Home ರಾಜ್ಯಶಿವಮೊಗ್ಗ ಪೊಲೀಸರ ಭರ್ಜರಿ ಕಾರ್ಯಾಚರಣೆ : ಗನ್ ನ ಹಿಂಭಾಗದಿಂದ, ತಲೆ ಮತ್ತು ಮೈ ಕೈಗೆ ಹೊಡೆದು ಮಾರಣಾಂತಿಕ ಹಲ್ಲೆ ಮಾಡಿ, ಗನ್ ತೋರಿಸಿ ಕೊಲೆ ಮಾಡುವುದಾಗಿ ಜೀವ ಬೆದರಿಕೆ ಹಾಕಿದವನ ಬಂಧನ..!!

ಶಿವಮೊಗ್ಗ ಪೊಲೀಸರ ಭರ್ಜರಿ ಕಾರ್ಯಾಚರಣೆ : ಗನ್ ನ ಹಿಂಭಾಗದಿಂದ, ತಲೆ ಮತ್ತು ಮೈ ಕೈಗೆ ಹೊಡೆದು ಮಾರಣಾಂತಿಕ ಹಲ್ಲೆ ಮಾಡಿ, ಗನ್ ತೋರಿಸಿ ಕೊಲೆ ಮಾಡುವುದಾಗಿ ಜೀವ ಬೆದರಿಕೆ ಹಾಕಿದವನ ಬಂಧನ..!!

by EDITOR NEWS WARRIORS
0 comments
     ಮೊಹಮ್ಮದ್ ರಿಯಾಬ್,  24 ವರ್ಷ, ಅಣ್ಣಾನಗರ, ಶಿವಮೊಗ್ಗ ಈತನು ತನ್ನ ಪರಿಚಯಸ್ಥನಾದ ಅಜರ್ ನಿಗೆ  ದ್ವಿ ಚಕ್ರ ವಾಹನವನ್ನು ಮಾರಾಟ  ಮಾಡಿದ್ದು, ಅಜರ್ ನು ಬೈಕ್ ನ ಹಣವನ್ನು ಕೊಡದೇ ಸತಾಯಿಸುತ್ತಿದ್ದು,  ದಿನಾಂಕಃ 08-04-2023  ರಂದು ದೊಡ್ಡಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ಇಲಿಯಾಜ್ ನಗರದ ನ್ಯಾಮತ್ ಶಾದಿ ಮಹಲ್ ಬಳಿ ಅಜರ್  ನಿಂತಿದ್ದಾಗ ಬೈಕ್ ನ ಹಣವನ್ನು ಕೊಡು ಎಂದು ಮೊಹಮ್ಮದ್ ರಿಯಾಬ್ ನು ಕೇಳಿದ್ದಕ್ಕೆ, ಆತನನ್ನು ಕೊಲೆ ಮಾಡುವ ಉದ್ದೇಶದಿಂದ ಅಜರ್ ನು ತನ್ನ ಬಳಿ ಇದ್ದ ಗನ್ ನ ಹಿಂಭಾಗದಿಂದ, ತಲೆ ಮತ್ತು ಮೈ ಕೈಗೆ ಹೊಡೆದು ಮಾರಣಾಂತಿಕ ಹಲ್ಲೆ ಮಾಡಿ, ಗನ್ ತೋರಿಸಿ ಕೊಲೆ ಮಾಡುವುದಾಗಿ  ಜೀವ ಬೆದರಿಕೆ ಹಾಕಿರುತ್ತಾನೆಂದು ನೀಡಿದ ದೂರಿನ ಮೇರೆಗೆ ಗುನ್ನೆ ಸಂಖ್ಯೆ 0118/2023 ಭಾರತೀಯ ಶಸ್ತ್ರಾಸ್ತ್ರ ಕಾಯ್ದೆ ಮತ್ತು ಮಾರಣಾಂತಿಕ ಹಲ್ಲೆ ಪ್ರಕರಣ ದಾಖಲಿಸಲಾಗಿರುತ್ತದೆ. 

   ಸದರಿ ಪ್ರಕರಣದ ಆರೋಪಿತನ ಪತ್ತೆ ಬಗ್ಗೆ  ಜಿಲ್ಲಾ ವರಿಷ್ಠಾಧಿಕಾರಿಗಳಾದ ಮಿಥುನ್ ಕುಮಾರ್ ಜಿ.ಕೆ, ಮತ್ತು  ಅನಿಲ್ ಕುಮಾರ್ ಭೂಮರಡ್ಡಿ ಹೆಚ್ಚುವರಿ ಪೊಲೀಸ್ ಅಧಿಕ್ಷಕರು, ಶಿವಮೊಗ್ಗ ಜಿಲ್ಲೆ ರವರ ಮಾರ್ಗದರ್ಶನದಲ್ಲಿ,  ಬಾಲರಾಜ್ ಪೊಲೀಸ್ ಉಪಾಧಿಕ್ಷಕರು, ಶಿವಮೊಗ್ಗ – ಎ ಉಪ ವಿಭಾಗ ರವರ ಮೇಲ್ವಿಚಾರಣೆಯಲ್ಲಿ,  ಅಂಜನ್ ಕುಮಾರ್ ಪೊಲೀಸ್ ನಿರೀಕ್ಷಕರು, ದೊಡ್ಡಪೇಟೆ ಪೊಲೀಸ್ ಠಾಣೆ,  ವಸಂತ್ ಪೊಲೀಸ್ ಉಪ ನಿರೀಕ್ಷಕರು, ದೊಡ್ಡಪೇಟೆ ಪೊಲೀಸ್ ಠಾಣೆ ರವರ ನೇತೃತ್ವದಲ್ಲಿ,  ಮಂಜುನಾಥ್, ಎಎಸ್ಐ, ಪೂರ್ವ ಸಂಚಾರಿ ಪೊಲೀಸ್ ಠಾಣೆ, ಶಿವಮೊಗ್ಗ,  ದೊಡ್ಡಪೇಟೆ ಪೊಲೀಸ್ ಠಾಣೆಯ ಎಎಸ್ಐ   ಚೂಡಾಮಣಿ, ಪಿಸಿ ರಮೇಶ್ ಮತ್ತು ರೌಡಿ ನಿಗ್ರಹ ದಳದ  ಸಿಬ್ಬಂಧಿಗಳಾದ ಹೆಚ್.ಸಿ ಹಾಲಪ್ಪ, ಅಶೋಕ ಮತ್ತು ಮನೋಹರ್ ಹಾಗೂ ಸಿಪಿಸಿ ಗುರುನಾಯ್ಕ, ನಾಗಪ್ಪ, ಹರೀಶ್ ನಾಯ್ಕ, ವಸಂತ, ರಮೇಶ್,  ಆಕಾಶ್, ಶರತ್ ಮತ್ತು ತಮ್ಮಣ್ಣ ರವರುಗಳನ್ನೊಳಗೊಂಡ ವಿಶೇಷ ತನಿಖಾ ತಂಡವನ್ನು ರಚನೆ ಮಾಡಲಾಗಿರುತ್ತದೆ. 

ಸದರಿ ತನಿಖಾ ತಂಡವು ಇಂದು ಸದರಿ ಪ್ರಕರಣದ ಆರೋಪಿತನಾದ ಅಜರ್ @ ಮೊಹಮ್ಮದ್ ಅಜರ್, 25 ವರ್ಷ, 3ನೇ ಕ್ರಾಸ್ ಇಲಿಯಾಜ್ ನಗರ, ಶಿವಮೊಗ್ಗ ಈತನನ್ನು ದಸ್ತಗಿರಿ ಮಾಡಿ, ವಿಚಾರಣೆಗೊಳಪಡಿಸಿದ್ದು, ತಾನು ಅಕ್ರಮವಾಗಿ ಶಸ್ತ್ರಾಸ್ತ್ರವನ್ನು ಹೊಂದಿರುವುದಾಗಿ ಮಾಹಿತಿ ನೀಡಿದ ಮೇರೆಗೆ, ಆರೋಪಿತನಿಂದ ಒಂದು ಕಂಟ್ರಿ ಮೇಡ್ ಪಿಸ್ತೂಲ್, ಒಂದು ಮೇಡ್ ಇನ್ ಬೆಂಗಳೂರು ಇಂಡಿಯಾ ಏರ್ ಗನ್, ಏರ್ ಗನ್ ಗುಂಡುಗಳು, 100 ಎಂಎಲ್ ನ ಡ್ರಗ್ ಮಿಶ್ರಿತವಿರುವ ಮೋನೋಕಾಫ್ ಪ್ಲಸ್ ನ ಒಟ್ಟು 156 ಬಾಟಲಿಗಳನ್ನುಅಮಾನತ್ತು ಪಡಿಸಿಕೊಂಡಿರುತ್ತಾರೆ.    

  ಸದರಿ ತನಿಖಾ ತಂಡದ ಉತ್ತಮ ಕಾರ್ಯವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್ ಕುಮಾರ್ ಜಿ ಕೆ ಅವರು ಅಭಿನಂದಿಸಿದ್ದಾರೆ....

Related Articles

Latest news
ಸೇವೆಯೇ ಶಿಕ್ಷಣ ಇಲಾಖೆಯ ಮುಖ್ಯ ಧ್ಯೇಯ ಸಚಿವ ಎಸ್.ಮಧು ಬಂಗಾರಪ್ಪ..! ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR): 98.53% ಡಿಜಿಟಲೀಕರಣ ಪೂರ್ಣ..! Big news :  ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ನಲ್ಲಿ  ಮಹತ್ವದ ಬದಲಾವಣೆ..! ಯಾರಿಗೆ ಯಾವ ಸ್ಥಾನ..?! ಕೋಟೆ ಪೊಲೀಸರ ಖಡಕ್ ಕಾರ್ಯಾಚರಣೆ ವಿದ್ಯಾನಗರದ ಎವರ್ ಗ್ರೀನ್ ಬ್ಯೂಟಿ ಪಾರ್ಲರ್ ಮೇಲೆ ದಾಳಿ  ಒಬ್ಬನ ಬಂಧನ ಇನ್ನೊಬ್ಬಳು ಪ... Big news : ಗಣಿ ಮತ್ತು ಭೂವಿಜ್ಞಾನ ಇಲಾಖೆಯಲ್ಲಿ ಬೃಹತ್ ಶಸ್ತ್ರಚಿಕಿತ್ಸೆ: 22 ಹಿರಿಯ ಭೂವಿಜ್ಞಾನಿಗಳ ವರ್ಗಾವಣೆ..! ದ... ಜಿಲ್ಲೆಯಲ್ಲಿ ಭಾರತ್ ಜೋಡೋ ಯುವಕ ಸಂಘಗಳ ಸ್ಥಾಪನೆಗೆ ಕ್ರಮ : ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ..! ಬರ ಪರಿಸ್ಥಿತಿ ನಿರ್ವಹಣೆ: ತಂಡವಾಗಿ ಕರ್ತವ್ಯ ನಿರ್ವಹಿಸೋಣ – ಜಿಲ್ಲಾಧಿಕಾರಿಗಳ ಕರೆ..! ಸಾಗುವಾನಿ ಮರಗಳ ಕಡಿತಲೆ ಕರಕುಚ್ಚಿಯ ಕೃಷ್ಣಮೂರ್ತಿ ಬಂಧನ..! Shivamogga breaking : ಬ್ಯೂಟಿ ಸ್ಪಾ ಅಡ್ಡೆ ಮೇಲೆ ತುಂಗಾನಗರ ಪೊಲೀಸರ ರೈಡ್..! ಉಳಿದ ಸ್ಪಾಗಳ ಕಥೆ ಏನು..?! Shivamogga breaking : ನಕಲಿ ಬಂಗಾರದ ಜಾಲ ಬೆನ್ನತ್ತಿದ ಪೊಲೀಸರು ತೀರ್ಥಹಳ್ಳಿ ಮೂಲದ ಒಬ್ಬ ಅರೆಸ್ಟ್..?! ಇದರಲ್ಲಿ ಶಿ...