Home ರಾಜ್ಯಕಮಲಾ ನೆಹರು ಕಾಲೇಜಿನಲ್ಲಿ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ ಸಾತ್ವಿಕ ಅಂಶಗಳತ್ತ ಚಿತ್ತ ಅಗತ್ಯ:ಪ್ರೊ.ಅಣ್ಣಯ್ಯ ನಾಯಕ..!!

ಕಮಲಾ ನೆಹರು ಕಾಲೇಜಿನಲ್ಲಿ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ ಸಾತ್ವಿಕ ಅಂಶಗಳತ್ತ ಚಿತ್ತ ಅಗತ್ಯ:ಪ್ರೊ.ಅಣ್ಣಯ್ಯ ನಾಯಕ..!!

by EDITOR NEWS WARRIORS
1 comment

ಕಮಲಾ ನೆಹರು ಕಾಲೇಜಿನಲ್ಲಿ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ ::


ಸಾತ್ವಿಕ ಅಂಶಗಳತ್ತ ಚಿತ್ತ ಅಗತ್ಯ:ಪ್ರೊ.ಅಣ್ಣಯ್ಯ ನಾಯಕ
ಶಿವಮೊಗ್ಗ: ಪುಸ್ತಕಗಳಲ್ಲಿ ಬದುಕಿಗೆ ಬೇಕಾಗಿರುವ ಸಾತ್ವಿಕತೆಯ ಅಂಶಗಳಿರುತ್ತಿದ್ದು ಅವುಗಳ ಬಗ್ಗೆ ಚಿಂತನೆ ಮಾಡುವ ಮನಸುಗಳು ಬೇಕಾಗಿವೆ ಎಂದು ಕಮಲಾ ನೆಹರು ಮಹಿಳಾ ಕಾಲೇಜಿನ ಕನ್ನಡ ನಿವೃತ್ತ ಪ್ರಾಧ್ಯಾಪಕರಾದ ಡಿ.ಎಂ.ಅಣ್ಣಯ್ಯ ನಾಯಕ ಅವರು ಹೇಳಿದರು.
ಅವರು ಆ ಕಾಲೇಜಿನ ಕುವೆಂಪು ಗ್ರಂಥಾಲಯವು ಇಂದಿನಿಂದ ಹಮ್ಮಿಕೊಂಡ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಇಂದು ಯುವ ಸಮೂಹ ಅತಿಯಾದ ಆಧುನಿಕ ತಂತ್ರಜ್ಞಾನದ ಬಳಕೆಯಿಂದಾಗಿ ಓದುವ ಹವ್ಯಾಸವನ್ನೇ ಮರೆತಂತಾಗಿದೆ. ಮಾನಸಿಕ ನೆಮ್ಮದಿ ಪಡೆದು ಜೀವನ ನಡೆಸಲು ಅವಶ್ಯಕವಾಗಿರುವ ಪುಸ್ತಕ ಓದಿನಿಂದ ಜನರು ದೂರವಾಗುತ್ತಿದ್ದಾರೆ.
ಇಂತಹ ಸಂದರ್ಭದಲ್ಲಿ ಈ ಕಾಲೇಜು ವಿದ್ಯಾರ್ಥಿಗಳಿಂದಲೇ ಆಯ್ದ ಪುಸ್ತಕಗಳನ್ನು ಓದಿಸಿ ಅವುಗಳ ಬಗ್ಗೆ ಇತರರಿಗೆ ಮಾಹಿತಿ ನೀಡುವ ಕೆಲಸ ಆರಂಭಿಸಿದ್ದು ಶ್ಲಾಘನೀಯ ಎಂದು ಅವರು ಬಣ್ಣಿಸಿದರು.
ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ.ದರಾ.ಬೇಂದ್ರೆ, ಕುವೆಂಪು ಮತ್ತಿತರ ಪ್ರಸಿದ್ಧ ಸಾಹಿತಿಗಳು ಆಯಾ ಕಾಲ ಘಟ್ಟಗಳಲ್ಲಿ ಜನಸಾಮಾನ್ಯರಿಗೆ ಓದಲು ಸಾಧ್ಯವಾಗುವ ಕೃತಿಗಳನ್ನು ರಚಿಸಿ ನಮಗೆ ಬಳುವಳಿಯಾಗಿ ನೀಡಿ ಹೋಗಿದ್ದಾರೆ. ಅವುಗಳ ಪ್ರಯೋಜನವನ್ನು ಇಂದಿನ ವಿದ್ಯಾಥಿ ವಿದ್ಯಾರ್ಥಿನಿಯರು ಪಡೆದುಕೊಳ್ಳಬೇಕು ಎಂದು ಅವರು ಕಿವಿಮಾತು ಹೇಳಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಾಚಾರ್ಯ ಡಾ.ಎಷ್.ಎಸ್.ನಾಗಭೂಷಣ ಅವರು ಒಂದು ದಿನದ ಸಂತೋಷಕ್ಕೆ ಒಂದು ಊಟ, ಒಂದು ತಿಂಗಳ ಸಂತೋಷಕ್ಕೆ ಒಂದು ಪ್ರವಾಸ, ಒಂದು ವರ್ಷದ ಸಂತೋಷಕ್ಕೆ ಮದುವೆ ಆಗಬೇಕು. ಅಷ್ಟಕ್ಕೇ ಆ ಸಂತೋಷಗಳು ಸೀಮಿತವಾಗುತ್ತವೆ. ಆದರೆ ಪಂದು ಪುಸ್ತಕದ ಓದು ಮಸ್ತಕಕ್ಕೆ ಹೋಗಿ ಇಡೀ ಜೀವನ ಪರ್ಯಂತ ಮನುಷ್ಯ ಸಂತೋಷದಿಂದ ಇರುವಂತೆ ಮಾಡುತ್ತದೆ ಎಂದು ಇಂಗ್ಲಿಷಿನ ಪ್ರಸಿದ್ಧ ಕವಿ ವಡ್ರ್ಸ್ ವಥ್೯ನ ಸಾಲುಗಳನ್ನುದ್ಧರಿಸಿ ಮಾತನಾಡಿದರು.
ಇದೇ ಸಂದರ್ಭದಲ್ಲಿ ಬಿ.ಎ.ದ್ವಿತೀಯ ವರ್ಷದ ಅಶ್ವಿನಿ ಎ.ಕೆ.ಅವರು ಆನಂದಕಂದರ ‘ನಾ ಕೊಂದ ಹುಡುಗಿ’ ಕೃತಿ ಕುರಿತು ಮಾತನಾಡಿದರು.ಪ್ರಾಧ್ಯಾಪಕರು, ಸಿಬ್ಬಂದಿಗಳಾದ ನಾರಾಯಣ, ಶ್ರೀಮತಿ ಭಾರತಿ ಮೊದಲಾದವರು ಉಪಸ್ಥಿತರಿದ್ದರು.
ಗ್ರಂಥಪಾಲಕರಾದ ರವಿಕುಮಾರ ಎಚ್.ಎನ್. ಸ್ವಾಗತಿಸಿ ಕೊನೆಯಲ್ಲಿ ವಂದಿಸಿದರು.
..

ರಘುರಾಜ್ ಹೆಚ್.ಕೆ…9449553305…

Related Articles

1 comment

mitolyn official January 26, 2026 - 10:56 am

**mitolyn official**

Mitolyn is a carefully developed, plant-based formula created to help support metabolic efficiency and encourage healthy, lasting weight management.

Reply

Leave a Comment

Latest news
ಅಂಬು ಗ್ಯಾಂಗಿನ ಹುಡುಗರ ಮಧ್ಯೆ ಕಿತ್ತಾಟ ರಾಮಿನಕೊಪ್ಪದ ಉಮೇಶ ಕುಳ್ಳಿ ಕಿರಣನನ್ನು ಕೊಲೆ ಮಾಡಲು ಕಾರಣವೇನು..? ಶಾಂತಿನಗರದಲ್ಲಿ ಸೌಹಾರ್ದತೆಗೆ ಸಾಕ್ಷಿಯಾದ ಸಂಭ್ರಮದ ಈದ್ ಮೀಲಾದ್...! ಶಿವಮೊಗ್ಗ ಉಪವಿಭಾಗಾಧಿಕಾರಿಯಾಗಿ ಡಾ. ಮೈತ್ರಿ ಹೆಚ್ ಪಿ, ಎಸ್ ಮುಂದುವರಿಕೆ..! ಶಿವಮೊಗ್ಗದಲ್ಲಿ ‘ಅವಿಸ್ಮರಣೀಯ ಪ್ರಕರಣಗಳು’ ಕೃತಿ ಬಿಡುಗಡೆ..! Shivamogga breaking: ಶಿವಮೊಗ್ಗ ಉಪವಿಭಾಗಾಧಿಕಾರಿಯಾಗಿ ಮತ್ತೆ ಜಿ ಹೆಚ್ ಸತ್ಯನಾರಾಯಣ ಮುಂದುವರಿಕೆ...?! ಡಾ. ಮೈತ್ರಿ... Big news : ಜಿಪಿಟಿ ನೇಮಕಾತಿಯಲ್ಲಿ ಇಂಗ್ಲಿಷ್ ಶಿಕ್ಷಕರ ಹುದ್ದೆ ಗಣನೀಯ ಕಡಿತ: ಸರ್ಕಾರದ ವಿರುದ್ಧ ಆಕಾಂಕ್ಷಿಗಳ ತೀವ್ರ ... ಸೇವೆಯೇ ಶಿಕ್ಷಣ ಇಲಾಖೆಯ ಮುಖ್ಯ ಧ್ಯೇಯ ಸಚಿವ ಎಸ್.ಮಧು ಬಂಗಾರಪ್ಪ..! ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR): 98.53% ಡಿಜಿಟಲೀಕರಣ ಪೂರ್ಣ..! Big news :  ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ನಲ್ಲಿ  ಮಹತ್ವದ ಬದಲಾವಣೆ..! ಯಾರಿಗೆ ಯಾವ ಸ್ಥಾನ..?! ಕೋಟೆ ಪೊಲೀಸರ ಖಡಕ್ ಕಾರ್ಯಾಚರಣೆ ವಿದ್ಯಾನಗರದ ಎವರ್ ಗ್ರೀನ್ ಬ್ಯೂಟಿ ಪಾರ್ಲರ್ ಮೇಲೆ ದಾಳಿ  ಒಬ್ಬನ ಬಂಧನ ಇನ್ನೊಬ್ಬಳು ಪ...