Home ಶಿವಮೊಗ್ಗಶಿವಮೊಗ್ಗಕ್ಕೆ ಡಿವೈಎಸ್ಪಿ ಆಗಿ ದಕ್ಷ ಅಧಿಕಾರಿ ಬಿ‌ ಬಾಲರಾಜು ವರ್ಗಾವಣೆ ಬೆನ್ನಲ್ಲೇ ವರ್ಗಾವಣೆ ಆದೇಶವನ್ನು ರದ್ದು ಮಾಡಲು ನಡೆಯುತ್ತಿದೆಯಾ ಪಿತೂರಿ..? ಹಾಗಾದರೆ ಈ ವರ್ಗಾವಣೆ ಆದೇಶದ ರದ್ದಿಗೆ ಪಿತೂರಿ ಮಾಡುತ್ತಿರುವವರು ಯಾರು? ಕಾರಣವೇನು..?

ಶಿವಮೊಗ್ಗಕ್ಕೆ ಡಿವೈಎಸ್ಪಿ ಆಗಿ ದಕ್ಷ ಅಧಿಕಾರಿ ಬಿ‌ ಬಾಲರಾಜು ವರ್ಗಾವಣೆ ಬೆನ್ನಲ್ಲೇ ವರ್ಗಾವಣೆ ಆದೇಶವನ್ನು ರದ್ದು ಮಾಡಲು ನಡೆಯುತ್ತಿದೆಯಾ ಪಿತೂರಿ..? ಹಾಗಾದರೆ ಈ ವರ್ಗಾವಣೆ ಆದೇಶದ ರದ್ದಿಗೆ ಪಿತೂರಿ ಮಾಡುತ್ತಿರುವವರು ಯಾರು? ಕಾರಣವೇನು..?

by EDITOR NEWS WARRIORS
0 comments

ಶಿವಮೊಗ್ಗ: ಇತ್ತೀಚಿನ ದಿನಗಳಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿ ಅಪರಾಧಗಳ ಸಂಖ್ಯೆ ಹೆಚ್ಚಾಗುತ್ತಿದ್ದು. ಮೊದಲೇ ಸೂಕ್ಷ್ಮ ಪ್ರದೇಶವಾಗಿರುವ ಶಿವಮೊಗ್ಗ ನಗರದಲ್ಲಿ ಕೋಮುಗಲಭೆ ಪ್ರಕರಣಗಳು ಹೆಚ್ಚಾಗುತ್ತಿದೆ .

ಹಿಂದೂ ಯುವಕ ಬಜರಂಗದಳದ ಹರ್ಷನ ಹತ್ಯೆ ಬೆನ್ನಲ್ಲೇ ಮತ್ತೊಬ್ಬ ಹಿಂದೂ ಯುವಕ ಮಧು ಎಂಬ ಯುವಕನ ಮೇಲೆ ಮಾರಣಾಂತಿಕ ಹಲ್ಲೆಯಾಗಿದೆ. ಈ ಹಲ್ಲೆಗೆ ಸಂಬಂಧಪಟ್ಟಂತೆ ನಾಲ್ಕು ಜನ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಜಿಲ್ಲೆಯಲ್ಲಿ ಅಪರಾಧ ಪ್ರಕರಣಗಳ ಜೊತೆಗೆ ಅಕ್ರಮ ಮದ್ಯ, ಮರಳು, ಓಸಿ ,ಅಂತಹ ಪ್ರಕರಣಗಳು ನಿರಂತರವಾಗಿ ನಡೆಯುತ್ತಿದ್ದು. ಇದನ್ನು ಕಡಿವಾಣ ಹಾಕುವಲ್ಲಿ ಪೊಲೀಸ್ ವೈಫಲ್ಯತೆ ಎದ್ದು ಕಾಣುತ್ತಿದೆ. ಎಂದು ಆಡಳಿತರೂಢ ಬಿಜೆಪಿ ಪಕ್ಷದ ನಾಯಕರುಗಳು ಬಹಿರಂಗವಾಗಿ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ.

ಮುಸ್ಲಿಂ ಗೂಂಡಾಗಳನ್ನು ರಕ್ಷಿಸುತ್ತಿದ್ದಾರೆ ಹಿಂದೂಗಳಿಗೆ ರಕ್ಷಣೆ ಇಲ್ಲ ಎಂದು ಸಚಿವ ಈಶ್ವರಪ್ಪ ಕೂಡ ಗುಡುಗಿದ್ದರು.

ಹಿಂದೂಪರ ಸಂಘಟನೆಗಳ ಮುಖಂಡರು ಕೂಡ ಸಚಿವ ಈಶ್ವರಪ್ಪ, ಗೃಹ ಸಚಿವ ಅರಗ ಜ್ಞಾನೇಂದ್ರ ಅವರ ಬಳಿ ಹಿಂದೂಗಳಿಗೆ ರಕ್ಷಣೆ ಇಲ್ಲವಾಗಿದೆ ನಿರಂತರ ಹಲ್ಲೆಗಳು ನಡೆಯುತ್ತಿವೆ ಎಂದು ತಮ್ಮ ಅಸಮಾಧಾನವನ್ನು ಹೊರಹಾಕಿದ್ದರು.

ಪತ್ರಿಕೆ ಕೂಡ ಶಿವಮೊಗ್ಗ “ಪೊಲೀಸ್ ಇಲಾಖೆಯಲ್ಲಿ ಬಿಗ್ ಬ್ಲಾಸ್ಟ್ “ಎನ್ನುವ ಹೆಸರಿನಲ್ಲಿ ವರದಿಯನ್ನು ಕೂಡ ಪ್ರಕಟಿಸಿತ್ತು ಅದರಲ್ಲಿ ವಿಸ್ತಾರವಾಗಿ ಪೊಲೀಸ್ ಇಲಾಖೆಗೆ ಸರ್ಜರಿ ನಡೆಯುವ ಅವಶ್ಯಕತೆ ಇದೆ ಎನ್ನುವ ಅಂಶವನ್ನು ಪ್ರಬಲವಾಗಿ ಪ್ರಕಟಿಸಿತ್ತು.

ಮುಖ್ಯವಾಗಿ ಶಿವಮೊಗ್ಗದ ಡಿವೈಎಸ್ಪಿ ಪ್ರಶಾಂತ್ ಮುನ್ನೊಳ್ಳಿ ಅವರ ಕಾರ್ಯವೈಖರಿ ಬಗ್ಗೆ ಹಿಂದೂಪರ ಸಂಘಟನೆಗಳು, ಆಡಳಿತ ಬಿಜೆಪಿ ಪಕ್ಷದ ನಾಯಕರುಗಳು ಅಸಮಾಧಾನವನ್ನು ಹೊರಹಾಕಿದರು. ಖುದ್ದು ಡಿವೈಎಸ್ಪಿ ಪ್ರಶಾಂತ್ ಮುನ್ನೊಳ್ಳಿ ಅವರಿಗೆ ಇಲಾಖೆಯಲ್ಲಿ ನಿಯಂತ್ರಣ ತರಲು ಸಾಧ್ಯವಾಗಲಿಲ್ಲ. ಅಪರಾಧ ಪ್ರಕರಣಗಳನ್ನು ಅಕ್ರಮ ದಂಧೆಗಳನ್ನು ನಿಯಂತ್ರಿಸಲು ವಿಫಲರಾಗಿದ್ದರು.

ಇವರ ಜಾಗಕ್ಕೆ ದಕ್ಷ, ಪ್ರಾಮಾಣಿಕ ,ಖಡಕ್ ಡಿವೈಎಸ್ಪಿ ಅಗತ್ಯತೆ ಇತ್ತು ಇದನ್ನು ಮನಗಂಡ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ದಕ್ಷ ಪ್ರಾಮಾಣಿಕ ಅಧಿಕಾರಿಯಾದ ಎನ್ಕೌಂಟರ್ ಸ್ಪೆಷಲಿಸ್ಟ್ ಎಂದೇ ಖ್ಯಾತಿ ಪಡೆದಿದ್ದ ಹಿಂದೆ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನಲ್ಲಿ ಕಾರ್ಯನಿರ್ವಹಿಸಿದ್ದ ಬಿ ಬಾಲರಾಜು ಅವರನ್ನು ಶಿವಮೊಗ್ಗ ಜಿಲ್ಲೆಗೆ ಡಿವೈಎಸ್ಪಿ ಆಗಿ ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ.

ಕಾಣದ ಕೈಗಳ ಕುತಂತ್ರ:

ಶಿವಮೊಗ್ಗ ಜಿಲ್ಲೆಗೆ ದಕ್ಷ ಪ್ರಾಮಾಣಿಕ ಅಧಿಕಾರಿ ಬಾಲರಾಜ್ ಬರುತ್ತಿದ್ದಾರೆ ಎನ್ನುವ ಆದೇಶ ಹೊರಬೀಳುತ್ತಿದ್ದಂತೆ ಪೊಲೀಸ್ ಇಲಾಖೆಯ ಅಧಿಕಾರಿಗಳ ಮನಸ್ಸಿನಲ್ಲಿ ಶಿವಮೊಗ್ಗ ಜಿಲ್ಲೆಯ ನಗರದ ಜನರ ಮನಸ್ಸಿನಲ್ಲಿ ಒಂದಷ್ಟು ಆಶಾಭಾವನೆ ಮೂಡಿತ್ತು. ಇನ್ನಾದರೂ ಶಿವಮೊಗ್ಗ ನಗರದಲ್ಲಿ ಅಪರಾಧ ಪ್ರಕರಣಗಳು ಕಡಿಮೆಯಾಗುತ್ತೆ. ಹಾಗೂ ಅಕ್ರಮ ದಂಧೆಗಳು ನಿಯಂತ್ರಣಕ್ಕೆ ಬರುತ್ತವೆ ಎನ್ನುವ ನಿರೀಕ್ಷೆಯನ್ನು ಹುಟ್ಟುಹಾಕಿತ್ತು.

ಆದರೆ ಆದೇಶ ಹೊರಬೀಳುತ್ತಿದ್ದಂತೆ ಕೆಲವು ಕಾಣದ ಕೈಗಳು ಇಂಥ ದಕ್ಷ ಪ್ರಾಮಾಣಿಕ ಅಧಿಕಾರಿ ಬಂದರೆ ತಮ್ಮ ಅಕ್ರಮಗಳಿಗೆ ಎಲ್ಲಿ ಬ್ರೇಕ್ ಬೀಳುವುದು ಎನ್ನುವ ಭಯದಿಂದ ಇವರ ವರ್ಗಾವಣೆ ಆದೇಶವನ್ನು ರದ್ದುಗೊಳಿಸುವ ಪ್ರಯತ್ನ ನಡೆಸುತ್ತಿದ್ದಾರೆ ಹಾಗೆ ಖುದ್ದು ಡಿವೈಎಸ್ಪಿ ಪ್ರಶಾಂತ ಮುನ್ನೊಳ್ಳಿ ಕೂಡ ವೈಯಕ್ತಿಕ ಕಾರಣಗಳಿಗೋಸ್ಕರ ಇಲ್ಲೇ ಉಳಿದುಕೊಳ್ಳಬೇಕು ಎನ್ನುವ ಆಶಯ ವ್ಯಕ್ತಪಡಿಸುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಇದು ಒಳ್ಳೆಯ ಬೆಳವಣಿಗೆ ಅಲ್ಲ ಬಿ ಬಾಲರಾಜ್ ಅವರಂತಹ ದಕ್ಷ ಪ್ರಾಮಾಣಿಕ ಅಧಿಕಾರಿ ಅವಶ್ಯಕತೆ ಶಿವಮೊಗ್ಗ ನಗರಕ್ಕೆ ಈಗಿನ ಪರಿಸ್ಥಿತಿಯಲ್ಲಿ ಇದೆ ಇದನ್ನು ಮನಗಂಡು ಗೃಹ ಸಚಿವರು ಹಾಗೂ ಹಿರಿಯ ಸಚಿವರಾದ ಸಚಿವ ಈಶ್ವರಪ್ಪನವರು ಬಿ ಬಾಲರಾಜ್ ಅವರನ್ನು ಇಲ್ಲಿಯೇ ಉಳಿಸಿಕೊಳ್ಳಬೇಕು.

ಯಾವ ಕುತಂತ್ರಗಳಿಗೆ, ಒತ್ತಡಗಳಿಗೂ, ಮಣಿಯಬಾರದು .

ವರದಿ: ರಘುರಾಜ್ ಹೆಚ್.ಕೆ…9449553305

#####################################

ಸುದ್ದಿ ಮತ್ತು ಜಾಹೀರಾತು ನೀಡಲು ಸಂಪರ್ಕಿಸಿ: 9449553305…

Related Articles

Leave a Comment

Latest news
ಸೇವೆಯೇ ಶಿಕ್ಷಣ ಇಲಾಖೆ ಮುಖ್ಯ ಧ್ಯೇಯ ಸಚಿವ ಎಸ್.ಮಧು ಬಂಗಾರಪ್ಪ..! ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR): 98.53% ಡಿಜಿಟಲೀಕರಣ ಪೂರ್ಣ..! Big news :  ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ನಲ್ಲಿ  ಮಹತ್ವದ ಬದಲಾವಣೆ..! ಯಾರಿಗೆ ಯಾವ ಸ್ಥಾನ..?! ಕೋಟೆ ಪೊಲೀಸರ ಖಡಕ್ ಕಾರ್ಯಾಚರಣೆ ವಿದ್ಯಾನಗರದ ಎವರ್ ಗ್ರೀನ್ ಬ್ಯೂಟಿ ಪಾರ್ಲರ್ ಮೇಲೆ ದಾಳಿ  ಒಬ್ಬನ ಬಂಧನ ಇನ್ನೊಬ್ಬಳು ಪ... Big news : ಗಣಿ ಮತ್ತು ಭೂವಿಜ್ಞಾನ ಇಲಾಖೆಯಲ್ಲಿ ಬೃಹತ್ ಶಸ್ತ್ರಚಿಕಿತ್ಸೆ: 22 ಹಿರಿಯ ಭೂವಿಜ್ಞಾನಿಗಳ ವರ್ಗಾವಣೆ..! ದ... ಜಿಲ್ಲೆಯಲ್ಲಿ ಭಾರತ್ ಜೋಡೋ ಯುವಕ ಸಂಘಗಳ ಸ್ಥಾಪನೆಗೆ ಕ್ರಮ : ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ..! ಬರ ಪರಿಸ್ಥಿತಿ ನಿರ್ವಹಣೆ: ತಂಡವಾಗಿ ಕರ್ತವ್ಯ ನಿರ್ವಹಿಸೋಣ – ಜಿಲ್ಲಾಧಿಕಾರಿಗಳ ಕರೆ..! ಸಾಗುವಾನಿ ಮರಗಳ ಕಡಿತಲೆ ಕರಕುಚ್ಚಿಯ ಕೃಷ್ಣಮೂರ್ತಿ ಬಂಧನ..! Shivamogga breaking : ಬ್ಯೂಟಿ ಸ್ಪಾ ಅಡ್ಡೆ ಮೇಲೆ ತುಂಗಾನಗರ ಪೊಲೀಸರ ರೈಡ್..! ಉಳಿದ ಸ್ಪಾಗಳ ಕಥೆ ಏನು..?! Shivamogga breaking : ನಕಲಿ ಬಂಗಾರದ ಜಾಲ ಬೆನ್ನತ್ತಿದ ಪೊಲೀಸರು ತೀರ್ಥಹಳ್ಳಿ ಮೂಲದ ಒಬ್ಬ ಅರೆಸ್ಟ್..?! ಇದರಲ್ಲಿ ಶಿ...