Home ರಾಷ್ಟ್ರೀಯಈಜುಡುಗೆ( ಸ್ವಿಮ್‌ ಸೂಟ್)ಗಳ ಮೇಲೆ ಹಿಂದೂ ದೇವರ ಚಿತ್ರ ಎತ್ತ ಸಾಗುತ್ತಿದೆ ಸಮಾಜದ ಚಿತ್ತ..!!

ಈಜುಡುಗೆ( ಸ್ವಿಮ್‌ ಸೂಟ್)ಗಳ ಮೇಲೆ ಹಿಂದೂ ದೇವರ ಚಿತ್ರ ಎತ್ತ ಸಾಗುತ್ತಿದೆ ಸಮಾಜದ ಚಿತ್ತ..!!

by EDITOR NEWS WARRIORS
0 comments

ನಿರಂತರವಾಗಿ ಹಿಂದೂ ದೇವತೆಗಳನ್ನು ಅವಹೇಳನ ಮಾಡುವ ಉದ್ದೇಶದಿಂದ ಅಶ್ಲೀಲವಾಗಿ ,ಅಸಭ್ಯವಾಗಿ , ಪೋಸ್ಟರ್ ಗಳನ್ನು ಹಾಕುವುದು. ಅಸಭ್ಯವಾಗಿ ಚಿತ್ರಗಳನ್ನು ಬಿತ್ತರಿಸುವುದು ನಡೆದುಕೊಂಡುಬರುತ್ತಿದೆ.

ಇದೀಗ ಹೊಸದಾದ ವಿವಾದ ಒಂದು ಹುಟ್ಟು ಕೊಂಡಿದ್ದು”ಸಹಾರಾ ರೇ ಸ್ವಿಮ್” ಹೆಸರಿನ ಬಟ್ಟೆ ಬ್ರಾಂಡ್ ಹೊಸ ವಿವಾದ ಹುಟ್ಟುಹಾಕಿದೆ. ಹೊಸದಾಗಿ ಲಾಂಚ್‌ ಮಾಡಿರೋ ಈಜುಡುಗೆಗಳ ಮೇಲೆ ಹಿಂದೂ ದೇವತೆಗಳ ಚಿತ್ರಗಳನ್ನು ಮುದ್ರಿಸಿದೆ. ಸಹಾರಾ ರೇ ಒಡೆತನದಲ್ಲಿರುವ ಬ್ರಾಂಡ್‌ ಇದಾಗಿದೆ.

‘ಔರಾ ಕಲೆಕ್ಷನ್ 2022′ ಹೆಸರಿನಲ್ಲಿ ಈ ಸ್ವಿಮ್‌ ಸೂಟ್‌ಗಳನ್ನು ಬಿಡುಗಡೆ ಮಾಡಲಾಗಿದ್ದು.


ಥಾಂಗ್ಸ್ ಮತ್ತು ಮೈಕ್ರೋ ಸ್ಟ್ರಿಂಗ್ ಟಾಪ್‌ಗಳನ್ನು ಒಳಗೊಂಡಿರುವ ಹೊಸ ಸಂಗ್ರಹ ಇದಾಗಿದೆ. ಇವುಗಳ ಮೇಲೆ ಹಿಂದೂ ದೇವತೆಗಳ ಚಿತ್ರಗಳನ್ನು ಮುದ್ರಿಸಲಾಗಿದೆ. ಈ ವಿವಾದಾತ್ಮಕ ಸ್ವಿಮ್‌ ಸೂಟ್‌ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು.

ಬಿಕಿನಿ ಹಾಗೂ ಟಾಪ್‌ ಮೇಲೆ ಹಿಂದೂ ದೇವತೆಗಳ ಚಿತ್ರಗಳನ್ನು ಮುದ್ರಿಸಿರೋದು ಹಲವರನ್ನು ಕೆರಳಿಸಿದೆ.

ದೇವರ ಚಿತ್ರ ಮುದ್ರಿಸಲೇಬೇಕೆಂಬ ಉದ್ದೇಶ ಕಂಪನಿಗಿದ್ದರೆ, ಯಾಕೆ ಜೀಸಸ್‌ ಚಿತ್ರವನ್ನು ಮುದ್ರಿಸಿಲ್ಲ ಅಂತಾ ಟ್ವಿಟ್ಟರ್‌ ಬಳಕೆದಾರನೊಬ್ಬ ಪ್ರಶ್ನಿಸಿದ್ದಾನೆ.

ಹಿಂದುತ್ವ ಅನ್ನೋದು ಜೋಕ್‌ ಅಲ್ಲ, ಅಥವಾ ಕಂಪನಿಗಳಿಗೆ ಹಣ ಮಾಡಿಕೊಳ್ಳುವ ಮಾರ್ಗವೂ ಅಲ್ಲವೆಂದು ಮತ್ತೋರ್ವ ಆಕ್ರೋಶ ಹೊರಹಾಕಿದ್ದಾನೆ.


ಸಹರಾ ರೇ ಕಂಪನಿ ಈ ರೀತಿ ಮಾಡಿರೋದು ಇದೇ ಮೊದಲೇನಲ್ಲ. 2019ರಲ್ಲಿ ಫ್ಲೋರ್‌ ಮ್ಯಾಟ್‌ ಹಾಗೂ ಟಾಯ್ಲೆಟ್‌ ಕವರ್‌ಗಳ ಮೇಲೆ ಹಿಂದು ದೇವತೆಗಳ ಚಿತ್ರವನ್ನು ಮುದ್ರಿಸಿತ್ತು. ಅದನ್ನು ಅಮೇಜಾನ್‌ನಲ್ಲಿ ಮಾರಾಟಕ್ಕಿಡಲಾಗಿತ್ತು.

ಸಂಸ್ಥೆಗಳಿಗೆ ಪ್ರಚಾರಮಾಡಲು ಸಾಕಷ್ಟು ವಿಧಾನಗಳಿವೆ ಅಂತದ್ದರಲ್ಲಿ ಒಂದು ಧರ್ಮವನ್ನು ಗುರಿಯಾಗಿಸಿಕೊಂಡು ಇತರ ಕೀಳುಮಟ್ಟದ ಜಾಹೀರಾತುಗಳನ್ನು ನೀಡುವುದು ಒಳ್ಳೆಯದಲ್ಲ ಇದರಲ್ಲಿ ಭಾಗವಹಿಸುವುದು ಸಹ ಒಳ್ಳೆಯದಲ್ಲ ಇದು ಇಲ್ಲಿಗೇ ನಿಲ್ಲಬೇಕು ಇಲ್ಲವಾದರೆ ಅದರ ವಿರುದ್ಧ ತೀವ್ರ ಹೋರಾಟ ಮಾಡಿ ಕಂಪನಿಯನ್ನೇ ಮುಚ್ಚಿ ಸಲಾಗುವುದು ಎಂದು ಹಿಂದೂಪರ ಸಂಘಟನೆಗಳು ಆಗ್ರಹಿಸಿವೆ…

ರಘುರಾಜ್ ಹೆಚ್. ಕೆ….

#####################################

ಸುದ್ದಿ ನೀಡಲು ಸಂಪರ್ಕಿಸಿ:9449553305…

Related Articles

Leave a Comment

Latest news
ಅಂಬು ಗ್ಯಾಂಗಿನ ಹುಡುಗರ ಮಧ್ಯೆ ಕಿತ್ತಾಟ ರಾಮಿನಕೊಪ್ಪದ ಉಮೇಶ ಕುಳ್ಳಿ ಕಿರಣನನ್ನು ಕೊಲೆ ಮಾಡಲು ಕಾರಣವೇನು..? ಶಾಂತಿನಗರದಲ್ಲಿ ಸೌಹಾರ್ದತೆಗೆ ಸಾಕ್ಷಿಯಾದ ಸಂಭ್ರಮದ ಈದ್ ಮೀಲಾದ್...! ಶಿವಮೊಗ್ಗ ಉಪವಿಭಾಗಾಧಿಕಾರಿಯಾಗಿ ಡಾ. ಮೈತ್ರಿ ಹೆಚ್ ಪಿ, ಎಸ್ ಮುಂದುವರಿಕೆ..! ಶಿವಮೊಗ್ಗದಲ್ಲಿ ‘ಅವಿಸ್ಮರಣೀಯ ಪ್ರಕರಣಗಳು’ ಕೃತಿ ಬಿಡುಗಡೆ..! Shivamogga breaking: ಶಿವಮೊಗ್ಗ ಉಪವಿಭಾಗಾಧಿಕಾರಿಯಾಗಿ ಮತ್ತೆ ಜಿ ಹೆಚ್ ಸತ್ಯನಾರಾಯಣ ಮುಂದುವರಿಕೆ...?! ಡಾ. ಮೈತ್ರಿ... Big news : ಜಿಪಿಟಿ ನೇಮಕಾತಿಯಲ್ಲಿ ಇಂಗ್ಲಿಷ್ ಶಿಕ್ಷಕರ ಹುದ್ದೆ ಗಣನೀಯ ಕಡಿತ: ಸರ್ಕಾರದ ವಿರುದ್ಧ ಆಕಾಂಕ್ಷಿಗಳ ತೀವ್ರ ... ಸೇವೆಯೇ ಶಿಕ್ಷಣ ಇಲಾಖೆಯ ಮುಖ್ಯ ಧ್ಯೇಯ ಸಚಿವ ಎಸ್.ಮಧು ಬಂಗಾರಪ್ಪ..! ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR): 98.53% ಡಿಜಿಟಲೀಕರಣ ಪೂರ್ಣ..! Big news :  ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ನಲ್ಲಿ  ಮಹತ್ವದ ಬದಲಾವಣೆ..! ಯಾರಿಗೆ ಯಾವ ಸ್ಥಾನ..?! ಕೋಟೆ ಪೊಲೀಸರ ಖಡಕ್ ಕಾರ್ಯಾಚರಣೆ ವಿದ್ಯಾನಗರದ ಎವರ್ ಗ್ರೀನ್ ಬ್ಯೂಟಿ ಪಾರ್ಲರ್ ಮೇಲೆ ದಾಳಿ  ಒಬ್ಬನ ಬಂಧನ ಇನ್ನೊಬ್ಬಳು ಪ...