183
ಜಿಲ್ಲಾ ತೋಟಗಾರಿಕೆ ಬೆಳೆಗಾರರ ಉತ್ಪನ್ನ ಮಾರಾಟ ಮತ್ತು ಸಂಸ್ಕರಣ ಸಹಕಾರ ಸಂಘಕ್ಕೆ (ಹಾಪ್ಕಾಮ್ಸ್) ನಿರ್ದೇಶಕರಾಗಿ ವೆಂಟಕಪುರದ ಎಂ.ಪಿ.ದಿನೇಶ್ ಪಟೇಲ್ ಹಾಗೂ ಜಿ.ನಾಗೇಶ್ನಾಯ್ಕ್ ಸೇರಿದಂತೆ ಜಿಲ್ಲೆಯಲ್ಲಿ ೧೫ಜನರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಜಿಲ್ಲೆಯಲ್ಲಿ ಒಟ್ಟು ೧೫ನಿರ್ದೇಶಕರ ಸ್ಥಾನಗಳಿದ್ದು, ಅದರಲ್ಲಿ ಶಿವಮೊಗ್ಗ ತಾಲೂಕಿನಿಂದ ೬ಜನರು ಆಯ್ಕೆಯಾಗಿದ್ದು, ಪರಿಶಿಷ್ಟ ವರ್ಗದಿಂದ ಸಹಕಾರಿ ಹಾಗೂ ಪತ್ರಕರ್ತರಾದ ನಾಗೇಶ್ನಾಯ್ಕ್, ಸಾಮಾನ್ಯ ವರ್ಗದಿಂದ ಎಂ.ಪಿ.ದಿನೇಶ್ಪಟೇಲ್, ಎಸ್ಟಿ ಕ್ಷೇತ್ರದಿಂದ ಪರಶುರಾಮ್, ಸಾಮಾನ್ಯ ಕ್ಷೇತ್ರದಿಂದ ವಿಜಯಕುಮಾರ್ (ದನಿ) ಬಿಸಿಎಂಎ ನಿಂದ ಡಾ.ಶರತ್ ಮರಿಯಪ್ಪ, ಬಿಸಿಎಂಬಿ ನಿಂದ ಚಂದ್ರೇಗೌಡ ಸೇರಿದಂತೆ ಜಿಲ್ಲೆಯ ವಿವಿಧ ತಾಲೂಕುಗಳಿಂದ ಒಟ್ಟು ೧೫ಜನರು ಮುಂದಿನ ೫ವರ್ಷದ ಅವಧಿಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ೧೫ ಕ್ಷೇತ್ರಕ್ಕೆ ೨೦ಜನರು ನಾಮಪತ್ರ ಸಲ್ಲಿಸಿದ್ದು,
ಐವರು ನಾಮಪತ್ರ ವಾಪಸ್ ತೆಗೆದುಕೊಂಡಿದ್ದರಿಂದ ಉಳಿದವರು ಅವಿರೋಧವಾಗಿ ಆಯ್ಕೆಗೊಂಡಂತಾಗಿದೆ.
ಸತತ ಮೂರನೇ ಬಾರಿಗೆ ಹಾಪ್ ಕಾಮ್ಸ್ ಗೆ ಆಯ್ಕೆಯಾಗಿರುವುದು ಸಂತಸ ತಂದಿದೆ. ನನ್ನ ಮೇಲೆ ನಂಬಿಕೆ ಇಟ್ಟು ಅವಿರೋಧವಾಗಿ ಆಯ್ಕೆ ಮಾಡಿರುವುದಕ್ಕೆ ಎಲ್ಲರಿಗೂ ವಂದನೆಗಳನ್ನು ಸಲ್ಲಿಸುತ್ತೇನೆ .


