Home ರಾಜ್ಯ“””ವರದಿಯ ಫಲಶ್ರುತಿ””” ಪ್ರಧಾನಿ ಮೋದಿ ಭೇಟಿ ಹಿನ್ನೆಲೆ ರಸ್ತೆ ಕಾಮಗಾರಿಯಲ್ಲಿ ಗೋಲ್ಮಾಲ್..! ತೇಪೆ ಹಚ್ಚಲು ಮುಂದಾದ ಇಂಜಿನಿಯರ್ ಗಳು ಬಿಬಿಎಂಪಿ ಯಿಂದ ಇಂಜಿನಿಯರಿಗಳಿಗೆ ನೋಟಿಸ್ ಜಾರಿ ‌‌‌‌..!!

“””ವರದಿಯ ಫಲಶ್ರುತಿ””” ಪ್ರಧಾನಿ ಮೋದಿ ಭೇಟಿ ಹಿನ್ನೆಲೆ ರಸ್ತೆ ಕಾಮಗಾರಿಯಲ್ಲಿ ಗೋಲ್ಮಾಲ್..! ತೇಪೆ ಹಚ್ಚಲು ಮುಂದಾದ ಇಂಜಿನಿಯರ್ ಗಳು ಬಿಬಿಎಂಪಿ ಯಿಂದ ಇಂಜಿನಿಯರಿಗಳಿಗೆ ನೋಟಿಸ್ ಜಾರಿ ‌‌‌‌..!!

by EDITOR NEWS WARRIORS
0 comments
!!!!!!!!!!!!!!!!!!

….ಪ್ರಧಾನಿ ಮೋದಿ ಭೇಟಿ ಮರುದಿನವೇ ಹಾಳಾದ ರಸ್ತೆ…

ಬೆಂಗಳೂರು: ಮೊನ್ನೆ ಅಂದರೆ ದಿನಾಂಕ 21/ 22 ರಂದು ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಎರಡು ದಿನಗಳ ಮೈಸೂರು-ಬೆಂಗಳೂರು ಪ್ರವಾಸವನ್ನು ಕೈಗೊಂಡಿದ್ದರು. ಈ ಸಮಯದಲ್ಲಿ ಪ್ರಧಾನಿ ಮೋದಿ ಬರುತ್ತಾರೆ ಎನ್ನುವ ಆತುರದಲ್ಲಿ ಸುಮಾರು 23 ಕೋಟಿಯ ವೆಚ್ಚದಲ್ಲಿ ಬೆಂಗಳೂರಿನಲ್ಲಿ ರಸ್ತೆ ಕಾಮಗಾರಿ ಹಮ್ಮಿಕೊಂಡಿದ್ದು. ಆ ಕಾಮಗಾರಿಯನ್ನು ಕಳಪೆ ಕಾಮಗಾರಿ ಮಾಡಿ ಕೇವಲ 6 ಕೋಟಿ ವೆಚ್ಚದಲ್ಲಿ ಕಾಮಗಾರಿಯನ್ನು ಪೂರ್ಣಗೊಳಿಸಿ ಉಳಿದ 17 ಕೋಟಿಯನ್ನು ಇಂಜಿನಿಯರ್ ಗಳು ಲೂಟಿ ಹೊಡೆದಿದ್ದರು. ಇದರ ಬಗ್ಗೆ ಪತ್ರಿಕೆ ಚಿತ್ರ ಸಮೇತ ವರದಿ ಮಾಡಿತ್ತು. ಹಾಗೆ ಸಂಬಂಧಪಟ್ಟ ಅಧಿಕಾರಿಗಳ, ಸಚಿವರ ,ಮುಖ್ಯಮಂತ್ರಿಗಳ ,ಗಮನಕ್ಕೂ ತರಲಾಗಿತ್ತು.

ವರದಿಯ ನಂತರ ಎಚ್ಚೆತ್ತ ಇಂಜಿನಿಯರ್ ಗಳಿಂದ ರಸ್ತೆಗೆ ತೇಪೆ ಹಚ್ಚುವ ಕೆಲಸ:

ಪತ್ರಿಕಾ ವರದಿ ಚಿತ್ರಸಮೇತ ಬಂದ ನಂತರ ಎಚ್ಚೆತ್ತುಕೊಂಡ ಇಂಜಿನಿಯರ್ ಗಳು ಗುಂಡಿ ಬಿದ್ದ ರಸ್ತೆಗೆ ತೇಪೆ ಹಚ್ಚುವ ಕೆಲಸವನ್ನು ಮಾಡಿದ್ದಾರೆ.

ಗುಂಡಿಬಿದ್ದ ರಸ್ತೆಗೆ ತೇಪೆ ಹಚ್ಚಿದ ಇಂಜಿನಿಯರ್ ಗಳು ಅದರ ಚಿತ್ರ ಈ ಕೆಳಗಿನಂತಿದೆ:::

ವರದಿಯನ್ನು ಗಂಭೀರವಾಗಿ ಪರಿಗಣಿಸಿದ ಬಿಬಿಎಂಪಿ:

ಪತ್ರಿಕಾ ವರದಿಯನ್ನು ಗಂಭೀರವಾಗಿ ಪರಿಗಣಿಸಿದ ಬಿಬಿಎಂಪಿ ಕಳಪೆ ಕಾಮಗಾರಿಯನ್ನು ಮಾಡಿದ ಇಂಜಿನಿಯರ್ ಗಳಾದ ಆರ್​​.ಆರ್​​​.ನಗರ ಎಕ್ಸಿಕ್ಯೂಟಿವ್​ ಎಂಜಿನಿಯರ್​ ಎಂ.ಟಿ.ಬಾಲಾಜಿ, ಆರ್​​​.ಆರ್​​​.ನಗರದ ಅಸಿಸ್ಟೆಂಟ್ ಎಕ್ಸಿಕ್ಯೂಟಿವ್​ ಎಂಜಿನಿಯರ್​​ ಹೆಚ್​.ಜೆ.ರವಿ, ಆರ್​​.ಆರ್​​​.ನಗರ ಅಸಿಸ್ಟೆಂಟ್​ ಎಂಜಿನಿಯರ್​​ ಐ.ಕೆ.ವಿಶ್ವಾಸ್​ಗೆ ನೋಟಿಸ್​ ನೀಡಿದೆ.


ಮರಿಯಪ್ಪನ ಪಾಳ್ಯದ ಮುಖ್ಯರಸ್ತೆಯಲ್ಲಿ ರಿಪೇರಿ ಮಾಡಲಾಗಿತ್ತು. ಪ್ರಧಾನಿ ಬಂದು ಹೋದ ಮಾರನೇ ದಿನವೇ ರಸ್ತೆ ಕುಸಿದಿದ್ದು, ಈ ಹಿನ್ನೆಲೆ BBMP ರೋಡ್​ ಇನ್​ಫ್ರಾಸ್ಟ್ರಕ್ಚರ್​​​​ ಚೀಫ್​​ ಎಂಜಿನಿಯರ್​ರಿಂದ ಶೋಕಾಸ್ ನೋಟಿಸ್​ ನೀಡಲಾಗಿದೆ.

ಒಟ್ಟಿನಲ್ಲಿ ಪ್ರಧಾನಿ ಮೋದಿ ಬರುವಿಕೆ ಹಿನ್ನೆಲೆಯಲ್ಲಿ ಮೈಸೂರು ಮತ್ತು ಬೆಂಗಳೂರಿನಲ್ಲಿ ಆತುರದಲ್ಲಿ ರಸ್ತೆ ಕಳಪೆ ಕಾಮಗಾರಿಯಿಂದ ಮಾಡಿದ್ದು . ಕೋಟ್ಯಾಂತರ ಹಣವನ್ನು ಲೂಟಿ ಮಾಡಿದ್ದಾರೆ. ಇಂಥವರ ವಿರುದ್ಧ ಬರೀ ನೋಟಿಸ್ ನೀಡಿದರೆ ಸಾಲದು ಕಠಿಣ ಕ್ರಮವನ್ನು ತೆಗೆದುಕೊಳ್ಳಬೇಕು. ಆ ಮೂಲಕ ಇತರರಿಗೂ ಇದು ಎಚ್ಚರಿಕೆಯ ಗಂಟೆಯಾಗಬೇಕು. ಎನ್ನುವುದು ಪತ್ರಿಕೆಯ ಆಶಯ…

ರಘುರಾಜ್ ಹೆಚ್.ಕೆ…9449553305….

Related Articles

Leave a Comment

Latest news
ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR): 98.53% ಡಿಜಿಟಲೀಕರಣ ಪೂರ್ಣ..! Big news :  ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ನಲ್ಲಿ  ಮಹತ್ವದ ಬದಲಾವಣೆ..! ಯಾರಿಗೆ ಯಾವ ಸ್ಥಾನ..?! ಕೋಟೆ ಪೊಲೀಸರ ಖಡಕ್ ಕಾರ್ಯಾಚರಣೆ ವಿದ್ಯಾನಗರದ ಎವರ್ ಗ್ರೀನ್ ಬ್ಯೂಟಿ ಪಾರ್ಲರ್ ಮೇಲೆ ದಾಳಿ  ಒಬ್ಬನ ಬಂಧನ ಇನ್ನೊಬ್ಬಳು ಪ... Big news : ಗಣಿ ಮತ್ತು ಭೂವಿಜ್ಞಾನ ಇಲಾಖೆಯಲ್ಲಿ ಬೃಹತ್ ಶಸ್ತ್ರಚಿಕಿತ್ಸೆ: 22 ಹಿರಿಯ ಭೂವಿಜ್ಞಾನಿಗಳ ವರ್ಗಾವಣೆ..! ದ... ಜಿಲ್ಲೆಯಲ್ಲಿ ಭಾರತ್ ಜೋಡೋ ಯುವಕ ಸಂಘಗಳ ಸ್ಥಾಪನೆಗೆ ಕ್ರಮ : ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ..! ಬರ ಪರಿಸ್ಥಿತಿ ನಿರ್ವಹಣೆ: ತಂಡವಾಗಿ ಕರ್ತವ್ಯ ನಿರ್ವಹಿಸೋಣ – ಜಿಲ್ಲಾಧಿಕಾರಿಗಳ ಕರೆ..! ಸಾಗುವಾನಿ ಮರಗಳ ಕಡಿತಲೆ ಕರಕುಚ್ಚಿಯ ಕೃಷ್ಣಮೂರ್ತಿ ಬಂಧನ..! Shivamogga breaking : ಬ್ಯೂಟಿ ಸ್ಪಾ ಅಡ್ಡೆ ಮೇಲೆ ತುಂಗಾನಗರ ಪೊಲೀಸರ ರೈಡ್..! ಉಳಿದ ಸ್ಪಾಗಳ ಕಥೆ ಏನು..?! Shivamogga breaking : ನಕಲಿ ಬಂಗಾರದ ಜಾಲ ಬೆನ್ನತ್ತಿದ ಪೊಲೀಸರು ತೀರ್ಥಹಳ್ಳಿ ಮೂಲದ ಒಬ್ಬ ಅರೆಸ್ಟ್..?! ಇದರಲ್ಲಿ ಶಿ...