Home ರಾಜ್ಯImportant news BJP putting brakes on family politics in Karnataka : ಬಿಜೆಪಿ ಹೈಕಮಾಂಡ್ ಕರ್ನಾಟಕದಲ್ಲಿ ಕುಟುಂಬ ರಾಜಕಾರಣಕ್ಕೆ ಅವಕಾಶ ನೀಡುವುದಿಲ್ಲ ಶಿವಮೊಗ್ಗದಲ್ಲಿ ಉನ್ನತ ಶಿಕ್ಷಣ ಸಚಿವ ಡಾ// ಅಶ್ವಥ್ ನಾರಾಯಣ್ ಸ್ಪಷ್ಟನೆ..!! ಮಾಜಿ ಸಿಎಂ ಬಿಎಸ್ ವೈ ಗೆ ಟಾಂಗ್ ನೀಡಿದ್ರಾ ಶಿಕ್ಷಣ ಸಚಿವರು..?!

Important news BJP putting brakes on family politics in Karnataka : ಬಿಜೆಪಿ ಹೈಕಮಾಂಡ್ ಕರ್ನಾಟಕದಲ್ಲಿ ಕುಟುಂಬ ರಾಜಕಾರಣಕ್ಕೆ ಅವಕಾಶ ನೀಡುವುದಿಲ್ಲ ಶಿವಮೊಗ್ಗದಲ್ಲಿ ಉನ್ನತ ಶಿಕ್ಷಣ ಸಚಿವ ಡಾ// ಅಶ್ವಥ್ ನಾರಾಯಣ್ ಸ್ಪಷ್ಟನೆ..!! ಮಾಜಿ ಸಿಎಂ ಬಿಎಸ್ ವೈ ಗೆ ಟಾಂಗ್ ನೀಡಿದ್ರಾ ಶಿಕ್ಷಣ ಸಚಿವರು..?!

by EDITOR NEWS WARRIORS
0 comments

ಶಿವಮೊಗ್ಗ: ಬಿಜೆಪಿ ವಿಜಯ ಸಂಕಲ್ಪ ಯಾತ್ರೆಯ ಸಲುವಾಗಿ ಶಿವಮೊಗ್ಗಕ್ಕೆ ಆಗಮಿಸಿದ್ದ ಉನ್ನತ ಶಿಕ್ಷಣ ಸಚಿವರಾದ ಡಾಕ್ಟರ್ ಅಶ್ವಥ್ ನಾರಾಯಣ್ ನಗರದ ಬಿಜೆಪಿ ಕಾರ್ಯಾಲಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಾ ಬಿಜೆಪಿಯನ್ನು ಜನ ಏಕೆ ಬೆಂಬಲಿಸಬೇಕು ಬಿಜೆಪಿಯ ಸಾಧನೆಗಳು ಏನು.. ಬಿಜೆಪಿ ಅಧಿಕಾರಕ್ಕೆ ಬಂದರೆ ಮುಂದೆ ಏನು ಮಾಡುತ್ತದೆ ..ಎನ್ನುವುದರ ಬಗ್ಗೆ ವಿವರ ನೀಡುತ್ತಾ ಪತ್ರಕರ್ತರು ಕೇಳಿದ ಪ್ರಶ್ನೆಗಳಿಗೆ ಉತ್ತರ ನೀಡಿದ ಸಚಿವರು.. ಡಿಕೆಶಿ ಬಿಜೆಪಿ ಭ್ರಷ್ಠಾಚಾರದ ಬಗ್ಗೆ ಮಾತನಾಡುತ್ತಾರೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ವಿಧಾನ ಸಭೆಯನ್ನ ಗಂಜಲಹಾಕಿ ಶುದ್ಧ ಮಾಡಲಿದೆ ಎಂದು ಅವರು ಹೇಳುತ್ತಾರೆ. ಭ್ರಷ್ಠಾಚಾರ ತಂದವರೇ ಡಿಕೆಶಿ ಮತ್ತು ಅವರ ಕಾಂಗ್ರೆಸ್ ಪಕ್ಷ ಡಿಕೆಶಿ ಆಡುವ ಮಾತುಗಳು ಭೂತದ ಬಾಯಲ್ಲಿ ಭಗವದ್ಗೀತೆ ಬಂದಂತೆ ಆಗುತ್ತದೆ ಎಂದರು.

ಮಧ್ಯವರ್ತಿಗಳಿಂದ ಜನರನ್ನು ಮುಕ್ತ ಮಾಡಿದ ಕೀರ್ತಿ ಬಿಜೆಪಿಗೆ ಸಲ್ಲುತ್ತದೆ.

ಮಧ್ಯವರ್ತಿ ಇಲ್ಲದೆ ರೈತರಿಗೆ ಜನರಿಗೆ ಹಣ ನೀಡುವ ವ್ಯವಸ್ಥೆ ಮಾಡಿದ್ದು ಬಿಜೆಪಿ. ಕಾಂಗ್ರೆಸ್ ಮುಕ್ತ ಭಾರತವನ್ನು ಮಾಡುವುದರ ಜೊತೆಗೆ ಭ್ರಷ್ಠಾಚಾರ ಮುಕ್ತ ಸಮಾಜ ನಿರ್ಮಿಸಲು ಬಿಜೆಪಿ ಮುಂದೆ ಕಠಿಣ ಕಾನೂನು ತರಲಿದೆ ಎಂದು ಹೇಳಿದರು.

ಡಿಜಿಟಲೈಜೇಷನ್ ಗೆ ಹೆಚ್ಚಿನ ಒತ್ತು ನೀಡಲಾಗಿದೆ ಭ್ರಷ್ಟಾಚಾರ ಮುಕ್ತ ಸಮಾಜ ಮಾಡುವುದೇ ನಮ್ಮ ಗುರಿ .

ಮುಂದುವರೆದು ಮಾತನಾಡುತ್ತಾ ಡಿಜಿಟಲೈಜೇಷನ್ ತರಲಾಗುತ್ತಿದೆ. ವಿಕೇಂದ್ರೀಕರಣ ಗೊಳಿಸುವ ಮೂಲಕ ಜನರನ್ನ ತಲುಪಲಿದ್ದೇವೆ. ಜನರನ್ನ ನೇರವಾಗಿ ಮುಟ್ಟಲು ಡಿಜಟಲೈಜೇಷನ್ ಒಂದೇ ಮಾರ್ಗವಾಗಿದೆ. ಮುಂದಿನ ದಿನಗಳಲ್ಲಿ ಭ್ರಷ್ಠಾಚಾರಕ್ಕೆ ಅವಕಾಶವಿರುವುದಿಲ್ಲ. ಭಯೋತ್ಪಾದನೆಗೆ ಸಹಾಯ ಮಾಡಿದವರಿಗೆ ಭ್ರಷ್ಠಾಚಾರದ ಬಗ್ಗೆ ಮಾತನಾಡಲು ನೈತಿಕ ಹಕ್ಕಿಲ್ಲ ಎಂದರು.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿಕೆಶಿಗೆ ಮಾತನಾಡಲು ಬರುವುದಿಲ್ಲ ನಾಲಿಗೆಯ ಮೇಲೆ ಹಿಡಿತವಿಲ್ಲ.

ಸಿಎಂ ವಿರುದ್ಧ ಇಲ್ಲ ಸಲ್ಲದ ಆರೋಪಗಳನ್ನ ಡಿಕೆಶಿ ಮತ್ತು ಮಾಜಿ ಸಿಎಂ ಸಿದ್ದರಾಮಯ್ಯ ಮಾಡುತ್ತಾರೆ. ಬರುವ ಚುನಾವಣೆಯಲ್ಲಿ ಸಿದ್ದರಾಮಯ್ಯ ಆಡಿರುವ ಮಾತಿಗೆ ಬೆಲೆ ತೆರಬೇಕಾಗುತ್ತದೆ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಕೆಶಿ ಅವರಿಗೆ ಮಾತಿನ ಮೇಲೆ ಹಿಡಿತ ಇರಬೇಕು ಎಂದು ಹೇಳಿದರು.

ಕಾಂಗ್ರೆಸ್ನ ನ ಡಬಲ್ ಸ್ಟ್ಯಾಂಡರ್ಡ್ ಕಾಂಗ್ರೆಸ್ ಅನ್ನು ಈ ದುಸ್ಥಿತಿಗೆ ತಂದು ತಲುಪಿಸಿದೆ..

ಪ್ರಧಾನಿ ಮೋದಿ ಮುಸ್ಲೀಂ ರನ್ನ ಒಟ್ಟಾಗಿ ಕರೆದುಕೊಂಡು ಹೋಗಿ ಎಂದಿದ್ದಾರೆ ತುಷ್ಠಿಕರಣಕ್ಕೆ ಅಲ್ಲ. ಎಲ್ಲರಿಗೂ ಬದುಕುವ ಹಕ್ಕಿದೆ. ಅದನ್ನ ಬಿಜೆಪಿ ಮಾಡುತ್ತದೆ. ಕಾಂಗ್ರೆಸ್ ಈ ರೀತಿ ನಡೆದುಕೊಳ್ಳಲಿಲ್ಲ. ಮತಾಂತರದ ವಿಚಾರದಲ್ಲಿ ಕಾಂಗ್ರೆಸ್ ಮಾತನಾಡಲೇ ಇಲ್ಲ, ಹಿಜಾಬ್, ಗೋಹತ್ಯೆ ನಿಷೇಧದ ಕುರಿತು ಡಬ್ಬಲ್ ಸ್ಟ್ಯಾಂಡರ್ಡ್ ನಿಲುವನ್ನ‌ತೋರಿದ ಪರಿಣಾಮ‌ ಕಾಂಗ್ರೆಸ್ ಇಂದು ದುಸ್ಥಿತಿಗೆ ಬಂದಿದೆ ಎಂದರು.

ಬಿಬಿಸಿ ಮರೆಹೋಗುವ ದು ಸ್ಥಿತಿ ಕಾಂಗ್ರೆಸ್ ಗೆ ಬಂದಿರುವುದು ವಿಪರ್ಯಾಸ..

ಗುಜರಾತ್ ನ ಹತ್ಯಾಕಾಂಡದ ಬಗ್ಗೆ ಬಿಬಿಸಿ ಡಾಕ್ಯುಮೆಂಟರಿ ರಚನೆ ಮಾಡಿದೆ. ಇದನ್ನ ಕೆಲವರು ಬೆಂಬಲಿಸಿದ್ದಾರೆ. ಬಿಬಿಸಿ ನೆರೇಟಿವ್ ಮಾಡಲು ಯಾರು ರಂದು ಮೊದಲು ಉತ್ತರಿಸಬೇಕು? ಬಿಬಿಸಿಯ ಮೊರೆ ಹೋಗುವ ಪರಿಸ್ಥಿತಿ ಕಾಂಗ್ರೆಸ್ ಗೆ ಬಂದಿದೆ. ಗೋದ್ರಾ ಹತ್ಯಾಕಾಂಡ ನಡೆದಾಗ ಅಧಿಕಾರದಲ್ಲಿ ಇದ್ದವರು ಯಾರು? ಈ ದೇಶದ ಸುಪ್ರೀಂ ಕೋರ್ಟ್ ಆದೇಶದ ನಡುವೆಯೂ ಈ ರೀತಿಯ ಡಾಕ್ಯುಮೆಂಟರಿಗೆ ಬೆಂಬಲಿಸುವುದಾದರೆ ನಿಮ್ಮ‌ಮನಸ್ಥಿತಿ ಎಂತಹದ್ದು ಎಂದರು.

ಕುಟುಂಬ ರಾಜಕಾರಣಕ್ಕೆ ಕರ್ನಾಟಕದಲ್ಲಿ ಬ್ರೇಕ್ ಬೀಳಲಿದೆ ಇನ್ನು ಮುಂದೆ ವಂಶಪಾರಂಪರೆ ರಾಜಕಾರಣ ಬಿಜೆಪಿಯಲ್ಲಿ ನಡೆಯುವುದಿಲ್ಲ..


ವಂಶಪಾರಂಪರೆ ರಾಜಕೀಯಕ್ಕೆ ಬಿಜೆಪಿ ಫುಲಸ್ಟಾಪ್ ಹಾಕಲಿದೆ. ವಂಶಪಾರಂಪರೆ ರಾಜಕಾರಣಕ್ಕೆ ವಿರೋಧವಿದೆ. ಇದನ್ನ ಮಾಡಲು ಕಾಲ ಹಿಡಿಯಬಹುದು. ಆದರೆ ಖಂಡಿತಾ ಮಾಡುತ್ತೇವೆ.ಅಯೋಧ್ಯ, 370 ಅರ್ಟಿಕಲ್ ದಿಡೀರ್ ಅಂತ ಆಗಲಿಲ್ಲ. ಕಾಲ ಹಿಡಿದಿದೆ ಜಾತಿ ಮುಕ್ತವನ್ನೂ ಮಾಡಲಿದ್ದೇವೆ ಎಂದು ಹೇಳಿದರು.
ಡಾಲರ್ ವಿರುದ್ಧ ರೂಪಾಯಿ ಕುಸಿಯಲು ಏನು ಕ್ರಮ ಕೈಗೊಳ್ಳಲಾಗಿದೆ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅಶ್ವಥ್ ನಾರಾಯಣ್, ಸೆಮಿಕಂಡಕ್ಟರ್, ಮೊಬೈಲ್ ಮಾಸ್ಕ್ ತಯಾರಿಕೆಗೆ ದೇಶ ಒತ್ತು ನೀಡುತ್ತಿದೆ. 10 ವರ್ಷದಲ್ಲಿ ಬಿಜೆಪಿ ಸರ್ಕಾರದ ಬೆಲೆ ಏರಿಕೆಯನ್ನ ಮನಮೋಹನ ಸಿಂಗ್ ಅಧಿಕಾರಕ್ಕೆ ಹೋಲಿಸಿದರೆ ಕಡಿಮೆ ಆಗಿದೆ ಕೆಲವೊಂದು ಅಗತ್ಯ ವಸ್ತುಗಳಾದ ಗ್ಯಾಸ್ ಪೆಟ್ರೋಲಿಯಂ, ಡೀಸೆಲ್ ಬೆಲೆ ಹೆಚ್ಚಾಗಿದೆ ಅದಕ್ಕೆ ಸಬ್ಸಿಡಿ ಹಿಂಪಡೆದಿರುವುದು ಕಾರಣ ಆದರೆ ಪಕ್ಕದ ಶ್ರೀಲಂಕಾ, ಪಾಕಿಸ್ತಾನ ,ಚೀನಾದಂತ ರಾಷ್ಟ್ರಗಳಿಗೆ ಹೋಲಿಸಿದರೆ ಭಾರತ ಶೈಕ್ಷಣಿಕವಾಗಿ ಆರ್ಥಿಕವಾಗಿ ಸಾಕಷ್ಟು ಮಂದಿದೆ. ಪ್ರಸ್ತುತ ಆರ್ಥಿಕವಾಗಿ 5ನೇ ಸ್ಥಾನದಲ್ಲಿರುವ ಭಾರತ ಮುಂದೆ ಎರಡನೇ ಸ್ಥಾನಕ್ಕೆ ಬರುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದರು.

ಮಾಜಿ ಸಿಎಂ ಬಿಎಸ್ವೈ ಗೆ ಟಾಂಗ್ ನೀಡಿದ್ರಾ ಶಿಕ್ಷಣ ಸಚಿವ ಅಶ್ವಥ್ ನಾರಾಯಣ್ ‌..?!

ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರ ತವರು ಕ್ಷೇತ್ರ ಶಿವಮೊಗ್ಗದಲ್ಲಿ ಮಾತನಾಡುತ್ತಾ ಕುಟುಂಬ ರಾಜಕಾರಣಕ್ಕೆ ಬಿಜೆಪಿ ಬ್ರೇಕ್ ಹಾಕಲಿದೆ ಎಂದು ಹೇಳುವ ಮೂಲಕ ಬಿಎಸ್ ವೈ ಗೆ ಟಾಂಗ್ ನೀಡಿದ್ರಾ..?! ಪ್ರಸ್ತುತ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಬಿಎಸ್ ವೈ ಮತ್ತು ಅವರ ಮಕ್ಕಳೇ ಮೇನ್ ಟಾರ್ಗೆಟ್ ಆಗಿದ್ದಾರೆ ಬಿಎಸ್ ವೈ ಹಿರಿಯ ಪುತ್ರ ಬಿ ವೈ ರಾಘವೇಂದ್ರ ಈಗಾಗಲೇ ಶಿವಮೊಗ್ಗದಿಂದ ಸ್ಪರ್ಧಿಸಿ ಲೋಕಸಭಾ ಸದಸ್ಯರಾಗಿದ್ದಾರೆ. ಇನ್ನೋರ್ವ ಕಿರಿಯ ಪುತ್ರ ಬಿ ವೈ ವಿಜೇಂದ್ರ ಅವರಿಗೆ ಶಿಕಾರಿಪುರದಿಂದ ಟಿಕೆಟ್ ನೀಡಲು ಚಿಂತನೆ ನಡೆಸಲಾಗುತ್ತಿದೆ ಎನ್ನಲಾಗುತ್ತಿದೆ. ಹಾಗಾದರೆ ಈ ಸಂದರ್ಭದಲ್ಲಿ ಅಶ್ವಥ್ ನಾರಾಯಣ್ ಹೇಳಿಕೆ ಮಹತ್ವ ಪಡೆದುಕೊಳ್ಳುತ್ತಾ ಅಥವಾ ಇವರು ಕೂಡ ಕುಟುಂಬ ರಾಜಕಾರಣಕ್ಕೆ ಒತ್ತು ನೀಡುತ್ತಾರಾ..?! ಬಿಜೆಪಿ ಹೈಕಮಾಂಡ್ ಹೇಳಿಕೆ ಬರಿ ಹೇಳಿಕೆಯಾಗಿ ಉಳಿಯುತ್ತಾ..?! ಈ ಸಲದ ಚುನಾವಣೆಯಲ್ಲಿ ಕಾದು ನೋಡಬೇಕು….

ರಘುರಾಜ್ ಹೆಚ್.ಕೆ…9449553305…

Related Articles

Leave a Comment

Latest news
Big news : ಜಿಪಿಟಿ ನೇಮಕಾತಿಯಲ್ಲಿ ಇಂಗ್ಲಿಷ್ ಶಿಕ್ಷಕರ ಹುದ್ದೆ ಗಣನೀಯ ಕಡಿತ: ಸರ್ಕಾರದ ವಿರುದ್ಧ ಆಕಾಂಕ್ಷಿಗಳ ತೀವ್ರ ... ಸೇವೆಯೇ ಶಿಕ್ಷಣ ಇಲಾಖೆಯ ಮುಖ್ಯ ಧ್ಯೇಯ ಸಚಿವ ಎಸ್.ಮಧು ಬಂಗಾರಪ್ಪ..! ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR): 98.53% ಡಿಜಿಟಲೀಕರಣ ಪೂರ್ಣ..! Big news :  ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ನಲ್ಲಿ  ಮಹತ್ವದ ಬದಲಾವಣೆ..! ಯಾರಿಗೆ ಯಾವ ಸ್ಥಾನ..?! ಕೋಟೆ ಪೊಲೀಸರ ಖಡಕ್ ಕಾರ್ಯಾಚರಣೆ ವಿದ್ಯಾನಗರದ ಎವರ್ ಗ್ರೀನ್ ಬ್ಯೂಟಿ ಪಾರ್ಲರ್ ಮೇಲೆ ದಾಳಿ  ಒಬ್ಬನ ಬಂಧನ ಇನ್ನೊಬ್ಬಳು ಪ... Big news : ಗಣಿ ಮತ್ತು ಭೂವಿಜ್ಞಾನ ಇಲಾಖೆಯಲ್ಲಿ ಬೃಹತ್ ಶಸ್ತ್ರಚಿಕಿತ್ಸೆ: 22 ಹಿರಿಯ ಭೂವಿಜ್ಞಾನಿಗಳ ವರ್ಗಾವಣೆ..! ದ... ಜಿಲ್ಲೆಯಲ್ಲಿ ಭಾರತ್ ಜೋಡೋ ಯುವಕ ಸಂಘಗಳ ಸ್ಥಾಪನೆಗೆ ಕ್ರಮ : ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ..! ಬರ ಪರಿಸ್ಥಿತಿ ನಿರ್ವಹಣೆ: ತಂಡವಾಗಿ ಕರ್ತವ್ಯ ನಿರ್ವಹಿಸೋಣ – ಜಿಲ್ಲಾಧಿಕಾರಿಗಳ ಕರೆ..! ಸಾಗುವಾನಿ ಮರಗಳ ಕಡಿತಲೆ ಕರಕುಚ್ಚಿಯ ಕೃಷ್ಣಮೂರ್ತಿ ಬಂಧನ..! Shivamogga breaking : ಬ್ಯೂಟಿ ಸ್ಪಾ ಅಡ್ಡೆ ಮೇಲೆ ತುಂಗಾನಗರ ಪೊಲೀಸರ ರೈಡ್..! ಉಳಿದ ಸ್ಪಾಗಳ ಕಥೆ ಏನು..?!