Home ಶಿವಮೊಗ್ಗನಿನ್ನೆಯ ಸಾಗರ ಉಪವಿಭಾಗ ಆಸ್ಪತ್ರೆಯ ಇಂಜೆಕ್ಷನ್ ರಿಯಾಕ್ಷನ್ ಆದ ಕಥೆ..! ಶಿವಮೊಗ್ಗ ಜಿಲ್ಲೆಯ ಯಾವುದೇ ಸರ್ಕಾರಿ ತಾಲ್ಲೂಕು ಆಸ್ಪತ್ರೆಯಲ್ಲಿ ಆಗದ ಇಂಜೆಕ್ಷನ್ ರಿಯಾಕ್ಷನ್ ಪದೇ ಪದೇ ಸಾಗರ ಉಪ ವಿಭಾಗೀಯ ಆಸ್ಪತ್ರೆಯಲ್ಲಿ ಆಗುತ್ತಿರುವುದಕ್ಕೆ ಕಾರಣವೇನು ಗೊತ್ತಾ..?ಕೆಲ ವೈದ್ಯರ ಮರ್ಮ – ರೋಗಿಗಳ ಕರ್ಮ..!!

ನಿನ್ನೆಯ ಸಾಗರ ಉಪವಿಭಾಗ ಆಸ್ಪತ್ರೆಯ ಇಂಜೆಕ್ಷನ್ ರಿಯಾಕ್ಷನ್ ಆದ ಕಥೆ..! ಶಿವಮೊಗ್ಗ ಜಿಲ್ಲೆಯ ಯಾವುದೇ ಸರ್ಕಾರಿ ತಾಲ್ಲೂಕು ಆಸ್ಪತ್ರೆಯಲ್ಲಿ ಆಗದ ಇಂಜೆಕ್ಷನ್ ರಿಯಾಕ್ಷನ್ ಪದೇ ಪದೇ ಸಾಗರ ಉಪ ವಿಭಾಗೀಯ ಆಸ್ಪತ್ರೆಯಲ್ಲಿ ಆಗುತ್ತಿರುವುದಕ್ಕೆ ಕಾರಣವೇನು ಗೊತ್ತಾ..?ಕೆಲ ವೈದ್ಯರ ಮರ್ಮ – ರೋಗಿಗಳ ಕರ್ಮ..!!

by EDITOR NEWS WARRIORS
0 comments

ಸಾಗರ:- ಶಿವಮೊಗ್ಗ ಜಿಲ್ಲೆಯಲ್ಲಿರುವ ಸರ್ಕಾರಿ ತಾಲ್ಲೂಕು ಆಸ್ಪತ್ರೆಯಲ್ಲಿ ಎಲ್ಲೂ ಆಗದ ಇಂಜೆಕ್ಷನ್ ರಿಯಾಕ್ಷನ್ ಸಾಗರದ ಉಪ ವಿಭಾಗೀಯ ಆಸ್ಪತ್ರೆಯಲ್ಲಿ ಪ್ರತಿ ಎರಡು ತಿಂಗಳಿಗೊಮ್ಮೆ ಆಗುತ್ತಿರುವ ಹಿಂದೇ ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರು ಹಾಗೂ ಸಾಗರೀಕರು ಸಾಗರ ತಾಲ್ಲೂಕು ಉಪ ವಿಭಾಗೀಯ ಆಸ್ಪತ್ರೆ ಆಡಳಿತದಲ್ಲೇಲ್ಲೋ ಲೋಪ ಕಂಡುಬರುತ್ತಿದೆ ಎಂಬ ಅನುಮಾನ ವ್ಯಕ್ತಪಡಿಸುತ್ತಿದ್ದಾರೆ.

ಕೆಲ ವೈದ್ಯರ ಮರ್ಮ – ರೋಗಿಗಳ ಕರ್ಮ:

ಸಾಗರ ಉಪ ವಿಭಾಗೀಯ ಆಸ್ಪತ್ರೆಯಲ್ಲಿ ಕರ್ತವ್ಯ ನಿರತ ಒಟ್ಟು ವೈದ್ಯರ ಪೈಕಿ ಶೇಕಡಾ 98% ವೈದ್ಯರುಗಳು ಕರ್ತವ್ಯ ಸಮಯದಲ್ಲೇ ಖಾಸಗಿ ಕ್ಲಿನಿಕ್ ನಲ್ಲೇ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದೂ, ಲಕ್ಷಕ್ಕೂ ಮೀರಿ ಸಾರ್ವಜನಿಕ ತೆರಿಗೆ ಹಣದಿಂದ ಸಂಬಳ ಪಡೆಯುತ್ತಿರುವ ಇಂತಹ ವೈದ್ಯರಿಗೆ ಈ ರೀತಿ ಬಡ ರೋಗಿಗಳಿಗೆ ಮಾಡುತ್ತಿರುವ ಮೋಸವಲ್ಲವೇ ಅವರ ಆತ್ಮವು ಕ್ಷಮಿಸಬಲ್ಲದೇ…….?!

ಜನಪ್ರಿಯ ಶಾಸಕರಾದ ಹರತಾಳು ಹಾಲಪ್ಪ ರವರೇ , ತಮ್ಮ ಕ್ಷೇತ್ರದ ಉಪ ವಿಭಾಗೀಯ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಹೆಚ್ಚಿನ ವೈದ್ಯರುಗಳು ಖಾಸಗಿ ಕ್ಲಿನಿಕ್ ನಲ್ಲಿ ಕರ್ತವ್ಯ ಸಮಯದಲ್ಲಿ ಚಿಕಿತ್ಸೆ ನೀಡುತ್ತಿರುವುದು, ಬಡ ರೋಗಿಗಳು ಉಪ ವಿಭಾಗೀಯ ಆಸ್ಪತ್ರೆಯಲ್ಲಿರುವ ಆಯಾಆಯಾ ವೈದ್ಯರ ಕೊಠಡಿ ಮುಂದೇ ಕಾಯುತ್ತಾ ದಿನಗಟ್ಟಲೇ ಕುಳಿತಿರುವುದು ತಮ್ಮ ಗಮನಕ್ಕೆ ಬಂದಿಲ್ಲವೇ …….?!

ಕಣ್ಣಿದ್ದೂ ಕುರುಡರಾದ ಉಪ ವಿಭಾಗೀಯ ಅಧಿಕಾರಿಗಳು ಹಾಗೂ ಶಿವಮೊಗ್ಗ ಜಿಲ್ಲಾ ಆರೋಗ್ಯ ಅಧಿಕಾರಿಗಳು….

ಇನ್ನೂ ಮುಂದಾದರೂ ಆಡಳಿತ ರೂಢರೂ, ಸಾಗರ ಉಪ ವಿಭಾಗೀಯ ಆಸ್ಪತ್ರೆಯ ಅರೋಗ್ಯ ರಕ್ಷಾ ಸಮಿತಿಯವರು ಸಾಗರ ಉಪ ವಿಭಾಗೀಯ ಆಸ್ಪತ್ರೆಯ ಕೆಲ ವೈದ್ಯರುಗಳು ಕರ್ತವ್ಯ ಸಮಯದಲ್ಲಿ ಸರ್ಕಾರಿ ಆಸ್ಪತ್ರೆಗೆ ಕೈಕೊಟ್ಟು ಖಾಸಗಿ ಆಸ್ಪತ್ರೆ ನೆಡೆಸುತ್ತಿರುವ ” ವೈದ್ಯೋ ನಾರಾಯಣ ಹರಿಃ ” ಎಂಬ ಧ್ಯೇಯ ವಾಕ್ಯಕ್ಕೆ ಚ್ಯುತಿಯನ್ನು0ಟು ಮಾಡುತ್ತಿರುವ ವೈದ್ಯರಿಗೆ ತಕ್ಕ ಪಾಠ ಕಲಿಸುತ್ತಾರೋ….?! ಸಾಮಾಜಿಕ ನ್ಯಾಯದಡಿ ವೈದ್ಯರು ಬಡ ರೋಗಿಗಳಿಗೆ ಸರ್ಕಾರಿ ಉಪ ವಿಭಾಗೀಯ ಆಸ್ಪತ್ರೆಯಲ್ಲಿ ಕರ್ತವ್ಯ ಸಮಯದಲ್ಲಾದರೂ ಸೂಕ್ತ ಚಿಕಿತ್ಸೆಗೆ ಅನುವು ಮಾಡಿಕೊಡುತ್ತಾರೋ…….?! ಕಾದು ನೋಡೋಣ .

ಓಂಕಾರ ಎಸ್. ವಿ. ತಾಳಗುಪ್ಪ….

#####################################

ರಘುರಾಜ್ ಹೆಚ್.ಕೆ…9449553305….

Related Articles

Leave a Comment

Latest news
ಸೇವೆಯೇ ಶಿಕ್ಷಣ ಇಲಾಖೆಯ ಮುಖ್ಯ ಧ್ಯೇಯ ಸಚಿವ ಎಸ್.ಮಧು ಬಂಗಾರಪ್ಪ..! ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR): 98.53% ಡಿಜಿಟಲೀಕರಣ ಪೂರ್ಣ..! Big news :  ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ನಲ್ಲಿ  ಮಹತ್ವದ ಬದಲಾವಣೆ..! ಯಾರಿಗೆ ಯಾವ ಸ್ಥಾನ..?! ಕೋಟೆ ಪೊಲೀಸರ ಖಡಕ್ ಕಾರ್ಯಾಚರಣೆ ವಿದ್ಯಾನಗರದ ಎವರ್ ಗ್ರೀನ್ ಬ್ಯೂಟಿ ಪಾರ್ಲರ್ ಮೇಲೆ ದಾಳಿ  ಒಬ್ಬನ ಬಂಧನ ಇನ್ನೊಬ್ಬಳು ಪ... Big news : ಗಣಿ ಮತ್ತು ಭೂವಿಜ್ಞಾನ ಇಲಾಖೆಯಲ್ಲಿ ಬೃಹತ್ ಶಸ್ತ್ರಚಿಕಿತ್ಸೆ: 22 ಹಿರಿಯ ಭೂವಿಜ್ಞಾನಿಗಳ ವರ್ಗಾವಣೆ..! ದ... ಜಿಲ್ಲೆಯಲ್ಲಿ ಭಾರತ್ ಜೋಡೋ ಯುವಕ ಸಂಘಗಳ ಸ್ಥಾಪನೆಗೆ ಕ್ರಮ : ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ..! ಬರ ಪರಿಸ್ಥಿತಿ ನಿರ್ವಹಣೆ: ತಂಡವಾಗಿ ಕರ್ತವ್ಯ ನಿರ್ವಹಿಸೋಣ – ಜಿಲ್ಲಾಧಿಕಾರಿಗಳ ಕರೆ..! ಸಾಗುವಾನಿ ಮರಗಳ ಕಡಿತಲೆ ಕರಕುಚ್ಚಿಯ ಕೃಷ್ಣಮೂರ್ತಿ ಬಂಧನ..! Shivamogga breaking : ಬ್ಯೂಟಿ ಸ್ಪಾ ಅಡ್ಡೆ ಮೇಲೆ ತುಂಗಾನಗರ ಪೊಲೀಸರ ರೈಡ್..! ಉಳಿದ ಸ್ಪಾಗಳ ಕಥೆ ಏನು..?! Shivamogga breaking : ನಕಲಿ ಬಂಗಾರದ ಜಾಲ ಬೆನ್ನತ್ತಿದ ಪೊಲೀಸರು ತೀರ್ಥಹಳ್ಳಿ ಮೂಲದ ಒಬ್ಬ ಅರೆಸ್ಟ್..?! ಇದರಲ್ಲಿ ಶಿ...