Home ರಾಜ್ಯಹಿಜಾಬ್ ವಿಷಯದಲ್ಲಿ ಕೋಮು ಗಲಭೆ ಮಾಡಲು ಪ್ರಯತ್ನಿಸುವವರ ಮೇಲೆ ಕ್ರಮ ಜರುಗಿಸಿಲು ಹಿಂದೂ ಜನಜಾಗೃತಿ ಸಮಿತಿ ಆಗ್ರಹ..!

ಹಿಜಾಬ್ ವಿಷಯದಲ್ಲಿ ಕೋಮು ಗಲಭೆ ಮಾಡಲು ಪ್ರಯತ್ನಿಸುವವರ ಮೇಲೆ ಕ್ರಮ ಜರುಗಿಸಿಲು ಹಿಂದೂ ಜನಜಾಗೃತಿ ಸಮಿತಿ ಆಗ್ರಹ..!

by EDITOR NEWS WARRIORS
0 comments

ಕಳೆದ ಒಂದು ವಾರದಿಂದ ಉಡುಪಿ ಜಿಲ್ಲೆಯ ಶಾಲೆಗಳಲ್ಲಿ ಹಿಜಾಬ್ ವಿಷಯದಲ್ಲಿ ವಿವಾದ ಶುರುವಾಗಿದ್ದು, ಇದೀಗ ಹಿಜಾಬ್ ವಿಷಯದ ಮೂಲಕ ಕೋಮು ಗಲಭೆಯನ್ನು ಸೃಷ್ಟಿಸಲು ಬಹುದೊಡ್ಡ ಸಂಚು ರೂಪಿಸಿರುವುದನ್ನು ಪೋಲಿಸರು ವಿಫಲಗೊಳಿಸಿದ್ದಾರೆ. ಕುಂದಾಪುರ ಜೂನಿಯರ್ ಕಾಲೇಜಿನಲ್ಲಿ ಮುಸಲ್ಮಾನ ಯುವತಿಯರು ಪ್ರತಿಭಟನೆ ಮಾಡುವಾಗ, ಅವರಿಗೆ ಬೆಂಬಲ ನೀಡಲು ಮತಾಂಧರು ಮಾರಾಕಾಸ್ತ್ರಗಳನ್ನು ಹಿಡಿದು ಬಂದಿದ್ದು, 5 ಜನರಲ್ಲಿ ಇಬ್ಬರನ್ನು ಅಂದರೆ ಹಾಜಿ ಅಬ್ದುಲ್ ಮುಜಬ್ ಹಾಗೂ ರಜಬ್‌ನನ್ನು ಪೋಲಿಸರು ಬಂಧನ ಮಾಡಿದ್ದಾರೆ.

ಉಳಿದ ಕಲೀಲ್, ಈಪಿಕರ್, ರಿಜ್ವಾನ್ ಪರಾರಿಯಾಗಿದ್ದಾರೆ. ಈ ವೇಳೆಯಲ್ಲಿ ಬಂಧಿತರಿಂದ ಅಪಾಯಕಾರಿ ಮಾರಕಾಸ್ತ್ರಗಳನ್ನು ವಶಪಡಿಸಿಕೊಂಡಿದ್ದಾರೆ. ಪೊಲೀಸ್ ತನಿಖೆಯಲ್ಲಿ ಬಯಲಾದ ವಿಷಯವೇನೆಂದರೆ ಬಂಧಿತರು ರೌಡಿಶೀಟರ್ ಆಗಿದ್ದು, ಮಾರಕಾಸ್ತ್ರಗಳನ್ನು ಬೀಸಿ ಸಾರ್ವಜನಿಕರ ಪ್ರಾಣ ತೆಗೆಯುವ ಸಂಚನ್ನು ರೂಪಿಸಿದ್ದರು. ಇದು ಅತ್ಯಂತ ಅಪಾಯಕಾರಿ ಮತ್ತು ಅತ್ಯಂತ ಗಂಭೀರ ವಿಷಯವಾಗಿದೆ. ಉಡುಪಿ ಜಿಲ್ಲೆಯು ಅತ್ಯಂತ ಕೋಮು ಸೂಕ್ಷ್ಮ ಪ್ರದೇಶವಾಗಿದೆ. ಮತಾಂಧ ಶಕ್ತಿಗಳು ಹಿಜಾಬ್ ಮೂಲಕ ಕೋಮು ಭಾವನೆಯನ್ನು ಕೆರಳಿಸಿ ಕೋಮು ಗಲಭೆಯನ್ನು ಮಾಡುವ ಷಡ್ಯಂತ್ರ್ಯ ರಚಿಸಿದ್ದು, ಇದರ ಪೂರ್ಣ ತನಿಖೆ ಮಾಡಬೇಕು.

ಕೂಡಲೇ ಇದರ ಹಿಂದಿನ ಮೂಲ ರೂವಾರಿಯನ್ನು ಪತ್ತೆ ಹಚ್ಚಬೇಕು ಮತ್ತು ಯಾವುದೇ ಕಾರಣಕ್ಕೂ ಹಿಜಾಬ್‌ಗೆ ಅವಕಾಶ ನೀಡದೇ, ವಸ್ತ್ರಸಂಹಿತೆಯನ್ನು ಜಾರಿ ಮಾಡಬೇಕು ಎಂದು ಹಿಂದೂ ಜನಜಾಗೃತಿ ಸಮಿತಿಯು ಆಗ್ರಹಿಸುತ್ತದೆ.

ಮೋಹನ್ ಗೌಡ,
ರಾಜ್ಯ ವಕ್ತಾರರು, ಹಿಂದೂ ಜನಜಾಗೃತಿ ಸಮಿತಿ,
ಸಂಪರ್ಕ: 7204082609…

ಸುದ್ದಿ ಮತ್ತು ಜಾಹೀರಾತು ಸಂಪರ್ಕಿಸಿ:9449553305

Related Articles

Leave a Comment

Latest news
Big news : ಜಿಪಿಟಿ ನೇಮಕಾತಿಯಲ್ಲಿ ಇಂಗ್ಲಿಷ್ ಶಿಕ್ಷಕರ ಹುದ್ದೆ ಗಣನೀಯ ಕಡಿತ: ಸರ್ಕಾರದ ವಿರುದ್ಧ ಆಕಾಂಕ್ಷಿಗಳ ತೀವ್ರ ... ಸೇವೆಯೇ ಶಿಕ್ಷಣ ಇಲಾಖೆಯ ಮುಖ್ಯ ಧ್ಯೇಯ ಸಚಿವ ಎಸ್.ಮಧು ಬಂಗಾರಪ್ಪ..! ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR): 98.53% ಡಿಜಿಟಲೀಕರಣ ಪೂರ್ಣ..! Big news :  ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ನಲ್ಲಿ  ಮಹತ್ವದ ಬದಲಾವಣೆ..! ಯಾರಿಗೆ ಯಾವ ಸ್ಥಾನ..?! ಕೋಟೆ ಪೊಲೀಸರ ಖಡಕ್ ಕಾರ್ಯಾಚರಣೆ ವಿದ್ಯಾನಗರದ ಎವರ್ ಗ್ರೀನ್ ಬ್ಯೂಟಿ ಪಾರ್ಲರ್ ಮೇಲೆ ದಾಳಿ  ಒಬ್ಬನ ಬಂಧನ ಇನ್ನೊಬ್ಬಳು ಪ... Big news : ಗಣಿ ಮತ್ತು ಭೂವಿಜ್ಞಾನ ಇಲಾಖೆಯಲ್ಲಿ ಬೃಹತ್ ಶಸ್ತ್ರಚಿಕಿತ್ಸೆ: 22 ಹಿರಿಯ ಭೂವಿಜ್ಞಾನಿಗಳ ವರ್ಗಾವಣೆ..! ದ... ಜಿಲ್ಲೆಯಲ್ಲಿ ಭಾರತ್ ಜೋಡೋ ಯುವಕ ಸಂಘಗಳ ಸ್ಥಾಪನೆಗೆ ಕ್ರಮ : ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ..! ಬರ ಪರಿಸ್ಥಿತಿ ನಿರ್ವಹಣೆ: ತಂಡವಾಗಿ ಕರ್ತವ್ಯ ನಿರ್ವಹಿಸೋಣ – ಜಿಲ್ಲಾಧಿಕಾರಿಗಳ ಕರೆ..! ಸಾಗುವಾನಿ ಮರಗಳ ಕಡಿತಲೆ ಕರಕುಚ್ಚಿಯ ಕೃಷ್ಣಮೂರ್ತಿ ಬಂಧನ..! Shivamogga breaking : ಬ್ಯೂಟಿ ಸ್ಪಾ ಅಡ್ಡೆ ಮೇಲೆ ತುಂಗಾನಗರ ಪೊಲೀಸರ ರೈಡ್..! ಉಳಿದ ಸ್ಪಾಗಳ ಕಥೆ ಏನು..?!