276
ಶಿವಮೊಗ್ಗ : ಹೊಸನಗರ ತಾಲೂಕಿನ ರಿಪ್ಪನ್ ಪೇಟೆಯಲ್ಲಿ ಗೋವುಗಳ ಅಕ್ರಮ ಕಳ್ಳ ಸಾಗಣಿಕೆ ಮಿತಿಮೀರಿದೆ ಇದಕ್ಕೆ ಪುಷ್ಟಿ ನೀಡುವಂತೆ ಇಂದು ಮುಂಜಾನೆ ಐದು ಗೋವುಗಳನ್ನು ರಿಪ್ಪಿನ್ ಪೇಟೆಯಿಂದ ಚಿಂತಾಮಣಿ ಗೆ ಕರೆದೊಯಿತ್ತಿದ್ದ ವೇಳೆ ಖದೀಮರು ಪೊಲೀಸರ ಅತಿಥಿಗಳಾಗಿದ್ದಾರೆ.

ಹೊಸನಗರದ ಪಕ್ಕ ಬ್ರಹ್ಮೇಶ್ವರದ ಇಬ್ಬರು ವ್ಯಕ್ತಿಗಳು ಈ ಗೋವು ಕಳ್ಳ ಸಾಗಾಣಿಕೆ ಯಲ್ಲಿ ಪಾಲುದಾರರಾಗಿ ದ್ದು ಅವರ ಕುಮ್ಮಕ್ಕಿನಿಂದ ದೂರದ ಚಿಂತಾಮಣಿ ಯಿಂದ ಇಲ್ಲಿಗೆ ಬಂದು ಐದು ಹಸುಗಳನ್ನು ಕರೆದುಕೊಂಡು ಗೂಡ್ಸ್ ನಲ್ಲಿ ಹೋಗುತ್ತಿದ್ದ ವೇಳೆ ಒಂದು ಹಸು ಗೂಡ್ಸ್ ನಿಂದ ಕೆಳಗೆ ಬಿದ್ದಿದ್ದು ಅದನ್ನು ಗೂಡ್ಸ್ ಗೆ ಕಟ್ಟಿಕೊಂಡು ಸುಮಾರು 10 ಕಿ.ಮೀ ಎಳೆದುಕೊಂಡು ಹೋಗುತ್ತಿರುವ ದೃಶ್ಯ ಎಲ್ಲರಲ್ಲೂ ಕಣ್ಣಿನಲ್ಲಿ ನೀರು ತರಿಸುತ್ತದೆ ದುರಂತವೆಂದರೆ ಪೊಲೀಸ್ ಠಾಣೆಯ ಮುಂಭಾಗವೇ ಈ ಹಸುವನ್ನು ಕರೆದೊಯ್ದ ದುಷ್ಟರು ಅರಸಾಳು ನಲ್ಲಿರುವ ರೈಲ್ವೆ ಹಳಿಯ ಹತ್ತಿರ ನಿಲ್ಲಿಸಿದಾಗ ಪೊಲೀಸರ ಅಥಿತಿಗಳಾಗಿ ದ್ದಾರೆ.

ಪ್ರಕರಣ ದಾಖಲಿಸಿಕೊಂಡಿರುವ ರಿಪ್ಪನ್ ಪೇಟೆಯ ಇನ್ಸ್ಪೆಕ್ಟರ್ ರಾಜು ರೆಡ್ಡಿ ತನಿಖೆ ಕೈಗೊಂಡಿದ್ದಾರೆ.
ಒಟ್ಟಿನಲ್ಲಿ ರಿಪ್ಪಿನ್ ಪೇಟೆಯಲ್ಲಿ ಕಳ್ಳರಿಗೆ ಕದೀಮರಿಗೆ ಭಯ ಇಲ್ಲದಾಗಿದೆ ಮಣ್ಣು ,ಮರಳು, ಭೂ ಮಾಫಿಯಾ ಎಗ್ಗಿಲ್ಲದೆ ನಡೆಯುತ್ತಿದೆ ಎನ್ನುತ್ತಾರೆ ಸ್ಥಳೀಯರು ಕೂಡಲೇ ಪೊಲೀಸರು ಅಲರ್ಟ್ ಆಗಿ ಇದನ್ನು ನಿಯಂತ್ರಣಕ್ಕೆ ತರಬೇಕು.
ರಘುರಾಜ್ ಹೆಚ್ ಕೆ…9449553305…

