Home ಶಿವಮೊಗ್ಗNews warriors Big impact : ಸ್ಮಾರ್ಟ್ ಸಿಟಿ ಯೋಜನೆ ಅಡಿಯಲ್ಲಿ ನಿರ್ಮಾಣವಾಯಿತು ವೀರ ಶಿವಮೂರ್ತಿ ವೃತ್ತ..!

News warriors Big impact : ಸ್ಮಾರ್ಟ್ ಸಿಟಿ ಯೋಜನೆ ಅಡಿಯಲ್ಲಿ ನಿರ್ಮಾಣವಾಯಿತು ವೀರ ಶಿವಮೂರ್ತಿ ವೃತ್ತ..!

by EDITOR NEWS WARRIORS
0 comments

ಶಿವಮೊಗ್ಗ: ನಗರದ ನೆಹರು ಸ್ಟೇಡಿಯಂ ವೃತಕ್ಕೆ ವೀರ ಶಿವಮೂರ್ತಿ ವೃತ್ತ ಎಂದು ಹೆಸರಿಡಲಾಗಿತ್ತು . ಹಿಂದೆ ಅದನ್ನು ಕಲ್ಲಿನ ಬೋರ್ಡ್ ನಲ್ಲಿ ಬರೆದು ಹಾಕಲಾಗಿತ್ತು ಆದರೆ ಸ್ಮಾರ್ಟ್ ಸಿಟಿಯವರು ಹಾಗೂ ಮಹಾನಗರ ಪಾಲಿಕೆ ಅವರು ರಸ್ತೆಯ ಕೆಲಸ ಮಾಡುವಾಗ ಆ ವೃತ್ತದ ಫಲಕವನ್ನು ತೆಗೆದುಹಾಕಿದ್ದರು. ನಂತರ ಆಟೋ ಚಾಲಕರ ಸಂಘದವರು ಒಂದು ತಗಡು ಬೋರ್ಡನ್ನು ಹಾಕಿದ್ದರು. ಇದರ ವಿರುದ್ಧ ಹಲವು ಹಿಂದೂಪರ ಸಂಘಟನೆಗಳು ಹೋರಾಟಗಾರರು ಕೋಟೆ ರಾಜು, ರಂಜಿತ್ ರಂತಹ ಸಾಮಾಜಿಕ ಕಳಕಳಿ ಉಳ್ಳವರು ಸ್ಮಾರ್ಟ್ ಸಿಟಿ ಯೋಜನೆಯ ನೀತಿಯನ್ನು ವಿರೋಧಿಸಿದ್ದರು. ಇದರ ಬಗ್ಗೆ ವಿಸ್ತಾರವಾಗಿ ನಮ್ಮ ಪತ್ರಿಕೆ ಸುದ್ದಿ ಪ್ರಕಟಿಸಿದ್ದು ಹಾಗೂ ಮಾಜಿ ಉಪಮುಖ್ಯಮಂತ್ರಿಗಳಾದ ಕೆಎಸ್ ಈಶ್ವರಪ್ಪನವರು, ಹಾಲಿ ಶಿವಮೊಗ್ಗ ಕ್ಷೇತ್ರದ ಶಾಸಕರಾದ ಚನ್ನಬಸಪ್ಪ ಚೆನ್ನಿ ಅವರು, ಹಾಗೂ ಮಹಾನಗರ ಪಾಲಿಕೆ ಆಯುಕ್ತರು ಸ್ಮಾರ್ಟ್ ಸಿಟಿಯ ಎಂ ಡಿ ಆಗಿರುವ ಮಾಯಣ್ಣ ಗೌಡ ಅವರ ಗಮನಕ್ಕೆ ತರಲಾಗಿತ್ತು . ಹಾಗೂ ಹಿಂದೂ ಮಹಾಸಭಾ ಗಣಪತಿಯ ವಿಸರ್ಜನೆಯ ಒಳಗೆ ಸ್ಮಾರ್ಟ್ ಸಿಟಿಯ ಯೋಜನೆ ಅಡಿಯಲ್ಲಿ ಈ ವೃತ್ತವನ್ನು ನಿರ್ಮಿಸಬೇಕು ಎಂದು ಹಿಂದುಪರ ಸಂಘಟನೆಗಳ ಆಗ್ರಹವಾಗಿತ್ತು.

ಕೂಡಲೇ ಸುದ್ದಿಗೆ ಹಾಗೂ ಹಿಂದೂಪರ ಸಂಘಟನೆಗಳ ಆಗ್ರಹಕ್ಕೆ ಸ್ಪಂದಿಸಿರುವ ಸ್ಮಾರ್ಟ್ ಸಿಟಿ ಎಂ ಡಿ ಹಾಗೂ ಶಾಸಕ ಚನ್ನಬಸಪ್ಪನವರು ವೀರ ಶಿವಮೂರ್ತಿ ವೃತ್ತ ನಿರ್ಮಿಸಿದ್ದಾರೆ. ಅವರಿಗೆ ಹಿಂದೂಪರ ಸಂಘಟನೆಗಳು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

ಯಾರು ಈ ಶಿವಮೂರ್ತಿ ..?

ಹಿಂದೆ 1945 ರಲ್ಲಿ ಹಿಂದೂ ಸಂಘಟನೆಗಳ ಮಹಾಮಂಡಳದ ವತಿಯಿಂದ ಸಾರ್ವಜನಿಕ ಗಣಪತಿ ಮೂರ್ತಿ ಪ್ರತಿಷ್ಠಾಪಿಸಲಾಯಿತು. ಅಲ್ಲಿಂದ ಪ್ರತಿವರ್ಷ ಗಣಪತಿ ಮೂರ್ತಿ ಪ್ರತಿಷ್ಠಾಪನೆ ನೆರವೇರುತ್ತಿತ್ತು.

ಆದರೆ ಗಣಪತಿ ಮೂರ್ತಿ ಮೆರವಣಿಗೆ ವಿಸರ್ಜನೆ ಸಂದರ್ಭದಲ್ಲಿ ಮಸೀದಿ ಮುಂದೆ ಮಂಗಳವಾದ್ಯ ನುಡಿಸುವಂತಿಲ್ಲ ಎನ್ನುವ ಅಲಿಖಿತ ನಿಯಮವೊಂದು ಜಾರಿಯಲ್ಲಿತ್ತು ಆದರೆ 1947ರಲ್ಲಿ ಧರ್ಮಸಿಂಗ್ ಎಂಬುವರು ಮಸೀದಿ ಮುಂದೆ ತುತ್ತೂರಿ ಉದುತ್ತಾ ಮುಂದೆ ಸಾಗಿದರು. ಆಗ ಗಲಾಟೆ ಸಂಭವಿಸಿತು ಈ ಗಲಾಟೆಯಲ್ಲಿ ಶಿವಮೂರ್ತಿ ಎಂಬ 24 ವಯಸ್ಸಿನ ಯುವಕನ ಹತ್ಯೆಯಾಯಿತು .

ಮುಂದೆ ಈತನ ನೆನಪಿಗಾಗಿ ನೆಹರು ಸ್ಟೇಡಿಯಂ ವೃತ್ತಕ್ಕೆ ವೀರ ಶಿವಮೂರ್ತಿ ವೃತ್ತ ಎಂದು ಹೆಸರಿಡಲಾಯಿತು.ಆದರೆ ಮಹಾನಗರ ಪಾಲಿಕೆಯವರ ಸ್ಮಾರ್ಟ್ ಸಿಟಿ ಅವರ ಅಚತುರ್ಯದಿಂದ ಈ ವೃತ್ತಕ್ಕೆ ಪ್ರಾಮುಖ್ಯತೆ ನೀಡಿರಲಿಲ್ಲ ಆದರೆ ಈಗ ಇಂದು ಶಿವಮೊಗ್ಗ ನಗರದಾದ್ಯಂತ ಭವ್ಯ ಮೆರವಣಿಗೆಯ ಮೂಲಕ ಹಿಂದೂ ಮಹಾಸಭಾ ಗಣಪತಿಯ ವಿಸರ್ಜನೆ ದಿನವಾದ ಇಂದು ಆ ನಾಮಫಲಕ ಲೋಕಾರ್ಪಣೆ ಗೊಳ್ಳುತ್ತಿರುವುದು ವಿಶೇಷವಾಗಿದೆ.

ರಘುರಾಜ್ ಹೆಚ್.ಕೆ.9449553305.

Related Articles

Latest news
ಅಂಬು ಗ್ಯಾಂಗಿನ ಹುಡುಗರ ಮಧ್ಯೆ ಕಿತ್ತಾಟ ರಾಮಿನಕೊಪ್ಪದ ಉಮೇಶ ಕುಳ್ಳಿ ಕಿರಣನನ್ನು ಕೊಲೆ ಮಾಡಲು ಕಾರಣವೇನು..? ಶಾಂತಿನಗರದಲ್ಲಿ ಸೌಹಾರ್ದತೆಗೆ ಸಾಕ್ಷಿಯಾದ ಸಂಭ್ರಮದ ಈದ್ ಮೀಲಾದ್...! ಶಿವಮೊಗ್ಗ ಉಪವಿಭಾಗಾಧಿಕಾರಿಯಾಗಿ ಡಾ. ಮೈತ್ರಿ ಹೆಚ್ ಪಿ, ಎಸ್ ಮುಂದುವರಿಕೆ..! ಶಿವಮೊಗ್ಗದಲ್ಲಿ ‘ಅವಿಸ್ಮರಣೀಯ ಪ್ರಕರಣಗಳು’ ಕೃತಿ ಬಿಡುಗಡೆ..! Shivamogga breaking: ಶಿವಮೊಗ್ಗ ಉಪವಿಭಾಗಾಧಿಕಾರಿಯಾಗಿ ಮತ್ತೆ ಜಿ ಹೆಚ್ ಸತ್ಯನಾರಾಯಣ ಮುಂದುವರಿಕೆ...?! ಡಾ. ಮೈತ್ರಿ... Big news : ಜಿಪಿಟಿ ನೇಮಕಾತಿಯಲ್ಲಿ ಇಂಗ್ಲಿಷ್ ಶಿಕ್ಷಕರ ಹುದ್ದೆ ಗಣನೀಯ ಕಡಿತ: ಸರ್ಕಾರದ ವಿರುದ್ಧ ಆಕಾಂಕ್ಷಿಗಳ ತೀವ್ರ ... ಸೇವೆಯೇ ಶಿಕ್ಷಣ ಇಲಾಖೆಯ ಮುಖ್ಯ ಧ್ಯೇಯ ಸಚಿವ ಎಸ್.ಮಧು ಬಂಗಾರಪ್ಪ..! ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR): 98.53% ಡಿಜಿಟಲೀಕರಣ ಪೂರ್ಣ..! Big news :  ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ನಲ್ಲಿ  ಮಹತ್ವದ ಬದಲಾವಣೆ..! ಯಾರಿಗೆ ಯಾವ ಸ್ಥಾನ..?! ಕೋಟೆ ಪೊಲೀಸರ ಖಡಕ್ ಕಾರ್ಯಾಚರಣೆ ವಿದ್ಯಾನಗರದ ಎವರ್ ಗ್ರೀನ್ ಬ್ಯೂಟಿ ಪಾರ್ಲರ್ ಮೇಲೆ ದಾಳಿ  ಒಬ್ಬನ ಬಂಧನ ಇನ್ನೊಬ್ಬಳು ಪ...