136
ಕಾರ್ಪೊರೇಷನ್ ಕರ್ಮಕಾಂಡ ಆಗುವುದೇ ಅಧಿಕಾರಿಗಳ ತಲೆದಂಡ..?!
ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಮಹಾತ್ಮ ಗಾಂಧಿ ವಿಕಾಸ್ ಯೋಜನೆಯಡಿ ಫೇಸ್ 2 ಪ್ಯಾಕೇಜ್ ನಂಬರ್ 1 ರಲ್ಲಿ 41 ಕೋಟಿ 85 ಲಕ್ಷ 92 ಸಾವಿರ 192 ರೂ ಜಿಎಸ್‌ಟಿ ಹೊರತುಪಡಿಸಿ ಮತ್ತು ಪ್ಯಾಕೇಜ್ ನಂಬರ್ 2 ರಲ್ಲಿ 18ಕೋಟಿ 79 ಲಕ್ಷ 99 ಸಾವಿರ 680 ರೂ ಜಿ ಎಸ್ ಟಿ ಹೊರತುಪಡಿಸಿ ಎರಡು ಕಾಮಗಾರಿಯನ್ನು ಆನಂದ್ ಪ್ರಮೋದ್ ಗುತ್ತಿಗೆದಾರರು ಬೆಂಗಳೂರು ಇವರಿಗೆ ದಿನಾಂಕ 23.04.2026 ರಂದು ಮುಖ್ಯ ಇಂಜಿನಿಯರ್ ಬೆಂಗಳೂರು ಕೆಲಸದ ಆದೇಶ ಕೊಟ್ಟಿರುತ್ತಾರೆ.
ಅದರಂತೆ ಇವರು ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ವಾರ್ಡ್ ನಂಬರ್ 17 ಮತ್ತು ವಾರ್ಡ್ ನಂಬರ್ 3 ರಲ್ಲಿ ಹಾಗೂ ಇತರೆ ವಾರ್ಡ್ ಗಳಲ್ಲಿ ಕಾಮಗಾರಿಯನ್ನು ಪ್ರಾರಂಭಿಸುತ್ತಾರೆ.
ಪತ್ರಿಕೆ ಗಮನಕ್ಕೆ ಬಂದ ಹಾಗೆ ಪ್ರಾರಂಭಗೊಂಡಿರುವ ಕಾಮಗಾರಿಗಳು ತುಂಬಾ ಕಳಪೆ ಗುಣಮಟ್ಟದಿಂದ ನಡೆಯುತ್ತಿದೆ.
ರ‍್ಯಾಪ್ಟ್ ಮತ್ತು ಬೆಡ್ ಕಾಂಕ್ರೀಟ್ ಸೇರಿ 8 ಇಂಚು ಇರಬೇಕು ಆದರೆ 5 ಇಂಚು ಮಾತ್ರ ಹಾಕಿರುತ್ತಾರೆ.
ರಾತ್ರೋರಾತ್ರಿ ನಡೆಯುತ್ತಿದೆ ಕಳಪೆ ಕಾಮಗಾರಿ..!

ವಾರ್ಡ್ ನಂಬರ್ ಮೂರರಲ್ಲಿ ಡಾಂಬರೀಕರಣ ಮತ್ತು ಡ್ರೈನ್ ಕಾಮಗಾರಿ ತುಂಬಾ ಕಳಪೆ ಮಟ್ಟದಿಂದ ಕೂಡಿದ್ದು ಸುಮಾರು 2 ಕೋಟಿಯ ಕಾಮಗಾರಿ ಹಳ್ಳ ಹಿಡಿಯುತ್ತಿದೆ. ಇಲ್ಲೂ ಕೂಡ ರ‍್ಯಾಪ್ಟ್ ಮತ್ತು ಬೆಡ್ ಕಾಂಕ್ರೀಟ್ 8 ಇಂಚು ಇರಬೇಕು ಆದರೆ ಬರೀ 5 ಇಂಚು ಇದೆ ಸ್ವತಃ ಇವರದೇ ಇಂಜಿನಿಯರ್ ಚೆಕ್ ಮಾಡಿರುವ ಫೋಟೋ ನಮ್ಮ ಬಳಿ ಇದೆ. ಹಾಗೆ ಇಲ್ಲಿ ಬಳಸಿರುವ ಸ್ಟೀಲ್ ಕೂಡ ಕಳಪೆ ಗುಣಮಟ್ಟದ್ದಾಗಿದ್ದು ತೂಕದಲ್ಲಿ ವ್ಯತ್ಯಾಸವಿದೆ. ಹಾಗೆ ಬಳಸಿರುವ ಎಂ ಸ್ಯಾಂಡ್ ಗೆ ಡಸ್ಟ್ ಮಿಕ್ಸ್ ಮಾಡಿ ಕಾಂಕ್ರೀಟ್ ವಾಲ್ ಗಳಿಗೆ ಬಳಸುತ್ತಿದ್ದಾರೆ. ಅಲ್ಲದೆ ಈ ಕಾಮಗಾರಿಗಳನ್ನು ಕಳ್ಳರ ರೀತಿ ರಾತ್ರೋರಾತ್ರಿ ನಡೆಸುತ್ತಿದ್ದು ಯಾವುದೇ ಮಾಹಿತಿ ಇಲ್ಲದ ಇಂಜಿನರ್ ಗಳನ್ನು ನೇಮಕ ಮಾಡಿಕೊಂಡಿದ್ದಾರೆ ಅಲ್ಲದೆ ಶಾಖಾಧಿಕಾರಿಗಳು ಮತ್ತು ಮೂರನೇ ತಪಾಸಣೆ ವ್ಯಕ್ತಿ ಥರ್ಡ್ ಪಾರ್ಟಿ ಇಲ್ಲದೆ ಕಾಮಗಾರಿ ನಡೆಯುತ್ತಿದ್ದು ಇಲ್ಲಿಗೆ ಸಂಬಂಧಪಟ್ಟ ಇಂಜಿನಿಯರ್ ಗಳಿಗೆ ಕರೆ ಮಾಡಿದರೆ ಕರೆ ಸ್ವೀಕರಿಸುವುದಿಲ್ಲ ಒಂದು ವೇಳೆ ಸ್ವೀಕರಿಸಿದರು ಕೂಡ ನಾವು ಊರಿನಲ್ಲಿ ಇಲ್ಲ ಎನ್ನುತ್ತಾರೆ ಇವರು ಊರಿನಲ್ಲಿ ಇಲ್ಲದ ಸಮಯದಲ್ಲಿ ಇವರು ಕಾಮಗಾರಿ ಹೇಗೆ ಮಾಡುತ್ತಾರೆ ಇವರಿಗೆ ಕಾಮಗಾರಿ ಮಾಡಲು ಅನುಮತಿ ನೀಡಿದವರು ಯಾರು ಇಲ್ಲಿ ಕಾಮಗಾರಿ ಗುಣಮಟ್ಟದಿಂದ ಕೂಡಿದೆಯಾ ಎಂದು ನೋಡುವವರು ಯಾರು..?!

ಗೋಪಾಲದಲ್ಲೂ ಇದೇ ಕಥೆ..!


