Home ರಾಜ್ಯಸಾಗರ ಸರ್ಕಾರಿ ಆಸ್ಪತ್ರೆ ಅವ್ಯವಸ್ಥೆಯ ಸಾಗರ.!!!! ಸಾಗರ ಜನಪ್ರಿಯ ಶಾಸಕರು ಅವ್ಯವಸ್ಥೆಗೆ ಶಾಶ್ವತ ಪರಿಹಾರ ಕಲ್ಪಿಸುವತ್ತ ಸಂಕಲ್ಪ ಮಾಡಲಿ..!!

ಸಾಗರ ಸರ್ಕಾರಿ ಆಸ್ಪತ್ರೆ ಅವ್ಯವಸ್ಥೆಯ ಸಾಗರ.!!!! ಸಾಗರ ಜನಪ್ರಿಯ ಶಾಸಕರು ಅವ್ಯವಸ್ಥೆಗೆ ಶಾಶ್ವತ ಪರಿಹಾರ ಕಲ್ಪಿಸುವತ್ತ ಸಂಕಲ್ಪ ಮಾಡಲಿ..!!

by EDITOR NEWS WARRIORS
1 comment

ಸಾಗರ :- ಶಿವಮೊಗ್ಗ ಜಿಲ್ಲೆ ಸಾಗರದ ಉಪ ವಿಭಾಗೀಯ ಆಸ್ಪತ್ರೆಯಲ್ಲಿ ರೋಗಿಗಳ ಪಾಡು ಹೇಳುವವರಿಲ್ಲ ಕೇಳುವವರಿಲ್ಲದಾಗಿದೆ. ರೋಗಿಗಳು ಚೀಟಿ ಮಾಡಿಸಲು ಹರಸಾಹಸ ಪಡುತ್ತಿದ್ದೂ, ಒಂದೇ ಕೌಂಟರ್ ನಲ್ಲಿ ಎರಡು ಕಂಪ್ಯೂಟರ್ ಇದ್ದೂ, ಒಬ್ಬ ರೋಗಿ ಚೀಟಿ ಮಾಡಿಸಲು ಕನಿಷ್ಠ ಎರಡೂ ಗಂಟೆ ಸಾಲಾಗಿ ನಿಂತು ಕಾಯುವ ಪರಿಸ್ಥಿತಿಯಿದ್ದೂ ಎಷ್ಟೋ ರೋಗಿಗಳು ಸಾಲಿನಲ್ಲೇ ಅಸ್ವಸ್ಥರಾಗಿ ಬೀಳುತ್ತಿರುವ ಸನ್ನಿವೇಶಗಳು ಸರ್ವೇ ಸಾಮಾನ್ಯವಾಗಿದೆ.

ಗಂಟೆಗಟ್ಟಲೇ ಸಾಲಾಗಿ ನಿಂತು ಚೀಟಿ ಪಡೆದು ರೋಗಿಗಳು ಸಂಬಂಧ ಪಟ್ಟ ವೈದ್ಯರ ಕೊಠಡಿಗೆ ತೆರಳಿದರೇ ಕರ್ತವ್ಯ ಸಮಯ ಮೀರಿದ ಕಾರಣ ವೈದ್ಯರು ಊಟಕ್ಕೆ ತೆರಲಿರುವುದರಿಂದ ಬಂದ ದಾರಿಗೆ ಸುಂಕವಿಲ್ಲ ಎಂಬ ನೋವು ಬಡ ರೋಗಿಗಳ ಪಾಡು.

ಚೀಟಿಗಾಗಿ ಕಾದು ಕಾದು ಸುಸ್ತಾದ ರೋಗಿಗಳು ಕೊನೆಗೂ ಚೀಟಿ ಪಡೆದು ವೈದ್ಯರ ಸಲಹೆ ಪಡೆದು ಲ್ಯಾಬ್ ಗೆ ಹೋದರೇ ಲ್ಯಾಬ್ ಬಂದ್ ಆಗಿರುತ್ತದೆ.

ಎಷ್ಟೇ ತಂತ್ರಜ್ಞಾನ ಮುಂದುವರೆದರೂ ಸಾಗರ ಉಪ ವಿಭಾಗೀಯ ಆಸ್ಪತ್ರೆ ಮಾತ್ರಾ ರೋಗಿಗಳಿಗೆ ಸುಲಲಿತವಾಗಿ ಸೇವಾ ಸೌಲಭ್ಯ ನೀಡುವಲ್ಲಿ ಸಂಪೂರ್ಣ ಹಿಂದೇ ಉಳಿದಿದೆ.

ಕೂಡಲೇ ಸಾಗರದ ಉಪ ವಿಭಾಗೀಯ ಆಸ್ಪತ್ರೆಯಲ್ಲಿ ಇನ್ನೂ ಹೆಚ್ಚಿನ ಚೀಟಿ ನೀಡುವ ಸೇವಾ ಕೌಂಟರ್ ತೆರೆದು ತ್ವರಿತವಾಗಿ ರೋಗಿಗಳಿಗೆ ಚೀಟಿ ವಿತರಣೆ ಮಾಡುವತ್ತ ಕ್ರಮಕ್ಕೆ ಮುಂದಾಗಲಿ ಅತ್ಯುತ್ತಮ ಸೇವಾ ಮನೋಭಾವನೆಯುಳ್ಳ ಅರೋಗ್ಯ ರಕ್ಷಾ ಸಮಿತಿ.

ಲ್ಯಾಬ್ ನಲ್ಲಿ ಕರ್ತವ್ಯ ನಿರತರು ರೋಗಿಗಳೊಂದಿಗೆ ಅಸಭ್ಯವಾಗಿ ವರ್ತನೆ ಮಾಡುತ್ತಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸುತ್ತಿದ್ದೂ, ಎಲ್ಲೋ ಖಾಸಗಿ ಲ್ಯಾಬ್ ಜೊತೆಗೆ ಸಾಗರದ ಉಪ ವಿಭಾಗೀಯ ಆಸ್ಪತ್ರೆಯಲ್ಲಿ ಕರ್ತವ್ಯ ನಿರತ ಲ್ಯಾಬ್ ಸಿಬ್ಬಂದಿಗಳು ಒಳ ಒಪ್ಪಂದ ಮಾಡಿಕೊಂಡಿರುವ ಕುರಿತು ಸಾರ್ವಜನಿಕರು ಅನುಮಾನ ವ್ಯಕ್ತಪಡಿಸಿದ್ದಾರೆ.

” ಸಾಗರದ ಆಸ್ಪತ್ರೆ ಒಂದು ಸಮಸ್ಯೆ ಹತ್ತಾರು ” ಸಾಗರ ವಿಧಾನಸಭಾ ಕ್ಷೇತ್ರದ ಜನಪ್ರಿಯ, ಜನಸ್ನೇಹಿ ಶಾಸಕರಾದ ಸನ್ಮಾನ್ಯ ಶ್ರೀ ಹರತಾಳು ಹಾಲಪ್ಪ ರವರು ಸಾಗರದ ಉಪ ವಿಭಾಗೀಯ ಆಸ್ಪತ್ರೆ ಮೇಜರ್ ಸರ್ಜರಿ ತೀರಾ ಅವಶ್ಯಕತೆ ಹಾಗೂ ಅನಿವಾರ್ಯವಿದೆ.

ಓಂಕಾರ ಎಸ್.ವಿ. ತಾಳಗುಪ್ಪ…

ರಘುರಾಜ್ ಹೆಚ್.ಕೆ..9449553305….

Related Articles

1 comment

RichardBiast June 23, 2025 - 8:26 pm

Этот информационный обзор станет отличным путеводителем по актуальным темам, объединяющим важные факты и мнения экспертов. Мы исследуем ключевые идеи и представляем их в доступной форме для более глубокого понимания. Читайте, чтобы оставаться в курсе событий!
Углубиться в тему – https://vyvod-iz-zapoya-1.ru/

Reply

Leave a Comment

Latest news
ಅಂಬು ಗ್ಯಾಂಗಿನ ಹುಡುಗರ ಮಧ್ಯೆ ಕಿತ್ತಾಟ ರಾಮಿನಕೊಪ್ಪದ ಉಮೇಶ ಕುಳ್ಳಿ ಕಿರಣನನ್ನು ಕೊಲೆ ಮಾಡಲು ಕಾರಣವೇನು..? ಶಾಂತಿನಗರದಲ್ಲಿ ಸೌಹಾರ್ದತೆಗೆ ಸಾಕ್ಷಿಯಾದ ಸಂಭ್ರಮದ ಈದ್ ಮೀಲಾದ್...! ಶಿವಮೊಗ್ಗ ಉಪವಿಭಾಗಾಧಿಕಾರಿಯಾಗಿ ಡಾ. ಮೈತ್ರಿ ಹೆಚ್ ಪಿ, ಎಸ್ ಮುಂದುವರಿಕೆ..! ಶಿವಮೊಗ್ಗದಲ್ಲಿ ‘ಅವಿಸ್ಮರಣೀಯ ಪ್ರಕರಣಗಳು’ ಕೃತಿ ಬಿಡುಗಡೆ..! Shivamogga breaking: ಶಿವಮೊಗ್ಗ ಉಪವಿಭಾಗಾಧಿಕಾರಿಯಾಗಿ ಮತ್ತೆ ಜಿ ಹೆಚ್ ಸತ್ಯನಾರಾಯಣ ಮುಂದುವರಿಕೆ...?! ಡಾ. ಮೈತ್ರಿ... Big news : ಜಿಪಿಟಿ ನೇಮಕಾತಿಯಲ್ಲಿ ಇಂಗ್ಲಿಷ್ ಶಿಕ್ಷಕರ ಹುದ್ದೆ ಗಣನೀಯ ಕಡಿತ: ಸರ್ಕಾರದ ವಿರುದ್ಧ ಆಕಾಂಕ್ಷಿಗಳ ತೀವ್ರ ... ಸೇವೆಯೇ ಶಿಕ್ಷಣ ಇಲಾಖೆಯ ಮುಖ್ಯ ಧ್ಯೇಯ ಸಚಿವ ಎಸ್.ಮಧು ಬಂಗಾರಪ್ಪ..! ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR): 98.53% ಡಿಜಿಟಲೀಕರಣ ಪೂರ್ಣ..! Big news :  ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ನಲ್ಲಿ  ಮಹತ್ವದ ಬದಲಾವಣೆ..! ಯಾರಿಗೆ ಯಾವ ಸ್ಥಾನ..?! ಕೋಟೆ ಪೊಲೀಸರ ಖಡಕ್ ಕಾರ್ಯಾಚರಣೆ ವಿದ್ಯಾನಗರದ ಎವರ್ ಗ್ರೀನ್ ಬ್ಯೂಟಿ ಪಾರ್ಲರ್ ಮೇಲೆ ದಾಳಿ  ಒಬ್ಬನ ಬಂಧನ ಇನ್ನೊಬ್ಬಳು ಪ...