Home ರಾಜ್ಯಮಲೆನಾಡಿನಲ್ಲಿ  ಇಸ್ರೋ ವಿಜ್ಙಾನಿ ಪ್ರತ್ಯಕ್ಷ.

ಮಲೆನಾಡಿನಲ್ಲಿ  ಇಸ್ರೋ ವಿಜ್ಙಾನಿ ಪ್ರತ್ಯಕ್ಷ.

by Reporter Smg
0 comments

ಶಿವಮೊಗ್ಗ : ಚಂದ್ರಯಾನ-3 ಆರಂಭವಾಗಿನಿಂದ ವಿಕ್ರಮ ಚಂದ್ರನ ಮೇಲೆ ಪಾದ ಸ್ಪರ್ಶಮಾಡುವ ತನಕ ಇಡೀ ವಿಶ್ವ ಕಾತುರದಿಂದ ಕಾದು ಭಾರತದ ಕಡೆ ನಿಬ್ಬೆರಗಾಗಿ ನೋಡಿದೆ.
ಯಶಸ್ಸಿನ ಸಂಭ್ರಮ ಹಸಿರಾಗಿರುವಾಗಲೇ ಚಂದ್ರಯಾನ-3 ತಂಡದಲ್ಲಿದ್ದ ಇಸ್ರೋ ವಿಜ್ಙಾನಿ ಒಬ್ಬರು ಮಲೆನಾಡಿನಲ್ಲಿ ಇಂದು ಕಾಣಿಸಿಕೊಂಡಿದ್ದಾರೆ.
ತೀರ್ಥಹಳ್ಳಿ ತಾಲೂಕಿನ ಅರಳಸುರಳಿಯ ದಿ.ಗೋವಿಂದರಾಜ ಉಡುಪರ ಪುತ್ರ ಸುಬ್ರಹ್ಮಣ್ಯ ಉಡುಪರು ನಮ್ಮ ಜಿಲ್ಲೆಯ ಹೆಮ್ಮೆಯ ಇಸ್ರೋ ತಂಡದ ವಿಜ್ಙಾನಿ.
ಇಂದು ಮಾಜಿ ಗೃಹ ಸಚಿವ ಆರಗ ಜ್ಙಾನೇಂದ್ರರವರು ತವರಿಗೆ ಆಗಮಿಸಿದ್ದ ವಿಜ್ಙಾನಿ ಸುಬ್ರಹ್ಮಣ್ಯ ಉಡುಪರನ್ನು ಭೇಟಿ ಮಾಡಿ ಅಭಿನಂದಿಸಿದರು.
ಇದೇ ಸಂಧರ್ಭದಲ್ಲಿ ಮಾತನಾಡಿದ ಶಾಸಕ ಆರಗ ಜ್ಙಾನೇಂದ್ರ ಆಗಸ್ಟ್ 23ರ ನಂತರ ಇಡೀ ಪ್ರಪಂಚ ಭಾರತವನ್ನು ಬಹಳ ಬೆರಗಾಗಿ ನೋಡುತ್ತಿದೆ ಚಂದ್ರಯಾನ -3 ಯೋಜನೆಯಲ್ಲಿ ಇಸ್ರೋನ ಸುಮಾರು 500ಕ್ಕೂ ಹೆಚ್ಚು ವಿಜ್ಙಾನಿಗಳು ಕೆಲಸ ಮಾಡಿದ್ದಾರೆ. ಅವರಲ್ಲಿ ನಮ್ಮ ಜಿಲ್ಲೆಯ ನಮ್ಮ ಊರಿನವರು ಇರುವುದು ನಮ್ಮ ಹೆಮ್ಮೆ‌. ನಮ್ಮ ಗುರುಗಳಾದ ದಿ.ಗೋವಿಂದರಾಜ ಉಡುಪರ ಪುತ್ರ ಸುಬ್ರಹ್ಮಣ್ಯ ಉಡುಪರು ಇವರಿಂದ ಇನ್ನಷ್ಟು ಹೆಮ್ಮೆಯ ಕೆಲಸಗಳು ವಿಜ್ಙಾನ ಕ್ಷೇತ್ರದಲ್ಲಿ ಮುಂದುವರಿಯಲಿ ಎಂದು ಆಶಿಸಿದರು.
ನಂತರ ತೀರ್ಥಹಳ್ಳಿ ತಾಲೂಕಿನ  ಮತ್ತೊಬ್ಬ ವಿಜ್ಙಾನಿ ಕೋಣಂದೂರು ಲಿಂಗಪ್ಪನವರ ಪುತ್ರಿ ಶಿವಾನಿಯವರಿಗೆ ಅಭಿನಂದನೆ ಸಲ್ಲಿಸಿದರು.

Related Articles

Latest news
ಅಂಬು ಗ್ಯಾಂಗಿನ ಹುಡುಗರ ಮಧ್ಯೆ ಕಿತ್ತಾಟ ರಾಮಿನಕೊಪ್ಪದ ಉಮೇಶ ಕುಳ್ಳಿ ಕಿರಣನನ್ನು ಕೊಲೆ ಮಾಡಲು ಕಾರಣವೇನು..? ಶಾಂತಿನಗರದಲ್ಲಿ ಸೌಹಾರ್ದತೆಗೆ ಸಾಕ್ಷಿಯಾದ ಸಂಭ್ರಮದ ಈದ್ ಮೀಲಾದ್...! ಶಿವಮೊಗ್ಗ ಉಪವಿಭಾಗಾಧಿಕಾರಿಯಾಗಿ ಡಾ. ಮೈತ್ರಿ ಹೆಚ್ ಪಿ, ಎಸ್ ಮುಂದುವರಿಕೆ..! ಶಿವಮೊಗ್ಗದಲ್ಲಿ ‘ಅವಿಸ್ಮರಣೀಯ ಪ್ರಕರಣಗಳು’ ಕೃತಿ ಬಿಡುಗಡೆ..! Shivamogga breaking: ಶಿವಮೊಗ್ಗ ಉಪವಿಭಾಗಾಧಿಕಾರಿಯಾಗಿ ಮತ್ತೆ ಜಿ ಹೆಚ್ ಸತ್ಯನಾರಾಯಣ ಮುಂದುವರಿಕೆ...?! ಡಾ. ಮೈತ್ರಿ... Big news : ಜಿಪಿಟಿ ನೇಮಕಾತಿಯಲ್ಲಿ ಇಂಗ್ಲಿಷ್ ಶಿಕ್ಷಕರ ಹುದ್ದೆ ಗಣನೀಯ ಕಡಿತ: ಸರ್ಕಾರದ ವಿರುದ್ಧ ಆಕಾಂಕ್ಷಿಗಳ ತೀವ್ರ ... ಸೇವೆಯೇ ಶಿಕ್ಷಣ ಇಲಾಖೆಯ ಮುಖ್ಯ ಧ್ಯೇಯ ಸಚಿವ ಎಸ್.ಮಧು ಬಂಗಾರಪ್ಪ..! ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR): 98.53% ಡಿಜಿಟಲೀಕರಣ ಪೂರ್ಣ..! Big news :  ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ನಲ್ಲಿ  ಮಹತ್ವದ ಬದಲಾವಣೆ..! ಯಾರಿಗೆ ಯಾವ ಸ್ಥಾನ..?! ಕೋಟೆ ಪೊಲೀಸರ ಖಡಕ್ ಕಾರ್ಯಾಚರಣೆ ವಿದ್ಯಾನಗರದ ಎವರ್ ಗ್ರೀನ್ ಬ್ಯೂಟಿ ಪಾರ್ಲರ್ ಮೇಲೆ ದಾಳಿ  ಒಬ್ಬನ ಬಂಧನ ಇನ್ನೊಬ್ಬಳು ಪ...