Home ಬಿಜೆಪಿBig news:ಈಶ್ವರಪ್ಪಗೆ ಬಿಗ್ ಶಾಕ್ ನೀಡಲು ಮುಂದಾದ ಬಿಜೆಪಿ ಹೈಕಮಾಂಡ್..?!

Big news:ಈಶ್ವರಪ್ಪಗೆ ಬಿಗ್ ಶಾಕ್ ನೀಡಲು ಮುಂದಾದ ಬಿಜೆಪಿ ಹೈಕಮಾಂಡ್..?!

by EDITOR NEWS WARRIORS
0 comments

ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಕುಟುಂಬದ ವಿರುದ್ಧ ಸಿಡಿದೆದ್ದಿರುವ ಈಶ್ವರಪ್ಪನವರು ತನ್ನ ಮಗ ಕಾಂತೇಶ್ ಗೆ  ಹಾವೇರಿಯಲ್ಲಿ ಟಿಕೆಟ್ ತಪ್ಪಿಸಿದ್ದು ಯಡಿಯೂರಪ್ಪ ಕುಟುಂಬ ಹಾಗೆ ಯಡಿಯೂರಪ್ಪ ಕುಟುಂಬದವರು ಕುಟುಂಬ ರಾಜಕಾರಣ ಮಾಡುತ್ತಿದ್ದಾರೆ ಆ ಕುಟುಂಬ ರಾಜಕಾರಣವನ್ನು ಕರ್ನಾಟಕದಿಂದ ತೊಲಗಿಸಬೇಕು ಯಡಿಯೂರಪ್ಪ ಕುಟುಂಬದಿಂದ ಬಿಜೆಪಿಯನ್ನು ಹೊರ ತರಬೇಕು ಎನ್ನುವ ಉದ್ದೇಶದಿಂದ ನಾನು ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣೆಗೆ ಲೋಕಸಭಾ ಕ್ಷೇತ್ರಕ್ಕೆ ನಿಲ್ಲುತ್ತಿದ್ದೇನೆ ಎಂದು ಯಡಿಯೂರಪ್ಪ ಕುಟುಂಬದ ವಿರುದ್ಧ ಮಾಜಿ ಸಚಿವ ಒಂದು ಕಾಲದ ಆಪ್ತ ಗೆಳೆಯ ಬಿಜೆಪಿ ಕಟ್ಟಿ ಬೆಳಿಸಿದವರಲ್ಲಿ ಪ್ರಮುಖರಾದ ಈಶ್ವರಪ್ಪನವರು ಸವಾಲ್ ಹಾಕಿದ್ದಾರೆ.

ಬಿಗ್ ಶಾಕ್ ನೀಡಲು ಮುಂದಾದ ಬಿಜೆಪಿ ಹೈಕಮಾಂಡ್ :

ಶಿವಮೊಗ್ಗ ಲೋಕಸಭಾ ಕ್ಷೇತ್ರಕ್ಕೆ ಯಡಿಯೂರಪ್ಪನವರ ಪುತ್ರ  ಹಾಲಿ ಸಂಸದರಾದ ಬಿ ವೈ ರಾಘವೇಂದ್ರ ಅವರಿಗೆ ಬಿಜೆಪಿಯಿಂದ ಟಿಕೆಟ್ ನೀಡಲಾಗಿದೆ ಆದರೆ ಇದನ್ನು ಪ್ರಶ್ನಿಸಿ ಸ್ವತಃ ಈಶ್ವರಪ್ಪನವರು ಪಕ್ಷೇತರವಾಗಿ ಸ್ಪರ್ಧೆ ಮಾಡಿರುವುದು ಬಿಜೆಪಿ ಹೈಕಮಾಂಡ್ ವಲಯದಲ್ಲಿ ತೀವ್ರ ಚರ್ಚೆಗೆ ಒಳಗಾಗಿದೆ ಸಾಕಷ್ಟು ಜನ ಬಿಜೆಪಿ ನಾಯಕರು ಈಶ್ವರಪ್ಪ ನವರ ಮನವೊಲಿಸಲು ಪ್ರಯತ್ನಿಸಿದರು ಆ ಮನವೂಳಿಕೆ ವಿಫಲವಾಗಿದೆ ಸ್ವತಃ ರಾಘವೇಂದ್ರ ಈಶ್ವರಪ್ಪನವರಿಗೆ ಮಾಧ್ಯಮಗಳ ಮೂಲಕ ಕೇಳಿಕೊಂಡರು ಕೂಡ ಈಶ್ವರಪ್ಪನವರು ಇದಕ್ಕೆ ಒಪ್ಪಿಲ್ಲ .

ಇದನ್ನೆಲ್ಲಾ ಅರಿತ ಬಿಜೆಪಿಯ ಮುಖಂಡ ಹಾಗೂ ಕೇಂದ್ರದ ಗೃಹ ಸಚಿವರು ಆಗಿರುವ ಅಮಿತ್ ಶಾ ಈಶ್ವರಪ್ಪನವರಿಗೆ ಕರೆ ಮಾಡಿ  ಚುನಾವಣೆಗೆ ನಿಲ್ಲದಂತೆ ಸೂಚಿಸಿದ್ದರು ಆದರೆ ನಾನು ಯಾವುದೇ ಕಾರಣಕ್ಕೂ ಚುನಾವಣೆ ಕಣದಿಂದ ಹಿಂದೆ ಸರಿಯುವುದಿಲ್ಲ ಎನ್ನುವ ಮಾತುಗಳನ್ನಾಡಿದರು ಯಾವುದಕ್ಕೂ ಬಂದು ಹೋಗಿ ಮಾತನಾಡೋಣ ಎಂದು ದೆಹಲಿಗೆ ಬರುವಂತೆ ಬುಲಾವ್ ನೀಡಿದ್ದರು ಅವರ ಕರೆಯ ಮೇರೆಗೆ ದೆಹಲಿಗೆ ಹೋದ ಈಶ್ವರಪ್ಪನವರಿಗೆ ನಿರಾಸೆ ಕಾದಿತ್ತು ಅಮಿತ್ ಶಾ ಈಶ್ವರಪ್ಪನವರು ಭೇಟಿ ಮಾಡಲಿಲ್ಲ ಇದ್ರಿಂದ ಮರಳಿ ವಾಪಸ್ ಬಂದ ಈಶ್ವರಪ್ಪನವರು ನಾನು ನಿಲ್ಲುವುದೇ ಅಮಿತ್ ಶಾ ಅವರಿಗೂ ಬೇಕಾಗಿದೆ ನಿಂತು ನೀನು ಗೆದ್ದು ಬಾ ಎನ್ನುವ ಸಂದೇಶವನ್ನು ಪರೋಕ್ಷವಾಗಿ ಹೇಳಿದ್ದಾರೆ ಎನ್ನುವ ಮಾತುಗಳನ್ನು ಆಡಿದ್ದರು .

ಆದರೆ ಇದೀಗ ಬಿಜೆಪಿ ಹೈಕಮಾಂಡ್ ಗೆ ಇದು ತಲೆ ನೋವಾಗಿದ್ದು ಒಂದು ಕಡೆ ಪಕ್ಷದ ಅಭ್ಯರ್ಥಿ ಇನ್ನೊಂದು ಕಡೆ ಸ್ವತಃ ಬಿಜೆಪಿ ಪಕ್ಷವನ್ನು ಕರ್ನಾಟಕದಲ್ಲಿ  ಕಟ್ಟಿ ಬೆಳೆಸಿದ ಪ್ರಮುಖ ನಾಯಕರೇ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿರುವುದು ಒಂದು ಬಹುದೊಡ್ಡ ರಾಷ್ಟ್ರೀಯ ಪಕ್ಷಕ್ಕೆ ಇರಿಸು ಮುರುಸಾಗಿರುವುದರಿಂದ ಈಶ್ವರಪ್ಪನವರನ್ನು ಪಕ್ಷದಿಂದ ಉಚ್ಚಾಟನೆ ಮಾಡುವ ಕ್ರಮ ಕೈಗೊಳ್ಳಲು ಚಿಂತನೆ ನಡೆಸಿದೆ ಎನ್ನಲಾಗುತ್ತಿದೆ.

ಸದ್ಯದಲ್ಲಿ ಪಕ್ಷದಿಂದ ಈಶ್ವರಪ್ಪ ಉಚ್ಚಾಟನೆ ಆಗುವ ಸಾಧ್ಯತೆ ..!

ಬಿಜೆಪಿ ಪಕ್ಷದಿಂದ ಹೊರಬಂದು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆಗೆ ನಿಂತಿರುವ ಮಾಜಿ ಸಚಿವ ಬಿಜೆಪಿಯ ಹಿರಿಯ ಮುಖಂಡ ಈಶ್ವರಪ್ಪನವರನ್ನು  ಪಕ್ಷದಿಂದ ಉಚ್ಚಾಟನೆ ಮಾಡುವ ಸಾಧ್ಯತೆಯಿದ್ದು ಅಧಿಕೃತವಾಗಿ ಘೋಷಣೆಯಾಗುವ ಸಾಧ್ಯತೆ ಇದೆ.

Related Articles

Latest news
ಶಾಂತಿನಗರದಲ್ಲಿ ಸೌಹಾರ್ದತೆಗೆ ಸಾಕ್ಷಿಯಾದ ಸಂಭ್ರಮದ ಈದ್ ಮೀಲಾದ್...! ಶಿವಮೊಗ್ಗ ಉಪವಿಭಾಗಾಧಿಕಾರಿಯಾಗಿ ಡಾ. ಮೈತ್ರಿ ಹೆಚ್ ಪಿ, ಎಸ್ ಮುಂದುವರಿಕೆ..! ಶಿವಮೊಗ್ಗದಲ್ಲಿ ‘ಅವಿಸ್ಮರಣೀಯ ಪ್ರಕರಣಗಳು’ ಕೃತಿ ಬಿಡುಗಡೆ..! Shivamogga breaking: ಶಿವಮೊಗ್ಗ ಉಪವಿಭಾಗಾಧಿಕಾರಿಯಾಗಿ ಮತ್ತೆ ಜಿ ಹೆಚ್ ಸತ್ಯನಾರಾಯಣ ಮುಂದುವರಿಕೆ...?! ಡಾ. ಮೈತ್ರಿ... Big news : ಜಿಪಿಟಿ ನೇಮಕಾತಿಯಲ್ಲಿ ಇಂಗ್ಲಿಷ್ ಶಿಕ್ಷಕರ ಹುದ್ದೆ ಗಣನೀಯ ಕಡಿತ: ಸರ್ಕಾರದ ವಿರುದ್ಧ ಆಕಾಂಕ್ಷಿಗಳ ತೀವ್ರ ... ಸೇವೆಯೇ ಶಿಕ್ಷಣ ಇಲಾಖೆಯ ಮುಖ್ಯ ಧ್ಯೇಯ ಸಚಿವ ಎಸ್.ಮಧು ಬಂಗಾರಪ್ಪ..! ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR): 98.53% ಡಿಜಿಟಲೀಕರಣ ಪೂರ್ಣ..! Big news :  ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ನಲ್ಲಿ  ಮಹತ್ವದ ಬದಲಾವಣೆ..! ಯಾರಿಗೆ ಯಾವ ಸ್ಥಾನ..?! ಕೋಟೆ ಪೊಲೀಸರ ಖಡಕ್ ಕಾರ್ಯಾಚರಣೆ ವಿದ್ಯಾನಗರದ ಎವರ್ ಗ್ರೀನ್ ಬ್ಯೂಟಿ ಪಾರ್ಲರ್ ಮೇಲೆ ದಾಳಿ  ಒಬ್ಬನ ಬಂಧನ ಇನ್ನೊಬ್ಬಳು ಪ... Big news : ಗಣಿ ಮತ್ತು ಭೂವಿಜ್ಞಾನ ಇಲಾಖೆಯಲ್ಲಿ ಬೃಹತ್ ಶಸ್ತ್ರಚಿಕಿತ್ಸೆ: 22 ಹಿರಿಯ ಭೂವಿಜ್ಞಾನಿಗಳ ವರ್ಗಾವಣೆ..! ದ...