Home ಶಿವಮೊಗ್ಗShivamogga breaking: ಅಕ್ರಮ ಮರಳು,ಕಲ್ಲು ಗಣಿಗಾರಿಕೆಗೆ ಬ್ರೇಕ್ ಹಾಕಿದ್ದ ಹಿರಿಯ ಭೂ ವಿಜ್ಞಾನಿ ನವೀನ್ ವರ್ಗಾವಣೆ ಕಡುಭ್ರಷ್ಟ ಅಧಿಕಾರಿ ಪಿಕೆ ನಾಯ್ಕ್ ನವೀನ್ ಜಾಗಕ್ಕೆ ಜಿಲ್ಲೆಯ ಪ್ರಭಾವಿ ಶಾಸಕರ ಒತ್ತಡ ವರ್ಗಾವಣೆಗೆ ಕಾರಣವಾಯಿತೇ..?!

Shivamogga breaking: ಅಕ್ರಮ ಮರಳು,ಕಲ್ಲು ಗಣಿಗಾರಿಕೆಗೆ ಬ್ರೇಕ್ ಹಾಕಿದ್ದ ಹಿರಿಯ ಭೂ ವಿಜ್ಞಾನಿ ನವೀನ್ ವರ್ಗಾವಣೆ ಕಡುಭ್ರಷ್ಟ ಅಧಿಕಾರಿ ಪಿಕೆ ನಾಯ್ಕ್ ನವೀನ್ ಜಾಗಕ್ಕೆ ಜಿಲ್ಲೆಯ ಪ್ರಭಾವಿ ಶಾಸಕರ ಒತ್ತಡ ವರ್ಗಾವಣೆಗೆ ಕಾರಣವಾಯಿತೇ..?!

by EDITOR NEWS WARRIORS
0 comments

ಶಿವಮೊಗ್ಗ: ಜಿಲ್ಲೆಗೆ ಇತ್ತೀಚಿಗಷ್ಟೇ ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ಹಿರಿಯ ಭೂ ವಿಜ್ಞಾನಿಯಾಗಿ ಚಿಕ್ಕಮಂಗಳೂರಿನಿಂದ ವರ್ಗಾವಣೆಯಾಗಿ ಬಂದು ಜಿಲ್ಲೆಯಲ್ಲಿ ಸಾಕಷ್ಟು ಹೆಸರು ಮಾಡಿದ್ದ ಹಲವು ಅಕ್ರಮಗಳಿಗೆ ಬ್ರೇಕ್ ಹಾಕಿ ಸರ್ಕಾರದ ಬಕ್ಕಸಕ್ಕೆ ಆಗುತ್ತಿದ್ದ ನಷ್ಟವನ್ನು ತಪ್ಪಿಸಿದ್ದ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಹಿರಿಯ ಭೂ ವಿಜ್ಞಾನಿ ದಕ್ಷ ಅಧಿಕಾರಿ ನವೀನ್ ಹಾವೇರಿ ಜಿಲ್ಲೆಗೆ ವರ್ಗಾವಣೆಯಾಗಿದ್ದಾರೆ.

ನವೀನ್ ಜಾಗಕ್ಕೆ ಕಡು ಭ್ರಷ್ಟ ಅಧಿಕಾರಿ ಪಿಕೆ ನಾಯ್ಕ್ ವರ್ಗಾವಣೆ..!

ನವೀನ್ ಜಾಗಕ್ಕೆ ಪಿಕೆ ನಾಯ್ಕ್ ಎನ್ನುವ ಹಲವು ಭ್ರಷ್ಟಾಚಾರಗಳನ್ನು ಮೈ ಮೇಲೆ ಎಳೆದುಕೊಂಡಿರುವ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಹಿರಿಯ ವಿಜ್ಞಾನಿ ಪಿಕೆ ನಾಯ್ಕ್ ವರ್ಗಾವಣೆಯಾಗಿದೆ.

ಪಿಕೆ ನಾಯ್ಕ್ ಕಾರ್ಯನಿರ್ವಹಿಸಿದ ಬಾಗಲಕೋಟೆ ಹೊಸಪೇಟೆಯಲ್ಲಿ ಇವರ ಮೇಲೆ ಹಲವು ಅಕ್ರಮಗಳ ಆರೋಪಗಳಿದ್ದವು ಇದೇ ಇಲಾಖೆಯ ಡಿಡಿ ಅವರು ಇವರ ಅಕ್ರಮದಿಂದ ಜೈಲು ಪಾಲಾಗಿದ್ದರು. ನಂತರ ಇವರಿಗೆ ಹೊಸಪೇಟೆಯಲ್ಲಿ ಡಿಡಿ ಆಗಿ ಚಾರ್ಜ್ ಕೊಟ್ಟಿದ್ದರು ಅಲ್ಲೂ ಕೂಡ ಇವರ ಮೇಲಿನ ಆಕ್ರಮಗಳಿಂದ ಚಾರ್ಜ್ ತೆರವುಗೊಳಿಸಿದ್ದರು. ಹೀಗೆ ಹಲವು ಭ್ರಷ್ಟಾಚಾರಗಳ ಸರಮಾಲೆಯನ್ನೇ ಹೊತ್ತು ಕೊಂಡಿರುವ ಅಧಿಕಾರಿ ಶಿವಮೊಗ್ಗದಂತ ಜಿಲ್ಲೆಗೆ ಬಂದಿರುವುದು ಎಷ್ಟು ಸರಿ ಇದರ ಹಿಂದೆ ಯಾರ ಕೈವಾಡವಿದೆ..?! ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುವುದೇ ತಪ್ಪಾ..? ಮೂಲಗಳ ಪ್ರಕಾರ ಜಿಲ್ಲೆಯ ಪ್ರಭಾವಿ ಶಾಸಕರೊಬ್ಬರ ಅಕ್ರಮಗಳನ್ನು ಬ್ರೇಕ್ ಹಾಕಿದ್ದೆ ಈ ವರ್ಗಾವಣೆಗೆ ಕಾರಣವಾಯಿತು ಎನ್ನಲಾಗುತ್ತಿದೆ. ಶಿವಮೊಗ್ಗದಂತಹ ನಗರಕ್ಕೆ ಒಂದಷ್ಟು ಪ್ರಾಮಾಣಿಕತೆ ಒಂದಷ್ಟು ದಕ್ಷತೆ ಇರುವ ಅಧಿಕಾರಿಗಳ ಅವಶ್ಯಕತೆ ಇದೆ ಆ ದಿಕ್ಕಿನಲ್ಲಿ ನವೀನ್ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದರು ಹಗಲು ರಾತ್ರಿ ಎನ್ನದೆ ಯಾವಾಗ ಕರೆ ಮಾಡಿದರು ಸಾರ್ವಜನಿಕರ ಕರೆಗೆ ಸ್ಪಂದಿಸಿ ತಮಗೆ ಸರ್ಕಾರ ನೀಡಿರುವ ಸೀಮಿತ ಸಿಬ್ಬಂದಿಗಳನ್ನು ಬಳಸಿಕೊಂಡು ಅವರಿಗೂ ಉತ್ತೇಜನ ನೀಡಿ ಅಕ್ರಮಗಳು ನಡೆಯುತ್ತಿದ್ದ ಜಾಗಕ್ಕೆ ದಿಢೀರ್ ಭೇಟಿ ನೀಡಿ ಅಕ್ರಮಕ್ಕೆ ಬಳಸುತ್ತಿದ್ದ ಟಿಪ್ಪರ್, ಲಾರಿ, ಜೆಸಿಬಿಗಳನ್ನು ವಶಪಡಿಸಿಕೊಂಡು ಶೇಖರಿಸಿಟ್ಟಿದ್ದ ದಾಸ್ತಾನನ್ನು ನಾಶಪಡಿಸುತ್ತಿದ್ದರು ಹಾಗೂ ವೆಹಿಕಲ್‌ಗಳನ್ನು ಸಂಬಂಧಪಟ್ಟ ಪೊಲೀಸ್ ಇಲಾಖೆಗೆ ಒಪ್ಪಿಸುತ್ತಿದ್ದರು ತಾವು ಕೂಡ ದಂಡ ವಿಧಿಸುತ್ತಿದ್ದರು ಆ ದಂಡದ ಪ್ರಮಾಣವೇ ಸುಮಾರು 2 ಕೋಟಿ ಅಷ್ಟಾಗಿದೆ ಇಷ್ಟು ಒಳ್ಳೆ ಕಾರ್ಯ ನಿರ್ವಹಿಸುತ್ತಿದ್ದ ಅಧಿಕಾರಿಯ ವರ್ಗಾವಣೆ ಆಗಿರುವುದು ಏಕೆ..? ಎನ್ನುವ ಸಂಶಯ ಸಾರ್ವಜನಿಕರಲ್ಲಿ ಮೂಡಿದೆ…

ರಘುರಾಜ್ ಹೆಚ್.ಕೆ..9449553305..

Related Articles

Latest news
ಅಂಬು ಗ್ಯಾಂಗಿನ ಹುಡುಗರ ಮಧ್ಯೆ ಕಿತ್ತಾಟ ರಾಮಿನಕೊಪ್ಪದ ಉಮೇಶ ಕುಳ್ಳಿ ಕಿರಣನನ್ನು ಕೊಲೆ ಮಾಡಲು ಕಾರಣವೇನು..? ಶಾಂತಿನಗರದಲ್ಲಿ ಸೌಹಾರ್ದತೆಗೆ ಸಾಕ್ಷಿಯಾದ ಸಂಭ್ರಮದ ಈದ್ ಮೀಲಾದ್...! ಶಿವಮೊಗ್ಗ ಉಪವಿಭಾಗಾಧಿಕಾರಿಯಾಗಿ ಡಾ. ಮೈತ್ರಿ ಹೆಚ್ ಪಿ, ಎಸ್ ಮುಂದುವರಿಕೆ..! ಶಿವಮೊಗ್ಗದಲ್ಲಿ ‘ಅವಿಸ್ಮರಣೀಯ ಪ್ರಕರಣಗಳು’ ಕೃತಿ ಬಿಡುಗಡೆ..! Shivamogga breaking: ಶಿವಮೊಗ್ಗ ಉಪವಿಭಾಗಾಧಿಕಾರಿಯಾಗಿ ಮತ್ತೆ ಜಿ ಹೆಚ್ ಸತ್ಯನಾರಾಯಣ ಮುಂದುವರಿಕೆ...?! ಡಾ. ಮೈತ್ರಿ... Big news : ಜಿಪಿಟಿ ನೇಮಕಾತಿಯಲ್ಲಿ ಇಂಗ್ಲಿಷ್ ಶಿಕ್ಷಕರ ಹುದ್ದೆ ಗಣನೀಯ ಕಡಿತ: ಸರ್ಕಾರದ ವಿರುದ್ಧ ಆಕಾಂಕ್ಷಿಗಳ ತೀವ್ರ ... ಸೇವೆಯೇ ಶಿಕ್ಷಣ ಇಲಾಖೆಯ ಮುಖ್ಯ ಧ್ಯೇಯ ಸಚಿವ ಎಸ್.ಮಧು ಬಂಗಾರಪ್ಪ..! ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR): 98.53% ಡಿಜಿಟಲೀಕರಣ ಪೂರ್ಣ..! Big news :  ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ನಲ್ಲಿ  ಮಹತ್ವದ ಬದಲಾವಣೆ..! ಯಾರಿಗೆ ಯಾವ ಸ್ಥಾನ..?! ಕೋಟೆ ಪೊಲೀಸರ ಖಡಕ್ ಕಾರ್ಯಾಚರಣೆ ವಿದ್ಯಾನಗರದ ಎವರ್ ಗ್ರೀನ್ ಬ್ಯೂಟಿ ಪಾರ್ಲರ್ ಮೇಲೆ ದಾಳಿ  ಒಬ್ಬನ ಬಂಧನ ಇನ್ನೊಬ್ಬಳು ಪ...