Home ಶಿವಮೊಗ್ಗShivamogga: ಗ್ರಾಮಾಂತರ ಪೊಲೀಸರ ಖಡಕ್ ಕಾರ್ಯಾಚರಣೆ ಮೂವರು ಬೈಕ್ ಕಳ್ಳರ ಬಂಧನ..! 7 ಬೈಕ್ ವಶ..!

Shivamogga: ಗ್ರಾಮಾಂತರ ಪೊಲೀಸರ ಖಡಕ್ ಕಾರ್ಯಾಚರಣೆ ಮೂವರು ಬೈಕ್ ಕಳ್ಳರ ಬಂಧನ..! 7 ಬೈಕ್ ವಶ..!

by EDITOR NEWS WARRIORS
0 comments

ಶಿವಮೊಗ್ಗ: ಕಳೆದ ಎರಡು ದಿನದ ಹಿಂದೆ ಗ್ರಾಮಾಂತರ ಪೊಲೀಸ್ ಠಾಣೆಯ ಸಿಬ್ಬಂದಿಗಳಾದ ಎಸ್ ಸ ವೆಂಕಟೇಶ್ ,ರಾಘವೇಂದ್ರ ಪಿ ಸಿ , ಕವನ ಕಾಶಿನಾಥ್ ಗಣೇಶ್ ಶ್ರೀಕಾಂತ್ ಮತ್ತು ಬಸವರಾಜ್ ಅವರುಗಳನ್ನು ಒಳಗೊಂಡ ತಂಡ ಪುರಲೆಯ ಬಳಿ ಇರುವ ಸುಬ್ಬಯ್ಯ ಮೆಡಿಕಲ್ ಹಿಂಭಾಗ ಗಸ್ತಿನಲ್ಲಿ ತಿರುಗುತ್ತಿದ್ದಾಗ ಮೂವರು ಅನುಮಾನಾಸ್ಪದ ವ್ಯಕ್ತಿಗಳು ಎರಡು ಬೈಕುಗಳನ್ನು ನಿಲ್ಲಿಸಿಕೊಂಡಿದ್ದರು ಅನುಮಾನ ಬಂದು ಸತ್ಯನಾರಾಯಣ, ಪಿ.ಐ. ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆ ರವರ ಮುಂದೆ ಹಾಜರ್ ಪಡಿಸಿದ್ದು, ಸದರಿ ವ್ಯಕ್ತಿಗಳನ್ನು ವಿಚಾರಣೆಗೊಳಪಡಿಸಿದಾಗ 1) ಇಮ್ರಾನ್ @ ಇಮ್ಮು, 2) ಮದನ್ ಕುಮಾರ್ @ ಗುಂಡಾ ಮತ್ತು 3) ಹರೀಶ ಎನ್ ಎಂದು ತಿಳಿದು ಬಂದಿದ್ದು, ಸದರಿಯವರು ಎರಡೂ ಬೈಕ್ ಗಳನ್ನು ಶಿಕಾರಿಪುರದಲ್ಲಿ ಕಳ್ಳತನ ಮಾಡಿಕೊಂಡು ತಂದಿರುವುದು ಮತ್ತು ಇದೇ ರೀತಿ ಇನ್ನೂ ಹೆಚ್ಚಿನ ಬೈಕ್ ಗಳನ್ನು ಕಳ್ಳತನ ಮಾಡಿರುವುದು ವಿಚಾರಣೆಯಿಂದ ತಿಳಿದು ಬಂದಿರುತ್ತದೆ. ಆದ್ದರಿಂದ ಆರೋಪಿತರ ವಿರುದ್ಧ ಠಾಣಾ ಗುನ್ನೆ ಸಂಖ್ಯೆ 0336/2024 ಕಲಂ 35(ಬಿ), 106 ಬಿ.ಎನ್.ಎಸ್.ಎಸ್ ಕಾಯ್ದೆ ರೀತ್ಯಾ ಪ್ರಕರಣ ದಾಖಲಿಸಿಕೊಳ್ಳಲಾಗಿರುತ್ತದೆ

  
  ಆರೋಪಿತರಿಂದ ಕಳ್ಳತನ ಮಾಡಿದ ಬೈಕ್ ಗಳನ್ನು ವಶಪಡಿಸಿಕೊಳ್ಳುವ ಸಂಬಂಧ   ಪೊಲೀಸ್ ವರಿಷ್ಠಾಧಿಕಾರಿಗಳಾದ ಮಿಥುನ್ ಕುಮಾರ್ ಜಿ. ಕೆ.  ಅನಿಲ್ ಕುಮಾರ್ ಭೂಮಾರಡ್ಡಿ  ಹೆಚ್ಚುವರಿ ಪೊಲೀಸ್ ಅಧೀಕ್ಷಕರು - 1 ಶಿವಮೊಗ್ಗ ಜಿಲ್ಲೆ ಮತ್ತು   ಕಾರಿಯಪ್ಪ ಎ.ಜಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರು - 2 ಶಿವಮೊಗ್ಗ ಜಿಲ್ಲೆ ರವರ ಮಾರ್ಗದರ್ಶನದಲ್ಲಿ,   ಸುರೇಶ್  ಉಪಾಧೀಕ್ಷಕರು ಶಿವಮೊಗ್ಗ ಬಿ  ಉಪವಿಭಾಗರವರ ರವರ ಮೇಲ್ವಿಚಾರಣೆಯಲ್ಲಿ,   ಸತ್ಯನಾರಾಯಣ, ಪಿಐ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆ ರವರ ನೇತೃತ್ವದ ಸಿಬ್ಬಂದಿಗಳಾದ  ಹೆಚ್ ಸಿ ವೆಂಕಟೇಶ್, ರಾಘವೇಂದ್ರ, ಪಿಸಿ ಕವನ್, ಕಾಶಿನಾಥ್, ಗಣೇಶ್, ಶ್ರೀಕಾಂತ್, ಮತ್ತು ಬಸವರಾಜ್ ದನುವಿನ ಮನಿ ರವರುಗಳನ್ನೊಳಗೊಂಡ  ತನಿಖಾ ತಂಡವನ್ನು ರಚಿಸಲಾಗಿರುತ್ತದೆ. 

ಸದರಿ ತನಿಖಾ ತಂಡವು ಆರೋಪಿತರಾದ 1) ಇಮ್ರಾನ್ @ ಇಮ್ಮು, 26 ವರ್ಷ, ಮೆಕಾನಿಕ್ ಕೆಲಸ, ಸೀತಾರಾಂಪುರ ಭದ್ರಾವತಿ, 2) ಮದನ್ ಕುಮಾರ್ @ ಗುಂಡಾ, 18 ವರ್ಷ, ವುಡ್ ವರ್ಕ್, ಸೀತಾರಾಂಪುರ ಭದ್ರಾವತಿ ಮತ್ತು 3) ಹರೀಶ ಎನ್ 18 ವರ್ಷ, ಗಾರೆ ಕೆಲಸ, ಸೀತಾರಾಂಪುರ ಭದ್ರಾವತಿ ರವರುಗಳನ್ನು ದಸ್ತಗಿರಿ ಮಾಡಿ, ಆರೋಪಿತರಿಂದ ಹೊಳೆಹೊನ್ನೂರು ಪೊಲೀಸ್ ಠಾಣೆಯ – 03, ಶಿಕಾರಿಪುರ ಟೌನ್ ಪೊಲೀಸ್ ಠಾಣೆಯ – 02, ತುಂಗಾನಗರ ಪೊಲೀಸ್ ಠಾಣೆಯ – 01 ಮತ್ತು ಜಯನಗರ ಪೊಲೀಸ್ ಠಾಣೆಯ – 01 ಪ್ರಕರಣ ಸೇರಿದಂತೆ ಒಟ್ಟು 07 ದ್ವಿಚಕ್ರ ವಾಹನ ಕಳ್ಳತನ ಪ್ರಕರಣಗಳಿಗೆ ಸಂಬಂಧಿಸಿದ ಅಂದಾಜು ಮೌಲ್ಯ 9,40,000/- ರೂ ಗಳ 07 ದ್ವಿ ಚಕ್ರ ವಾಹನ ( 04 ಪಲ್ಸರ್, 01 ಅಪಾಚೆ, 01 ಸ್ಪ್ಲೆಂಡರ್ ಮತ್ತು 01 ರಾಯಲ್ ಎನ್ ಫೀಲ್ಡ್ ಹಿಮಾಲಯನ್) ಗಳನ್ನು ಅಮಾನತ್ತು ಪಡಿಸಿಕೊಂಡಿದ್ದಾರೆ.

ಸದರಿ ತನಿಖಾ ತಂಡದ ಉತ್ತಮವಾದ ಕಾರ್ಯವನ್ನು ಪೊಲೀಸ್ ವರಿಷ್ಟಾಧಿಕಾರಿಗಳು, ಪ್ರಶಂಸಿಸಿ ಅಭಿನಂದಿಸಿರುತ್ತಾರೆ.

Related Articles

Latest news
Big news : ಜಿಪಿಟಿ ನೇಮಕಾತಿಯಲ್ಲಿ ಇಂಗ್ಲಿಷ್ ಶಿಕ್ಷಕರ ಹುದ್ದೆ ಗಣನೀಯ ಕಡಿತ: ಸರ್ಕಾರದ ವಿರುದ್ಧ ಆಕಾಂಕ್ಷಿಗಳ ತೀವ್ರ ... ಸೇವೆಯೇ ಶಿಕ್ಷಣ ಇಲಾಖೆಯ ಮುಖ್ಯ ಧ್ಯೇಯ ಸಚಿವ ಎಸ್.ಮಧು ಬಂಗಾರಪ್ಪ..! ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR): 98.53% ಡಿಜಿಟಲೀಕರಣ ಪೂರ್ಣ..! Big news :  ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ನಲ್ಲಿ  ಮಹತ್ವದ ಬದಲಾವಣೆ..! ಯಾರಿಗೆ ಯಾವ ಸ್ಥಾನ..?! ಕೋಟೆ ಪೊಲೀಸರ ಖಡಕ್ ಕಾರ್ಯಾಚರಣೆ ವಿದ್ಯಾನಗರದ ಎವರ್ ಗ್ರೀನ್ ಬ್ಯೂಟಿ ಪಾರ್ಲರ್ ಮೇಲೆ ದಾಳಿ  ಒಬ್ಬನ ಬಂಧನ ಇನ್ನೊಬ್ಬಳು ಪ... Big news : ಗಣಿ ಮತ್ತು ಭೂವಿಜ್ಞಾನ ಇಲಾಖೆಯಲ್ಲಿ ಬೃಹತ್ ಶಸ್ತ್ರಚಿಕಿತ್ಸೆ: 22 ಹಿರಿಯ ಭೂವಿಜ್ಞಾನಿಗಳ ವರ್ಗಾವಣೆ..! ದ... ಜಿಲ್ಲೆಯಲ್ಲಿ ಭಾರತ್ ಜೋಡೋ ಯುವಕ ಸಂಘಗಳ ಸ್ಥಾಪನೆಗೆ ಕ್ರಮ : ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ..! ಬರ ಪರಿಸ್ಥಿತಿ ನಿರ್ವಹಣೆ: ತಂಡವಾಗಿ ಕರ್ತವ್ಯ ನಿರ್ವಹಿಸೋಣ – ಜಿಲ್ಲಾಧಿಕಾರಿಗಳ ಕರೆ..! ಸಾಗುವಾನಿ ಮರಗಳ ಕಡಿತಲೆ ಕರಕುಚ್ಚಿಯ ಕೃಷ್ಣಮೂರ್ತಿ ಬಂಧನ..! Shivamogga breaking : ಬ್ಯೂಟಿ ಸ್ಪಾ ಅಡ್ಡೆ ಮೇಲೆ ತುಂಗಾನಗರ ಪೊಲೀಸರ ರೈಡ್..! ಉಳಿದ ಸ್ಪಾಗಳ ಕಥೆ ಏನು..?!