Home ರಾಜ್ಯಡಾ// ಬಿ. ಯಶೋವರ್ಮಾ ಬಾರದ ಲೋಕಕ್ಕೆ ಪಯಣ – ಇಂದು ಮೃತದೇಹ ಉಜಿರೆಗೆ ಅಗಮಾನ : ಎಸ್.ಡಿ.ಎಮ್‌ ಕಾಲೇಜಿನಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ. ಗಣ್ಯರಿಂದ ತೀವ್ರ ಸಂತಾಪ..!!

ಡಾ// ಬಿ. ಯಶೋವರ್ಮಾ ಬಾರದ ಲೋಕಕ್ಕೆ ಪಯಣ – ಇಂದು ಮೃತದೇಹ ಉಜಿರೆಗೆ ಅಗಮಾನ : ಎಸ್.ಡಿ.ಎಮ್‌ ಕಾಲೇಜಿನಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ. ಗಣ್ಯರಿಂದ ತೀವ್ರ ಸಂತಾಪ..!!

by EDITOR NEWS WARRIORS
0 comments

ಬೆಳ್ತಂಗಡಿ: ಎಸ್.ಡಿ.ಎಂ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಹಾಗೂ ಡಿಗ್ರಿ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾಗಿದ್ದರು.

ಡಾ.ಬಿ.ಯಶೋವರ್ಮ”ರವರು ಸೋಮವಾರ‌ ಬೆಳಗ್ಗಿನ ಜಾವ 4:30 ರ ಸುಮಾರಿಗೆ ಅನಾರೋಗ್ಯದಿಂದ ಸಿಂಗಪುರ್ ನಲ್ಲಿ ನಿಧನರಾಗಿದ್ದು ಅವರ ಮೃತದೇಹದ ಸಾಗಿಸುವ ಬಗ್ಗೆ ಕಾನೂನು ಪ್ರಕ್ರಿಯೆ ಸೋಮವಾರ ಮಧ್ಯಾಹ್ನ ಮುಗಿಸಿದ್ದು ಸೋಮವಾರ ರಾತ್ರಿ 12 ಗಂಟೆಗೆ ಸಿಂಗಪುರದಿಂದ
ಇಂಡಿಗೋ ವಿಮಾನದಲ್ಲಿ ಮೃತದೇಹ ಹೊರಟು ನಾಳೆ ಮಂಗಳವಾರ ಬೆಳಗ್ಗೆ 6 ಗಂಟೆಗೆ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಅಗಮಿಸಲಿದೆ.
ನಾಳೆ ಮಂಗಳವಾರ ಬೆಳಗ್ಗೆ ವಿಮಾನ ನಿಲ್ದಾಣದ ಕಾನೂನು ಪ್ರಕ್ರಿಯೆ ಮುಗಿಸಿಕೊಂಡ ಬಳಿಕ ಸುಮಾರು 8 ಗಂಟೆಗೆ ಬೆಂಗಳೂರು ವಿಮಾನ ನಿಲ್ದಾಣದಿಂದ ಅಂಬುಲೆನ್ಸ್ ನಲ್ಲಿ ರಸ್ತೆಯ ಮೂಲಕ ಚಾರ್ಮಾಡಿಗೆ ಅಗಮಿಸಿ ಮತ್ತೂರು ದೇವಸ್ಥಾನದ ಪಕ್ಕದ ಅಂಗಣದಿಂದ ಸುಮಾರು 1 ಗಂಟೆಗೆ ರಿಂದ ಮೆರವಣೆಗೆ ಮೂಲಕ ಉಜಿರೆ ಸರ್ಕಲ್ ಗೆ ಅಗಮಿಸಿ ಅಲ್ಲಿಂದ ಎಲ್ಲರೂ ತೆರೆದ ವಾಹನದಲ್ಲಿ ಹಿಂದೆ ನಡೆದುಕೊಂಡು ಹೋಗಿ ಉಜಿರೆ S.D.M ಕಾಲೇಜ್ ಒಳಾಂಗಣದಲ್ಲಿ ಮಧ್ಯಾಹ್ನ‌ ಸುಮಾರು 2 ಗಂಟೆಗೆ ಮೃತದೇಹ ಇಟ್ಟು ಸಾರ್ವಜನಿಕ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು ನಂತರ‌ ಸಂಜೆ ನೀರಚಿಲುಮೆ ಮನೆಯಲ್ಲಿ ಅಂತ್ಯಸಂಸ್ಕಾರ ಕಾರ್ಯ ನೇರವೆರಲಿದೆ.

ಡಾ.ಬಿ.ಯಶೋವರ್ಮವರು ಸಿಂಗಪೂರ್ ದೇಶಕ್ಕೆ ಕಳೆದ ಒಂದುವರೇ ತಿಂಗಳ ಹಿಂದೆ ಚಿಕಿತ್ಸೆಗಾಗಿ ಹೋಗಿದ್ದರು ಆದ್ರೆ ಕಳೆದ 15 ದಿನದಿಂದ ಚಿಕಿತ್ಸೆ ಆರಂಭವಾಗಿತ್ತು ಭಾನುವಾರ ಅನಾರೋಗ್ಯ ಜಾಸ್ತಿಯಾಗಿ ಹದಗೆಟ್ಟಿದ್ದು ಸಿಂಗಪೂರ್ ದೇಶದ 1 ಗಂಟೆಗೆ ಅಂದರೆ ಭಾರತ ದೇಶದ ಸೋಮವಾರ ಬೆಳಗ್ಗಿನ ಜಾವ 4:30 ರ ಸುಮಾರಿಗೆ ನಿಧನಹೊಂದಿದ್ದಾರೆ ಎಂದು ತಿಳಿದು ಬಂದಿದೆ. ಪತ್ನಿ ಮತ್ತು ಇಬ್ಬರು ಗಂಡು ಮಕ್ಕಳು ಚಿಕಿತ್ಸೆ ವೇಳೆ ಡಾ.ಬಿ.ಯಶೋವರ್ಮರ ಜೊತೆಯಲ್ಲಿದ್ದರು.

ಸೋಮವಾರ S.D.M ಶಿಕ್ಷಣ ಸಂಸ್ಥೆಗೆ ರಜೆ ನೀಡಲಾಗಿತ್ತು ನಾಳೆ ಮಂಗಳವಾರ ಕೂಡ ಎಸ್.ಡಿ.ಎಮ್. ಶಿಕ್ಷಣ ಸಂಸ್ಥೆಗಳಿಗೆ ರಜೆ ಘೋಷಿಸಲಾಗಿದೆ. ಇನ್ನೂ ನಾಳೆ 12 ಗಂಟೆಯಿಂದ ಉಜಿರೆ ಅಂಗಡಿ ಮುಂಗಟ್ಟು ಬಂದ್ ಮಾಡಲಾಗುವುದು ಎಂದು ವರ್ತಕರ ಸಂಘದಿಂದ ತಿರ್ಮಾನಿಸಲಾಗಿರುವ ಮಾಹಿತಿ ದೊರೆತಿದೆ.

ಇಂದು ಸಂಜೆ 4 ಗಂಟೆಗೆ ಉಜಿರೆ ಎಸ್.ಡಿ.ಎಮ್ ಕಾಲೇಜಿನಲ್ಲಿ
ಬೆಳ್ತಂಗಡಿ ಶಾಸಕರಾದ ಹರೀಶ್ ಪೂಂಜ ಅವರ ನೇತೃತ್ವದಲ್ಲಿ ಧರ್ಮಸ್ಥಳ ಶಿಕ್ಷಣ ಸಂಸ್ಥೆ ಟ್ರಸ್ಟ್ ಜೊತೆ ವಿವಿಧ ಸಂಘ ಸಂಸ್ಥೆಗಳು ಹಾಗೂ ಉದ್ಯಮಿಗಳ ಸೇರಿ ನಡೆಸಿದ ಅಂತಿಮದರ್ಶನದ ವ್ಯವಸ್ಥೆ ಬಗ್ಗೆ ಸಭೆ ನಡೆಸಲಾಯಿತು.


S.D.M ಶಿಕ್ಷಣ ಸಂಸ್ಥೆ, S.K.R.D.P ಉಜಿರೆ ವರ್ತಕರ ಸಂಘ, ರಿಕ್ಷಾ ಚಾಲಕ‌ರ ಸಂಘ , ಪೊಲೀಸ್ ಇಲಾಖೆ ಹಾಗೂ ಇತರ ಸಂಘ ಸಂಸ್ಥೆಗಳು ಮೆರವಣಿಗೆಗೆ ಹಾಗೂ ಅಂತಿಮ ದರ್ಶನಕ್ಕೆ ಸಹಕಾರ‌‌ ನೀಡಲಿದ್ದಾರೆ ಎಂದು ತಿಳಿದು ಬಂದಿದೆ.

ಓಂಕಾರ ಎಸ್. ವಿ. ತಾಳಗುಪ್ಪ…

#####################################

ಸುದ್ದಿ ಮತ್ತು ಜಾಹೀರಾತು ನೀಡಲು ಸಂಪರ್ಕಿಸಿ:9449553305…

Related Articles

Leave a Comment

Latest news
ಅಂಬು ಗ್ಯಾಂಗಿನ ಹುಡುಗರ ಮಧ್ಯೆ ಕಿತ್ತಾಟ ರಾಮಿನಕೊಪ್ಪದ ಉಮೇಶ ಕುಳ್ಳಿ ಕಿರಣನನ್ನು ಕೊಲೆ ಮಾಡಲು ಕಾರಣವೇನು..? ಶಾಂತಿನಗರದಲ್ಲಿ ಸೌಹಾರ್ದತೆಗೆ ಸಾಕ್ಷಿಯಾದ ಸಂಭ್ರಮದ ಈದ್ ಮೀಲಾದ್...! ಶಿವಮೊಗ್ಗ ಉಪವಿಭಾಗಾಧಿಕಾರಿಯಾಗಿ ಡಾ. ಮೈತ್ರಿ ಹೆಚ್ ಪಿ, ಎಸ್ ಮುಂದುವರಿಕೆ..! ಶಿವಮೊಗ್ಗದಲ್ಲಿ ‘ಅವಿಸ್ಮರಣೀಯ ಪ್ರಕರಣಗಳು’ ಕೃತಿ ಬಿಡುಗಡೆ..! Shivamogga breaking: ಶಿವಮೊಗ್ಗ ಉಪವಿಭಾಗಾಧಿಕಾರಿಯಾಗಿ ಮತ್ತೆ ಜಿ ಹೆಚ್ ಸತ್ಯನಾರಾಯಣ ಮುಂದುವರಿಕೆ...?! ಡಾ. ಮೈತ್ರಿ... Big news : ಜಿಪಿಟಿ ನೇಮಕಾತಿಯಲ್ಲಿ ಇಂಗ್ಲಿಷ್ ಶಿಕ್ಷಕರ ಹುದ್ದೆ ಗಣನೀಯ ಕಡಿತ: ಸರ್ಕಾರದ ವಿರುದ್ಧ ಆಕಾಂಕ್ಷಿಗಳ ತೀವ್ರ ... ಸೇವೆಯೇ ಶಿಕ್ಷಣ ಇಲಾಖೆಯ ಮುಖ್ಯ ಧ್ಯೇಯ ಸಚಿವ ಎಸ್.ಮಧು ಬಂಗಾರಪ್ಪ..! ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR): 98.53% ಡಿಜಿಟಲೀಕರಣ ಪೂರ್ಣ..! Big news :  ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ನಲ್ಲಿ  ಮಹತ್ವದ ಬದಲಾವಣೆ..! ಯಾರಿಗೆ ಯಾವ ಸ್ಥಾನ..?! ಕೋಟೆ ಪೊಲೀಸರ ಖಡಕ್ ಕಾರ್ಯಾಚರಣೆ ವಿದ್ಯಾನಗರದ ಎವರ್ ಗ್ರೀನ್ ಬ್ಯೂಟಿ ಪಾರ್ಲರ್ ಮೇಲೆ ದಾಳಿ  ಒಬ್ಬನ ಬಂಧನ ಇನ್ನೊಬ್ಬಳು ಪ...