Home ಶಿವಮೊಗ್ಗಆರೋಗ್ಯಸಮದಾಯ ಆರೋಗ್ಯಾಧಿಕಾರಿ ಜಯಶ್ರೀಯವರಿಗೆ ಪ್ರಾ.ಆ.ಕೇಂದ್ರ ಮೇಗರವಳ್ಳಿಯಲ್ಲಿ ಆತ್ಮೀಯ ಬೀಳ್ಕೊಡುಗೆ..!

ಸಮದಾಯ ಆರೋಗ್ಯಾಧಿಕಾರಿ ಜಯಶ್ರೀಯವರಿಗೆ ಪ್ರಾ.ಆ.ಕೇಂದ್ರ ಮೇಗರವಳ್ಳಿಯಲ್ಲಿ ಆತ್ಮೀಯ ಬೀಳ್ಕೊಡುಗೆ..!

by EDITOR NEWS WARRIORS
0 comments



ಪ್ರಾ.ಆ.ಕೇಂದ್ರ ಮೇಗರವಳ್ಳಿಯ ರಂಜದಕಟ್ಟೆ ಉಪಕೇಂದ್ರದಲ್ಲಿ ಸಮುದಾಯ ಆರೋಗ್ಯಾಧಿಕಾರಿಯಾಗಿದ್ದ ಜಯಶ್ರೀಯವರು ಭುವನೇಶ್ವರದ ಏಮ್ಸ್ ಸಂಸ್ಥೆಯ ಶುಶ್ರೂಷಣಾಧಿಕಾರಿಯಾಗಿ ನೇಮಕಗೊಂಡಿದ್ದರಿಂದ ಪ್ರಾ.ಆ.ಕೇಂದ್ರ ಮೇಗರವಳ್ಳಿಯಲ್ಲಿ ನಡೆದ ಭಾವಪೂರ್ಣ ಸಮಾರಂಭದಲ್ಲಿ ಅವರನ್ನು ಆತ್ಮೀಯವಾಗಿ ಗೌರವಿಸಿ, ಹಾರ್ದಿಕವಾಗಿ ಶುಭ ಹಾರೈಸಿ ಬೀಳ್ಕೊಡಲಾಯಿತು.

ತಾಲ್ಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಟಿ ವಿ ಸತೀಶ ಮಾತನಾಡಿ, ಅತ್ಯಂತ ತಾಳ್ಮೆ, ಶ್ರದ್ದೆ, ವಿನಮ್ರತೆ,ಸೇವಾ ಮನೋಭಾವಗಳಿಂದ ಜಯಶ್ರೀ ಮಾದರಿಯಾಗಿ ಕರ್ತವ್ಯ ನಿರ್ವಹಿಸುವ ಮೂಲಕ ಎಲ್ಲರ ಪ್ರೀತಿ ವಿಶ್ವಾಸಗಳನ್ನು ಗಳಿಸಿದ್ದಾರೆ. ಅಷ್ಟೇ ಅಲ್ಲದೆ ಅಪಾರ ಪ್ರತಿಭಾವಂತರಾದ ಅವರು ಅಖಿಲ ಭಾರತ ಮಟ್ಟದ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆ ಮಾಡುವ ಮೂಲಕ  ಏಮ್ಸ್ ಸಂಸ್ಥೆಯ ಶುಶ್ರೂಷಣಾಧಿಕಾರಿಯಾಗಿ ನೇಮಕವಾಗಿದ್ದಾರೆ. ಇದು ಕಡಿಮೆ ಸಾಧನೆಯಲ್ಲ. ಅವರು ಇನ್ನಷ್ಟು ಹೆಚ್ಚಿನ ಸಾಧನೆ ಮಾಡಲಿ. ಅವರಿಂದ ಇನ್ನಷ್ಟು ಹೆಚ್ಚಿನ ಸೇವೆ ಸಮಾಜಕ್ಕೆ ದೊರಕಲಿ ಎಂದು ಶುಭ ಹಾರೈಸಿದರು.

 ಹಿರಿಯ ಪ್ರಾ.ಆ.ಸುರಕ್ಷಾಧಿಕಾರಿ ನೀಲಮ್ಮ, ಪ್ರಾ.ಆ.ಸುರಕ್ಷಾಧಿಕಾರಿಳಾದ ವೀಣಾ ಎಂ ಪಿ, ನಾಗರತ್ನ ಎ ಜಿ ,ಆರೋಗ್ಯ ನಿರೀಕ್ಷಣಾಧಿಕಾರಿ ಹನುಮಂತ ರೆಡ್ಡಿ, ಸಮುದಾಯ ಆರೋಗ್ಯಾಧಿಕಾರಿಗಳಾದ ಕೈಲಾಶ್, ಲಿಷಾ,ರಾಘವೇಂದ್ರ, ಸಂಧ್ಯಾ,ಮೀನಾಕ್ಷಿ,ರೆನಿಟಾ, ಆಶಾ ಫೆಸಿಲಿಟೇಟರ್ ರೇಖಾ,ಆಶಾ ಕಾರ್ಯಕರ್ತೆಯರಾದ ಸವಿತ,ರೂಪ ಮತ್ತಿತರರು ಅವರ ಉತ್ತಮ ಸೇವೆಯನ್ನು ಶ್ಲಾಘಿಸಿ ಶುಭ ಹಾರೈಸಿದರು.

ವೈದ್ಯಾಧಿಕಾರಿ ಡಾ.ರಂಜಿತ ಎನ್ ಎಸ್ ಅಧ್ಯಕ್ಷತೆ ವಹಿಸಿದ್ದರು. ಶುಶ್ರೂಷಣಾಧಿಕಾರಿ ನಿರ್ಮಲ, ಫಾರ್ಮಸಿ ಅಧಿಕಾರಿ ಸನ್ನಿಧಿ, ಪ್ರ ದ ಸಹಾಯಕ ನವೀನ್ ಕುಮಾರ್,,ಡಿ ದರ್ಜೆ ನೌಕರರಾದ ಪಾರ್ವತಿ, ಆಶಾ ಫೆಸಿಲಿಟೇಟರ್ ತೇಜಾವತಿ, ಮತ್ತು ಆಶಾ ಕಾರ್ಯಕರ್ತೆಯರು ಇದ್ದರು.

 ಆಶಾ ಕಾರ್ಯಕರ್ತೆ ಸುಧಾ ಪ್ರಾರ್ಥಿಸಿ, ನಾಗರತ್ನ ಸ್ವಾಗತಿಸಿ,ಹನುಮಂತ ರೆಡ್ಡಿ ನಿರೂಪಿಸಿ,ವಂದಿಸಿದರು.

Related Articles

Latest news
ಅಂಬು ಗ್ಯಾಂಗಿನ ಹುಡುಗರ ಮಧ್ಯೆ ಕಿತ್ತಾಟ ರಾಮಿನಕೊಪ್ಪದ ಉಮೇಶ ಕುಳ್ಳಿ ಕಿರಣನನ್ನು ಕೊಲೆ ಮಾಡಲು ಕಾರಣವೇನು..? ಶಾಂತಿನಗರದಲ್ಲಿ ಸೌಹಾರ್ದತೆಗೆ ಸಾಕ್ಷಿಯಾದ ಸಂಭ್ರಮದ ಈದ್ ಮೀಲಾದ್...! ಶಿವಮೊಗ್ಗ ಉಪವಿಭಾಗಾಧಿಕಾರಿಯಾಗಿ ಡಾ. ಮೈತ್ರಿ ಹೆಚ್ ಪಿ, ಎಸ್ ಮುಂದುವರಿಕೆ..! ಶಿವಮೊಗ್ಗದಲ್ಲಿ ‘ಅವಿಸ್ಮರಣೀಯ ಪ್ರಕರಣಗಳು’ ಕೃತಿ ಬಿಡುಗಡೆ..! Shivamogga breaking: ಶಿವಮೊಗ್ಗ ಉಪವಿಭಾಗಾಧಿಕಾರಿಯಾಗಿ ಮತ್ತೆ ಜಿ ಹೆಚ್ ಸತ್ಯನಾರಾಯಣ ಮುಂದುವರಿಕೆ...?! ಡಾ. ಮೈತ್ರಿ... Big news : ಜಿಪಿಟಿ ನೇಮಕಾತಿಯಲ್ಲಿ ಇಂಗ್ಲಿಷ್ ಶಿಕ್ಷಕರ ಹುದ್ದೆ ಗಣನೀಯ ಕಡಿತ: ಸರ್ಕಾರದ ವಿರುದ್ಧ ಆಕಾಂಕ್ಷಿಗಳ ತೀವ್ರ ... ಸೇವೆಯೇ ಶಿಕ್ಷಣ ಇಲಾಖೆಯ ಮುಖ್ಯ ಧ್ಯೇಯ ಸಚಿವ ಎಸ್.ಮಧು ಬಂಗಾರಪ್ಪ..! ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR): 98.53% ಡಿಜಿಟಲೀಕರಣ ಪೂರ್ಣ..! Big news :  ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ನಲ್ಲಿ  ಮಹತ್ವದ ಬದಲಾವಣೆ..! ಯಾರಿಗೆ ಯಾವ ಸ್ಥಾನ..?! ಕೋಟೆ ಪೊಲೀಸರ ಖಡಕ್ ಕಾರ್ಯಾಚರಣೆ ವಿದ್ಯಾನಗರದ ಎವರ್ ಗ್ರೀನ್ ಬ್ಯೂಟಿ ಪಾರ್ಲರ್ ಮೇಲೆ ದಾಳಿ  ಒಬ್ಬನ ಬಂಧನ ಇನ್ನೊಬ್ಬಳು ಪ...