Home ರಾಜ್ಯಬೇನಾಮಿ ಆಸ್ತಿಗಾಗಿ ನಡೀತಾ ಸರಳ ವಾಸ್ತು ಗುರೂಜಿ ಚಂದ್ರಶೇಖರ್ ಭೀಕರ ಹತ್ಯೆ..? ಕೊಲೆ ನಡೆದ ನಾಲ್ಕು ಗಂಟೆ ಒಳಗೆ ಆರೋಪಿಗಳನ್ನು ಬಂಧಿಸಿದ ಹುಬ್ಬಳ್ಳಿ ಪೊಲೀಸರು..! ಕೊಲೆಯ ಹಿಂದೆ ಯಾರಿದ್ದಾರೆ ಗೊತ್ತಾ..?

ಬೇನಾಮಿ ಆಸ್ತಿಗಾಗಿ ನಡೀತಾ ಸರಳ ವಾಸ್ತು ಗುರೂಜಿ ಚಂದ್ರಶೇಖರ್ ಭೀಕರ ಹತ್ಯೆ..? ಕೊಲೆ ನಡೆದ ನಾಲ್ಕು ಗಂಟೆ ಒಳಗೆ ಆರೋಪಿಗಳನ್ನು ಬಂಧಿಸಿದ ಹುಬ್ಬಳ್ಳಿ ಪೊಲೀಸರು..! ಕೊಲೆಯ ಹಿಂದೆ ಯಾರಿದ್ದಾರೆ ಗೊತ್ತಾ..?

by EDITOR NEWS WARRIORS
0 comments

ಹುಬ್ಬಳ್ಳಿ: ಇಂದು ನಗರದ ಖಾಸಗಿ ಹೋಟೆಲ್ ಬಳಿಯಲ್ಲಿ 40ಕ್ಕೂ ಹೆಚ್ಚು ಬಾರಿ ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಂತ ಹಂತಕರನ್ನು ಕೊಲೆ ಮಾಡಿ ನಾಲ್ಕು ಗಂಟೆಯ ಒಳಗೆ ಹುಬ್ಬಳ್ಳಿ ಪೊಲೀಸರು ಬಂಧಿಸಿದ್ದಾರೆ.


ಈ ಸಂಬಂಧ ಇಬ್ಬರು ಆರೋಪಿಗಳನ್ನು ಹುಬ್ಬಳ್ಳಿಯ ವಿದ್ಯಾನಗರ ಠಾಣೆಯ ಪೊಲೀಸರು ಬಂಧಿಸಿದ್ದಾರೆ .ಅಲ್ಲದೇ ಅವರನ್ನು ಹುಬ್ಬಳ್ಳಿ ಧಾರವಾಡ ಪೊಲೀಸರು ವಶಕ್ಕೆ ಪಡೆದಿರೋದಾಗಿ ತಿಳಿದು ಬಂದಿದೆ. ಬಂಧಿತರ ಬಗ್ಗೆ ಪೊಲೀಸರು ಖಚಿತ ಮಾಹಿತಿಯನ್ನು ನೀಡಬೇಕಿದೆ. ಆ ಬಗ್ಗೆ ಮತ್ತಷ್ಟು ಮಾಹಿತಿಯನ್ನು ಇನ್ನಷ್ಟೇ ಬರಬೇಕಾಗಿದೆ.


ಸರಳವಾಸ್ತು ಚಂದ್ರಶೇಖರ್ ಗುರೂಜಿ ಕೊಲೆ ಪ್ರಕರಣಕ್ಕೆ ಟ್ವಿಸ್ಟ್ ಮೇಲೆ ಟ್ವಿಸ್ಟ್: ಆಕೆಯ ಹೆಸರಿನಲ್ಲಿದ್ದ ಬೇನಾಮಿ ಆಸ್ತಿಯೇ ಹತ್ಯೆಯ ಶಂಕೆ.!

ಹುಬ್ಬಳ್ಳಿ: ಸರಳವಾಸ್ತು ಕಾರ್ಯಕ್ರಮದ ಮೂಲಕ ರಾಜ್ಯದ ಜನರ ಮನೆ ಮನೆ ಮಾತಾಗಿದ್ದಂತ ಚಂದ್ರಶೇಖರ್ ಗುರೂಜಿಯನ್ನು ಇಂದು ಹುಬ್ಬಳ್ಳಿಯಲ್ಲಿ ಭೀಕರವಾಗಿ ಚಾಕುವಿನಿಂದ ಇರಿದು ಇಬ್ಬರು ಆರೋಪಿಗಳು ಹತ್ಯೆಗೈದಿದ್ದಾರೆ. ಈ ಪ್ರಕರಣಕ್ಕೆ ಟ್ವಿಸ್ಟ್ ಮೇಲೆ ಟ್ವಿಸ್ಟ್ ಸಿಗುತ್ತಿದ್ದು, ಕೊಲೆಯ ಹಿಂದೆ ಬೇನಾಮಿ ಆಸ್ತಿಯೇ ಕಾರಣ ಎನ್ನಲಾಗುತ್ತಿದೆ. ಅದರಲ್ಲೂ ಆಕೆಯೊಬ್ಬಳ ಹೆಸರಿನಲ್ಲಿ ಸಂಪಾದಿಸಿದ್ದಂತ ಆಸ್ತಿಯ ಮೂಲಕ ಹುಟ್ಟಿಕೊಂಡ ಜಗಳವೇ ಕಾರಣ ಎನ್ನಲಾಗುತ್ತಿದೆ.

ಹುಬ್ಬಳ್ಳಿಯ ಪ್ರೆಸಿಡೆಂಟ್ ಹೋಟೆಲ್ ನಲ್ಲಿ ಹತ್ಯೆಗೀಡಾದಂತ ಸರಳವಾಸ್ತು ಖ್ಯಾತಿಯ ಚಂದ್ರಶೇಖರ್ ಗುರೂಜಿ ಅವರು, ಹುಬ್ಬಳ್ಳಿಯ ಆಪ್ತನಾಗಿದ್ದಂತ ಮಹಾಂತೇಶ್ ಶಿರೋಳ್ ಎಂಬಾತನ ಪತ್ನಿ ವನಜಾಕ್ಷಿಯ ಹೆಸರಿನಲ್ಲಿ ಬೇನಾಮಿ ಆಸ್ತಿ ಮಾಡಿದ್ದರು ಎನ್ನಲಾಗಿದೆ. ಹುಬ್ಬಳ್ಳಿಯ ಗೋಕುಲ ರಸ್ತೆಯ ಬಳಿಯಲ್ಲಿರುವಂತ ಅಪಾರ್ಮೆಂಟ್ ಸಹ ಆಕೆಯ ಹೆಸರಿಗೆ ನೋಂದಣಿ ಮಾಡಿಸಿದ್ದರು ಎನ್ನಲಾಗಿದೆ.


ಇದಷ್ಟೇ ಅಲ್ಲದೇ ಹಲವು ಆಸ್ತಿ ನೋಂದಣಿ, ಹಣಕಾಸಿನ ವ್ಯವಹಾರವನ್ನು ತನ್ನ ಆಪ್ತ ಮಹಾಂತೇಶ್ ಪತ್ನಿ ವನಜಾಕ್ಷಿ ಹೆಸರಿನಲ್ಲಿ ಮಾಡಿದ್ದರು ಎನ್ನಲಾಗಿದೆ. ಇದೇ ಸಂಬಂಧ ಗಲಾಟೆ ನಡೆದಾಗ 2019ರಲ್ಲಿ ಸರಳವಾಸ್ತು ಸಂಸ್ಥೆಯ ಉದ್ಯೋಗಿಯಾಗಿದ್ದಂತ ವನಜಾಕ್ಷಿಯನ್ನು ಕೆಲಸ ಬಿಡಿಸಿದ್ದರು ಎನ್ನಲಾಗಿದ್ದು. ಈ ಬಳಿಕ ತಾನು ಮಾಡಿಸಿಕೊಟ್ಟಿದ್ದಂತ ಆಸ್ತಿಯನ್ನು ವಾಪಾಸ್ ಕೊಡುವಂತೆ ಕೇಳಿದಾಗ ಚಂದ್ರಶೇಖರ್ ಗೂರೂಜಿ ಹಾಗೂ ವನಜಾಕ್ಷಿ, ಆಕೆಯ ಪತಿ ಮಹಾಂತೇಶ್ ನಡುವೆ ಗಲಾಟೆ ಆಗಿತ್ತು ಎನ್ನಲಾಗುತ್ತಿದೆ.

ಈ ಹಿನ್ನಲೆಯಲ್ಲಿಯೇ ಇಂದು ಚಂದ್ರಶೇಖರ್ ಗುರೂಜಿಯನ್ನು ಆಪ್ತ ಮಹಾಂತೇಶ್ ಹಾಗೂ ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ದುಮ್ಮವಾಡದ ಮಂಜುನಾಥ್ ಎಂಬುವರು ಸೇರಿ ಕೊಲೆ ಮಾಡಿದ್ದಾರೆ ಎಂದು ಶಂಕಿಸಲಾಗಿದೆ. ಅಲ್ಲದೇ ಚಂದ್ರಶೇಖರ್ ಗುರೂಜಿ ಕೊಲೆ ನಂತರ ಮಹಾಂತೇಶ್ ನಾಪತ್ತೆಯಾಗಿರೋದು ಇದಕ್ಕೆ ಪುಷ್ಟಿಯನ್ನು ನೀಡುವಂತಿದೆ. ಈ ಎಲ್ಲಾ ನಿಟ್ಟಿನಲ್ಲಿಯೂ ಇದೀಗ ಐವರು ಎಸಿಪಿಗಳ ನೇತೃತ್ವದ ಪೊಲೀಸರ ತಂಡ ತನಿಖೆಗೆ ಇಳಿದಿದ್ದು ಪ್ರಕರಣ ಹಲವು ತಿರುವುಗಳನ್ನು ಪಡೆದುಕೊಳ್ಳುತ್ತಿದ್ದು.

ಮುಖ್ಯವಾಗಿ ಬೇನಾಮಿ ಆಸ್ತಿ ಈ ಕೊಲೆಗೆ ಪ್ರಮುಖ ಕಾರಣ ಎನ್ನುವುದು ಆಪ್ತ ಮೂಲಗಳಿಂದ ತಿಳಿದು ಬಂದಿದೆ…

ರಘುರಾಜ್ ಹೆಚ್.ಕೆ…9449553305….

Related Articles

Leave a Comment

Latest news
ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR): 98.53% ಡಿಜಿಟಲೀಕರಣ ಪೂರ್ಣ..! Big news :  ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ನಲ್ಲಿ  ಮಹತ್ವದ ಬದಲಾವಣೆ..! ಯಾರಿಗೆ ಯಾವ ಸ್ಥಾನ..?! ಕೋಟೆ ಪೊಲೀಸರ ಖಡಕ್ ಕಾರ್ಯಾಚರಣೆ ವಿದ್ಯಾನಗರದ ಎವರ್ ಗ್ರೀನ್ ಬ್ಯೂಟಿ ಪಾರ್ಲರ್ ಮೇಲೆ ದಾಳಿ  ಒಬ್ಬನ ಬಂಧನ ಇನ್ನೊಬ್ಬಳು ಪ... Big news : ಗಣಿ ಮತ್ತು ಭೂವಿಜ್ಞಾನ ಇಲಾಖೆಯಲ್ಲಿ ಬೃಹತ್ ಶಸ್ತ್ರಚಿಕಿತ್ಸೆ: 22 ಹಿರಿಯ ಭೂವಿಜ್ಞಾನಿಗಳ ವರ್ಗಾವಣೆ..! ದ... ಜಿಲ್ಲೆಯಲ್ಲಿ ಭಾರತ್ ಜೋಡೋ ಯುವಕ ಸಂಘಗಳ ಸ್ಥಾಪನೆಗೆ ಕ್ರಮ : ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ..! ಬರ ಪರಿಸ್ಥಿತಿ ನಿರ್ವಹಣೆ: ತಂಡವಾಗಿ ಕರ್ತವ್ಯ ನಿರ್ವಹಿಸೋಣ – ಜಿಲ್ಲಾಧಿಕಾರಿಗಳ ಕರೆ..! ಸಾಗುವಾನಿ ಮರಗಳ ಕಡಿತಲೆ ಕರಕುಚ್ಚಿಯ ಕೃಷ್ಣಮೂರ್ತಿ ಬಂಧನ..! Shivamogga breaking : ಬ್ಯೂಟಿ ಸ್ಪಾ ಅಡ್ಡೆ ಮೇಲೆ ತುಂಗಾನಗರ ಪೊಲೀಸರ ರೈಡ್..! ಉಳಿದ ಸ್ಪಾಗಳ ಕಥೆ ಏನು..?! Shivamogga breaking : ನಕಲಿ ಬಂಗಾರದ ಜಾಲ ಬೆನ್ನತ್ತಿದ ಪೊಲೀಸರು ತೀರ್ಥಹಳ್ಳಿ ಮೂಲದ ಒಬ್ಬ ಅರೆಸ್ಟ್..?! ಇದರಲ್ಲಿ ಶಿ...