Home ಶಿವಮೊಗ್ಗಸೊರಬ ಪೊಲೀಸರ ಮಿಂಚಿನ ಕಾರ್ಯಾಚರಣೆ – ಕದ್ದ ಮಾಲು ಸಮೇತ ಕಳ್ಳನ ಬಂಧನ..!!

ಸೊರಬ ಪೊಲೀಸರ ಮಿಂಚಿನ ಕಾರ್ಯಾಚರಣೆ – ಕದ್ದ ಮಾಲು ಸಮೇತ ಕಳ್ಳನ ಬಂಧನ..!!

by EDITOR NEWS WARRIORS
0 comments

ಸೊರಬ :- ಶಿವಮೊಗ್ಗ ಜಿಲ್ಲೆ ಸೊರಬ ತಾಲ್ಲೂಕು ಪೊಲೀಸ್ ಠಾಣಾ ವ್ಯಾಪ್ತಿಯ ಚಂದ್ರಗುತ್ತಿ ಗ್ರಾಮದಲ್ಲಿ ದಿನಾಂಕ 06-06-2022 ರಂದು ಪಿ. ಡಬ್ಲ್ಯೂ. ಡಿ ವಸತಿ ಗೃಹದ ಮುಂಬಾಗಿಲಿನ ಬೀಗ ಒಡೆದು ಮನೆಯಲ್ಲಿದ್ದ ಚಿನ್ನಾಭರಣ ಮತ್ತು ನಗದು ಕಳ್ಳತನ ಮಾಡಿಕೊಂಡು ಹೋದ ಬಗ್ಗೆ ಸೊರಬ ಪೊಲೀಸ್ ಠಾಣಾ ಗುನ್ನೆ ಸಂಖ್ಯೆ 92/2022 ಕಲಂ 457,380 ಐ. ಪಿ. ಸಿ. ರೀತ್ಯಾ ಪ್ರಕರಣ ದಾಖಲಾಗಿದ್ದು .

ಕಳುವಾದ ಮಾಲು ಮತ್ತು ಆರೋಪಿಗಳನ್ನೂ ಪತ್ತೆ ಮಾಡುವಂತೆ ಶಿವಮೊಗ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಲಕ್ಷ್ಮಿ ಪ್ರಸಾದ್ ರವರ ಮಾರ್ಗದರ್ಶನದಲ್ಲಿ ಶಿವಾನಂದ ಎಸ್. ಮದಗಂಡಿ ಕೆ. ಎಸ್. ಪಿ. ಎಸ್. ಪೊಲೀಸ್ ಉಪಾಧೀಕ್ಷಕರು ಶಿಕಾರಿಪುರ ಉಪ ವಿಭಾಗ ರವರ ಮೇಲುಸ್ತುವಾರಿಯಲ್ಲಿ ಸೊರಬ ವೃತ್ತ ನಿರೀಕ್ಷಕರಾದ ರಾಜಶೇಖರ್ ಮತ್ತು ಸೊರಬ ಠಾಣಾ ದೇವರಾಜ ಪಿ. ಎಸ್. ಐ. ರವರ ನೇತೃತ್ವದಲ್ಲಿ ವಿಶೇಷ ತಂಡ ರಚಿಸಿದ್ದು.

ತಂಡದಲ್ಲಿ ಆನವಟ್ಟಿ ಪಿ. ಎಸ್. ಐ. ರಾಜು ರೆಡ್ಡಿ, ಪ್ರೊಬೆಷನರಿ ಪಿ. ಎಸ್. ಐ. ಕುಮಾರ್, ಸಿಬ್ಬಂದಿಗಳಾದ ಸಿ. ಎಚ್. ಸಿ.- 514 ನಾಗರಾಜ, ಪಿ. ಸಿ.-1212 ನಾಗರಾಜ್, ಸಲ್ಮಾನ್ ಖಾನ್ ಹಾ. ಜಿ ಪಿ. ಸಿ.- 714, ರಾಘವೇಂದ್ರ ಪಿ. ಸಿ. – 1106, ಸಂದೀಪ್ ಪಿ. ಸಿ.1305, ಗೋಪಾಲ ಪಿ. ಸಿ. 751, ಶಿವಾನಂದ ಪಿ. ಸಿ.816, ವಿಶ್ವನಾಥ್ ಪಿ. ಸಿ.1021, ಪಿ. ಸಿ.2105 ಹನುಮಂತಪ್ಪ, ಪಿ. ಸಿ.878 ಉಮೇಶ್, ಎ. ಎಚ್. ಸಿ ಜಗದೀಶ್ ಹಾಗೂ ಬಂಗಾರಪ್ಪ ರವರು ಇದ್ದು.

ದಿನಾಂಕ 18/06/2022 ರಂದು ಈ ಪ್ರಕರಣದ ಆರೋಪಿಯಾದ ಮಂಜುನಾಥ @ ಬಿದರಿ ಮಂಜು ಬಿನ್ ಧರಿಯಪ್ಪ,44 ವಯಸ್ಸು, ಯಮ್ಮಿಗನೂರು ಗ್ರಾಮ ಹಿರೇಕೆರೂರ ತಾಲ್ಲೂಕು, ಹಾವೇರಿ ಜಿಲ್ಲೆ ಈತನನ್ನು ಚಿಕ್ಕೇರೂರು ಗ್ರಾಮದಲ್ಲಿ ವಶಕ್ಕೆ ಪಡೆದುಕೊಂಡು ಸದ್ರಿ ಆರೋಪಿತನಿಂದ ಸೊರಬ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 03 ಮನೆ ಕಳ್ಳತನ ಪ್ರಕರಣಗಳು ಮತ್ತು ಆನವಟ್ಟಿ ಠಾಣಾ ವ್ಯಾಪ್ತಿಯಲ್ಲಿ 02 ಮನೆ ಕಳ್ಳತನ ಪ್ರಕರಣಗಳು ಒಟ್ಟು 05 ಪ್ರಕರಣಗಳು ಪತ್ತೆಯಾಗಿದ್ದು. ಸದರಿ ಪ್ರಕರಣಗಳಿಂದ 182 ಗ್ರಾಂ ಚಿನ್ನಾಭರಣಗಳು ಮತ್ತು 01 ಕೆಜಿ ಬೆಳ್ಳಿ ಆಭರಣಗಳು ಪತ್ತೆಯಾಗಿರುತ್ತದೆ. ಇವುಗಳ ಒಟ್ಟು ಮೌಲ್ಯ 9,80,000 ರೂ ಗಳಾಗಿರುತ್ತದೆ. ಆರೋಪಿತನನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿ ನ್ಯಾಯಾಂಗ ಬಂದನಕ್ಕೆ ನೀಡಲಾಗಿರುತ್ತದೆ. ಕಳ್ಳನನ್ನು ಹೆಡೆಮುರಿ ಕಟ್ಟುವ ಕಾರ್ಯಾಚರಣೆಯಲ್ಲಿ ಭಾಗವಹಿಸಿದ ಎಲ್ಲ ಸಿಬ್ಬಂದಿಗಳಿಗೂ ಶಿವಮೊಗ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

ಓಂಕಾರ ಎಸ್. ವಿ. ತಾಳಗುಪ್ಪ…

#####################################

ರಘುರಾಜ್ ಹೆಚ್.ಕೆ…9449553305…..

Related Articles

Leave a Comment

Latest news
ಅಂಬು ಗ್ಯಾಂಗಿನ ಹುಡುಗರ ಮಧ್ಯೆ ಕಿತ್ತಾಟ ರಾಮಿನಕೊಪ್ಪದ ಉಮೇಶ ಕುಳ್ಳಿ ಕಿರಣನನ್ನು ಕೊಲೆ ಮಾಡಲು ಕಾರಣವೇನು..? ಶಾಂತಿನಗರದಲ್ಲಿ ಸೌಹಾರ್ದತೆಗೆ ಸಾಕ್ಷಿಯಾದ ಸಂಭ್ರಮದ ಈದ್ ಮೀಲಾದ್...! ಶಿವಮೊಗ್ಗ ಉಪವಿಭಾಗಾಧಿಕಾರಿಯಾಗಿ ಡಾ. ಮೈತ್ರಿ ಹೆಚ್ ಪಿ, ಎಸ್ ಮುಂದುವರಿಕೆ..! ಶಿವಮೊಗ್ಗದಲ್ಲಿ ‘ಅವಿಸ್ಮರಣೀಯ ಪ್ರಕರಣಗಳು’ ಕೃತಿ ಬಿಡುಗಡೆ..! Shivamogga breaking: ಶಿವಮೊಗ್ಗ ಉಪವಿಭಾಗಾಧಿಕಾರಿಯಾಗಿ ಮತ್ತೆ ಜಿ ಹೆಚ್ ಸತ್ಯನಾರಾಯಣ ಮುಂದುವರಿಕೆ...?! ಡಾ. ಮೈತ್ರಿ... Big news : ಜಿಪಿಟಿ ನೇಮಕಾತಿಯಲ್ಲಿ ಇಂಗ್ಲಿಷ್ ಶಿಕ್ಷಕರ ಹುದ್ದೆ ಗಣನೀಯ ಕಡಿತ: ಸರ್ಕಾರದ ವಿರುದ್ಧ ಆಕಾಂಕ್ಷಿಗಳ ತೀವ್ರ ... ಸೇವೆಯೇ ಶಿಕ್ಷಣ ಇಲಾಖೆಯ ಮುಖ್ಯ ಧ್ಯೇಯ ಸಚಿವ ಎಸ್.ಮಧು ಬಂಗಾರಪ್ಪ..! ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR): 98.53% ಡಿಜಿಟಲೀಕರಣ ಪೂರ್ಣ..! Big news :  ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ನಲ್ಲಿ  ಮಹತ್ವದ ಬದಲಾವಣೆ..! ಯಾರಿಗೆ ಯಾವ ಸ್ಥಾನ..?! ಕೋಟೆ ಪೊಲೀಸರ ಖಡಕ್ ಕಾರ್ಯಾಚರಣೆ ವಿದ್ಯಾನಗರದ ಎವರ್ ಗ್ರೀನ್ ಬ್ಯೂಟಿ ಪಾರ್ಲರ್ ಮೇಲೆ ದಾಳಿ  ಒಬ್ಬನ ಬಂಧನ ಇನ್ನೊಬ್ಬಳು ಪ...