ ಕಾಮಗಾರಿ ಹೋಲುತ್ತಿಲ್ಲ ಇಲ್ಲೂ ಕೂಡ ಕಳಪೆ ಗುಣಮಟ್ಟದ ಸ್ಟೀಲನ್ನು ಬಳಸಿದ್ದು ಎಂಟು ಇಂಚು ಬದಲಿಗೆ ಐದು ಇಂಚನ್ನು ಮಾತ್ರ ಹಾಕಿರುತ್ತಾರೆ. ಪತ್ರಿಕೆ ದೂರು ನೀಡಿ ಹದಿನೈದು ದಿನವಾಗಿದ್ದರು ಇಲ್ಲಿವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ ಪರೋಕ್ಷವಾಗಿ ಇಲ್ಲಿನ ಅಧಿಕಾರಿಗಳು ಈ ಕಳಪೆ ಕಾಮಗಾರಿಗೆ ಅನುಮತಿ ನೀಡಿ ತಮ್ಮ ಜೇಬು ತುಂಬಿಸಿಕೊಳ್ಳುತ್ತಿದ್ದಾರೆ. ಒಂದು ಸಲ ಕಳಪೆ ಕಾಮಗಾರಿ ನಿರ್ಮಾಣ ಮಾಡುವುದು ಆನಂತರ ಹೇಳಿದಾಗ ಒಡೆದು ಸರಿ ಮಾಡುವುದು ಇದರ ನಷ್ಟವನ್ನು ಬರಿಸುವುದು ಯಾರು ಸ್ವಾಮಿ..?!

 

ಇದಕ್ಕೆಲ್ಲಾ ಸಂಬಂಧಪಟ್ಟಂತೆ ಫೋಟೋಗಳನ್ನು ಇಲ್ಲಿ ಹಾಕಲಾಗಿದೆ ಮಾನ್ಯ ಆಯುಕ್ತರು ಕೂಡಲೇ ಇದರ ಬಗ್ಗೆ ಗಮನ ಹರಿಸಬೇಕು ಇಷ್ಟೊಂದು ದೊಡ್ಡ ಮಟ್ಟದ ಹಣ ಲೂಟಿಯಾಗುತ್ತಿದ್ದರು ತಮ್ಮ ಅಧಿಕಾರಿಗಳು ಏನು ಮಾಡುತ್ತಿದ್ದಾರೆ..?! ತಾವು ಒಮ್ಮೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿ ಆಗ ಗೊತ್ತಾಗುತ್ತದೆ ಈ ಕಳಪೆ ಕಾಮಗಾರಿಯ ಹಣೆಬರಹ..

 

ಸರ್ಕಾರದಿಂದ ಬಂದಿರುವ ಕೋಟಿ ಕೋಟಿ ಹಣವನ್ನು ಲೂಟಿ ಮಾಡಲು ಇಳಿದಿರುವ ಪಾಲಿಕೆಯ ಭ್ರಷ್ಟ ಅಧಿಕಾರಿಗಳು..!

 

ಪಾಲಿಕೆಯ ಕೆಲವು ಭ್ರಷ್ಟ ಅಧಿಕಾರಿಗಳು ಸರ್ಕಾರದಿಂದ ರಸ್ತೆ ಚರಂಡಿ ಕಾಮಗಾರಿಗಳಿಗೆ ಬಂದ ಹಣವನ್ನು ಲೂಟಿ ಮಾಡಲು ತೊಡಗಿದ್ದಾರೆ ಸ್ಥಳಕ್ಕೆ ಭೇಟಿ ನೀಡದೆ ಸ್ಥಳ ಪರಿಶೀಲನೆ ಮಾಡದೆ ಕಾಮಗಾರಿಯನ್ನುಗಳನ್ನು ವೀಕ್ಷಣೆ ಮಾಡದೇ ನಿರ್ಲಕ್ಷ ತೋರಿ ಕಳಪೆ ಕಾಮಗಾರಿ ಗಳಿಗೆ ಪರೋಕ್ಷವಾಗಿ ಬೆಂಬಲ ನೀಡುತ್ತಿದ್ದಾರೆ. ಇಂಥವರಿಗೆ ತಕ್ಕ ಶಿಕ್ಷೆ ಆಗಬೇಕು ಲೋಕಾಯುಕ್ತದಂತಾ ತನಿಖಾ ಸಂಸ್ಥೆ ಇದರ ಬಗ್ಗೆ ಗಮನ ಹರಿಸಬೇಕು…

 

ಸಾರ್ವಜನಿಕರ ಹಣ ಲೂಟಿಯಾಗುತ್ತಿದೆ ಇದನ್ನು ಆಯುಕ್ತರು ತಪ್ಪಿಸಬೇಕು…

Related Articles

Latest news
ಸರ್ಕಾರದಿಂದ ಬಂದಿರುವ ಕೋಟಿ ಕೋಟಿ ಹಣವನ್ನು ಲೂಟಿ ಮಾಡಲು ಇಳಿದಿರುವ ಪಾಲಿಕೆಯ ಭ್ರಷ್ಟ ಅಧಿಕಾರಿಗಳು..! ಸರ್ಕಾರದಿಂದ ಬಂದಿರುವ ಕೋಟಿ ಕೋಟಿ ಹಣವನ್ನು ಲೂಟಿ ಮಾಡಲು ಇಳಿದಿರುವ ಪಾಲಿಕೆಯ ಭ್ರಷ್ಟ ಅಧಿಕಾರಿಗಳು..! ಅಮೃತ ಯೋಜನೆಯಡಿ ಕೈಗೊಂಡ ರಸ್ತೆ, ಚರಂಡಿ,ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಿ: ಬಿ.ಬಿ.ಕಾವೇರಿ ..! ರಾಜ್ಯದ ರೈತರಿಗೆ, ಕೋಳಿ ಸಾಕಾಣಿಕೆದಾರರಿಗೆ ಗುಡ್ ನ್ಯೂಸ್: ಶಾಶ್ವತ ವಿದ್ಯುತ್ ಸಂಪರ್ಕದ ಅರ್ಜಿ ಅವಧಿ ಆಗಸ್ಟ್ 15 ರವರೆಗ... Shivamogga Big news : ವಿವಾದಿತ ಸ್ಥಳದಲ್ಲಿ (ಕೃತಕ ಸ್ಮಶಾಣ) ಕ್ರಾಸ್ ಸ್ತಂಭಗಳ ನಿರ್ಮಾಣ..! ಪಾಲಿಕೆಯ ಪತ್ರಗಳಿಗೆ ಕ್... ಶಿವಮೊಗ್ಗವನ್ನು ‘ಟೂರಿಸಂ ಹಬ್’ ಆಗಿ ಅಭಿವೃದ್ಧಿಪಡಿಸಲು ಮುಖ್ಯಮಂತ್ರಿ ಡಿಕೆ ಶಿವಕುಮಾರ್  ಅವರಿಗೆ ಮಲೆನಾಡು ಪ್ರದೇಶ ಅಭಿ... Shivamogga breaking : ಅಕ್ರಮ ಮರಳುಗಾರಿಕೆಯ ಮೇಲೆ ಮುಗಿಬಿದ್ದ ಲೋಕಾಯುಕ್ತ ಅಧಿಕಾರಿಗಳು...! ಎಲ್ಲೆಲ್ಲಿ ನಡೆಯುತ್ತಿದ... Shivamogga breaking : ಅಕ್ರಮ ಮರಳುಗಾರಿಕೆಯ ಮೇಲೆ ಮುಗಿಬಿದ್ದ ಲೋಕಾಯುಕ್ತ ಅಧಿಕಾರಿಗಳು...! ಎಲ್ಲೆಲ್ಲಿ ನಡೆಯುತ್ತಿದ... Shivamogga : ದೊಡ್ಡಪೇಟೆ ಪೊಲೀಸರ ಮಹತ್ವದ ಕಾರ್ಯಾಚರಣೆ ನೇಪಾಳಿ ಮಂಜ ಅಂದರ್..! Railway shivamogga: ರೈಲ್ವೆ ಹಳಿಗೆ ಬಿದ್ದ ಮಹಿಳೆ ಯಾರು..?!