Home ಶಿವಮೊಗ್ಗಬೈಕ್ ಸವಾರನಿಂದ ಎಲ್ ಬಿ ಎಸ್ ನಗರದಲ್ಲಿ ಕಳ್ಳತನ..!

ಬೈಕ್ ಸವಾರನಿಂದ ಎಲ್ ಬಿ ಎಸ್ ನಗರದಲ್ಲಿ ಕಳ್ಳತನ..!

by EDITOR NEWS WARRIORS
0 comments

ಶಿವಮೊಗ್ಗ: ಇತ್ತೀಚಿಗೆ ಶಿವಮೊಗ್ಗದಲ್ಲಿ ಕಳ್ಳತನ ಪ್ರಕರಣಗಳು ಕಡಿಮೆಯಾಗಿದ್ದವು ಆದರೆ ಕಳೆದ ವಾರದ ಈಚೆಗೆ ಎರಡು ಮೂರು ಪ್ರಕರಣಗಳು ಅದರಲ್ಲಿ ಪ್ರತಿಷ್ಠಿತ ಬಡಾವಣೆಗಳಲ್ಲಿ ದಾಖಲಾಗಿವೆ. 

ನಗರದ  ಎಲ್ ಬಿಎಸ್  ನಗರದಲ್ಲಿ  ಮಹಿಳೆ ಓರ್ವರ  ವ್ಯಾನಿಟಿ ಬ್ಯಾಗ್ ಕಿತ್ತುಕೊಂಡು ಹೋಗಿರುವ ಪ್ರಕರಣ ವಿನೋಬ ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು.

ಈ ಮಹಿಳೆ ಗಾಂಧಿ ನಗರದಲ್ಲಿ ‌ ಹಬ್ಬದ ಪೂಜೆಗೆ ಬೇಕಾದ ಪೂಜಾ ಸಾಮಾಗ್ರಿಗಳನ್ನ ಮಾರಾಟ ಮಾಡುವ ಅಂಗಡಿಯನ್ನ ನಡೆಸುತ್ತಿದ್ದ ಮಾಲೀಕರ ತಾಯಿಯಾಗಿದ್ದು.  ಕಳೆದ ಶುಕ್ರವಾರ  ಅಂಗಡಿಯನ್ನ ನಡೆಸಿ ರಾತ್ರಿ ಪರಿಚಯಸ್ಥರ ಆಟೋದಲ್ಲಿ ಎಲ್ ಬಿಎಸ್ ನಗರಕ್ಕೆ ಬಂದಾಗ ಆಟೋ ಇಳಿದು ನಡೆದುಕೊಂಡು ಹೋಗುತ್ತಿದ್ದಾಗ ಎಲ್ ಬಿಎಸ್ ನಗರದ ತಪೋಮಯದ ಬಳಿ  ಮಹಿಳೆಗೆ ಅಡ್ಡಲಾಗಿ ಬಂದ ಬೈಕ್ ಸವಾರ ಮಹಿಳೆಯ ವ್ಯಾನಿಟು ಬ್ಯಾಗ್ ಕಸಿದುಕೊಂಡು‌ ಹೋಗಿದ್ದಾನೆ.

ನಂತರ ಈ ಪ್ರಕರಣದ ಸಂಬಂಧ ರೇಣುಕಾ ಎಂಬ ಹೆಸರಿನ ಮಹಿಳೆ  ವಿನೋಬ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದು.ಆ ದೂರಿನಲ್ಲಿ  ಪರ್ಸ್ ನಲ್ಲಿ ಬ್ಯಾಂಕ್ ಎಟಿಎಂ ಕಾರ್ಡ್, 10 ಸಾವಿರ ರೂ. ನಗದು ಹಾಗೂ ಮೊಬೈಲ್ ಕಳುವಾಗಿರುವ ಬಗ್ಗೆ ದೂರು ನೀಡಿದ್ದಾರೆ.

Related Articles

Latest news
ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR): 98.53% ಡಿಜಿಟಲೀಕರಣ ಪೂರ್ಣ..! Big news :  ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ನಲ್ಲಿ  ಮಹತ್ವದ ಬದಲಾವಣೆ..! ಯಾರಿಗೆ ಯಾವ ಸ್ಥಾನ..?! ಕೋಟೆ ಪೊಲೀಸರ ಖಡಕ್ ಕಾರ್ಯಾಚರಣೆ ವಿದ್ಯಾನಗರದ ಎವರ್ ಗ್ರೀನ್ ಬ್ಯೂಟಿ ಪಾರ್ಲರ್ ಮೇಲೆ ದಾಳಿ  ಒಬ್ಬನ ಬಂಧನ ಇನ್ನೊಬ್ಬಳು ಪ... Big news : ಗಣಿ ಮತ್ತು ಭೂವಿಜ್ಞಾನ ಇಲಾಖೆಯಲ್ಲಿ ಬೃಹತ್ ಶಸ್ತ್ರಚಿಕಿತ್ಸೆ: 22 ಹಿರಿಯ ಭೂವಿಜ್ಞಾನಿಗಳ ವರ್ಗಾವಣೆ..! ದ... ಜಿಲ್ಲೆಯಲ್ಲಿ ಭಾರತ್ ಜೋಡೋ ಯುವಕ ಸಂಘಗಳ ಸ್ಥಾಪನೆಗೆ ಕ್ರಮ : ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ..! ಬರ ಪರಿಸ್ಥಿತಿ ನಿರ್ವಹಣೆ: ತಂಡವಾಗಿ ಕರ್ತವ್ಯ ನಿರ್ವಹಿಸೋಣ – ಜಿಲ್ಲಾಧಿಕಾರಿಗಳ ಕರೆ..! ಸಾಗುವಾನಿ ಮರಗಳ ಕಡಿತಲೆ ಕರಕುಚ್ಚಿಯ ಕೃಷ್ಣಮೂರ್ತಿ ಬಂಧನ..! Shivamogga breaking : ಬ್ಯೂಟಿ ಸ್ಪಾ ಅಡ್ಡೆ ಮೇಲೆ ತುಂಗಾನಗರ ಪೊಲೀಸರ ರೈಡ್..! ಉಳಿದ ಸ್ಪಾಗಳ ಕಥೆ ಏನು..?! Shivamogga breaking : ನಕಲಿ ಬಂಗಾರದ ಜಾಲ ಬೆನ್ನತ್ತಿದ ಪೊಲೀಸರು ತೀರ್ಥಹಳ್ಳಿ ಮೂಲದ ಒಬ್ಬ ಅರೆಸ್ಟ್..?! ಇದರಲ್ಲಿ ಶಿ...