Home ಶಿವಮೊಗ್ಗಕಾರ್ಮಿಕನ ಕೊಲೆ ಪ್ರಕರಣ – ಸೊರಬ ಪೊಲೀಸರ ಮಿಂಚಿನ ಕಾರ್ಯಾಚರಣೆ – ಕೊಲೆ ಆರೋಪಿಗಳ ಬಂಧನ..! ಶ್ಲಾಘನೆ ವ್ಯಕ್ತಪಡಿಸಿದ ಪೊಲೀಸ್ ವರಿಷ್ಟಾಧಿಕಾರಿ ಮಿಥುನ್ ಕುಮಾರ್ ಜಿ ಕೆ & ಶಿಕಾರಿಪುರ DYSP..!

ಕಾರ್ಮಿಕನ ಕೊಲೆ ಪ್ರಕರಣ – ಸೊರಬ ಪೊಲೀಸರ ಮಿಂಚಿನ ಕಾರ್ಯಾಚರಣೆ – ಕೊಲೆ ಆರೋಪಿಗಳ ಬಂಧನ..! ಶ್ಲಾಘನೆ ವ್ಯಕ್ತಪಡಿಸಿದ ಪೊಲೀಸ್ ವರಿಷ್ಟಾಧಿಕಾರಿ ಮಿಥುನ್ ಕುಮಾರ್ ಜಿ ಕೆ & ಶಿಕಾರಿಪುರ DYSP..!

by EDITOR NEWS WARRIORS
0 comments

ಸೊರಬ :- ಶಿವಮೊಗ್ಗ ಜಿಲ್ಲೆ ಸೊರಬ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಾರ್ಮಿಕನ ಕೊಲೆ ಪ್ರಕರಣದ ಆರೋಪಿಗಳನ್ನೂ ಪತ್ತೆ ಹಚ್ಚುವಲ್ಲಿ ಶಿವಮೊಗ್ಗ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಮಿಥುನ್ ಕುಮಾರ್ ಐಪಿಎಸ್ ಹಾಗೂ ಶಿಕಾರಿಪುರ DYSP ಮಾರ್ಗದರ್ಶನದಲ್ಲಿ ಸೊರಬ ಸಿಪಿಐ ರಾಜಶೇಖರ್ ನೇತೃತ್ವದಲ್ಲಿ ಪಿಎಸ್ಐ ನಾಗರಾಜ್, ಮತ್ತು ಪಿಎಸ್ಐ ಮಾಳಪ್ಪ ಸಿಬ್ಬಂದಿಗಳಾದ ನಾಗೇಶ್ ದಪೆದಾರ್ ರಾಘವೇಂದ್ರ, ವಿನಯ, ಲೋಕೇಶ್, ಇವರುಗಳ ತಂಡ ಸದರಿ ಆರೋಪಿಗಳಾದ A1 ಜಯನ್ ಸಿ, ತಂದೆ ಚಂದನ್ ತಿರುವಂತಪುರಂ A 2 ಶಿಬು ತಂದೆ ಗೋಪಾಲನ್ ಕಣ್ಣೂರು, A3 ಸುಮನ್ ಕುಮಾರ್ ತಂದೆ ಜ್ಞಾನಮುತ್ತು ತಿರುವಂತ ಪುರಂ ಕೊಲೆ ಆರೋಪಿಗಳನ್ನೂ ಹೊಸನಗರ ಬಳಿಯ ಜಯನಗರ ಬಳಿ ಬಂಧಿಸಿ ಮಾನ್ಯ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.

ಕೊಲೆ ನೆಡೆದ ಕೇವಲ 24 ಘಂಟೆಯಲ್ಲಿ ಕೊಲೆ ಆರೋಪಿಗಳನ್ನೂ ಹೆಡೆಮುರಿ ಕಟ್ಟಲು ಯಶಸ್ವಿ ಕಾರ್ಯಾರಣೆಯಲ್ಲಿ ಭಾಗಿಯಾದ ಸೊರಬ ಪೊಲೀಸ್ ತಂಡದ ಕಾರ್ಯಾಚರಣೆಗೆ ಶಿವಮೊಗ್ಗ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಮಿಥುನ್ ಕುಮಾರ್ ಹಾಗೂ ಶಿಕಾರಿಪುರ DYSP ಶಿವಾನಂದ ಮದರಕಂಡಿ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

ಓಂಕಾರ ಎಸ್. ವಿ. ತಾಳಗುಪ್ಪ.

Related Articles

Latest news
ಅಂಬು ಗ್ಯಾಂಗಿನ ಹುಡುಗರ ಮಧ್ಯೆ ಕಿತ್ತಾಟ ರಾಮಿನಕೊಪ್ಪದ ಉಮೇಶ ಕುಳ್ಳಿ ಕಿರಣನನ್ನು ಕೊಲೆ ಮಾಡಲು ಕಾರಣವೇನು..? ಶಾಂತಿನಗರದಲ್ಲಿ ಸೌಹಾರ್ದತೆಗೆ ಸಾಕ್ಷಿಯಾದ ಸಂಭ್ರಮದ ಈದ್ ಮೀಲಾದ್...! ಶಿವಮೊಗ್ಗ ಉಪವಿಭಾಗಾಧಿಕಾರಿಯಾಗಿ ಡಾ. ಮೈತ್ರಿ ಹೆಚ್ ಪಿ, ಎಸ್ ಮುಂದುವರಿಕೆ..! ಶಿವಮೊಗ್ಗದಲ್ಲಿ ‘ಅವಿಸ್ಮರಣೀಯ ಪ್ರಕರಣಗಳು’ ಕೃತಿ ಬಿಡುಗಡೆ..! Shivamogga breaking: ಶಿವಮೊಗ್ಗ ಉಪವಿಭಾಗಾಧಿಕಾರಿಯಾಗಿ ಮತ್ತೆ ಜಿ ಹೆಚ್ ಸತ್ಯನಾರಾಯಣ ಮುಂದುವರಿಕೆ...?! ಡಾ. ಮೈತ್ರಿ... Big news : ಜಿಪಿಟಿ ನೇಮಕಾತಿಯಲ್ಲಿ ಇಂಗ್ಲಿಷ್ ಶಿಕ್ಷಕರ ಹುದ್ದೆ ಗಣನೀಯ ಕಡಿತ: ಸರ್ಕಾರದ ವಿರುದ್ಧ ಆಕಾಂಕ್ಷಿಗಳ ತೀವ್ರ ... ಸೇವೆಯೇ ಶಿಕ್ಷಣ ಇಲಾಖೆಯ ಮುಖ್ಯ ಧ್ಯೇಯ ಸಚಿವ ಎಸ್.ಮಧು ಬಂಗಾರಪ್ಪ..! ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR): 98.53% ಡಿಜಿಟಲೀಕರಣ ಪೂರ್ಣ..! Big news :  ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ನಲ್ಲಿ  ಮಹತ್ವದ ಬದಲಾವಣೆ..! ಯಾರಿಗೆ ಯಾವ ಸ್ಥಾನ..?! ಕೋಟೆ ಪೊಲೀಸರ ಖಡಕ್ ಕಾರ್ಯಾಚರಣೆ ವಿದ್ಯಾನಗರದ ಎವರ್ ಗ್ರೀನ್ ಬ್ಯೂಟಿ ಪಾರ್ಲರ್ ಮೇಲೆ ದಾಳಿ  ಒಬ್ಬನ ಬಂಧನ ಇನ್ನೊಬ್ಬಳು ಪ...