ಶಿವಮೊಗ್ಗ : ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಸಹ ಪ್ರಾಧ್ಯಾಪಕ ಹಾಗೂ ಶಸ್ತ್ರಚಿಕಿಸ್ತಕರಾದ ಡಾಕ್ಟರ್ ಅಶ್ವಿನ್ ಹೆಬ್ಬಾರ್ ತನ್ನ ವಿದ್ಯಾರ್ಥಿನಿ ಆದಿ ಕರ್ನಾಟಕ ಸಮುದಾಯಕ್ಕೆ ಸೇರಿದಯುವತಿಯ
ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದು ಆಕೆ ಮನನೊಂದು ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿ ಇಂದಿಗೆ ಆರು ದಿನ ಕಳೆದಿದೆ.
ಶಿವಮೊಗ್ಗ ಪೊಲೀಸ್ ಗೆ ಅಶ್ವಿನಿ ಹೆಬ್ಬಾರ್ ಸವಾಲ್..!
ಆದರೆ ಆ ನೂಂದ ವಿದ್ಯಾರ್ಥಿನಿ ದೂರು ನೀಡಿ ಆರು ದಿನ ಕಳೆದರೂ ನಮ್ಮ ಹೆಮ್ಮೆಯ ದಕ್ಷ ಪ್ರಾಮಾಣಿಕ ಪೊಲೀಸ್ ಅಧಿಕಾರಿಗಳು ಆತನನ್ನು ಇನ್ನೂ ಹಿಡಿದಿಲ್ಲ ಸಾಮಾನ್ಯವಾಗಿ ಕುಖ್ಯಾತ ಪಾತಕಿಗಳನ್ನು ಕ್ಷಣಮಾತ್ರದಲ್ಲಿ ಹೆಡೆಮುರಿ ಗೆ ಕಟ್ಟಿ ಜೈಲಿಗೆ ಕಳಿಸಿದ ಕೀರ್ತಿ ಶಿವಮೊಗ್ಗ ಪೊಲೀಸರದು ಆದರೆ ಈ ವಿಕೃತಕಾಮಿ ಡಾಕ್ಟರ್ ಅಶ್ವಿನಿ ಹೆಬ್ಬಾರ್ ವಿಷಯದಲ್ಲಿ ಯಾಕು ಗೊತ್ತಿಲ್ಲ ಎರಡು ತಂಡಗಳನ್ನು ಈತನನ್ನು ಹಿಡಿಯಲು ರಚನೆ ಮಾಡಿದ್ದರು ಇಲ್ಲಿವರೆಗೂ ಈತ ಸಿಕ್ಕಿಲ್ಲ ಎಂದರೆ ಈತ ಇನ್ಯಾವ ಭಯಾನಕ ಬಂಕರ್ ನಲ್ಲಿ ಅಡಗಿ ಕುಳಿತಿರಬಹುದು ಶಿವಮೊಗ್ಗ ಪೊಲೀಸರಿಗೆ ಅಶ್ವಿನ್ ಹೆಬ್ಬಾರ್ ಸವಾಲಾಗಿರುವುದು ದುರಂತವೇ ಸರಿ….
- ಇನ್ನಾದರೂ ಶಿವಮೊಗ್ಗ ಪೊಲೀಸರು ಅದರಲ್ಲೂ ಈ ಪ್ರಕರಣದ ತನಿಖೆ ನಡೆಸುತ್ತಿರುವ ಡಿವೈಎಸ್ಪಿ ಬಾಬು ಅಂಜನಪ್ಪನವರು ವಿಶೇಷ ಕಾಳಜಿ ವಹಿಸಿ ಈತ ಜಾಮೀನು ತೆಗೆದುಕೊಂಡು ಬರುವ ಮುಂಚೆ ಈತನನ್ನು ಹಿಡಿದು ಜೈಲಿಗೆ ಕಳಿಸುವ ಪ್ರಯತ್ನ ಮಾಡಲಿ ಆಗ ಪೊಲೀಸ್ ಇಲಾಖೆ ಮತ್ತು ಅಶ್ವಿನ್ ಹೆಬ್ಬಾರ್ ನಡುವೆ ಏನೋ ಸಂಥಿಂಗ್ ನಡೆದಿದೆ ಎನ್ನುವ ಮಾತುಗಳಿಗೆ ಫುಲ್ ಸ್ಟಾಪ್ ಹಾಕಲಿ….
ರಘುರಾಜ್ ಹೆಚ್ ಕೆ…9449553305..