38
ಶಿವಮೊಗ್ಗ: ನಗರದ ಬೊಮ್ಮನ್ ಕಟ್ಟೆಯ ಕೆರೆ ಏರಿಯಾದಲ್ಲಿ ರೌಡಿ ಶೀಟರ್ ಒಬ್ಬನ ಕೊಲೆಯಾಗಿದೆ.
ಕೊಲೆಯಾದ ರೌಡಿಶೀಟರ್ ಅವಿನಾಶ್ ಸುಮಾರು ಹತ್ತು ವರ್ಷಗಳ ಹಿಂದೆ ತಮಿಳ್ ಗಿರಿ ಮರ್ಡರ್ ಕೇಸ್ ನಲ್ಲಿ ಇದ್ದ ಟೈಲ್ಸ್ ಗಾರೆ ಕೆಲಸ ಮಾಡುತ್ತಿದ್ದ ಅವಿನಾಶ್ ಹಿಂದೆ ಕೊಲೆ ಕೇಸಿನಲ್ಲಿ ಆರೋಪಿಯಾಗಿದ್ದ ಆ ಕೇಸ್ ನಲ್ಲಿ ಜೀವಾವಧಿ ಶಿಕ್ಷೆ ಯಾಗಿತ್ತು ಐದು ವರ್ಷಗಳ ಕಾಲ ಜೈಲಿನಲ್ಲಿದ್ದು ಮಾನ್ಯ ಹೈಕೋರ್ಟ್ ನಿಂದ ಜಾಮೀನಿನ ಮೇಲೆ ಬಿಡುಗಡೆಯಾಗಿ ಹೊರಗೆ ಬಂದಿದ್ದ.
ಆ ಒಂದು ಅನುಮಾನ ಕೊಲೆಗೆ ಕಾರಣವಾಯಿತೇ..?
ರಾತ್ರಿ ಊಟ ಮಾಡಿ ಮನೆಯಿಂದ ಹೋದವನು ವಾಪಸ್ ಬಂದಿಲ್ಲ ಎನ್ನುತ್ತಾರೆ ಆತನ ತಂದೆ ಶೇಖರಪ್ಪ ಆದರೆ ಅಸಲಿಗೆ ಈತನ ಸ್ನೇಹಿತರೆ ಕೆರೆಯ ಬಳಿ ಈತನನ್ನು ಕರೆಸಿಕೊಂಡು ಎಣ್ಣೆ ಪಾರ್ಟಿ ಮಾಡಿ ನಂತರ ಲಾಂಗಿನಿಂದ ಈತನನ್ನು ಕೊಲೆ ಮಾಡಿದ್ದಾರೆ ಎನ್ನುವ ಅನುಮಾನವಿದೆ.
ಇನ್ನೂ ಮದುವೆ ಆಗದಿದ್ದ ಅವಿನಾಶ್ ಗೆ ಆ ಒಂದು ಅಕ್ರಮ ಸಂಬಂಧ ಕೊಲೆಗೆ ಕಾರಣವಾಯಿತೇ..?! ಎನ್ನುವ ಅನುಮಾನ ದಟ್ಟವಾಗಿದೆ..
ಪೊಲೀಸರ ತನಿಖೆಯಿಂದ ಎಲ್ಲವೂ ಹೊರಬರಬೇಕಾಗಿದೆ.
-
- ರಘುರಾಜ್ ಹೆಚ್ ಕೆ..9449553305…


