Home ತೀರ್ಥಹಳ್ಳಿBig news:ತೀರ್ಥಹಳ್ಳಿ :ಮಾಳೂರು ಪೊಲೀಸರ ಖಡಕ್ ಕಾರ್ಯಾಚರಣೆ..! ಗಾಂಜಾ ಸಾಗಿಸುತ್ತಿದ್ದ ಮೂವರ ಬಂಧನ ಗಾಂಜಾ ಸಮೇತ ಫಾರ್ಚುನರ್ ಕಾರು ವಶ..!

Big news:ತೀರ್ಥಹಳ್ಳಿ :ಮಾಳೂರು ಪೊಲೀಸರ ಖಡಕ್ ಕಾರ್ಯಾಚರಣೆ..! ಗಾಂಜಾ ಸಾಗಿಸುತ್ತಿದ್ದ ಮೂವರ ಬಂಧನ ಗಾಂಜಾ ಸಮೇತ ಫಾರ್ಚುನರ್ ಕಾರು ವಶ..!

by EDITOR NEWS WARRIORS
0 comments

ತೀರ್ಥಹಳ್ಳಿ: ಶಿವಮೊಗ್ಗದಿಂದ ಫಾರ್ಚುನರ್ ಕಾರಿನಲ್ಲಿ ಸುಮಾರು 200 ಗ್ರಾಂ ಗಾಂಜಾ ತರುತ್ತಿದ್ದ ಯೂಸುಫ್ ಖಾನ್ , ಅತೀಫ್, ಮನೋಜ್ ಎನ್ನುವ ಮೂವರು ತೀರ್ಥಹಳ್ಳಿ ಮೂಲದ ಯುವಕರನ್ನು ಖಚಿತ ಮಾಹಿತಿಯ ಮೇರೆಗೆ ತೀರ್ಥಹಳ್ಳಿಯ ಯುವ ಡಿವೈಎಸ್ಪಿ ಗಜಾನನಾ ವಾಮನ್ ಸುತಾರ್ ಅವರ ಮಾರ್ಗದರ್ಶನದಲ್ಲಿ ಮಾಲೂರು ಠಾಣೆಯ ನವೀನ್ ಮಠಪತಿ ಅವರ ನೇತೃತ್ವದಲ್ಲಿ ಠಾಣೆಯ ಸಿಬ್ಬಂದಿಗಳು ಸೇರಿ ಕಾರನ್ನು ತಡೆದು ಪರಿಶೀಲಿಸಿದಾಗ 200 ಗ್ರಾಂ ಗಾಂಜಾ ಪತ್ತೆಯಾಗಿದೆ. ಹಾಗೆ ಫಾರ್ಚುನರ್ ಕಾರನ್ನು ವಶಪಡಿಸಿಕೊಂಡಿದ್ದಾರೆ.

ಈ ಮೂವರನ್ನು ಗಾಂಜಾ ಸೇವನೆ ಪರೀಕ್ಷೆಗೆ ಒಳಪಡಿಸುವ ತಯಾರಿಯಲ್ಲಿದ್ದು ನಂತರ ಕೇಸ್ ದಾಖಲಿಸುವ ಸಾಧ್ಯತೆ ಇದೆ.

ಮೂಲತ ಕುರಿ ವ್ಯಾಪಾರಿಯಾದ ಯೂಸುಫ್ ಖಾನ್ ಈ ದಂಧೆಯನ್ನು ಹಲವು ದಿನಗಳಿಂದ ಮಾಡುತ್ತಿದ್ದ ಎನ್ನುವ ಅನುಮಾನ ಪೊಲೀಸ್ ಇಲಾಖೆಗೆ ಇದೆ ಆದರೆ ಈತ ಸಿಕ್ಕಿಕೊಂಡಿರಲಿಲ್ಲ. ಈಗ ಬಂದ ಖಚಿತ ಮಾಹಿತಿಯ ಮೇರೆಗೆ ಸಿಕ್ಕಿಬಿದ್ದಿದ್ದಾರೆ. ಇವರ ಇನ್ನಷ್ಟು ಮಾಹಿತಿಗಳನ್ನು ಪೊಲೀಸ್ ಇಲಾಖೆ ಕಲೆ ಹಾಕುತ್ತಿದ್ದು ಇವರ ಈ ಗಾಂಜಾ ಜಾಲ ಇನ್ನಷ್ಟು ಕಡೆ ಹಬ್ಬಿರುವ ಸಾಧ್ಯತೆ ಇದೆ.

ಗಾಂಜಾ ಹಿಡಿಯುವಲ್ಲಿ ತೀರ್ಥಹಳ್ಳಿ ಪೊಲೀಸರ ಪಾತ್ರ ಮೆಚ್ಚುವಂತದ್ದು :

ಗಾಂಜಾ ಹಿಡಿಯುವಲ್ಲಿ ತೀರ್ಥಹಳ್ಳಿ ಪೊಲೀಸರು ಫುಲ್ ಅಲರ್ಟ್ ಆಗಿದ್ದು ಇತ್ತೀಚಿಗೆ ಕೋಣಂದೂರು ಭಾಗದಲ್ಲಿ ಗಾಂಜಾ ಬೆಳೆಯುತ್ತಿದ್ದ ತೋಟವನ್ನು ಖಚಿತ ಮಾಹಿತಿಯ ಮೇರೆಗೆ ವಶಪಡಿಸಿಕೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು…

ಪೊಲೀಸ್ ಇಲಾಖೆಗೆ ಸಾರ್ವಜನಿಕರ ಸಹಕಾರವು ಗಾಂಜಾ ಮಟ್ಟ ಹಾಕುವಲ್ಲಿ ಬಹಳ ಮುಖ್ಯ ಆ ನಿಟ್ಟಿನಲ್ಲಿ ಪೊಲೀಸ್ ಇಲಾಖೆಗೆ ಸಾರ್ವಜನಿಕರು ಕೂಡ ಮಾಹಿತಿ ನೀಡಬಹುದು… ಅಂತವರ ಮಾಹಿತಿಯನ್ನು ಗೌಪ್ಯವಾಗಿ ಇಡಲಾಗುವುದು ಎನ್ನುತ್ತಾರೆ ತೀರ್ಥಹಳ್ಳಿಯ ಯುವ ಡಿವೈಎಸ್ಪಿ ಗಜಾನನ್ ವಾಮನ್ ಸುತಾರ್…

ರಘುರಾಜ್ ಹೆಚ್.ಕೆ..9449553305….

Related Articles

Latest news
ಅಂಬು ಗ್ಯಾಂಗಿನ ಹುಡುಗರ ಮಧ್ಯೆ ಕಿತ್ತಾಟ ರಾಮಿನಕೊಪ್ಪದ ಉಮೇಶ ಕುಳ್ಳಿ ಕಿರಣನನ್ನು ಕೊಲೆ ಮಾಡಲು ಕಾರಣವೇನು..? ಶಾಂತಿನಗರದಲ್ಲಿ ಸೌಹಾರ್ದತೆಗೆ ಸಾಕ್ಷಿಯಾದ ಸಂಭ್ರಮದ ಈದ್ ಮೀಲಾದ್...! ಶಿವಮೊಗ್ಗ ಉಪವಿಭಾಗಾಧಿಕಾರಿಯಾಗಿ ಡಾ. ಮೈತ್ರಿ ಹೆಚ್ ಪಿ, ಎಸ್ ಮುಂದುವರಿಕೆ..! ಶಿವಮೊಗ್ಗದಲ್ಲಿ ‘ಅವಿಸ್ಮರಣೀಯ ಪ್ರಕರಣಗಳು’ ಕೃತಿ ಬಿಡುಗಡೆ..! Shivamogga breaking: ಶಿವಮೊಗ್ಗ ಉಪವಿಭಾಗಾಧಿಕಾರಿಯಾಗಿ ಮತ್ತೆ ಜಿ ಹೆಚ್ ಸತ್ಯನಾರಾಯಣ ಮುಂದುವರಿಕೆ...?! ಡಾ. ಮೈತ್ರಿ... Big news : ಜಿಪಿಟಿ ನೇಮಕಾತಿಯಲ್ಲಿ ಇಂಗ್ಲಿಷ್ ಶಿಕ್ಷಕರ ಹುದ್ದೆ ಗಣನೀಯ ಕಡಿತ: ಸರ್ಕಾರದ ವಿರುದ್ಧ ಆಕಾಂಕ್ಷಿಗಳ ತೀವ್ರ ... ಸೇವೆಯೇ ಶಿಕ್ಷಣ ಇಲಾಖೆಯ ಮುಖ್ಯ ಧ್ಯೇಯ ಸಚಿವ ಎಸ್.ಮಧು ಬಂಗಾರಪ್ಪ..! ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR): 98.53% ಡಿಜಿಟಲೀಕರಣ ಪೂರ್ಣ..! Big news :  ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ನಲ್ಲಿ  ಮಹತ್ವದ ಬದಲಾವಣೆ..! ಯಾರಿಗೆ ಯಾವ ಸ್ಥಾನ..?! ಕೋಟೆ ಪೊಲೀಸರ ಖಡಕ್ ಕಾರ್ಯಾಚರಣೆ ವಿದ್ಯಾನಗರದ ಎವರ್ ಗ್ರೀನ್ ಬ್ಯೂಟಿ ಪಾರ್ಲರ್ ಮೇಲೆ ದಾಳಿ  ಒಬ್ಬನ ಬಂಧನ ಇನ್ನೊಬ್ಬಳು ಪ...