
ಶಿವಮೊಗ್ಗ : ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ಸಹ ಪ್ರಾಧ್ಯಾಪಕ ಹಾಗೂ ಶಸ್ತ್ರಚಿಕಿಸ್ತಕರಾದ ಡಾಕ್ಟರ್ ಅಶ್ವಿನ್ ಹೆಬ್ಬಾರ್ ಆದಿ ಕರ್ನಾಟಕ ಸಮುದಾಯಕ್ಕೆ ಸೇರಿದ ಮೈಸೂರು ಮೂಲದ ವಿದ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದು. ಆಕೆ ಮನನೊಂದು ಪೊಲೀಸ್ ಠಾಣೆಗೆ ಕಳೆದ 20ನೇ ತಾರೀಕು ದೂರು ನೀಡಿದ್ದಳು.
ಆಕೆಯ ದೂರಿನ ಮೇರೆಗೆ ಎಸ್ ಪಿ ಮಿಥುನ್ ಕುಮಾರ್ ಆದೇಶದ ಹಿನ್ನೆಲೆಯಲ್ಲಿ ಡಿ ವೈಎಸ್ ಪಿ ಬಾಬು ಅಂಜನಪ್ಪ ಎರಡು ತಂಡವನ್ನು ರಚನೆ ಮಾಡಿದ್ದರು ಆದರೆ ಈ ಖದೀಮ ವೈದ್ಯ ಎರಡು ತಂಡಗಳಿಗೂ ಸಿಕ್ಕಿರಲಿಲ್ಲ ದೂರು ನೀಡಿ ವಾರವಾಗಿದ್ದರು ಸಿಗದೇ ತಲೆಮರಿಸಿಕೊಂಡಿದ್ದ ವೈದ್ಯನನ್ನು ಶಿವಮೊಗ್ಗ ಪೊಲೀಸರು ಬಿಡಬೇಕಲ್ಲ ಹಾಗೆ ಈಗ ಡಾಕ್ಟರ್ ಅಶ್ವಿನ್ ಹೆಬ್ಬಾರ್ ಅವರನ್ನು ಶಿವಮೊಗ್ಗ ಪೊಲೀಸರು ಬಂಧಿಸಿದ್ದು ವಿಚಾರಣೆ ನಡೆಸುತ್ತಿದ್ದಾರೆ.
ವೈದ್ಯಕೀಯ ಪರೀಕ್ಷೆಯ ನಂತರ ಇಂದು ಹೆಬ್ಬಾರ್ ಜೈಲಿಗೆ..!
ಪೊಲೀಸರ ವಶದಲ್ಲಿರುವ ಅಶ್ವಿನ್ ಹೆಬ್ಬಾರ್ ಅವರನ್ನು ವೈದ್ಯಕೀಯ ಪರೀಕ್ಷೆಯ ನಂತರ ಸಮಗ್ರ ವಿಚಾರಣೆ ನಡೆಸಿ ಇಂದು ಜೈಲಿಗೆ ಕಳಿಸುವ ಸಾಧ್ಯತೆ ಇದೆ.
ರಘುರಾಜ್ ಹೆಚ್ ಕೆ..9449553305…

