Home ರಾಜ್ಯDubai news : ಜಾಗತಿಕ ಚಿಂತನೆ ಇಂದಿನ ಬಹುಮುಖ್ಯ ಅಗತ್ಯ – ಶಂಕ್ರೇಗೌಡ ಮೈಸೂರು..!!

Dubai news : ಜಾಗತಿಕ ಚಿಂತನೆ ಇಂದಿನ ಬಹುಮುಖ್ಯ ಅಗತ್ಯ – ಶಂಕ್ರೇಗೌಡ ಮೈಸೂರು..!!

by EDITOR NEWS WARRIORS
2 comments

ವಾಸ್ತವಾಗಿ ಇಂದು ವಿದ್ಯಾವಂತರ ಕೂಡ ಸಂಕುಚಿತ ಮನೋಭಾವನೆ ಬೆಳೆಸಿಕೊಳ್ಳುತ್ತಿರುವುದು ಅತ್ಯಂತ ದುದೃಷ್ಟಕರ. ಸ್ನೇಹ. ಸೌಹಾರ್ದತೆ. ಮತ್ತು. ಕೋಡುಕೊಳ್ಳುವಿಕೆಯಿಂದ ಮನೋವಿಕಾಸ ಸಾಧ್ಯವಾಗುತ್ತದೆ. ಅದಕ್ಕಾಗಿ ಪ್ರತಿಯೊಬ್ಬರೂ. ಜಾಗತಿಕ ಚಿಂತನೆ ಮಾಡುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು 36ನೇ ಅಂತರಾಷ್ಟ್ರೀಯ ಸಾಂಸ್ಕೃತಿಕ ಸೌರಭ ಸಮಾರಂಭವನ್ನು ದುಬೈಯ ಭಾರತ ರಾಯಭಾರಿ ಕಚೇರಿಯ ಸಭಾಂಗಣದಲ್ಲಿ ಜ್ಯೋತಿ ಬೆಳಗಿಸಿ ಉದ್ಘಾಟಿಸಿ ಮಾತನಾಡಿದ ಕನ್ನಡ ಚಲನಚಿತ್ರ ನಿರ್ಮಾಪಕ. ಶಂಕ್ರೇಗೌಡ ಮೈಸೂರು ಅವರು ಅಭಿಪ್ರಾಯಪಟ್ಟರು.

ಸಮಾರಂಭವನ್ನು ಅಂತರಾಷ್ಟ್ರೀಯ ಸಾಂಸ್ಕೃತಿಕ ಸೌರಭ ಪರಿಷತ್ (ಇಂಡಿಯಾ) ಹಾಗೂ ಸೆಂಟ್ ದುಬೈ, ಯುಎಇ ಸಂಯುಕ್ತವಾಗಿ ಆಯೋಗಿಸಿದ್ದವು.
ವಿಶೇಷ ಆಮಂತ್ರಿತರಾಗಿ. ಆಗಮಿಸಿದ್ದ ದುಬೈ ಮೊಸಕೋ ಶಿಪ್ಪಿಂಗ್ ಅಂಡ್ ಫಾರ್ವರ್ಡಿಂಗ್ ಕಂಪನಿಯ ಮ್ಯಾನೇಜಿಂಗ್ ಡೈರೆಕ್ಟರ್. ಡಾ. ಡೇವಿಡ್ ಫ್ರಾಂಕ್ ಫರ್ನಾಂಡಿಸ್ ಮಾತನಾಡಿ ಇಡೀ ವಿಶ್ವವೇ ಒಂದು ಮನೆ ಎನ್ನುವ ಮೇಧಾವಿಗಳ ಪರಿಕಲ್ಪನೆ ಹಾಗೆ ಉಳಿಯಬಾರದು ಅದನ್ನು ಸಾಕಾರ ಗೊಳಿಸಲು ಸಾಂಸ್ಕೃತಿಕ ಸಮ್ಮಿಲನಗಳನ್ನು ವೇದಿಕೆಯಾಗಿ ಬಳಸಿಕೊಂಡು ನಾವೆಲ್ಲರೂ ಗುರಿ ತಲುಪುವ ಪ್ರಯತ್ನ ಮಾಡೋಣ ಎಂದರು.
ಸೇಂಟ್ ಅಧ್ಯಕ್ಷ. ಕೆ. ಪಿ. ಶೋಧನ್ ಪ್ರಸಾದ್ ಅತ್ತಾವರ ಅವರು ಅತಿಥಿಗಳನ್ನು ಸಭೆಗೆ ಪರಿಚಯಿಸಿ ಸ್ವಾಗತಿಸಿದರು.
ಐಸಿಎಫ್‌ಸಿಐ. ಅಧ್ಯಕ್ಷ. ಕೆ ಪಿ. ಮಂಜುನಾಥ್ ಸಾಗರ್ ತಮ್ಮ ಪ್ರಾಸ್ತಾವಿಕ ಭಾಷಣದಲ್ಲಿ, ಈವರೆಗೆ ಹದಿನಾಲ್ಕು ವರ್ಷಗಳಲ್ಲಿ 29 ದೇಶಗಳಲ್ಲಿ ಸಾಂಸ್ಕೃತಿಕ ಸಮಾವೇಶಗಳನ್ನು ಯಶಸ್ವಿಯಾಗಿ ಆಯೋಜಿಸಲಾಗಿದೆ. ಇದು ಮೂವತ್ತಾರನೇ ಸಮಾವೇಶ. ನಾವು ಹೀಗೆ ವಿಶ್ವ ಸೌಹಾರ್ದ ಪ್ರಿಯರು ಎಂಬ ಧ್ಯೇಯ ವಾಕ್ಯ ಮೊಳಗಿಸಲು ತಮ್ಮೆಲ್ಲರ ಸಹಕಾರ ನಿರಂತರವಾಗಿರಲಿ ಎಂಬುದು ನಮ್ಮೆಲ್ಲರ ಆಶಯ ಎಂದರು.

ಮುಖ್ಯ ಅತಿಥಿಗಳಾಗಿ, ಪ್ರವೀಣ್ ಶೆಟ್ಟಿ, ರಾಮಚಂದ್ರ ಹೆಗಡೆ, ಎಂ. ಇ. ಮೂಳೂರ್, ಸುಧಾಕರ ರಾವ್ ಪೇಜಾವರ,ಶಶಿಧರ್ ನಾಗರಾಜಪ್ಪ. ಸಂದೇಶ್ ಜೈನ್, ನಿತ್ಯಾನಂದ ಬೆಸ್ಕೂರ್, ಸಂತೋಷ್ ಶೆಟ್ಟಿ, ಸುದರ್ಶನ್ ಹೆಗಡೆ ಪ್ರಮೋದ್ ಕುಮಾರ್, ಸಮೀರ್ ಬೋಳಾರ್, ರಕ್ಷಕ್ ಪ್ರಭು, ಸಂದ್ಯಾ ಪ್ರಸಾದ್,
ಕಿರಣ್ ಬೆಸ್ಕೂರ್. ರೇಷ್ಮಾ ಪ್ರಭು, ವೀಣಾ ಹೆಗಡೆ. ವೇದಿಕೆಯಲ್ಲಿದ್ದರು.

ವಿವಿಧ ಕ್ಷೇತ್ರಗಳ ಸಾಧನಾಶೀಲ ಗಣ್ಯರಾದ ಮಲ್ಲಿಕಾರ್ಜುನ ಗೌಡ ದುಬೈ, ಮಿತ್ರಂಪಾಡಿ ಜಯರಾಮ ರೈ ಅಬುದಾಬಿ, ಡಾ. ಕ್ಯಾದರಿನ್ ದಿನೇಶ್ ಹುಬ್ಬಳ್ಳಿ,, ಅನ್ಸಾರ್ ಕಾಟಿಪಾಳ್ಳ ಮಸ್ಕಟ್, ಡಾ. ಸಹನಾ ಭಟ್ ಸಿರ್ಸಿ ಮತ್ತು ಆರತಿ ಸುರೇಶ್‌ ಬೆಂಗಳೂರು ಇವರುಗಳಿಗೆ ಇಂಟರ್ನ್ಯಾಷನಲ್ ಐಕಾನಿಕ್ ಅವಾರ್ಡ್ ನೀಡಿ ಗೌರವಿಸಲಾಯಿತು.

ಮುಖ್ಯ ಅತಿಥಿಗಳಾಗಿ. ಪ್ರವೀಣ್ ಶೆಟ್ಟಿ. ರಾಮಚಂದ್ರ ಹೆಗಡೆ. ಎಂ ಇ. ಮೂಳೂರ್, ಸುಧಾಕರರಾವ್ ಪೇಜಾವರ. ಶಶಿಧರ್ ನಾಗರಾಜಪ್ಪ. ಸಂದೇಶ್ ಜೈನ್. ನಿತ್ಯಾನಂದ ಬೆಸ್ಜೂರ್, ಸಂತೋಷ್ ಶೆಟ್ಟಿ, ಸುದರ್ಶನ್ ಹೆಗಡೆ. ಪ್ರಮೋದ್ ಕುಮಾರ್. ಸಮೀರ್ ಬೋಳಾರ್, ರಕ್ಷಕ್ ಪ್ರಭು. ಸಂದ್ಯಾ ಪ್ರಸಾದ್,
. ಕಿರಣ್ ಬೆಸ್ಕೂರ್. ರೇಷ್ಮಾ ಪ್ರಭು, ವೀಣಾ ಹೆಗಡೆ.

ಪ್ರಮೋದ್ ಕುಮಾರ್ ಮತ್ತು ದಿವ್ಯ ಕುಂಬಳೆ ಇವರು ಕನ್ನಡ ಮತ್ತು ತುಳು ಗೀತೆಗಳನ್ನು ಪ್ರಸ್ತುತಪಡಿಸಿದರು.

ಹುಬ್ಬಳ್ಳಿಯ ನಾಟ್ಯಂಜಲಿ ನೃತ್ಯ ಕೇಂದ್ರದ ಡಾ. ಸಹನಾ ಭಟ್ ನಿರ್ದೇಶನದಲ್ಲಿ, ಅವರ ಶಿಷ್ಯಯರಿಂದ ಭರತನಾಟ್ಯ, ಬೆಂಗಳೂರಿನ. ಶ್ರೀ ಸಾಗರ ಸಂಗಮಂ. ಸಾಂಸ್ಕೃತಿಕ ಅಕಾಡೆಮಿ ಮತ್ತು. ಎಬಿಸಿಡಿ ಡ್ಯಾನ್ಸ್ ಇನ್ಸ್ಟಿಟ್ಯೂಟ್. ಕಲಾವಿದರಿಂದ. ನೃತ್ಯ ರೂಪಕ. ತಿಲಕ್ ರಾಜ್. ನಿರ್ದೇಶನದಲ್ಲಿ, ರಂಗ ಸಮಾಜದ ವತಿಯಿಂದ “ಮೂರ್ಖ ರಾಜ” ನಗೆ ನಾಟಕ, ಏನ್ ಜಿ ಎನ್ ರಾಜಕುಮಾರ್ ಅವರಿಂದ. ಏಕ ಪಾತ್ರ ಅಭಿನಯ. ಕಾರ್ಯಕ್ರಮಗಳು ಜಗಿದವು.

ಕವಿಗೋಷ್ಠಿ ಅಧ್ಯಕ್ಷತೆಯನ್ನು. ದುಬೈಯ ಶಶಿಧರ್ ನಾಗರಾಜಪ್ಪ. ವಹಿಸಿದ್ದರು.
ಕವಿಗಳಾಗಿ, ಪ್ರೊಫೆಸರ್ ಬಿಂಡಿಗನವಿಲೆ ಭಗವಾನ್, ಸುದರ್ಶನ್ ಹೆಗ್ಡೆ, ಬಿ. ಶೃಂಗೇಶ್ವರ್, ಅನ್ಸಾರ್ ಕಾಟಿಪಳ್ಳ ಮಸ್ಕಟ್ ಮತ್ತು ತಿಲಕ್ ರಾಜ್ ಕವನ ವಾಚನಮಾಡಿದರು. ಇದೇ ಸಂದರ್ಭದಲ್ಲಿ ಶೃಂಗೇಶ್ವರ್ ರಚಿಸಿದ ಕವನ ಸಂಕಲನ ಲಿಮರಿಕ್ಸ್ ಕೃತಿಯನ್ನು ಲೋಕಾರ್ಪಣೆ ಮಾಡಲಾಯಿತು.
ಮೈಸೂರಿನ ಚಿತ್ರ ಕಲಾವಿದ ಪ್ರಶಾಂತ್ ಕಲಾಕೃತಿಗಳ ಪ್ರದರ್ಶನ ಏರ್ಪಡಿಸಲಾಗಿತ್ತು.

ರಘುರಾಜ್ ಹೆಚ್.ಕೆ…9449553305…

Related Articles

2 comments

GeorgeZew July 20, 2025 - 8:33 pm

Elevate your look at MenSpire Singapore—the best barber crafting precision styles in a chic, modern space. Expect top-tier service and sharp results every time.

Reply
receptfritt cialis September 18, 2025 - 1:40 pm

Köp Cialis tryggt – Vill du köpa Cialis tryggt? Vi erbjuder säkra online-beställningar med diskret leverans och garanterad kvalitet. Återfå ditt självförtroende enkelt och smidigt.

Reply

Leave a Comment

Latest news
ಅಂಬು ಗ್ಯಾಂಗಿನ ಹುಡುಗರ ಮಧ್ಯೆ ಕಿತ್ತಾಟ ರಾಮಿನಕೊಪ್ಪದ ಉಮೇಶ ಕುಳ್ಳಿ ಕಿರಣನನ್ನು ಕೊಲೆ ಮಾಡಲು ಕಾರಣವೇನು..? ಶಾಂತಿನಗರದಲ್ಲಿ ಸೌಹಾರ್ದತೆಗೆ ಸಾಕ್ಷಿಯಾದ ಸಂಭ್ರಮದ ಈದ್ ಮೀಲಾದ್...! ಶಿವಮೊಗ್ಗ ಉಪವಿಭಾಗಾಧಿಕಾರಿಯಾಗಿ ಡಾ. ಮೈತ್ರಿ ಹೆಚ್ ಪಿ, ಎಸ್ ಮುಂದುವರಿಕೆ..! ಶಿವಮೊಗ್ಗದಲ್ಲಿ ‘ಅವಿಸ್ಮರಣೀಯ ಪ್ರಕರಣಗಳು’ ಕೃತಿ ಬಿಡುಗಡೆ..! Shivamogga breaking: ಶಿವಮೊಗ್ಗ ಉಪವಿಭಾಗಾಧಿಕಾರಿಯಾಗಿ ಮತ್ತೆ ಜಿ ಹೆಚ್ ಸತ್ಯನಾರಾಯಣ ಮುಂದುವರಿಕೆ...?! ಡಾ. ಮೈತ್ರಿ... Big news : ಜಿಪಿಟಿ ನೇಮಕಾತಿಯಲ್ಲಿ ಇಂಗ್ಲಿಷ್ ಶಿಕ್ಷಕರ ಹುದ್ದೆ ಗಣನೀಯ ಕಡಿತ: ಸರ್ಕಾರದ ವಿರುದ್ಧ ಆಕಾಂಕ್ಷಿಗಳ ತೀವ್ರ ... ಸೇವೆಯೇ ಶಿಕ್ಷಣ ಇಲಾಖೆಯ ಮುಖ್ಯ ಧ್ಯೇಯ ಸಚಿವ ಎಸ್.ಮಧು ಬಂಗಾರಪ್ಪ..! ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR): 98.53% ಡಿಜಿಟಲೀಕರಣ ಪೂರ್ಣ..! Big news :  ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ನಲ್ಲಿ  ಮಹತ್ವದ ಬದಲಾವಣೆ..! ಯಾರಿಗೆ ಯಾವ ಸ್ಥಾನ..?! ಕೋಟೆ ಪೊಲೀಸರ ಖಡಕ್ ಕಾರ್ಯಾಚರಣೆ ವಿದ್ಯಾನಗರದ ಎವರ್ ಗ್ರೀನ್ ಬ್ಯೂಟಿ ಪಾರ್ಲರ್ ಮೇಲೆ ದಾಳಿ  ಒಬ್ಬನ ಬಂಧನ ಇನ್ನೊಬ್ಬಳು ಪ...