Home ಶಿವಮೊಗ್ಗಲೋಕಾಯುಕ್ತ ಬಲೆಗೆ ಎರಡು ತಿಮಿಂಗಿಳಗಳು..!

ಲೋಕಾಯುಕ್ತ ಬಲೆಗೆ ಎರಡು ತಿಮಿಂಗಿಳಗಳು..!

by EDITOR NEWS WARRIORS
0 comments

ಇಂದು ಶಿವಮೊಗ್ಗ ಲೋಕಾಯುಕ್ತ ಬಲೆಗೆ ಎರಡು  ತಿಮಿಂಗಿಲಗಳು ಬಿದ್ದಿದ್ದು ಕೃಷಿ ವಿವಿಯ ಕಟ್ಟಡದ ಮೇಲ್ಛಾವಣಿ ಕಾಮಗಾರಿಗೆ ಹಣ ಬಿಡುಗಡೆ ಮಾಡಲು ಹಣದ ಬೇಡಿಕೆ ಇಟ್ಟಿದ್ದ ಇರುವಕ್ಕಿಯ ಕೃಷಿ ವಿಶ್ವವಿದ್ಯಾಲಯದ ಎಇಇ ಲೋಹಿತ್ ಪ್ರಶಾಂತ್ ಕುಮಾರ್ ಮತ್ತು ಅಕೌಂಟೆಂಟ್ ಗಿರೀಶ್ ಜಿ.ಆರ್ ಲೋಕಾಯುಕ್ತರ ಬಲೆಗೆ ಬಿದ್ದಿದ್ದಾರೆ.

ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ವತಿಯಿಂದ ಚಿತ್ರದುರ್ಗದ ಹಿರಿಯೂರಿನಲ್ಲಿ ಕೆವಿಕೆ ಬಬ್ಬೂರ್ ಫಾರ್ಮ್ ನ ಆಡಳಿತ ವಿಭಾಗದ ಕಚೇರಿಯ ಮೇಲ್ಛಾವಣಿ ಕಾಮಗಾರಿಗೆ 4,23,226 ರೂ.ಗಳ ಟೆಂಡರ್ ಕರೆಯಲಾಗಿದ್ದು, ಸುನೀಲ್ ಎಂಬುವರು 3,59,331 ರೂ.ಗಳಿಗೆ ಗುತ್ತಿಗೆ ಪಡೆದಿದ್ದರು.

ಫೆ.19 ರಂದು ಕಾಮಗಾರಿ ಆರಂಭವಾಗಿ ಮಾ.4 ರಂದು ಕಾಮಗಾರಿ ಪೂರ್ಣವಾಗಿರುತ್ತದೆ. ಕಾಮಗಾರಿ ವೀಕ್ಷಿಸಲು ಬಂದು ವಿವಿಯ ಎಇಇ ಲೋಹಿತ್ ಪ್ರಶಾಂತ್ ಕುಮಾರ್ ಹಣ ಬಿಡಯಗಡೆಗೆ 40 ಸಾವಿರ ರೂ ಬೇಡಿಕೆ ಇಟ್ಟಿದ್ದರು.

ಕೃಷಿ ವಿವಿಗೆ ಬಂದು ಎಇಇರನ್ನ ಭೇಟಿಯಾದ ಸುನೀಲ್ ಡಿಪಾಸಿಟ್ ಆಗಿ ಇಟ್ಟಿದ್ದ ಎಫ್‌ಡಿಹಣವನ್ನ ವಾಪಾಸ್ ಕೊಡಲು ಕೇಳಿದ್ದಾರೆ 40 ಸಾವಿರ ರೂ ಹಣವನ್ನ ಅಕೌಂಟೆಂಟ್ ಗಿರೀಶ್ ಗೆ ಕೊಡಿ ಆಗ ಎಫ್ ಡಿ ಹಣ ಬಿಡುಗಡೆ ಮಾಡುವುದಾಗಿ ಹೇಳಿರುವ ಮಾತನ್ನ ಸುನೀಲ್ ವಾಯ್ಸ್ ರೆಕಾರ್ಡ್ ಮಾಡಿಕೊಂಡಿದ್ದರು.

ಲೋಕಾಯುಕ್ತರರಿಗೆ ದೂರು ನೀಡಿದ ಕಾರಣ ಇಂದು ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ. ಆರೋಪಿ   ಲೋಹಿತ್ ಪ್ರಶಾಂತ್ ಕುಮಾರ, ಎ.ಇ.ಇ ಮತ್ತು ಗಿರೀಶ್. ಜಿ.ಆರ್, ಅಕೌಂಟ್ ಅಸಿಸ್ಟೆಂಟ್ ಇವರು ಇರುವಕ್ಕಿಯಲ್ಲಿರುವ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ರೂ.30,000/-ಲಂಚದ ಹಣವನು- ದೂರುದಾರರಿಂದ ಪಡೆಯುವಾಗ ಲೋಕಾಯುಕ್ತರ ಕೈಗೆ ರೆಡ್‌ ಹ್ಯಾಂಡ್ ಆಗಿ ಸಿಕ್ಕಿಬಿದ್ದಿರುತ್ತಾರೆ.

ಅವರಿಂದ ರೂ.30,000/-ಗಳ ಲಂಚದ ಹಣವನ್ನು ಜಪ್ತಿಪಡಿಸಿಕೊಂಡಿದ್ದು, ಆಪಾದಿತರನ್ನು ಬಂಧಿಸಿ ತನಿಖೆಯನ್ನು ಲೋಕಾಯುಕ್ತರು  ಕೈಗೊಂಡಿರುತ್ತಾರೆ.

ಕರ್ನಾಟಕ ಲೋಕಾಯುಕ್ತ, ಶಿವಮೊಗ್ಗ ಕಚೇರಿಯ ಪೊಲೀಸ್ ಅಧೀಕ್ಷಕರಾದ ಮಂಜುನಾಥ ಚೌದರಿ, ಎಂ.ಹೆಚ್, ಹಾಗೂ ಪೊಲೀಸ್ ಉಪಾಧೀಕ್ಷಕರಾದ ಉಮೇಶ್ ಈಶ್ವರನಾಯ್ಕ ಇವರ  ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆಸಲಾಗಿದ್ದು, ಟ್ರ್ಯಾಪ್ ಕಾಲಕ್ಕೆ ಶಿವಮೊಗ್ಗ ಲೋಕಾಯುಕ್ತ ಕಛೇರಿಯ ಪೊಲೀಸ್ ನಿರೀಕ್ಷಕರುಗಳಾದ ಪ್ರಕಾಶ್, ವೀರಬಸಪ್ಪ ಎಲ್ ಕುಸಲಾಪುರ,ಸಿಬ್ಬಂದಿಯವರಾದ ಯೋಗೇಶ್ ಸಿ.ಹೆಚ್.ಸಿ, ಮಹಂತೇಶ್ ವಿ.ಎ, ಸಿ.ಹಚ್.ಸಿ, ಸುರೇಂದ್ರ ಹೆಚ್.ಜಿ, ಸಿ.ಹೆಚ್.ಸಿ, ಬಿ.ಟಿ ಚನ್ನೇಶ ಸಿ.ಪಿ.ಸಿ, ಪ್ರಶಾಂತ್ ಕುಮಾರ್ ಸಿ.ಪಿ.ಸಿ, ರಘು ನಾಯ್ಕ್  ಸಿ.ಪಿ.ಸಿ, ಅರುಣ್ ಕುಮಾರ್ ಸಿ.ಪಿ.ಸಿ, ಶ್ರೀಮತಿ ಪುಟ್ಟಮ್ಮ, ಮಪಿಸಿ, ಪ್ರದೀಪ್, ಎ.ಪಿ.ಸಿ, ಗೋ- ವಿ. ಎ.ಪಿ.ಸಿ, ಜಯಂತ್ ಎ.ಪಿ.ಸಿ ಇವರುಗಳು ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು..

Related Articles

Latest news
ಸೇವೆಯೇ ಶಿಕ್ಷಣ ಇಲಾಖೆಯ ಮುಖ್ಯ ಧ್ಯೇಯ ಸಚಿವ ಎಸ್.ಮಧು ಬಂಗಾರಪ್ಪ..! ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR): 98.53% ಡಿಜಿಟಲೀಕರಣ ಪೂರ್ಣ..! Big news :  ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ನಲ್ಲಿ  ಮಹತ್ವದ ಬದಲಾವಣೆ..! ಯಾರಿಗೆ ಯಾವ ಸ್ಥಾನ..?! ಕೋಟೆ ಪೊಲೀಸರ ಖಡಕ್ ಕಾರ್ಯಾಚರಣೆ ವಿದ್ಯಾನಗರದ ಎವರ್ ಗ್ರೀನ್ ಬ್ಯೂಟಿ ಪಾರ್ಲರ್ ಮೇಲೆ ದಾಳಿ  ಒಬ್ಬನ ಬಂಧನ ಇನ್ನೊಬ್ಬಳು ಪ... Big news : ಗಣಿ ಮತ್ತು ಭೂವಿಜ್ಞಾನ ಇಲಾಖೆಯಲ್ಲಿ ಬೃಹತ್ ಶಸ್ತ್ರಚಿಕಿತ್ಸೆ: 22 ಹಿರಿಯ ಭೂವಿಜ್ಞಾನಿಗಳ ವರ್ಗಾವಣೆ..! ದ... ಜಿಲ್ಲೆಯಲ್ಲಿ ಭಾರತ್ ಜೋಡೋ ಯುವಕ ಸಂಘಗಳ ಸ್ಥಾಪನೆಗೆ ಕ್ರಮ : ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ..! ಬರ ಪರಿಸ್ಥಿತಿ ನಿರ್ವಹಣೆ: ತಂಡವಾಗಿ ಕರ್ತವ್ಯ ನಿರ್ವಹಿಸೋಣ – ಜಿಲ್ಲಾಧಿಕಾರಿಗಳ ಕರೆ..! ಸಾಗುವಾನಿ ಮರಗಳ ಕಡಿತಲೆ ಕರಕುಚ್ಚಿಯ ಕೃಷ್ಣಮೂರ್ತಿ ಬಂಧನ..! Shivamogga breaking : ಬ್ಯೂಟಿ ಸ್ಪಾ ಅಡ್ಡೆ ಮೇಲೆ ತುಂಗಾನಗರ ಪೊಲೀಸರ ರೈಡ್..! ಉಳಿದ ಸ್ಪಾಗಳ ಕಥೆ ಏನು..?! Shivamogga breaking : ನಕಲಿ ಬಂಗಾರದ ಜಾಲ ಬೆನ್ನತ್ತಿದ ಪೊಲೀಸರು ತೀರ್ಥಹಳ್ಳಿ ಮೂಲದ ಒಬ್ಬ ಅರೆಸ್ಟ್..?! ಇದರಲ್ಲಿ ಶಿ...