Home ರಾಜ್ಯಜೆಡಿಎಸ್ ಉಪಾಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ನೀಡಿದ ಕಾರ್ಪೋರೇಟರ್ ಸತ್ಯನಾರಾಯಣ್ ರಾಜು..!!

ಜೆಡಿಎಸ್ ಉಪಾಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ನೀಡಿದ ಕಾರ್ಪೋರೇಟರ್ ಸತ್ಯನಾರಾಯಣ್ ರಾಜು..!!

by EDITOR NEWS WARRIORS
0 comments

ಶಿವಮೊಗ್ಗ : ಶಿವಮೊಗ್ಗದಲ್ಲಿ ಸಾಕಷ್ಟು ಅಭಿವೃದ್ದಿ ಕೆಲಸಗಳು ಆಗಿದೆ ಹಾಗೆಯೇ ಜನ ಸಮಸ್ಯೆಗಳು ಇದೆ ಅಲ್ಲದೆ ಇಡೀ ಭಾರತದಲ್ಲಿ ಶಿವಮೊಗ್ಗ ಒಂದು ಶಕ್ತಿಕೇಂದ್ರವಾಗಿರುವ ಚುನಾವಣಾ ಅಖಾಡದಿಂದ ಹಿಂದೆ ಸರಿಯುವ ಮಾತಿಲ್ಲ, ಒಂದಿಷ್ಟು ಸ್ವಾಭಿಮಾನದ ಪ್ರಶ್ನೆ ಅದರ ಮೌಲ್ಯಕ್ಕಾಗಿ ನಾನು ಜೆಡಿಎಸ್ ಉಪಾಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ಸಲ್ಲಿಸುತ್ತಿದ್ದೇನೆ ಎಂದು ಕಾರ್ಪೋರೇಟರ್ ಸತ್ಯನಾರಾಯಣ್ ರಾಜುರವರು ತಿಳಿಸಿದರು.


ಅವರು ಸೋಮವಾರ ಮೀಡಿಯಾ ಹೌಸ್‌ನಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ ರಾಜಕೀಯ ಪಕ್ಷಗಳಲ್ಲಿ ಅಸಮಾಧಾನಗಳು, ಬಿನ್ನಾಭಿಪ್ರಾಯಗಳು ಸಾಮಾನ್ಯವಾಗಿದೆ, ಇದೀಗ ಶಿವಮೊಗ್ಗ ವಿಧಾನಸಭಾ ಕ್ಷೇತ್ರದಲ್ಲಿ ಕ್ಷಿಪ್ರ ಬದಲಾವಣೆ ಎದುರಾಗಿದೆ. ರಾಜಕೀಯ ಮುತ್ಸದ್ದಿ, ಕಾರ್ಮಿಕ ನಾಯಕರಾಗಿದ್ದಂತಹ ಆಯನೂರು ಮಂಜುನಾಥ್‌ರವರು ಶಾಂತಿ-ಸೌಹಾರ್ಧತೆ ಅಭಿವೃದ್ದಿ ಬಯಸಿ ಜೆಡಿಎಸ್ ಸೇರ್ಪಡೆಗೊಂಡು ಅಭ್ಯರ್ಥಿಯಾಗಿ ಕಣದಲ್ಲಿರುವುದು ಸಂತಸದ ಸಂಗತಿ, ಈ ನಡುವೆ ಮಾಜೀ ಶಾಸಕರಾದ ಕೆ.ಬಿ ಪ್ರಸನ್ನಕುಮಾರ್‌ರವರು ಕೂಡ ಜೆಡಿಎಸ್‌ಗೆ ಬಂದಿರುವುದು ಮಲೆನಾಡಿನ ಜೆಡಿಎಸ್‌ಗೆ ಆನೆ ಬಲ ಬಂದಂತಾಗಿದೆ ಈ ಕುರಿತಂತಾಗಲಿ, ಜೆಡಿಎಸ್ ಪಕ್ಷದ ಬಗ್ಗೆಯಾಗಲಿ ಯಾವ ತಕರಾರು ಇಲ್ಲ, ಆಕ್ಷೆಪಣೆನೂ ಇಲ್ಲ, ಜಿಲ್ಲಾಧ್ಯಕ್ಷರು ಒಂದಿಷ್ಟು ವರ್ತನೆ ಬದಲು ಮಾಡಿಕೊಳ್ಳಬೇಕಿದೆ, ಕಾರ್ಪೋರೇಟರ್ ಸತ್ಯನಾರಾಯಣ್ ರಾಜುರವರು ಹೇಳಿದರು.

ಮಾಜೀ ಶಾಸಕರಾದ ಶಾರದಾಪೂರ್ಯನಾಯ್ಕರವರು ಕಳೆದ ಹನ್ನೆರೆಡು ವರ್ಷಗಳ ಹಿಂದೆ ಈ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೊಳಿಸಿದ್ದರು ಅದರಂತೆ ಪ್ರಾಮಾಣಿಕವಾಗಿ ಪಕ್ಷದ ಕಾರ್ಯಕರ್ತನಾಗಿ ಕೆಲಸ ಮಾಡಿದ್ದೇನೆ, ಮಹಾನಗರ ಪಾಲಿಕೆಯ ೧೫ನೇ ವಾರ್ಡಿಗೆ ಕಾಪೋರೇಟರ್ ಸ್ಥಾನಕ್ಕೆ ಸ್ಪರ್ಧಿಸುವ ಅವಕಾಶವು ದೊರಕಿಸಿಕೊಟ್ಟರು ಪಾಲಿಕೆ ಸದಸ್ಯನಾಗಿ ಕೆಲಸ ಮಾಡುತ್ತಿದ್ದೇನೆ, ಈ ನಿಟ್ಟಿನಲ್ಲಿ ಪಕ್ಷದ ಯಾವುದೇ ಹುದ್ದೆ ಅಗತ್ಯವಾಗಿಲ್ಲ, ಜೆಡಿಎಸ್ ಪಕ್ಷದ ಓರ್ವ ಸಾಮಾನ್ಯ ಕಾರ್ಯಕರ್ತನಾಗಿ ಕೆಲಸ ಮಾಡಲು ಮುಂದಾಗುತ್ತೇನೆ, ಸಧ್ಯಕ್ಕೆ ಉಪಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದೇನೆ ಮುಂದೆ ಕಾರ್ಮಿಕರ ದಿನಾಚರಣೆಯ ಂದು ಪ್ರಜಾಧ್ವನಿ ಸಂಸ್ಥೆಯ ಸಭೆ ಮಾಡುತ್ತೇವೆ ಅಂದು ಸಭೆಯಲ್ಲಿ ನಿರ್ಣಯಿಸಿದಂತೆ ಮುಂದಿನ ನಡೆ ನಿರ್ಧರಿಸುತ್ತೇನೆ ಒಂದು ವೇಳೆ ಪಾಲಿಕೆ ಸದಸ್ಯತ್ವಕ್ಕೂ ರಾಜಿನಾಮೆ ಸಲ್ಲಿಸಿ ಮುಂದುವರೆಯುವುದಾದರೆ ಖಂಡಿತವಾಗಿಯು ಅದರಂತೆ ನಡೆದುಕೊಳ್ಳುತ್ತೇನೆ ಜನಹಿತಕ್ಕಾಗಿ ತಿರ್ಮಾನಿಸುವುದು ಪ್ರತಿ ಜನಪ್ರತಿನಿಧಿಯ ಕರ್ತವ್ಯವಾಗಿದೆ ಎಂದು ಕಾರ್ಪೋರೇಟರ್ ಸತ್ಯನಾರಾಯಣ್ ರಾಜುರವರು ತಿಳಿಸಿದರು.

ಯಾರು ೧೫ನೇ ವಾರ್ಡಿನ ಜನತೆಯ ಹಾಗೂ ಶಿವಮೊಗ್ಗ ಗ್ರಾಮಾಂತರ, ನಗರ ಕೂಲಿ ಕಾರ್ಮಿಕರ, ಬಡ-ಮಧ್ಯಮ ಜನರ ಹಿತ ಬಯಸುತ್ತಾರೋ.. ಈ ನೆಲೆಯ ಶಾಂತಿಯನ್ನು ಕಾಪಾಡುವಲ್ಲಿ, ಸಹಬಾಳ್ವೆಗಾಗಿ, ಸೌಹಾರ್ಧತೆಗಾಗಿ ಶ್ರಮಿಸುತ್ತಾರೋ ಅಂತಹವರಿಗೆ ನಮ್ಮ ಬೆಂಬಲ ಇರುತ್ತದೆ ಎಂದು ಕಾರ್ಪೋರೇಟರ್ ಸತ್ಯನಾರಾಯಣ್ ರಾಜುರವರು ಗೋಷ್ಠಿಯಲ್ಲಿ ವಿವರಿಸಿದರು…

Related Articles

Latest news
ಅಂಬು ಗ್ಯಾಂಗಿನ ಹುಡುಗರ ಮಧ್ಯೆ ಕಿತ್ತಾಟ ರಾಮಿನಕೊಪ್ಪದ ಉಮೇಶ ಕುಳ್ಳಿ ಕಿರಣನನ್ನು ಕೊಲೆ ಮಾಡಲು ಕಾರಣವೇನು..? ಶಾಂತಿನಗರದಲ್ಲಿ ಸೌಹಾರ್ದತೆಗೆ ಸಾಕ್ಷಿಯಾದ ಸಂಭ್ರಮದ ಈದ್ ಮೀಲಾದ್...! ಶಿವಮೊಗ್ಗ ಉಪವಿಭಾಗಾಧಿಕಾರಿಯಾಗಿ ಡಾ. ಮೈತ್ರಿ ಹೆಚ್ ಪಿ, ಎಸ್ ಮುಂದುವರಿಕೆ..! ಶಿವಮೊಗ್ಗದಲ್ಲಿ ‘ಅವಿಸ್ಮರಣೀಯ ಪ್ರಕರಣಗಳು’ ಕೃತಿ ಬಿಡುಗಡೆ..! Shivamogga breaking: ಶಿವಮೊಗ್ಗ ಉಪವಿಭಾಗಾಧಿಕಾರಿಯಾಗಿ ಮತ್ತೆ ಜಿ ಹೆಚ್ ಸತ್ಯನಾರಾಯಣ ಮುಂದುವರಿಕೆ...?! ಡಾ. ಮೈತ್ರಿ... Big news : ಜಿಪಿಟಿ ನೇಮಕಾತಿಯಲ್ಲಿ ಇಂಗ್ಲಿಷ್ ಶಿಕ್ಷಕರ ಹುದ್ದೆ ಗಣನೀಯ ಕಡಿತ: ಸರ್ಕಾರದ ವಿರುದ್ಧ ಆಕಾಂಕ್ಷಿಗಳ ತೀವ್ರ ... ಸೇವೆಯೇ ಶಿಕ್ಷಣ ಇಲಾಖೆಯ ಮುಖ್ಯ ಧ್ಯೇಯ ಸಚಿವ ಎಸ್.ಮಧು ಬಂಗಾರಪ್ಪ..! ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR): 98.53% ಡಿಜಿಟಲೀಕರಣ ಪೂರ್ಣ..! Big news :  ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ನಲ್ಲಿ  ಮಹತ್ವದ ಬದಲಾವಣೆ..! ಯಾರಿಗೆ ಯಾವ ಸ್ಥಾನ..?! ಕೋಟೆ ಪೊಲೀಸರ ಖಡಕ್ ಕಾರ್ಯಾಚರಣೆ ವಿದ್ಯಾನಗರದ ಎವರ್ ಗ್ರೀನ್ ಬ್ಯೂಟಿ ಪಾರ್ಲರ್ ಮೇಲೆ ದಾಳಿ  ಒಬ್ಬನ ಬಂಧನ ಇನ್ನೊಬ್ಬಳು ಪ...