Home ಶಿವಮೊಗ್ಗBig news:ಲಗನ್ ಸ್ಕೈಲೈನ್ ಬೋರ್ಡ್ ಹಾಕಿಕೊಂಡು ಅಕ್ರಮ ಮಣ್ಣು ಮಾರಾಟ..! ಎಕ್ಸ್ಕ್ಲೂಸಿವ್ ವಿಡಿಯೋ ಫೋಟೋಸ್..!

Big news:ಲಗನ್ ಸ್ಕೈಲೈನ್ ಬೋರ್ಡ್ ಹಾಕಿಕೊಂಡು ಅಕ್ರಮ ಮಣ್ಣು ಮಾರಾಟ..! ಎಕ್ಸ್ಕ್ಲೂಸಿವ್ ವಿಡಿಯೋ ಫೋಟೋಸ್..!

by EDITOR NEWS WARRIORS
0 comments

ಶಿವಮೊಗ್ಗ: ಗಾಡಿ ಕೊಪ್ಪ ಸರ್ವೆ ನಂಬರ್ 15 ಲಗನ್ ಕಲ್ಯಾಣ ಮಂದಿರದ ಎದುರಿಗೆ ಲಗನ್ ಸ್ಕೈಲೈನ್ ಎಂದು ಬೋರ್ಡ್ ಹಾಕಿಕೊಂಡು ಅಕ್ರಮವಾಗಿ ಮಣ್ಣನ್ನು ಮಾರಾಟ ಮಾಡುತ್ತಿದ್ದು ಸದರಿ ಜಾಗ ಕೆರೆ ಒತ್ತುವರಿಯಾಗಿರುವ ಬಗ್ಗೆ ಈಗಾಗಲೇ ಲೋಕಾಯುಕ್ತದಲ್ಲಿ ಪ್ರಕರಣ ದಾಖಲಾಗಿದೆ.  ಆದರೂ ಕೂಡ ಕೆಲಸ ನಿಂತಿಲ್ಲ ನಿರಂತರವಾಗಿ ಮಣ್ಣನ್ನು ತೆಗೆಯುತ್ತಿದ್ದು ಸರ್ಕಾರಕ್ಕೆ ರಾಯಲ್ಟಿ ಕಟ್ಟದೇ ಜಿಪಿಎಸ್ ಇಲ್ಲದ ಲಾರಿಗಳಲ್ಲಿ ಅಕ್ರಮವಾಗಿ ಮಣ್ಣನ್ನು ಮಾರಾಟ ಮಾಡುತ್ತಿದ್ದು ಗಣಿ ಇಲಾಖೆ ನಿನ್ನೆ ಇಲ್ಲಿಂದ ಅಕ್ರಮವಾಗಿ ಮಣ್ಣು  ಸಾಗಿಸುತ್ತಿದ್ದ ಎರಡು ಲಾರಿಗಳನ್ನು ಹಿಡಿದು ಕೇಸ್ ಹಾಕಿದ್ದಾರೆ . ಆದರೂ ಇಂದು ಮರಳು ಮಾರಾಟ ಮಾಡುವುದನ್ನು ನಿಲ್ಲಿಸಿಲ್ಲ ಗಣಿ ಇಲಾಖೆಯ ಮಾಹಿತಿಯ ಪ್ರಕಾರ ಮಣ್ಣು ತೆಗೆಯಲು ನೀಡಿರುವ ಅನುಮತಿ ಮಮುಕ್ತಾಯವಾಗಿದೆ.ಬರೀಆರು ಮೀಟರ್ ಗೆ ಅನುಮತಿ ತೆಗೆದುಕೊಂಡಿದ್ದಾರೆ ಆದರೆ ಇಲ್ಲಿ ಪಾತಾಳದವರೆಗೂ ಉದ್ದ ಅಗಲ ತೆಗೆಯುತ್ತಿದ್ದಾರೆ. ಜೊತೆಗೆ ಯಾವುದೇ ಅನುಮತಿ ತೆಗೆದುಕೊಳ್ಳದೆ ಕಲ್ಲನ್ನು ತೆಗೆಯುತ್ತಿದ್ದಾರೆ ಗಣಿ ಇಲಾಖೆಯ ಅನುಮತಿ ಇಲ್ಲದೆ ಕಲ್ಲನ್ನು ತೆಗೆಯುವಂತಿಲ್ಲ ಇವರ ಬಂಡ ಧೈರ್ಯಕ್ಕೆ ಮೆಚ್ಚಬೇಕು .

ಕೂಡಲೇ ಜಿಲ್ಲಾಧಿಕಾರಿಗಳು ಕೆಲಸವನ್ನು ನಿಲ್ಲಿಸಲು ಸೂಚಿಸಬೇಕು ಹಾಗೆ ಇಲ್ಲಿಯವರೆಗೆ ಅಕ್ರಮವಾಗಿ ತೆಗೆದಿರುವ ಮಣ್ಣಿನ ಬಗ್ಗೆ ಹಾಗೂ ಮಾರಾಟದ ಬಗ್ಗೆ ಯಾವುದೇ ಅನುಮತಿ ತೆಗೆದುಕೊಳ್ಳದೆ ಕಲ್ಲನ್ನು ತೆಗೆಯುತ್ತಿರುವುದರ ಬಗ್ಗೆ ಇವರ ವಿರುದ್ಧ ಕೇಸ್ ದಾಖಲಿಸಿ ಪ್ರಕರಣ ಮುಗಿಯುವವರೆಗೂ ಕಾಮಗಾರಿ ಮುಂದುವರಿಯದಂತೆ ತಡೆಹಿಡಿಯಬೇಕು.

ಜಿಲ್ಲಾಧಿಕಾರಿಗಳೇ ಅಧ್ಯಕ್ಷರಾಗಿರುವ ಎಲೈಟ್ ಕ್ಲಬ್ ಕುಸಿದು ಬೀಳುವ ಸಾಧ್ಯತೆ ಇದೆ ಕೂಡಲೇ ಜಿಲ್ಲಾಧಿಕಾರಿಗಳು ಕ್ರಮವಹಿಸಬೇಕು ಹಾಗೆ ನಿರಂತರವಾಗಿ ಮಣ್ಣನ್ನು ತೆಗೆದು ಹಗಲು ಹೊತ್ತಿನಲ್ಲಿ ರಾಜಾರೋಷವಾಗಿ ರಸ್ತೆಯಲ್ಲಿ ತೆಗೆದುಕೊಂಡು ಹೋಗುತ್ತಿರುವುದರಿಂದ ಇಲ್ಲಿ ಓಡಾಡುವ ಸಾರ್ವಜನಿಕರಿಗೆ ಪುಟ್ಟ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದ್ದು ಇದನ್ನು ಕೂಡಲೇ ನಿಲ್ಲಿಸಬೇಕೆಂದು ಸ್ಥಳೀಯರು ಕೂಡ ಪತ್ರಿಕೆ ಮೂಲಕ ತಮ್ಮ ಅಳಲು ತೋಡಿಕೊಂಡಿದ್ದಾರೆ. 

ರಘುರಾಜ್ ಹೆಚ್‌ ಕೆ…9449553305…

 

Related Articles

Latest news
ಸೇವೆಯೇ ಶಿಕ್ಷಣ ಇಲಾಖೆಯ ಮುಖ್ಯ ಧ್ಯೇಯ ಸಚಿವ ಎಸ್.ಮಧು ಬಂಗಾರಪ್ಪ..! ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR): 98.53% ಡಿಜಿಟಲೀಕರಣ ಪೂರ್ಣ..! Big news :  ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ನಲ್ಲಿ  ಮಹತ್ವದ ಬದಲಾವಣೆ..! ಯಾರಿಗೆ ಯಾವ ಸ್ಥಾನ..?! ಕೋಟೆ ಪೊಲೀಸರ ಖಡಕ್ ಕಾರ್ಯಾಚರಣೆ ವಿದ್ಯಾನಗರದ ಎವರ್ ಗ್ರೀನ್ ಬ್ಯೂಟಿ ಪಾರ್ಲರ್ ಮೇಲೆ ದಾಳಿ  ಒಬ್ಬನ ಬಂಧನ ಇನ್ನೊಬ್ಬಳು ಪ... Big news : ಗಣಿ ಮತ್ತು ಭೂವಿಜ್ಞಾನ ಇಲಾಖೆಯಲ್ಲಿ ಬೃಹತ್ ಶಸ್ತ್ರಚಿಕಿತ್ಸೆ: 22 ಹಿರಿಯ ಭೂವಿಜ್ಞಾನಿಗಳ ವರ್ಗಾವಣೆ..! ದ... ಜಿಲ್ಲೆಯಲ್ಲಿ ಭಾರತ್ ಜೋಡೋ ಯುವಕ ಸಂಘಗಳ ಸ್ಥಾಪನೆಗೆ ಕ್ರಮ : ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ..! ಬರ ಪರಿಸ್ಥಿತಿ ನಿರ್ವಹಣೆ: ತಂಡವಾಗಿ ಕರ್ತವ್ಯ ನಿರ್ವಹಿಸೋಣ – ಜಿಲ್ಲಾಧಿಕಾರಿಗಳ ಕರೆ..! ಸಾಗುವಾನಿ ಮರಗಳ ಕಡಿತಲೆ ಕರಕುಚ್ಚಿಯ ಕೃಷ್ಣಮೂರ್ತಿ ಬಂಧನ..! Shivamogga breaking : ಬ್ಯೂಟಿ ಸ್ಪಾ ಅಡ್ಡೆ ಮೇಲೆ ತುಂಗಾನಗರ ಪೊಲೀಸರ ರೈಡ್..! ಉಳಿದ ಸ್ಪಾಗಳ ಕಥೆ ಏನು..?! Shivamogga breaking : ನಕಲಿ ಬಂಗಾರದ ಜಾಲ ಬೆನ್ನತ್ತಿದ ಪೊಲೀಸರು ತೀರ್ಥಹಳ್ಳಿ ಮೂಲದ ಒಬ್ಬ ಅರೆಸ್ಟ್..?! ಇದರಲ್ಲಿ ಶಿ...