Home ಅಂತಾರಾಷ್ಟ್ರೀಯಜೆಸಿಐ ಶಿವಮೊಗ್ಗ “ಅನವರತ-24” “ನೊಬೆಲ್ ವರ್ಲ್ಡ್ ರೆಕಾರ್ಡ್” , “ಲಿಮ್ಕಾ ಬುಕ್ ಆಫ್ ರೆಕಾರ್ಡ್” ಕಾರ್ಯಕ್ರಮ ..!

ಜೆಸಿಐ ಶಿವಮೊಗ್ಗ “ಅನವರತ-24” “ನೊಬೆಲ್ ವರ್ಲ್ಡ್ ರೆಕಾರ್ಡ್” , “ಲಿಮ್ಕಾ ಬುಕ್ ಆಫ್ ರೆಕಾರ್ಡ್” ಕಾರ್ಯಕ್ರಮ ..!

by EDITOR NEWS WARRIORS
0 comments

ವಿನೂತನ ಕಾರ್ಯಕ್ರಮಗಳಿಗೆ ಹೆಸರುವಾಸಿಯಾಗಿರುವ ಜೆಸಿಐ ಶಿವಮೊಗ್ಗ ರಾಯಲ್ಸ್ ನೇತೃತ್ವದಲ್ಲಿ ಶಿವಮೊಗ್ಗದ ಎಲ್ಲಾ ಜೆಸಿಐ ಸಂಸ್ಥೆಗಳ ಸಹಯೋಗದೊಂದಿಗೆ ಮೇ 23ರ ಮಧ್ಯರಾತ್ರಿ 12 ಗಂಟೆಯಿಂದ ಮೇ 24ರ ಮಧ್ಯರಾತ್ರಿ 12 ಗಂಟೆಯವರೆಗೆ “ಅನವರತ-24” ಎಂಬ ಶೀರ್ಷಿಕೆ ಅಡಿಯಲ್ಲಿ ವಿಶ್ವ ದಾಖಲೆಯ 24 ಗಂಟೆಗಳ ನಿರಂತರ ತರಬೇತಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ .

ಜೆಸಿಐನ ನೇತೃತ್ವ ವಹಿಸಿರುವ ಸುದರ್ಶನ್ ತಾಯಿಮನೆ ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಈ ತರಬೇತಿ ವಿಶೇಷತೆ ಎಂದರೆ 24 ತರಬೇತುದಾರರು 24 ವಿವಿಧ ವಿಷಯಗಳನ್ನು ಒಳಗೊಂಡ 24ಕ್ಕೂ ಹೆಚ್ಚು ಶಿಬಿರಾರ್ಥಿಗಳು ತರಬೇತಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಇದು ನಿರಂತರವಾಗಿ ನಡೆಯುವ ಕಾರ್ಯಕ್ರಮ ಎಂದು ಹೇಳಿದರು.


ತರಬೇತುದಾರರಾದ ಜೆಎಫ್‍ಎಮ್ ಮೋಹನ್ ಕಲ್ಪತರು ಅವರು ಈ ತರಬೇತಿಯನ್ನು ಪ್ರತಿ ವರ್ಷ ಜೆಸಿಐ ಭಾರತದಿಂದ ಆಚರಿಸುವ ರಾಷ್ಟ್ರೀಯ ತರಬೇತಿ ದಿನದ ಪ್ರಯುಕ್ತ ಅನೇಕ ಸಂಸ್ಥೆಗಳ ಸಹಕಾರದಿಂದ ನಡೆಸಲಾಗುತ್ತಿದೆ, ಇದು “ನೊಬೆಲ್ ವರ್ಲ್ಡ್ ರೆಕಾರ್ಡ್” , “ಲಿಮ್ಕಾ ಬುಕ್ ಆಫ್ ರೆಕಾರ್ಡ್” ಅನ್ನು ಸೇರಲಿದೆ.

ಇದಕ್ಕೆ ಸಂಬಂಧಿಸಿದ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತಿ ಇರುತ್ತಾರೆ ಎಂದು ತಿಳಿಸಿದರು.
ಮತ್ತೊಬ್ಬ ತರಬೇತುದಾರರಾದ ಜೆಸಿ ಪ್ರಮೋದ್ ಶಾಸ್ತ್ರಿ ರವರು ಮಾತನಾಡಿ ಎಲ್ಲಾ 24 ವಿಷಯಗಳ ತರಬೇತಿಯನ್ನು ವಿವಿಧ ವರ್ಗದ ಶಿಬಿರಾರ್ಥಿಗಳಿಗೆ ಉಪಯೋಗವಾಗುವಂತೆ ಸಿದ್ಧಪಡಿಸಲಾಗಿದ್ದು. ಕ್ರಿಯಾತ್ಮಕ ಶೈಲಿಯಲ್ಲಿ ಜೆಸಿಐ ಭಾರತದಿಂದ ಪ್ರಮಾಣಿಕೃತಗೊಂಡ ರಾಷ್ಟ್ರೀಯ ಮತ್ತು ವಲಯ ತರಬೇತುದಾರರಿಂದ ನಡೆಯಲಿದೆ ಎಂದರು.


ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಸ್ಮಿತಾ ಮೋಹನ್, ದಿವ್ಯ ಪ್ರವೀಣ್, ಮಧು, ನವೀನ್ ತಲಾರಿ ಉಪಸ್ಥಿತರಿದ್ದರು.

ರಘುರಾಜ್ ಹೆಚ್‌.ಕೆ 9449553305.

Related Articles

Latest news
ಶಾಂತಿನಗರದಲ್ಲಿ ಸೌಹಾರ್ದತೆಗೆ ಸಾಕ್ಷಿಯಾದ ಸಂಭ್ರಮದ ಈದ್ ಮೀಲಾದ್...! ಶಿವಮೊಗ್ಗ ಉಪವಿಭಾಗಾಧಿಕಾರಿಯಾಗಿ ಡಾ. ಮೈತ್ರಿ ಹೆಚ್ ಪಿ, ಎಸ್ ಮುಂದುವರಿಕೆ..! ಶಿವಮೊಗ್ಗದಲ್ಲಿ ‘ಅವಿಸ್ಮರಣೀಯ ಪ್ರಕರಣಗಳು’ ಕೃತಿ ಬಿಡುಗಡೆ..! Shivamogga breaking: ಶಿವಮೊಗ್ಗ ಉಪವಿಭಾಗಾಧಿಕಾರಿಯಾಗಿ ಮತ್ತೆ ಜಿ ಹೆಚ್ ಸತ್ಯನಾರಾಯಣ ಮುಂದುವರಿಕೆ...?! ಡಾ. ಮೈತ್ರಿ... Big news : ಜಿಪಿಟಿ ನೇಮಕಾತಿಯಲ್ಲಿ ಇಂಗ್ಲಿಷ್ ಶಿಕ್ಷಕರ ಹುದ್ದೆ ಗಣನೀಯ ಕಡಿತ: ಸರ್ಕಾರದ ವಿರುದ್ಧ ಆಕಾಂಕ್ಷಿಗಳ ತೀವ್ರ ... ಸೇವೆಯೇ ಶಿಕ್ಷಣ ಇಲಾಖೆಯ ಮುಖ್ಯ ಧ್ಯೇಯ ಸಚಿವ ಎಸ್.ಮಧು ಬಂಗಾರಪ್ಪ..! ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR): 98.53% ಡಿಜಿಟಲೀಕರಣ ಪೂರ್ಣ..! Big news :  ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ನಲ್ಲಿ  ಮಹತ್ವದ ಬದಲಾವಣೆ..! ಯಾರಿಗೆ ಯಾವ ಸ್ಥಾನ..?! ಕೋಟೆ ಪೊಲೀಸರ ಖಡಕ್ ಕಾರ್ಯಾಚರಣೆ ವಿದ್ಯಾನಗರದ ಎವರ್ ಗ್ರೀನ್ ಬ್ಯೂಟಿ ಪಾರ್ಲರ್ ಮೇಲೆ ದಾಳಿ  ಒಬ್ಬನ ಬಂಧನ ಇನ್ನೊಬ್ಬಳು ಪ... Big news : ಗಣಿ ಮತ್ತು ಭೂವಿಜ್ಞಾನ ಇಲಾಖೆಯಲ್ಲಿ ಬೃಹತ್ ಶಸ್ತ್ರಚಿಕಿತ್ಸೆ: 22 ಹಿರಿಯ ಭೂವಿಜ್ಞಾನಿಗಳ ವರ್ಗಾವಣೆ..! ದ...