Home ರಾಜ್ಯಅಂತರಾಷ್ಟ್ರೀಯ ಮಟ್ಟದಲ್ಲಿ ಅದ್ಭುತ ಸಾಧನೆಗೈದ ಅಂಗವಿಕಲ ಮಹಿಳೆಗೆ ಗೌರವ ಸನ್ಮಾನ!!

ಅಂತರಾಷ್ಟ್ರೀಯ ಮಟ್ಟದಲ್ಲಿ ಅದ್ಭುತ ಸಾಧನೆಗೈದ ಅಂಗವಿಕಲ ಮಹಿಳೆಗೆ ಗೌರವ ಸನ್ಮಾನ!!

by EDITOR NEWS WARRIORS
0 comments

ಹರಿಹರ ತಾಲೂಕಿನ ಹನಗವಾಡಿ ಅಲ್ಲಿ ಗ್ರಾಮೀಣ ಪುನರ್ವಸತಿ ಕಾರ್ಯಕರ್ತೆಯಾಗಿ ಕಾರ್ಯನಿರ್ವಹಿಸುತ್ತಿರುವ ಎನ್ ,ರೂಪಾ ಎಂಬ ಯುವತಿ ಅಂಗವಿಕಲಯಾಗಿದ್ದು ಕೊಂಡೆ, ದುಡಿಯುವುದರ ಜೊತೆಗೆ ಕ್ರೀಡೆಯಲ್ಲೂ ಹಲವಾರು ಪ್ರಶಸ್ತಿ ಪುರಸ್ಕಾರಗಳನ್ನು ತನ್ನ ಮುಡಿಗೇರಿಸಿಕೊಂಡಿದ್ದಾರೆ. ಅದ್ಭುತ ಸಾಧನೆಗೈದ ಮಹಿಳೆಗೆ ಇಂದು ಹರಿಹರದ ಶಾಸಕ ಎಸ್ ,ರಾಮಪ್ಪನವರು ಕರೆಸಿ ಸನ್ಮಾನ ಮಾಡಿ ನಿರಂತರವಾಗಿ ನಿಮ್ಮ ಬೆಳವಣಿಗೆ ಹೀಗೆ ಸಾಗಲಿ ಎಂದು ಬೆನ್ನುತಟ್ಟಿ ಪ್ರೋತ್ಸಾಹಿಸಿದ್ದಾರೆ. ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷರಾದ ಎಸ್ ರಾಮಪ್ಪ, ಮಾಜಿ ಎಂಎಲ್ಸಿ ಅಬ್ದುಲ್ ಜಬ್ಬರ್, ಶಾಸಕರ ಆಪ್ತ ಸಹಾಯಕರಾದ ಮಹಾಂತೇಶ್, ಹಿರಿಯ ಪತ್ರಕರ್ತರಾದ ವೈ ,ನಾಗರಾಜ್, ಕಾಂಗ್ರೆಸ್ಸಿನ ಕಾರ್ಯಕರ್ತರಾದ ಭಾಷಾ ಹಾಜರಿದ್ದರು.ಈ ಸಮಯದಲ್ಲಿ ಪತ್ರಿಕೆ ಜೊತೆ ತನ್ನ ಅನುಭವವನ್ನು ಹಂಚಿಕೊಂಡ ರೂಪಾ ಅವರು ತಮ್ಮ ಸಾಧನೆಯ ವಿವರಗಳನ್ನು ನೀಡಿದರು. 1)ಕೊಯಿಮುತ್ತುರ್ ನಲ್ಲಿ ಸಿಟ್ಟಿಂಗ್ ವಾಲಿಬಾಲ್ ನಲ್ಲಿ ಎರಡನೇ ಪ್ರಶಸ್ತಿ,2) ಮಂಡ್ಯದಲ್ಲಿ ನಡೆದ ಕ್ರೀಡೆಯಲ್ಲಿ ಮೊದಲನೇ ಪ್ರಶಸ್ತಿ, 3) ತಮಿಳುನಾಡಿನಲ್ಲಿ ಮೂರನೇ ಪ್ರಶಸ್ತಿ, 4) ದೆಹಲಿಯಲ್ಲಿ ನಡೆದ ‌ಕ್ರೀಡೆಯಲ್ಲಿ ಎರಡನೇ ಪ್ರಶಸ್ತಿ, 5) ಬೆಳಗಾಂ ನಲ್ಲಿ ಮೂರನೇ ಪ್ರಶಸ್ತಿ ತನ್ನ ಮುಡಿಗೇರಿಸಿಕೊಂಡ ಈ ಅದ್ಭುತ ಅಂಗವಿಕಲ ಮಹಿಳೆಗೆ ಇನ್ನಷ್ಟು ಪ್ರಶಸ್ತಿ-ಪುರಸ್ಕಾರಗಳು ಸಲ್ಲಲಿ ಹಾಗೆ ತಾನು ಮಾಡುತ್ತಿರುವ ವೃತ್ತಿಯಲ್ಲಿ ಕಾಯಂ ನೌಕರರ ಆಗಿ ಮುಂದುವರಿಯಲಿ. ಎನ್ನುವುದು ಪತ್ರಿಕೆ ಆಶಯ ಕೂಡ ಹೌದು….(ರಘುರಾಜ್ ಹೆಚ್, ಕೆ)…

Related Articles

Leave a Comment

Latest news
ಅಂಬು ಗ್ಯಾಂಗಿನ ಹುಡುಗರ ಮಧ್ಯೆ ಕಿತ್ತಾಟ ರಾಮಿನಕೊಪ್ಪದ ಉಮೇಶ ಕುಳ್ಳಿ ಕಿರಣನನ್ನು ಕೊಲೆ ಮಾಡಲು ಕಾರಣವೇನು..? ಶಾಂತಿನಗರದಲ್ಲಿ ಸೌಹಾರ್ದತೆಗೆ ಸಾಕ್ಷಿಯಾದ ಸಂಭ್ರಮದ ಈದ್ ಮೀಲಾದ್...! ಶಿವಮೊಗ್ಗ ಉಪವಿಭಾಗಾಧಿಕಾರಿಯಾಗಿ ಡಾ. ಮೈತ್ರಿ ಹೆಚ್ ಪಿ, ಎಸ್ ಮುಂದುವರಿಕೆ..! ಶಿವಮೊಗ್ಗದಲ್ಲಿ ‘ಅವಿಸ್ಮರಣೀಯ ಪ್ರಕರಣಗಳು’ ಕೃತಿ ಬಿಡುಗಡೆ..! Shivamogga breaking: ಶಿವಮೊಗ್ಗ ಉಪವಿಭಾಗಾಧಿಕಾರಿಯಾಗಿ ಮತ್ತೆ ಜಿ ಹೆಚ್ ಸತ್ಯನಾರಾಯಣ ಮುಂದುವರಿಕೆ...?! ಡಾ. ಮೈತ್ರಿ... Big news : ಜಿಪಿಟಿ ನೇಮಕಾತಿಯಲ್ಲಿ ಇಂಗ್ಲಿಷ್ ಶಿಕ್ಷಕರ ಹುದ್ದೆ ಗಣನೀಯ ಕಡಿತ: ಸರ್ಕಾರದ ವಿರುದ್ಧ ಆಕಾಂಕ್ಷಿಗಳ ತೀವ್ರ ... ಸೇವೆಯೇ ಶಿಕ್ಷಣ ಇಲಾಖೆಯ ಮುಖ್ಯ ಧ್ಯೇಯ ಸಚಿವ ಎಸ್.ಮಧು ಬಂಗಾರಪ್ಪ..! ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR): 98.53% ಡಿಜಿಟಲೀಕರಣ ಪೂರ್ಣ..! Big news :  ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ನಲ್ಲಿ  ಮಹತ್ವದ ಬದಲಾವಣೆ..! ಯಾರಿಗೆ ಯಾವ ಸ್ಥಾನ..?! ಕೋಟೆ ಪೊಲೀಸರ ಖಡಕ್ ಕಾರ್ಯಾಚರಣೆ ವಿದ್ಯಾನಗರದ ಎವರ್ ಗ್ರೀನ್ ಬ್ಯೂಟಿ ಪಾರ್ಲರ್ ಮೇಲೆ ದಾಳಿ  ಒಬ್ಬನ ಬಂಧನ ಇನ್ನೊಬ್ಬಳು ಪ...