Home ಶಿವಮೊಗ್ಗಚುನಾವಣಾ ಬಿಸಿಯಲ್ಲಿ ತಿಮ್ಮಪ್ಪನ ಸಾವು ತಣ್ಣಗಾಯಿತಾ..?!

ಚುನಾವಣಾ ಬಿಸಿಯಲ್ಲಿ ತಿಮ್ಮಪ್ಪನ ಸಾವು ತಣ್ಣಗಾಯಿತಾ..?!

by EDITOR NEWS WARRIORS
0 comments

ಶಿವಮೊಗ್ಗ : ಜಿಲ್ಲೆಯ ಹೊಸನಗರ ತಾಲೂಕಿನ ಅರಸಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಸವಾಪುರ ಗ್ರಾಮದಲ್ಲಿ ಕಾಡಿಗೆ ದರಗು ತರಲು ಹೋದ ತಿಮ್ಮಪ್ಪ ಎನ್ನುವ ವ್ಯಕ್ತಿ  ಕಾಡಾನೆ ದಾಳಿಗೆ ಸಿಲುಕಿ ಸಾವನ್ನಪ್ಪಿದ್ದರು. 

ಘಟನೆ ತಿಳಿದ ತಕ್ಷಣ ತಳಕ್ಕೆ ಶಾಸಕರ ಅಧಿಕಾರಿಗಳ ಭೇಟಿ :

ಘಟನೆ ತಿಳಿದ ತಕ್ಷಣ ವಿಧಾನ ಪರಿಷತ್ ಶಾಸಕರು ಮತ್ತು ರಾಜ್ಯ ಬಿಜೆಪಿ ಕಾರ್ಯದರ್ಶಿಗಳಾದ ಡಿ ಎಸ್ ಅರುಣ್ ಅವರು ಸ್ಥಳಕ್ಕೆ ಬೇಟಿ ನೀಡಿ ಪರಿಶೀಲಿಸಿ, ಜಿಲ್ಲಾಧಿಕಾರಿಗಳಿಗೆ ಕರೆ ಮಾಡಿ ವಿಷಯ ತಿಳಿಸಿ, ಅರಣ್ಯ ಇಲಾಖೆಯವರಿಗೆ ಇನ್ನೂ ಮುಂದೆ ಇತರದ ಅನಾಹುತಗಳು ಆಗದಂತೆ ಎಚ್ಚರವಹಿಸಲು ತಿಳಿಸಿ, ಸರ್ಕಾರದ ವತಿಯಿಂದ ಸೂಕ್ತ ಪರಿಹಾರ ನೀಡಲು ತಿಳಿಸಿದರು. ನಂತರ ಮೃತರಾದ ತಿಮ್ಮಪ್ಪ ಅವರ ನಿವಾಸಕ್ಕೆ ಭೇಟಿ ನೀಡಿ ಸಾಂತ್ವನ ಹೇಳಿ, ಧನ ಸಹಾಯ ನೀಡಿ, ನಿಮ್ಮ ಕುಟುಂಬದ ಜೊತೆ ನಾವಿದ್ದೇವೆ ಎಂದು ತಿಳಿಸಿದರು.

ಶಾಸಕರಾದ ಬೇಳೂರು ಗೋಪಾಲಕೃಷ್ಣ, ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷರಾದ ವೀರೇಶ್ ಆಲುವಳ್ಳಿ, CCF ಹನುಮಂತಪ್ಪ, ಡಿಸಿಎಫ್, RFO, ಹೊಸನಗರ ನಾಗಾರ್ಜುನ ಸ್ವಾಮಿ, ರಾಜೇಶ್, ಸತೀಶ್ ಹಾಗೂ ಗ್ರಾಮಸ್ಥರು  ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ತಿಮ್ಮಪ್ಪನ ಸಾವಿಗೆ ಸಾಂತ್ವಾನ ಪರಿಹಾರ ಭೇಟಿ ಇಲ್ಲ ಏಕೆ ‌‌..?!

ಡಿಎಸ್ ಅರುಣ್ ಹಾಗೂ ಬೇಳೂರ್ ಗೋಪಾಲ್ ಕೃಷ್ಣ ಬಿಟ್ಟರೆ ಯಾವುದೇ ಶಾಸಕರಾಗಲಿ ,ಸಂಸದರಾಗಲಿ ಜಿಲ್ಲಾ ಉಸ್ತುವಾರಿ ಸಚಿವರಾಗಲಿ ತಿಮ್ಮಪ್ಪನವರ ಕುಟುಂಬವನ್ನು ಭೇಟಿ ಮಾಡಿಲ್ಲ ಏಕೆ..? ಸರ್ಕಾರದ ವತಿಯಿಂದ ಪರಿಹಾರ ನೀಡುವ ಮಾತು ಬಂದಿಲ್ಲ ಏಕೆ..? ಅರಣ್ಯ ಅಧಿಕಾರಿಗಳು ಪರಿಹಾರವನ್ನು ಕೊಡು ಕೊಡಲು ಬರುವುದಿಲ್ಲವೆಂದು ಕೈ ತೊಳೆದುಕೊಂಡಿದ್ದಾರೆ ಹಾಗಾದರೆ ಆ ಅ ಮೃತನ ಕುಟುಂಬಕ್ಕೆ ನ್ಯಾಯ ದೊರಕುವುದು ಹೇಗೆ..?! ಎಲ್ಲರೂ ಚುನಾವಣೆ ಬಿಸಿಯಲ್ಲಿ ತೊಡಗಿರುವ ಇಂತಹ ಸಂದರ್ಭದಲ್ಲಿ ಕಾಡಾನೆ ತುಳಿತಕ್ಕೆ ಒಳಗಾಗಿ ಮೃತನಾದ ತಿಮ್ಮಪ್ಪನ ಕುಟುಂಬಕ್ಕೆ ನ್ಯಾಯ ಬೇಡವೇ..? ಆ ಸಾವಿಗೆ ಪರಿಹಾರ ಬೇಡವೇ..? ಈ ಕೂಡಲೇ ಜಿಲ್ಲಾ ಉಸ್ತುವಾರಿ  ಸಚಿವರು ಇದರ ಬಗ್ಗೆ ಗಮನ ಹರಿಸಿ ಸರ್ಕಾರಕ್ಕೆ ಶಿಫಾರಸ್ಸು ಮಾಡಿ ಪರಿಹಾರ ನೀಡುವ ವ್ಯವಸ್ಥೆ ಮಾಡಿಸಲಿ ಎನ್ನುವುದು ಆ ಭಾಗದ ಗ್ರಾಮಸ್ಥರ ಮನವಿ ಹಾಗೂ ಆಗ್ರಹ.

Related Articles

Latest news
ಅಂಬು ಗ್ಯಾಂಗಿನ ಹುಡುಗರ ಮಧ್ಯೆ ಕಿತ್ತಾಟ ರಾಮಿನಕೊಪ್ಪದ ಉಮೇಶ ಕುಳ್ಳಿ ಕಿರಣನನ್ನು ಕೊಲೆ ಮಾಡಲು ಕಾರಣವೇನು..? ಶಾಂತಿನಗರದಲ್ಲಿ ಸೌಹಾರ್ದತೆಗೆ ಸಾಕ್ಷಿಯಾದ ಸಂಭ್ರಮದ ಈದ್ ಮೀಲಾದ್...! ಶಿವಮೊಗ್ಗ ಉಪವಿಭಾಗಾಧಿಕಾರಿಯಾಗಿ ಡಾ. ಮೈತ್ರಿ ಹೆಚ್ ಪಿ, ಎಸ್ ಮುಂದುವರಿಕೆ..! ಶಿವಮೊಗ್ಗದಲ್ಲಿ ‘ಅವಿಸ್ಮರಣೀಯ ಪ್ರಕರಣಗಳು’ ಕೃತಿ ಬಿಡುಗಡೆ..! Shivamogga breaking: ಶಿವಮೊಗ್ಗ ಉಪವಿಭಾಗಾಧಿಕಾರಿಯಾಗಿ ಮತ್ತೆ ಜಿ ಹೆಚ್ ಸತ್ಯನಾರಾಯಣ ಮುಂದುವರಿಕೆ...?! ಡಾ. ಮೈತ್ರಿ... Big news : ಜಿಪಿಟಿ ನೇಮಕಾತಿಯಲ್ಲಿ ಇಂಗ್ಲಿಷ್ ಶಿಕ್ಷಕರ ಹುದ್ದೆ ಗಣನೀಯ ಕಡಿತ: ಸರ್ಕಾರದ ವಿರುದ್ಧ ಆಕಾಂಕ್ಷಿಗಳ ತೀವ್ರ ... ಸೇವೆಯೇ ಶಿಕ್ಷಣ ಇಲಾಖೆಯ ಮುಖ್ಯ ಧ್ಯೇಯ ಸಚಿವ ಎಸ್.ಮಧು ಬಂಗಾರಪ್ಪ..! ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR): 98.53% ಡಿಜಿಟಲೀಕರಣ ಪೂರ್ಣ..! Big news :  ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ನಲ್ಲಿ  ಮಹತ್ವದ ಬದಲಾವಣೆ..! ಯಾರಿಗೆ ಯಾವ ಸ್ಥಾನ..?! ಕೋಟೆ ಪೊಲೀಸರ ಖಡಕ್ ಕಾರ್ಯಾಚರಣೆ ವಿದ್ಯಾನಗರದ ಎವರ್ ಗ್ರೀನ್ ಬ್ಯೂಟಿ ಪಾರ್ಲರ್ ಮೇಲೆ ದಾಳಿ  ಒಬ್ಬನ ಬಂಧನ ಇನ್ನೊಬ್ಬಳು ಪ...